ಫ್ಯಾಕ್ಟ್ ಚೆಕ್: ನಟ, ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಮಠಾಧೀಶರನ್ನು ಭೇಟಿ ಮಾಡಿದಂತಹ ಚಿತ್ರ ಇತ್ತೀಚಿನದಲ್ಲ ಈ ಚಿತ್ರ ಹಳೆಯದು.
ನಟ, ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಮಠಾಧೀಶರನ್ನು ಭೇಟಿ ಮಾಡಿದಂತಹ ಚಿತ್ರ ಇತ್ತೀಚಿನದಲ್ಲ ಈ ಚಿತ್ರ ಹಳೆಯದು.
ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಮತ್ತು ತಮಿಳುನಾಡಿನ ಧರ್ಮಪುರಂ ಅಡೀನಮ್‌ನಲ್ಲಿರುವ ಹಿಂದೂ ಗುರುಗಳು ಇರುವ ಚಿತ್ರ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇವರಿಬ್ಬರೂ ಮಾತುಕತೆ ನಡೆಸುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಹರಿದಾಡುತ್ತಿದೆ.
ಸನಾತನ ಧರ್ಮ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಇದರಲ್ಲಿ ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ರದ್ದುಪಡಿಸಬೇಕು. ಉದಾಹರಣೆಗೆ ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ನಾವು ಅದನ್ನು ಕೊನೆಗೊಳಿಸಬೇಕು. ಹಾಗೆಯೇ ನಾವು ಸನಾತನವನ್ನು ನಿರ್ಮೂಲನೆ ಮಾಡಬೇಕಿದೆ ಎಂದು ಉದಯನಿಧಿ ವಿವಾದಾತ್ಮಕ ಹೇಳಿಕೆ ಕೊಟ್ಟ ನಂತರ ಈ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಫೋಟೋವಿನಲ್ಲಿರುವ ತಮಿಳು ಭಾಷೆಯ ಕ್ಯಾಪ್ಷನ್ ಅನ್ನು ನಾವು ಅನುವಾದಿಸಿದೆವು. ಅನುವಾದದಲ್ಲಿ ನಮಗೆ ಕಂಡುಬಂದಿದ್ದು ʼಹೇ ಸನಾತನ ಧರ್ಮದ ಹೋರಾಟಗಾರನೇನೆ ನೀವೇನಿಲ್ಲಿ, ಏನು ಮಾಡುತ್ತಿದ್ದೀರಾ? ನಾನು ಸಚಿವನಾಗಿ ಬಂದಿಲ್ಲ ವೈಯುಕ್ತಿಕ ಕೆಲಸದ ಮೇಲೆ ಬಂದಿದ್ದೇನೆ ಎಂದು ತಮಿಳ ಭಾಷೆಯಲ್ಲಿ ಕ್ಯಾಪ್ಷನ್ ನೀಡಿದ್ದರು.
ಫ್ಯಾಕ್ಟ್ ಚೆಕ್
ಸುದ್ದಿಯಾದ ಚಿತ್ರದಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದೆವು. 2020ರಲ್ಲಿ ತೆಗೆದಂತಹ ಕೆಲವು ಇದೇ ರೀತಿಯ ಚಿತ್ರಗಳನ್ನು ನಮಗೆ ಕಾಣಿಸಿತು. ಅಷ್ಟೀ ಅಲ್ಲದೇ ವಿಕಟನ್ ಮತ್ತು ದಿನಮಲರ್ ವೆಬ್‌ಸೈಟ್‌ನಲ್ಲಿ ಈ ಕುರಿತಾದಂತ ಕೆಲವು ಮಾಹಿತಿಗಳನ್ನು ಸಹ ಕಂಡುಕೊಂಡೆವು.
ವೈಬ್‌ಸೈಟ್‌ನಲ್ಲಿ ಪ್ರಕಟನಗೊಂಡ ಮಾಹಿತಿಯ ಪ್ರಕಾರ ನವೆಂಬರ್ 2020 ರಲ್ಲಿ ಉದಯನಿಧಿ, ರಾಜ್ಯ ಚುನಾವಣಾ ಪ್ರಚಾರದಲ್ಲಿದ್ದಾಗ ಧರ್ಮಪುರಂ ಅಧೀನಂಗೆ ಭೇಟಿ ನೀಡಿ ಅಲ್ಲಿನ ಗುರುಗಳ ಜೊತೆ ಮಾತನಾಡಿದ್ದರು.
2020ರಲ್ಲಿ ವಿಕಟನ್ ಮತ್ತು ದಿನಮಲರ್ ವೆಬ್ ಸೈಟ್‌ನಲ್ಲಿದ್ದ ಫೋಟೋವನ್ನು ಮತ್ತು ವೈರಲ್ ಆದ ಫೋಟೋವನ್ನು ನಾವು ಹೋಲಿಸಿ ನೋಡಿದೆವು ಸಾಕಷ್ಟು ಹೋಲಿಕೆಗಳನ್ನು ಕಂಡುಕೊಂಡೆವು. 2020ರಲ್ಲಿ ಕ್ಲಿಕ್ಕಿಸಿದಂತ ಫೋಟೋವನ್ನು ಫೋಟೋಶಾಪ್ ಮೂಲಕ ಎಡಿಟ್ ಮಾಡಿ ವೈರಲ್ ಮಾಡಲಾಗಿದೆ.
ಉದಯನಿಧಿ ಸ್ಟಾಲಿನ್ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ 22 ನವೆಂಬರ್ 2020 ರಂದು ಸ್ಟಾಲಿನ್ ಮತ್ತು ಹಿಂದೂ ಗುರುಗಳೊಂದಿಗಿರಯವ ಫೋಟೋವನ್ನು ಪೋಸ್ಟ್ ಮಾಡಲಾಗಿತ್ತು.
ವೈರಲ್ ಆದ ಚಿತ್ರ ಹಳೆಯದ್ದು. 2020ರಲ್ಲಿ ಮಠಾಧೀಶರ ಆಶಿರ್ವಾದವನ್ನು ಪಡೆಯಲು ಉದಯನಿಧಿ ಸ್ಟಾಲಿನ್ ಧರ್ಮಪುರಂ ಅಡೀನಂಗೆ ಭೇಟಿ ನೀಡಿದ್ದರು. ʼಸನಾತನ ಧರ್ಮ ನಿರ್ಮೂಲನೆʼಯ ಬಗ್ಗೆ ಹೇಳಿಕೆ ನೀಡಿದ ನಂತರ ತೆಗೆದ ಫೋಟೋವಲ್ಲ.