ಫ್ಯಾಕ್ಟ್‌ಚೆಕ್:‌ ಎಣ್ಣೆಯಲ್ಲಿ ಉಗುಳುವ ಮೂಲಕ ಪಾಪ್‌ಕಾರ್ನ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಪಾಪ್‌ಕಾರ್ನ್ ಮಾರಾಟಗಾರರನ್ನು ಬಂಧಿಸಿದ್ದಾರೆ

ಎಣ್ಣೆಯಲ್ಲಿ ಉಗುಳುವ ಮೂಲಕ ಪಾಪ್‌ಕಾರ್ನ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಪಾಪ್‌ಕಾರ್ನ್ ಮಾರಾಟಗಾರರನ್ನು ಬಂಧಿಸಿದ್ದಾರೆ

Update: 2024-07-03 21:04 GMT

ಟಿವಿ9 ಲೋಗೋ ಇರುವ 45 ಸೆಕೆಂಡುಗಳ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ನೇರಳೆ ಬಣ್ಣದ ಅಂಗಿ ತೊಟ್ಟ ವ್ಯಕ್ತಿಯೊಬ್ಬ ಕನ್ನಡದಲ್ಲಿ ಮಾತನಾಡುತ್ತಿರುವುದನ್ನು ನಾವು ವಿಡಿಯೋವಿನಲ್ಲಿ ಕಾಣಬಹುದು. ಪೊಲೀಸರು ವಾಹನದಲ್ಲಿ ಹಳದಿ ಬಣ್ಣದ ದ್ರವದ ಬಾಟಲಿಯನ್ನು ಹಿಡಿದಿರುವುದುನ್ನ ನಾವು ನೋಡಬಹುದು. ವಿಡಿಯೋವಿನಲ್ಲಿ ಆತನನ್ನು ಪೊಲೀಸ್ ವ್ಯಾನ್‌ನಲ್ಲಿ ಕೂರಿಸುತ್ತಿರುವುದನ್ನು ನಾವು ಕಾಣಬಹುದು

ಎಕ್ಸ್‌ ಖಾತೆದಾರರರೊಬ್ಬ ತನ್ನ ಖಾತೆಯಲ್ಲಿ“A Muslim vendor was caught selling popcorn made using his urine to add a salty flavor. People have been eating his urinated popcorn for years.”ಎಂದು ಬರೆದು ಪೋಸ್ಟ್‌ ಮಾಡಿದ್ದರು.

ಪೋಸ್ಟ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ “ಪಾಪ್‌ಕಾರ್ನ್‌ಗೆ ಉಪ್ಪು ರುಚಿ ಸೇರಿಸಲು ಮುಸ್ಲಿಂ ಮಾರಾಟಗಾರರೊಬ್ಬ ತನ್ನ ಮೂತ್ರವನ್ನು ಬಳಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಜನರು ಈ ಮೂತ್ರ ವಿಸರ್ಜನೆಯಿಂದ ಮಾಡಿದ ಪಾಪ್‌ಕಾರ್ನ್ ಅನ್ನು ವರ್ಷಗಳಿಂದ ತಿನ್ನುತ್ತಿದ್ದಾರೆ. ” ಎಂದು ಬರೆದು ಪೋಸ್ಟ್‌ ಮಾಡಿದ್ದರು.

ಫ್ಯಾಕ್ಟ್‌ಚೆಕ್‌

ವೈರಲ್ ಆಗುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಪಾಪ್‌ಕಾರ್ನ್‌ ತಯಾರಿಸುವ ಎಣ್ಣೆಗೆ ಮಾರಾಟಗಾರ ಉಗುಳಿರುವ ಆರೋಪದ ಮೇಲೆ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹುಡುಕಾಟದಲ್ಲಿ ನಮಗೆ ಟಿವಿ9 ಯೂಟ್ಯೂಬ್‌ ಚಾನೆಲ್‌ನಲ್ಲಿ "ಲಾಲ್‌ಬಾಗ್‌ನಲ್ಲಿ ಪಾಪ್​ಕಾರ್ನ್ ಮಾರಾಟಗಾರರ ವಿರುದ್ಧ ಸ್ಥಳೀಯರ ಆರೋಪ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು.

Full View

ಬೆಂಗಳೂರಿನ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನಲ್ಲಿ ಈ ಘಟನೆ ನಡೆದಿದೆ. ಪಾಪ್‌ಕಾರ್ನ್ ಮಾರಾಟ ಮಾಡುವವರು ಪಾಪ್‌ಕಾರ್ನ್ ತಯಾರಿಸುವ ಮೊದಲು ಎಣ್ಣೆ ಬಾಟಲಿಗೆ ಎಂಜಲು ಉಗುಳುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಾವು "ಪಾಪ್‌ಕಾರ್ನ್ ಮಾರಾಟಗಾರ ಎಣ್ಣೆ ಬಾಟಲಿಯಲ್ಲಿ ಉಗುಳುವುದು" ಎಂಬ ಕೀವರ್ಡ್‌ನೊಂದಿಗೆ ಹುಡುಕಿದಾಗ ನಮಗೆ ಜೂನ್ 22, 2022 ರಂದು, ನ್ಯೂಸ್ ಮಿನಿಟ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ “Muslim popcorn seller attacked in Bengaluru speaks” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಅಪ್‌ಲೋಡ್‌ ಮಾಡಿರುವುದನ್ನು ನಾವು ಕಂಡುಕೊಂಡೆವು.

ವೀಡಿಯೋವಿಗೆ ಕ್ಯಾಪ್ಷನ್‌ನಲ್ಲಿ “ಜೂನ್ 11 ರಂದು ಬೆಂಗಳೂರಿನ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನಲ್ಲಿ ಪಾಪ್‌ಕಾರ್ನ್ ಮಾರಾಟಗಾರನನ್ನು ಬಂಧಿಸಲಾಗಿದೆ. ಪಾಪ್‌ಕಾರ್ನ್ ತಯಾರಿಸಲು ಬಳಸುವ ಎಣ್ಣೆಯಲ್ಲಿ ಉಗುಳಿದ್ದಕ್ಕಾಗಿ ಬಂಧಿಸಲಾಗಿದೆ ಇದೀಗ ಪಾಪ್‌ಕಾರ್ನ್‌ ಮಾರಾಟಗಾರ ನವಾಜ್ ಪಾಷಾ ಜಾಮೀನಿನ ಮೇಲೆ ಹೊರಬಂದಿದ್ದಾನೆ ಎಂದು ಬರೆದು ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

Full View

ದಿ ಹಿಂದೂ ಜೂನ್ 13, 2022 ರಂದು ಪ್ರಕಟಿಸಿದ ಲೇಖನದಲ್ಲಿ “ಪಾಪ್‌ಕಾರ್ನ್ ಮಾರಾಟಗಾರರನ್ನು ಬಂಧಿಸಿ, ಬಿಡುಗಡೆ ಮಾಡಲಾಗಿದೆ” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟಿಸಿದ ಲೇಖನವನ್ನು ನಾವು ಕಂಡುಕೊಂಡಿದ್ದೇವೆ.

ಜೂನ್ 14, 2022 ರಂದು, ಟೈಮ್ಸ್ ಆಫ್ ಇಂಡಿಯಾ "ಬೆಂಗಳೂರು: ಪಾಪ್‌ಕಾರ್ನ್ ಮಾರಾಟಗಾರನು ಅಡುಗೆ ಎಣ್ಣೆಯಲ್ಲಿ ʼಎಂಜಲು ಉಗುಳಿದ್ದಾನೆʼ ಎಂಬ ಲೇಖನವನ್ನು ಪ್ರಕಟಿಸಿರುವುದನ್ನು ನಾವು ಕಂಡುಕೊಂಡೆವು.

“Popcorn vendor caught spitting in oil” ಎಂಬ ಶೀರ್ಷಿಕೆಯಡಿಯಲ್ಲಿ ನ್ಯೂ ಇಂಡಿಯಾ ಎಕ್ಸ್‌ಪ್ರಸ್‌ ಲೇಖನವನ್ನು ಪ್ರಕಟಿಸಿರುವುದನ್ನು ನಾವು ನೋಡಬಬಹುದು,

ಆದರೆ ಪಾಪ್‌ಕಾರ್ನ್‌ನಲ್ಲಿ ಮೂತ್ರವನ್ನು ಬಳಸಿದ್ದಾರೆ ಎಂಬ ಸುದ್ದಿ ಕುರಿತ ವರದಿಗಳು ಅಧವಾ ಸುದ್ದಿಗಳು ನಮಗೆ ಯಾವುದು ಕಂಡುಬಂದಿಲ್ಲ.

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಸತ್ಯಾಂಶವಿಲ್ಲವೆಂದು ಕಂಡುಕೊಂಡೆವು. ಕರ್ನಾಟಕದ ಪೊಲೀಸರು ಪಾಪ್‌ಕಾರ್ಸ್‌ ಮಾರಾಟಗಾರರನ್ನು ಪಾಪ್ ಕಾರ್ನ್ ತಯಾರಿಸಲು ಬಳಸುವ ಎಣ್ಣೆಯಲ್ಲಿ ಉಗುಳಿದ್ದ ಆರೋಪದ ಮೇಲೆ ಬಂಧಿಸಿದ್ದರು.

Claim :  ಎಣ್ಣೆಯಲ್ಲಿ ಉಗುಳುವ ಮೂಲಕ ಪಾಪ್‌ಕಾರ್ನ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪೊಲೀಸರು ಪಾಪ್‌ಕಾರ್ನ್ ಮಾರಾಟಗಾರರನ್ನು ಬಂಧಿಸಿದ್ದಾರೆ
Claimed By :  Social Media Users
Fact Check :  False
Tags:    

Similar News