ಫ್ಯಾಕ್ಟ್‌ಚೆಕ್‌: ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ್ನು ತಾಲಿಬಾನ್‌ನ ಕಾರ್ಯದರ್ಶಿ ಖಾಲಿದ್‌ ಹೊಗಳಲಿಲ್ಲ

ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ್ನು ತಾಲಿಬಾನ್‌ನ ಕಾರ್ಯದರ್ಶಿ ಖಾಲಿದ್‌ ಹೊಗಳಲಿಲ್ಲ

Update: 2024-10-28 04:15 GMT

Taliban Secretary Khalid

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ತಾಲಿಬಾನ್‌ ಕಾರ್ಯದರ್ಶಿ ಬಿಜೆಪಿಯ ಬಗ್ಗೆ ನೀಡಿದ ಹೇಳಿಕೆ ಎಂದು ಚಿತ್ರವೊಂದು ಹರಿದಾಡುತ್ತಿದೆ. ವಿಡಿಯೋದಲ್ಲಿ ಕಾಣಿವ ವ್ಯಕ್ತಿ ಗಡ್ಡದಾರಿಯಾಗಿದ್ದು, ಟೋಪಿಯನ್ನು ಥರಿಸಿದ್ದಾರೆ. ಇಸ್ಲಾಮಿಕ್ ಉಡುಪಿನಲ್ಲಿರುವ ವ್ಯಕ್ತಿಯೊಬ್ಬರು ಆರ್‌ಎಸ್‌ಎಸ್, ಬಿಜೆಪಿ ಮತ್ತು ಮರಾಠರ ಬಗ್ಗೆ ಮಾತನಾಡುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ, ಅವರನ್ನು ತಾಲಿಬಾನ್‌ನ ಮುಖ್ಯ ಕಾರ್ಯದರ್ಶಿ ಎಂದು ಗುರುತಿಸಲಾಗಿದೆ . ಬಿಜೆಪಿ ಅಧಿಕಾರದಲ್ಲಿರುವವರೆಗೆ ಭಾರತ ದೇಶದ ಮೇಲೆ ಯಾವುದೇ ದೇಶ ದಾಳಿ ಮಾಡಲೂ ಸಹ ಯೋಚಿಸುವುದಿಲ್ಲ. ಭಾರತದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅತ್ಯಂತ ಶಕ್ತಿಶಾಲಿ. ಭಾರತದ ಮೇಲೆ ದಾಳಿ ಮಾಡ ಬೇಕೆಂದರೆ ಮೊದಲು ಬಿಜೆಪಿಯನ್ನು ನಿರ್ಮೂಲನೆ ಮಾಡಬೇಕು ಎಂದು ತಾಲಿಬಾನ್ ಮುಖ್ಯಸ್ಥರು ಹೇಳಿದ್ದರು

ಅಕ್ಟೋಬರ್‌ 13,2024ರಂದು ಅನು ಅನಿತಾ ಎಂಬ ಎಕ್ಸ್‌ ಖಾತೆದಾರರು ತಮ್ಮ ಖಾತೆಯಲ್ಲಿ ವೈರಲ್‌ ಆದ ವಿಡಿಯೊವನು ಹಂಚಿಕೊಂಡಿದ್ದಾರೆ. ವಿಡಿಯೋವಿನಲ್ಲಿ "ಬಿಜೆಪಿ ಇರುವ ತನಕ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ. ತಾಲಿಬಾನ್‌ ಕಾರ್ಯದರ್ಶಿ ಅಲ್‌ ಬೇಡರ್‌ ಇಲ್ಯಾಸಿ. ದೇಶಕ್ಕೆ ಬಿಜೆಪಿ ಎಷ್ಟು ಅವಶ್ಯ ಇದೆ ಎಂದು ಯಾಕೆ ದೇಶದ ಜನರು ಅರ್ಥ ಮಾಡಿಕೊಳ್ಳುತ್ತಿಲ್ಲ ಅದರಲ್ಲೂ ಹಿಂದೂಗಳು" ಎಂಬ ಕ್ಯಾಪ್ಷನ್‌ನೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಇದೇ ವಿಡಿಯೋವನ್ನು ಈ ಹಿಂದೆಯೂ ಹಲವಾರು ಸಾಮಾಜಿಕ ಬಳಕೆದಾರರು ತಮ್ಮ ಖಾತೆಗಳಲ್ಲಿ ಹಂಚಿಕೊಂಡಿದ್ದರು. ಕರ್ನಾಟಕ ಬಿಜೆಪಿ ಎಂಬ ಫೇಸ್‌ಬುಕ್‌ ಖಾತೆಯಲ್ಲಿ "ಭಾರತದಲ್ಲಿ ಬಿಜೆಪಿ ಇರುವವರೆಗೂ ಯಾವುದೇ ದೇಶ ಭಾರತದ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ* ಆರ್‌ಎಸ್‌ಎಸ್ ಮತ್ತು ಬಿಜೆಪಿ ಅತ್ಯಂತ ಶಕ್ತಿಶಾಲಿ ಮೊದಲು ಬಿಜೆಪಿಯನ್ನು ತೊಡೆದುಹಾಕಿ ನಂತರ ಮಾತ್ರ ಭಾರತದ ಮೇಲೆ ಜಯ ಸಿಗುತ್ತದೆ. ಭಯೋತ್ಪಾದಕ ಸಂಘಟನೆ ತಾಲಿಬಾನ್‌ನ ಮುಖ್ಯ ಕಾರ್ಯದರ್ಶಿ ಅಲ್ ಬೇಡರ್ ಇಲ್ಯಾಸಿ ಹೇಳಿಕೆ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Full View


Full View



ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್‌ ಆದ ವಿಡಿಯೋದಲ್ಲಿ ಕಾಣುವ ವ್ಯಕ್ತಿ ಖಾಲಿದ್, ಈತ ಪಾಕಿಸ್ತಾನದ ಇಸ್ಲಾಮಾಬಾದ್ ಮೂಲದ ಮುಸ್ಲಿಂ ಧಾರ್ಮಿಕ ಬೋಧಕ.

ನಾವು ವೈರಲ್‌ ಆದ ವಿಡಿಯೋವಿನಲ್ಲಿರುವ ನಿಜಾಂಶವನ್ನು ತಿಳಿಯಲು ವಿಡಿಯೋವಿನಲ್ಲಿ ಕಂಡುಬರುವ ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದೆವು. ಹುಡುಕಾಟದಲ್ಲಿ ನಮಗೆ, ವಿಡಿಯೋದಲ್ಲಿ ಕಾಣುವ ವ್ಯಕ್ತಿ ಪಾಕಿಸ್ತಾನದ ಇಸ್ಲಾಮಾಬಾದ್ನ ಖಾಲಿದ್ ಮೊಹಮದ್‌ ಅಬ್ಬಾಸಿ ಎಂದು ತಿಳಿದುಬಂದಿತು. ಈತ ಇಸ್ಲಾಮಾಬಾದದ್‌ ಮೂಲದ ಮುಸ್ಲಿಂ ಧಾರ್ಮಿಕ ಬೋಧಕ.

ನಾವು ಖಾಲಿದ್ ಮೊಹಮದ್‌ ಅಬ್ಬಾಸಿ ಎಂಬ ಕೀವರ್ಡ್‌ನ್ನು ಉಪಯೋಗಿಸಿ ಹುಡುಕಾಟ ನಡೆಸಿದಾಗ ನಮಗೆ ಅವರ ಅಧಿಕೃತ ಫೇಸ್‌ಬುಕ್‌ ಪೇಜ್‌ ಕಂಡುಬಂದಿತು. ಫೇಸ್‌ಬುಕ್‌ನ ಬಯೋವಿನಲ್ಲಿ "ಖಾಲಿದ್ ಮೊಹಮದ್‌ ಅಬ್ಬಾಸಿ" ಮೂವತ್ತು ವರ್ಷಗಳಿಂದ ತಂಝೀಮ್-ಎ-ಇಸ್ಲಾಮಿಯೊಂದಿಗೆ ಕೆಲಸ ಮಾಡುತ್ತಿದ್ದಾರೆ. 2018ರಲ್ಲಿ ತಂಝೀಮ್-ಎ-ಇಸ್ಲಾಮಿನ್ನು ಬಿಟ್ಟು ಶುಬ್ಬನ್-ಉಲ್-ಮುಸ್ಲಿಮೀನ್‌ನ್ನು ಸ್ಥಾಪಿಸಿದ್ದಾರೆ" ಎಂದು ಬರೆದುಕೊಂಡಿರುವುದನ್ನು ಕಾಣಬಹುದು.


ಯೂಟ್ಯೂಬ್‌ನಲ್ಲಿ ʼಖಾಲಿದ್ ಮೊಹಮದ್‌ ಅಬ್ಬಾಸಿʼಯ ಅಧಿಕೃತ ಖಾತೆಯನ್ನು ಹೊಂದಿರುವದನ್ನು ನಾವು ಕಂಡುಕೊಂಡೆವು. ಆಗಸ್ಟ್‌ 03, 2021ರಂದು ಹಂಚಿಕೊಂಡಿರುವ ವಿಡಿಯೋವನ್ನು ಗಮನಿಸಿದರೆ ಈ ವಿಡಿಯೋವನ್ನು 2019, ಮಾರ್ಚ್‌ 01ರಂದು ರೆಕಾರ್ಡ್‌ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ. 17.04 ನಿಮಿಷ ಒಳಗೊಂಡಿರುವ ಸುದೀರ್ಘ ವಿಡಿಯೋವಿನಲ್ಲಿ 0.53 ಟೈಮ್‌ಸ್ಟ್ಯಾಂಪ್‌ನಲ್ಲಿ ವೈರಲ್‌ ಆದ ವಿಡಿಯೋವನ್ನು ನೋಡಬಹುದು. ವಿಡಿಯೋವನ್ನು ಕೇಳಿಸಿಕೊಂಡರೂ, ಎಲ್ಲಿಯೂ ಸಹ ಪೋಸ್ಟರ್‌ನಲ್ಲಿ ಹೇಳಿರುವ ಹಾಗೆ ಬಿಜೆಪಿಯ ಬಗ್ಗೆ ಆತ ಮಾತನಾಡಿಲ್ಲ. ಭಾರತದಲ್ಲಿ ಮುಸ್ಲಿಮರ ಸ್ಥಿತಿಗತಿ ಕುರಿತು ಮಾತನಾಡಿದ್ದಾರೆ ಮತ್ತು ಬಿಜೆಪಿಯು ಮುಸ್ಲಿಮರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದೇ ಮಾತನಾಡಿದ್ದಾರೆ. ಅಷ್ಟೆ ಅಲ್ಲ ಪೋಸ್ಟ್‌ರ್‌ನಲ್ಲಿ ಹೇಳಿರುವ ಹಾಗೆ ವಿಡಿಯೊದಲ್ಲಿ ಕಾಣುವ ವ್ಯಕ್ತಿ ಅಲ್ ಬೇಡರ್ ಇಲ್ಯಾಸಿ ಅಥವಾ ತಾಲಿಬಾಲ್ ಕಾರ್ಯದರ್ಶಿಯೂ ಅಲ್ಲ.

Full View

ಅಬ್ಬಾಸಿ ಅವರನ್ನು ದಿ ಕ್ವಿಂಟ್‌ ಮಾಧ್ಯಮ ಸಂಸ್ಥೆ ಸಂಪರ್ಕಿಸಿದ್ದಾಗ, ಖಾಲಿದ್ ಮೊಹಮದ್‌ ಅಬ್ಬಾಸಿ, ತನಗೆ ತಾಲಿಬಾನ್‌ ಜೊತೆ ಯಾವುದೇ ಸಂಬಂಧವಿಲ್ಲ ಹಾಗೂ ಸಂಪರ್ಕವಿಲ್ಲ. ವೈರಲ್‌ ಆದ ವಿಡಿಯೋ ಇತ್ತೀಚಿನದಲ್ಲ ಒಂದೂ ವರ್ಷಕ್ಕಿಂತ ಹಳೆಯದ್ದು. ಹಾಗೆ “ಶುಬ್ಬನ್ ಉಲ್ ಮುಸ್ಲಿಮೀನ್” ಹೆಸರಿನ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದೆ ಆದರೆ ಅದು ರಾಜಕೀಯ ಪಕ್ಷವಲ್ಲ. ತಾಲಿಬಾನ್ ಅಥವಾ ಯಾವುದೇ ರಾಜಕೀಯ ಪಕ್ಷದೊಂದಿಗೆ ನನಗೆ ಯಾವುದೇ ಸಂಬಂಧ ಇಲ್ಲ” ವೈರಲ್‌ ಆಸ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಅಬ್ಬಾಸಿ ಹೇಳಿರುವುದಾಗಿ ದಿ ಕ್ವಿಂಟ್‌ ಮಾದ್ಯಮ ವರದಿ ಮಾಡಿರುವುದನ್ನು ನೋಡಬಹುದು.

ಇದರಿಂದ ಸಾಭೀತಾಗಿರುವುದೇನೆಂದರೆ, ವೈರಲ್‌ ಆದ ವಿಡಿಯೋ ಇತ್ತೀಚಿನದಲ್ಲ 2019ರದ್ದು. ಖಾಲಿದ್‌ ಮೊಹಮೊದ್‌ ಅಬ್ಬಾಸಿ ಪಾಕಿಸ್ತಾನದ ಇಸ್ಲಾಮಾಬಾದ್ ಮೂಲದ ಮುಸ್ಲಿಂ ಧಾರ್ಮಿಕ ಬೋಧಕರು. ಹಾಗೂ ಸ್ವತಃ ಖಾಲಿದ್ ಮೆಹಮೂದ್ ಅಬ್ಬಾಸಿ ತನಗೂ ತಾಲಿಬಾನ್‌ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೂ ಸಂಬಮಧವಿಲ್ಲ ಎಂಬ ಹೇಳಿಕೆಯನ್ನು ನೀಡಿದ್ದಾರೆ.

Claim :  ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ್ನು ತಾಲಿಬಾನ್‌ನ ಕಾರ್ಯದರ್ಶಿ ಖಾಲಿದ್‌ ಹೊಗಳಲಿಲ್ಲ
Claimed By :  Social Media Users
Fact Check :  False
Tags:    

Similar News