ಫ್ಯಾಕ್ಟ್‌ಚೆಕ್: ಕರ್ನಾಟಕದ ಚಿಕ್ಕೋಡಿಯಲ್ಲಿರುವ ಲೈಟ್ ಕಂಬಗಳಿಗೆ ಪಾಕಿಸ್ತಾನದ ಧ್ವಜವನ್ನು ಅಳವಡಿಸಿದ್ದಾರೆಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ
ಕರ್ನಾಟಕದ ಚಿಕ್ಕೋಡಿಯಲ್ಲಿರುವ ಲೈಟ್ ಕಂಬಗಳಿಗೆ ಪಾಕಿಸ್ತಾನದ ಧ್ವಜವನ್ನು ಅಳವಡಿಸಿದ್ದಾರೆಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ
ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವಿಡಿಯೋದಲ್ಲೊ ಚಿಕ್ಕೋಡಿಯಲ್ಲಿರುವ ರಸ್ತೆ ವಿಭಜಕದಲ್ಲಿರುವ ಲೈಟ್ ಕಂಬಗಳಿಗೆ ಧ್ವಜಗಳನ್ನು ಅಳವಡಿಸಿರುವುದನ್ನು ನೋಡಬಹುದು. ವಿಡಿಯೋದಲ್ಲಿ ಕಾಣುವ ಧ್ವಜವು ಪಾಕಿಸ್ತಾನದೆಂದು ಸಾಕಷ್ಟು ಸಾಮಾಜಿಕ ಬಳಕೆದಾರರು ತಮ್ಮ ಖಾತೆಗಳಲ್ಲಿ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು.
ಸೆಪ್ಟಂಬರ್ 27,2024ರಂದು KA ಕನ್ನಡ NEWS 24×7 ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ "ಕರ್ನಾಟಕದ ಚಿಕ್ಕೋಡಿ ಮಿನಿ Pakisthanದಂತೆ ಕಂಡಿದೆ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬೀದಿ ದೀಪಗಳಿಗೆ ಕೆಲವು ಹಸಿರು ಬಣ್ಣದ ಧ್ವಜಗಳನ್ನು ಅಳವಡಿಸಿರುವುದನ್ನು ನಾವು ಕಾಣಬಹುದು
ಲಕ್ಷ್ಮಿ ಟಿವಿ3 ಎಂಬ ಯೂಟ್ಯೂಬ್ ಖಾತೆಯಲ್ಲಿ "ಹಿಂದಿ ವಾಲಾ ಉರ್ದು ವಾಲಾ ಕರ್ನಾಟಕ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನ ಹಿನ್ನಲೆ ಧ್ವನಿಯಲ್ಲಿ "ಈಗ ನಿಮಗೆ ಕಾಣುತ್ತಿರುವ ದೃಶ್ಯ ಪಾಕಿಸ್ತಾನ ಅಥವಾ ಆಫ್ಘಾನಿಸ್ತಾನದಲ್ಲ ಬದಲಿಗೆ ಇದು ನಮ್ಮ ಕರ್ನಾಟಕದ ದಾವಣಗೆರೆ ಜಿಲ್ಲೆಯದ್ದು. ವಿಡಿಯೋದಲ್ಲಿ ಕಾಣುವ ಬಾವುಟಗಳ ಮೇಲೆ ಅರಬಿ ಭಾಷೆಯಲ್ಲಿ ಬರೆದಿದ್ದಾರೆ. ಯಾವುದೇ ಕನ್ನಡ ಸಂಘಟನೆಗಳು, ಯಾವ ಒಬ್ಬ ಕನ್ನಡಿಗರು ಹಿಂದಿ ಭಾಷೆ ನಮ್ಮ ರಾಷ್ಟ್ರ ಭಾಷೆ ಎಂದು ಹೇಳಿದರೂ ಹೋಗಿ ಹೊಡಿತಾರೋ ಅವರು ಈಗ ಕಣ್ಣು ಮುಚ್ಚಿಕೊಂಡು ಕೂತಿದ್ದಾರೆ. ಈ ಬಾವುಟದ ಮೇಲೆ ಇರುವ ಅರಬೀ ಭಾಷೆ ನಿಮಗೆ ಕಾಣಿಸುತ್ತಿಲ್ಲವಾ? ಈ ಕಾಂಗ್ರೆಸ್ ಪಕ್ಷ ತುಷ್ಟೀಕರಣ ಮಾಡುತ್ತಾ ಇದೆ, ಇಸ್ಲಾಮೀಕರಣ ಮಾಡಲು ಹೊರಟಿದೆ. ಹಿಂದೂಗಳೆಲ್ಲಾ ಮಲಗಿದ್ದಾರೆ ಅನಿಸುತ್ತಿದೆ. ನೀವು ಆರಿಸಿರುವ ಸರ್ಕಾರ ಯಾವ ರೀತಿ ಅಲ್ಪಸಂಖ್ಯಾತ ಮುಸಲ್ಮಾನರಿಗೆ ಓಲೈಕೆಯನ್ನು ತೋರಿಸುತ್ತಿದೆಯೋ ನೀವೆ ನೋಡಿ" ಎಂದು ಹೇಳುವುದನ್ನು ನಾವು ಕೇಳಬಹುದು.
ಅಭಿಷೇಕ್ ಗುಪ್ತ ಎನ್ನುವ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ "भारत को पाकिस्तान बनते हुए चिक्कोडी, कर्नाटक का नज़ारा देख लीजिए. कांग्रेस के शासन में क्या होता है अगर समझ नही आता तो कितना भी पढ़ लो लेकिन रहोगे ढक्कन ही" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು.
भारत को पाकिस्तान बनते हुए चिक्कोडी, कर्नाटक का नज़ारा देख लीजिए
— Äbhï$hëk Güptä (@mind_kracker) September 20, 2024
कांग्रेस के शासन में क्या होता है अगर समझ नही आता तो
कितना भी पढ़ लो
लेकिन रहोगे ढक्कन ही pic.twitter.com/TacyVRXDvj
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಓದುಗರನ್ನು ತಪ್ಪು ದಾರಿಗೆಳೆಯುವ ಕೆಲಸ ಮಾಡುತ್ತಿದೆ, ವೈರಲ್ ವಿಡಿಯೋದಲ್ಲಿ ಕಾಣುವ ಬಾವುಟ ಪಾಕಿಸ್ತಾನ ಅಥವಾ ಆಫ್ಘಾನಿಸ್ತಾನದಲ್ಲ ಬದಲಿಗೆ ಇಸ್ಲಾಮಿಕ್ ಧ್ವಜವದು.
ನಾವು ವೈರಲ್ ಆದ ವಿಡಿಯೋವಿನಲ್ಲಿ ಸತ್ಯಾಂಶವನ್ನು ತಿಳಿಯಲು ವೈರಲ್ ವಿಡಿಯೋವಿನ ಕೆಲವು ಪ್ರಮುಖ ಫ್ರೇಮ್‌ಗಳನ್ನು ಮತ್ತು ಕೆಲವು ಸ್ಕ್ರೀನ್‌ಶಾಟ್‌ಗಳನ್ನು ಕ್ಲಿಕ್ಕಿಸಿ ಫೋಟೋವನ್ನು ಜೂಮ್ ಮಾಡಿ ನೋಡಿದೆವು. ವೈರಲ್ ಆದ ವಿಡಿಯೋವಿನಲ್ಲಿ ಕಾಣುವ ಹಸಿರು ಬಣ್ಣದ ಬಾವಟಕ್ಕೂ ಪಾಕಿಸ್ತಾನದ ಬಾವುಟಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನೋಡಲು ಒಂದೇ ರೀತಿ ಕಂಡರೂ ಸಹ ಬಾವುಟದಲ್ಲಿ ಕೆಲವು ವ್ಯತ್ಯಾಸಗಳಿವೆ. ವೈರಲ್ ಆದ ವಿಡಿಯೋದಲ್ಲಿ ಕಾಣುವುದು ಇಸ್ಲಾಮಿಕ್ ಬಾವುಟ ಎಂದು ನಾವು ಕಂಡುಹಿಡಿದೆವು.
ನಾವು ವೈರಲ್ ಆದ ವಿಡಿಯೋವಿನಲ್ಲಿರುವ ಬಾವುಟವನ್ನು ನೋಡಿದರೆ ಹಸಿರು ಬಣ್ಣದ ಧ್ವಜದ ಮೇಲೆ ಚಂದ್ರ ಮತ್ತು ನಕ್ಷತ್ರವಿರುವುದು ಕಾಣುತ್ತದೆ. ಇಸ್ಲಾಮಿಕ್ ಧ್ವಜದಲ್ಲಿ ಚಂದ್ರ ಮತ್ತು ನಕ್ಷತ್ರ ಬಲಭಾಗದಲ್ಲಿರುತ್ತದೆ. ಅದೇ ನಾವು ಪಾಕಿಸ್ತಾನದ ಬಾವುಟವನ್ನು ನೋಡಿದರೆ ಚಂದ್ರ ಮತ್ತು ನಕ್ಷತ್ರದೊಂದಿಗೆ ಎಡಭಾಗದಲ್ಲಿ ಬಿಳಿ ಪಟ್ಟೊಯನ್ನು ಹೊಂದಿರುವುದನ್ನು ನಾವು ಕಾಣಬಹುದು.
ನಾವು ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ಕರ್ನಾಟಕದ ಬೆಳಗಾವಿಯ ಚಿಕ್ಕೋಡಿ ಪೊಲೀಸ್ ಠಾಣಿಗೆ ಸಂಪರ್ಕಿಸಿದಾಗ ಪೊಲೀಸ್ ಅಧಿಕಾರಿಯೊಬ್ಬರು ವಿಡಿಯೋದಲ್ಲಿ ಕಾಣುವ ದೃಶ್ಯ ಕೆಲವು ದಿನಗಳ ಹಿಂದೆ ಈದ್-ಮಿಲಾದ್ ಹಬ್ಬದ ಸಂದರ್ಭದಲ್ಲಿ ಪೊಲೀಸರ ಅನುಮತಿ ಪಡೆದು ಚಿಕ್ಕೋಡಿಯಲ್ಲಿ ಇಸ್ಲಾಮಿಕ್ ಧಾರ್ಮಿಕ ಧ್ವಜಗಳನ್ನು ಮುಸ್ಲೀಮರು ಅಳವಡಿಸಿದ್ದರು. ಇದು ಇಸ್ಲಾಮಿಕ್ ಧ್ವಜ, ಪಾಕಿಸ್ತಾನದ ಧ್ವಜ ಅಲ್ಲ ಪೊಲೀಸರ ಸ್ಪಷ್ಟನೆ ನೀಡಿದ್ದರು.
ಹೆಚ್ಚಿನ ದೃಢೀಕರಣಕ್ಕಾಗಿ ನಾವು ಬೆಳಗಾವಿ ರಿಪೋರ್ಟರ್‌ನ್ನು ಸಂಪರ್ಕಿಸಿದೆವು. ಅವರು ಹೇಳಿರುವ ಪ್ರಜಾರ ಚಿಕ್ಕೋಡಿಯಲ್ಲಿ ಪಾಕಿಸ್ತಾನ ಧ್ವಜ ಅಳವಡಿಸಿರುವ ಯಾವುದೇ ಘಟನೆ ನಡೆದಿಲ್ಲ. ಕೆಲವು ದಿನಗಳ ಹಿಂದೆ ಈದ್-ಮಿಲಾದ್ ಹಬ್ಬದ ಸಂದರ್ಭ ಪೊಲೀಸರ ಅನುಮತಿ ಪಡೆದು ಚಿಕ್ಕೋಡಿಯಲ್ಲಿ ಇಸ್ಲಾಮಿಕ್ ಧಾರ್ಮಿಕ ಧ್ವಜಗಳನ್ನು ಅಳವಡಿಸಲಾಗಿತ್ತು. ಇದು ಇಸ್ಲಾಮಿಕ್ ಧ್ವಜ, ಪಾಕಿಸ್ತಾನದ ಧ್ವಜ ಅಲ್ಲ ಎಂದು ಹೇಳಿದರು.
ಹೀಗಾಗಿ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ ಎಂದು ಸಾಭೀತಾಗಿದೆ. ವೈರಲ್ ಆದ ವಿಡಿಯೋದಲ್ಲಿ ಕಾಣುವುದು ಚಿಕ್ಕೋಡಿಯಲ್ಲಿ ಬೀದಿ ದೀಪಗಳಿಗೆ ಅಳವಡಿಸಿದ್ದು ಪಾಕಿಸ್ತಾನ ಧ್ವಜ ಅಲ್ಲ, ಅದು ಇಸ್ಲಾಮಿಕ್ ಧ್ವಜ. ವೈರಲ್ ಆದ ವಿಡಿಯೋವಿಗೂ ದಾವಣಗೆರೆಗೂ ಯಾವ ಸಂಬಂಧವಿಲ್ಲ.