ಫ್ಯಾಕ್ಟ್‌ಚೆಕ್: ಮೀರತ್ ರಾಜ್ಯದ ಬಿಜೆಪಿ ಸಂಸದ ಅರುಣ್ ಗೋವಿಲ್ ಚುನಾವಣೆಯ ಪ್ರಚಾರದ ವೇಳೆ ದಲಿತರೊಬ್ಬರ ಮನೆಯಲ್ಲಿ ಊಟ ಮಾಡಿದ್ದರಾ?
ಮೀರತ್ ರಾಜ್ಯದ ಬಿಜೆಪಿ ಸಂಸದ ಅರುಣ್ ಗೋವಿಲ್ ಚುನಾವಣೆಯ ಪ್ರಚಾರದ ವೇಳೆ ದಲಿತರೊಬ್ಬರ ಮನೆಯಲ್ಲಿ ಊಟ ಮಾಡಿದ್ದರಾ?
ಜನಪ್ರಿಯ ಟಿವಿ ಧಾರವಾಹಿ ʼರಾಮಾಯಣಂʼ ನಲ್ಲಿ ರಾಮನ ಪಾತ್ರವನ್ನು ನಿರ್ವಹಿಸಿದ ಅರುಣ್ ಗೋವಿಲ್ ತನ್ನ ಪಾತ್ರದ ಮೂಲಕವೇ ದೇಶಾದ್ಯಂತ ಜನಪ್ರಿಯತೆಯನ್ನು ಗಳಿಸಿ, ರಾಜಕೀಯಕ್ಕೂ ಕಾಲಿಟ್ಟರು. ರಾಜಕೀಯದ ಮೂಲಕ ಹೊಸ ವೃತ್ತಿ ಜೀವನ ಆರಂಭಿಸಿದ ಇವರು ತಮ್ಮ ಹುಟ್ಟೂರು ಮೀರತ್‌ನಿಂದ ಸಂಸದ ಅಭ್ಯರ್ಥಿಯಾಗಿ ನಾಮನಿರ್ದೇಶನ ಸಲ್ಲಿಸಿ ಈಗ ಮೀರತ್ ನಗರದಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ.
ಅರುಣ್ ಗೋವಿಲ್‌ಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅರುಣ್ ಗೋವಿಲ್ ದಲಿತರ ಮನೆಯಲ್ಲಿ ಊಟ ಮಾಡಿಲ್ಲ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತಟ್ಟೆಯಲ್ಲಿ ಊಟ ಹಾಕಿಕೊಂಡು ಅರುಣ್ ಗೋವಿಲ್‌ರ ಮುಂದಿಟ್ಟರೂ ಅವರು ಊಟ ಮಾಡಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ. ವಿಡಿಯೋವಿನಲ್ಲಿ ಊಟಕ್ಕೆ ಸುತ್ತಲೂ ಕುಳಿತವರು ಊಟ ಮಾಡುತ್ತಾ, ಎಲ್ಲರೊಂದಿಗೆ ಮಾತನಾಡುತ್ತಾ ಊಟ ಮಾಡುವುದನ್ನು ವೈರಲ್ ವಿಡಿಯೋವಿನಲ್ಲಿ ನೋಡಬಹುದು. ಅರುಣ್ ಗೋವಿಲ್ ಚುನಾವಣಾ ಪ್ರಚಾರದ ವೇಳೆ ದಲಿತರೊಬ್ಬರ ಮನೆಯಲ್ಲಿ ಊಟ ಮುಟ್ಟಿಲ್ಲ ಎಂಬ ವಿಡಿಯೋ ಇದೀಗ ವೈರಲ್ ಆಗಿದೆ. ಶಬರಿ ಎಂಜಲು ಮಾಡಿ ತಿನಿಸಿದ ಕಾಯನ್ನು ತಿಂದ ರಾಮನ ಪಾತ್ರ ಮಾಡಿದ ಅರುಣ್ ಗೋವಿಲ್ ದಲಿತರ ಮನೆಯಲ್ಲಿ ಊಡವನ್ನು ಮುಟ್ಟಿಲ್ಲ ಎಂದು ವ್ಯಂಗ್ಯವಾಡಿದ ವೀಡಿಯೋ ಇದೀಗ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಶೇರ್ ಮಾಡುತ್ತಿದ್ದಾರೆ.
ಮೀರತ್ ಜಿಲ್ಲೆಯ ಬಿಜೆಪಿ ಪಕ್ಷದ ಲೋಕಸಭಾ ಅಭ್ಯರ್ಥಿ ಅರುಣ್ ಗೋವಿಲ್ ದಲಿತನಾದ ವಾಲ್ಮೀಕಿ ಕಾರ್ಯಕರ್ತನ ಮನೆಗೆ ಊಟಕ್ಕೆ ಆಗಮಿಸಿದ್ದರು. ತ್ರೇತಾ ಯುಗದಲ್ಲಿ ಭಗವಾನ್ ಶ್ರೀ ರಾಮ ಶಬರಿಯು ನೀಡಿದ ಹಣ್ಣನ್ನು ತಿಂದನು ಆದರೆ 2024ರಲ್ಲಿ ರಾಮನ ಪಾತ್ರ ಮಾಡಿದ ಅರುಣ್ ಗೋವಿಲ್ ದಲಿತನ ಮನೆಯಲ್ಲಿ ಒಂತುತ್ತು ಊಟವನ್ನು ಸಹ ಮಾಡಿಲ್ಲ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದರು. मेरठ जनपद से BJ Party के लोकसभा प्रत्याशी अरुण गोविल जी वाल्मीकि कार्यकर्ता के घर 'भोजन दर्शन' करने पहुंचे। भगवान श्री राम ने त्रेता युग में शबरी के झूठे बेर खाए थे और यह 2024 में दलित के घर का भोजन नहीं खा पा रहे । @JaipurDialogues @MrSinha_ ಎಂಬ ಶೀರ್ಷಿಕೆಯೊಂದಿಗೆ ಅನೇಕರು ಹಿಂದಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಫ್ಯಾಕ್ಟ್‌ಚೆಕ್
ವೈರಲ್ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಬಿಜೆಪಿ ನಾಯಕರೊಬ್ಬರು ಚುನಾವಣಾ ಪ್ರಚಾರದ ವೇಳೆ ದಲಿತರೊಬ್ಬರ ಮನೆಯಲ್ಲಿ ಊಟ ಮಾಡುತ್ತಿರುವ ವಿಡಿಯೋವನ್ನು ಎಡಿಟ್ ಮಾಡಿ ಮೀರತ್ ಜಿಲ್ಲೆಯ ಬಿಜೆಪಿ ಪಕ್ಷದ ಲೋಕಸಭಾ ಅಭ್ಯರ್ಥಿ ಅರುಣ್ ಗೋವಿಲ್ ಎಂದು ಪ್ರಚಾರ ಮಾಡುತ್ತಿದ್ದಾರೆ.
ನಾವು ವೈರಲ್ ವೀಡಿಯೊವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿಕೊಂಡು ಗೂಗಲ್ ರಿವರ್ಸ್ ಇಮೇಜ್‌ನ ಮೂಲಕ ಹುಡುಕಾಟ ನಡೆಸಿದೆವು. ಚುನಾವಣಾ ಪ್ರಚಾರದ ವೇಳೆ ದಲಿತರೊಬ್ಬರ ಮನೆಯಲ್ಲಿ ಮೀರತ್ ಜಿಲ್ಲೆಯ ಬಿಜೆಪಿ ಪಕ್ಷದ ಲೋಕಸಭಾ ಅಭ್ಯರ್ಥಿ ಅರುಣ್ ಗೋವಿಲ್ ತಿನ್ನುತ್ತಿರುವ ಚಿತ್ರಗಳನ್ನು ಕೆಲವು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಭಿಮಾನಿಗಳು ಮತ್ತು ಕಾರ್ಯಕರ್ತರು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ವೈರಲ್ ವಿಡಿಯೋವಿನಲ್ಲಿ ಮೀರತ್‌ನ ಭಗವತ್ ಪುರ್ ಬೂತ್‌ನ ಅಧ್ಯಕ್ಷ ಅರುಣ್ ಮಚಲ್ ವಾಲ್ಮೀಕಿ, ದಲಿತ ನೀತು ಜಾತವ್ ಅವರ ಮನೆಯಲ್ಲಿ ಊಟ ಮಾಡುತ್ತಿರುವ ವಿಡಿಯೋವನ್ನು ನಾವು ಕಂಡುಕೊಂಡೆವು.
ಈಟಿವಿ ಭಾರತ್ ವರದಿಯ ಪ್ರಕಾರ ಏಪ್ರಿಲ್ 13, 2024 ರಂದು, ಅರುಣ್ ಗೋವಿಲ್ ಮತದಾರರನ್ನು ಓಲೈಸಲು ನಗರದ ಬ್ರಹ್ಮಪುರಿಯ ಭಗವತ್ಪುರಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ದಲಿತ ಕುಟುಂಬವೊಂದನ್ನು ಭೇಟಿ ಮಾಡಿದಾಗ ಆ ಮನೆಯ ಮಹಿಳೆಯರು ಅರುಣ್ ಗೋವಿಲ್ಗೆ ಆರತಿ ಸಲ್ಲಿಸಿ, ಊಟ ಉಪಚಾರವನ್ನು ಮಾಡಿದ್ದರು ಎಂದು ವರದಿ ಮಾಡಿದ್ದರು. ನ್ಯೂಸ್ 18 ವರದಿಯ ಪ್ರಕಾರ ಯುಪಿ ಉತ್ತರಾಖಂಡ್‌ನಲ್ಲೂ ಇದೇ ರೀತಿಯ ವೀಡಿಯೊವನ್ನು ಪೋಸ್ಟ್ ಮಾಡಿಲಾಗಿದೆ. “Loksabha Election 2024: दलित के घर खाना खाते दिखे रामायण के राम, देखें वीडियो... | Arun Govil” ದಲಿತ ಕುಟುಂಬಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅರುಣ್ ಗೋವಿಲ್ ಅವರ ಮನೆಯಲ್ಲಿ ತಿನ್ನುತ್ತಿರುವ ವೀಡಿಯೊವಿದು ಎಂದು ಪೋಸ್ಟ್ ಮಾಡಿದ್ದರು
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಬಿಜೆಪಿಯ ಮೀರತ್ ಅಭ್ಯರ್ಥಿ ಅರುಣ್ ಗೋವಿಲ್ ಪ್ರಚಾರದ ಭಾಗವಾಗಿ ದಲಿತರೊಬ್ಬರ ಮನೆಯಲ್ಲಿ ಊಟ ಮಾಡಿಲ್ಲ ಎಂಬ ಸುದ್ದಿ ಸುಳ್ಳು.