ಫ್ಯಾಕ್ಟ್‌ಚೆಕ್‌: ಟಿಟಿಡಿ ಅಧ್ಯಕ್ಷರಾಗಿ ಕೊನಿಡೇಲ ನಾಗಬಾಬು ನೇಮಕಗೊಂಡಿದ್ದಾರಾ?

ಟಿಟಿಡಿ ಅಧ್ಯಕ್ಷರಾಗಿ ಕೊನಿಡೇಲ ನಾಗಬಾಬು ನೇಮಕಗೊಂಡಿದ್ದಾರಾ?

Update: 2024-06-22 17:21 GMT

nagababu

ಆಂಧ್ರಪ್ರದೇಶದಲ್ಲಿ 2024 ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿಕೂಟವಾದ ತೆಲುಗು ದೇಶಂ ಪಕ್ಷ, ಜನಸೇನೆ ಮತ್ತು ಭಾರತೀಯ ಜನತಾ ಪಾರ್ಟಿ ಗೆದ್ದಿದೆ. ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಪಿಠಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರ ಯಶಸ್ಸಿನಲ್ಲಿ ಸಹೋದರ ನಾಗಬಾಬು ಮುಖ್ಯ ಪಾತ್ರವನ್ನು ವಹಿಸಿದ್ದರು ಎಂದು ಹೇಳಲಾಗುತ್ತದೆ. ಪವನ್ ಕಲ್ಯಾಣ್ ತಮ್ಮ ಯಶಸ್ಸನ್ನು ತಮ್ಮ ಸಹೋದರರು ಮತ್ತು ಕುಟುಂಬದೊಂದಿಗೆ ಹಂಚಿಕೊಂಡಿದ್ದರು.

ಇದೆಲ್ಲದರ ನಡುವೆ ಶ್ರೀ ವೆಂಕಟೇಶ್ವರನ ಆರಾಧ್ಯ ದೈವವಾದ ತಿರುಮಲ ತಿರುಪತಿ ದೇವಸ್ಥಾನದ ಮುಂದಿನ ಅಧ್ಯಕ್ಷರಾಗಿ ಕೊನಿಡೇಲ ನಾಗಬಾಬು ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ʼಟಿಟಿಡಿಯ ನೂತನ ಅಧ್ಯಕ್ಷ @NagaBabuOffl Garu #Tirumala # Tirupati #TTDChairman #TTD # NagendraBabu #NagaBabu # TirupatiYaaYo ' ಎಂಬ ಶೀರ್ಷಿಕೆಯೊಂದಿಗೆ ನಾಗಬಾಬು ಅವರ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸ್ಥಳೀಯ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲೂ ಇದರ ಕುರಿತು ಯಾವುದೇ ಅಧಿಕೃತ ಪ್ರಕಟನೆ ನಮಗೆ ಕಂಡುಬಂದಿಲ್ಲ. ಆಂಧ್ರಪ್ರದೇಶದಲ್ಲಿ ಇನ್ನೂ ಹೊಸ ಸರ್ಕಾರ ರಚನೆಯಾಗದ ಕಾರಣ, ರಾಜ್ಯದಲ್ಲಿ ಯಾವುದೇ ನೇಮಕಾತಿಗಳು ನಡೆದಿಲ್ಲ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು, ನೇಮಕಾತಿಯ ಕುರಿತ ಪ್ರಕಟನೆಗಳು ಮತ್ತು ನಾಗಬಾಬು ಅವರ ಟ್ವೀಟರ್‌ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ನಾಗಬಾಬುರವರ ಟ್ವಿಟರ್‌ನಲ್ಲಿ "Do not believe any fake news. Trust only information from official party handles or my verified social media accounts. Please do not trust or spread fake news." ಎಂದು ಬರೆದು ಪೋಸ್ಟ್‌ ಮಾಡಿದ್ದರು.

ಟ್ವಿಟ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ ನಮಗೆ 'ಯಾವುದೇ ನಕಲಿ ಸುದ್ದಿಗಳನ್ನು ನಂಬಬೇಡಿ, ಅಧಿಕೃತವಾಗಿ ಪಕ್ಷದ ಅಧವಾ ಅಧಿಕೃತ ಖಾತೆಗಳಲ್ಲಿ ಹಂಚಿಕೊಳ್ಳಲಾದ ಮಾಹಿತಿಯನ್ನು ಮಾತ್ರ ನಂಬಿ ಮತ್ತು ಸುಳ್ಳು ಸುದ್ದಿಯನ್ನು ನಂಬಬೇಡಿ" ಎಂದು ಪೋಸ್ಟ್‌ ಮಾಡಲಾಗಿತ್ತು.

ಟಿವಿ9ನಲ್ಲಿ ವರದಿಯಾಗಿರುವ ವಿಡಿಯೋವೊಂದು ನಮಗೆ ಕಂಡುಬಂದಿತು. ಅದರಲ್ಲಿ ಟಿಟಿಡಿ ಅಧ್ಯಕ್ಷರ ನೇಮಕದ ಸುದ್ದಿ ಬಗ್ಗೆ ವರದಿಗಾರರು ಕೇಳಿದಾಗ ನಾಗಬಾಬುರವರು ಈ ಸುದ್ದಿ ಸುಳ್ಳು ಎಂದು ಪ್ರತಿಕ್ರಿಯಿಸಿರುವುದನ್ನು ನಾವು ನೋಡಬಹುದು.

ನಾಗಬಾಬು ಅವರು ಈ ಸುದ್ದಿ ಸುಳ್ಳು ಎಂದು ಈನಾಡು ಪತ್ರಿಕೆಯಲ್ಲಿ ಲೇಖನವನ್ನೂ ಸಹ ಪ್ರಕಟಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಅವರು ಎಲ್ಲರಿಗೂ ಮನವಿ ಮಾಡಿದ್ದಾರೆ ಎಂದು ಲೇಖನದಲ್ಲಿ ಹೇಳಲಾಗಿದೆ. ಅಧಿಕೃತ ಖಾತೆಗಳನ್ನು ಮಾತ್ರ ನಂಬಿ ಎಂದು ಹೇಳಿದ್ದಾರೆಂದು ವರದಿಯಾಗಿದೆ.

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಪವನ್ ಕಲ್ಯಾಣ್ ಅವರ ಸಹೋದರ ನಾಗಬಾಬು ಅವರನ್ನು ತಿರುಮಲ ತಿರುಪತಿ ದೇವಸ್ಥಾನದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂಬ ಸುದ್ದಿ ಸುಳ್ಳು.

Claim :  ಟಿಟಿಡಿ ಅಧ್ಯಕ್ಷರಾಗಿ ಕೊನಿಡೇಲ ನಾಗಬಾಬು ನೇಮಕಗೊಂಡಿದ್ದಾರಾ?
Claimed By :  Social Media Users
Fact Check :  False
Tags:    

Similar News