ಫ್ಯಾಕ್ಟ್‌ಚೆಕ್: ಮಧ್ಯರಾತ್ರಿ ಚಂದ್ರಬಾಬು ನಾಯ್ಡು ಮತ್ತು ರೇವಂತ್ ರೆಡ್ಡಿ ಭೇಟಿಯಾಗಿದ್ದಾರೆಂಬ ಸುದ್ದಿ ವೈರಲ್. ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.
ಮಧ್ಯರಾತ್ರಿ ಚಂದ್ರಬಾಬು ನಾಯ್ಡು ಮತ್ತು ರೇವಂತ್ ರೆಡ್ಡಿ ಭೇಟಿಯಾಗಿದ್ದಾರೆಂಬ ಸುದ್ದಿ ವೈರಲ್. ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.;
ಸೆಪ್ಟೆಂಬರ್ 2023 ರಲ್ಲಿ ಟಿಡಿಪಿ ಅಧ್ಯಕ್ಷ ನಾರಾ ಚಂದ್ರಬಾಬು ನಾಯ್ಡು ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿತ್ತು. ನ್ಯಾಯಾಂಗ ಬಂಧನದಲಲ್ಲಿದ್ದ ನಾಯ್ಡು ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿದರಿಂದ ಮಧ್ಯಂತರ ಜಾಮೀನನ್ನು ಹೈಕೊರ್ಟ್ ನೀಡಿತು. ತೆಲಂಗಾಣದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ ಸ್ಪರ್ಧಿಸುತ್ತಿಲ್ಲ. ಹೀಗಾಗಿ ಭಾರತ ರಾಷ್ಟ್ರ ಸಮಿತಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ಪೈಪೋಟಿ ಇದೆ. ಇಂತಹ ಸಮಯದಲ್ಲಿ ಜಾಮೀನು ದೊರೆತ ನಂತರ ಚಂದ್ರಬಾಬು ಅವರು ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿಯವರನ್ನು ಭೇಟಿ ಮಾಡಿದ್ದಾರೆ ಎಂಬ ಸುದ್ದಿ ದಿಶಾ ಪತ್ರಿಕೆಯಲ್ಲಿ ವರದಿಯಾಗಿತ್ತು ಎಂಬ ಸುದ್ದಿ ವೈರಲ್ ಆಗಿದೆ.
ತಡರಾತ್ರಿ ಚಂದ್ರಬಾಬು ನಾಯ್ಡು, ರೇವಂತ್ ರೆಡ್ಡಿ ಭೇಟಿಯಾಗಿ ತೆಲಂಗಾಣದಲ್ಲಿ ಟಿಡಿಪಿ ವಿಲೀನದ ಬಗ್ಗೆ ಚರ್ಚಿಸಿದರು ಎಂಬ ಸುದ್ದಿ ದಿಶಾ ಎಂಬ ಪತ್ರಿಕೆಯಲ್ಲಿ ಸ್ಕ್ರೀನ್‌ಶಾಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಚಂದ್ರಬಾಬು ನಾಯ್ಡು ಮತ್ತು ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ತಡರಾತ್ರಿ ಸಭೆಯನ್ನು ನಡೆಸಿದ್ದಾರೆ ಎಂಬ ಸ್ಕ್ರೀನ್‌ಶಾಟ್ ವೈರಲ್ ಆಗಿತ್ತು.
ವೈರಲ್ ಆದ ಸುದ್ದಿಯ ಅಸಲಿಯತ್ತೇನು ಎಂದು ಹುಡುಕಲು ನಾವು ವೀಡಿಯೋದಲ್ಲಿನ ಕೆಲವು ಕ್ಲಿಪಿಂಗ್‌ನ್ನು ಬಳಸಿ ಹುಡುಕಾಟ ನಡೆಸಿದೆವು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಈ ಸುದ್ದಿಯ ಕುರಿತು ಒಂದೇ ಒಂದು ಸುದ್ದಿಯೂ ಕಂಡು ಬಂದಿಲ್ಲ. ಜೊತೆಗೆ ವೈರಲ್ ಆದ ಸುದ್ದಿ ಸುಳ್ಳೆಂದು ಸ್ವತಃ ದಿಶಾ ಡೈಲಿ ಪತ್ರಿಕೆಯ ಮಾಲಿಕ ತನ್ನ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಜೊತೆಗೆ ದಿಶಾ ಈ-ಪೇಪರ್‌ನ್ನು ಪರಿಶೀಲಿಸಿದಾಗ ನಮಗೆ ಈ ರೀತಿಯ ಲೇಖನಗಳು ಯಾವುದೂ ಸಿಗಲಿಲ್ಲ ಹಾಗೆ ಪ್ರಕಟನೆಯಾಗಿದೆ ಎಂದು ವರದಿಯೂ ಆಗಲಿಲ್ಲ.
ವೈರಲ್ ಆದ ಸುದ್ದಿಯನ್ನು ತೀಕ್ಷ್ಣವಾಗಿ ಪರಿಶೀಲಿಸಿದಾಗ, ಪ್ರಕಟನೆಯಾದ ಕೊನೆಯ ದಿನವನ್ನು ನೋಡಬಹುದು. ನವಂಬರ್ 15, 2023ರಂದು ಪ್ರಕಟವಾಗಿದೆ ಎಂದು ವೈರಲ್ ಆದ ಈ-ಪೇಪರ್‌ನಲ್ಲಿತ್ತು.
ಖುದ್ದು ದಿಶಾ ಡೈಲಿ ವೆಬ್‌ಸೈಟ್‌ನಲ್ಲೂ, ವೈರಲ್ ಆದ ಸುದ್ದಿ ಸುಳ್ಳೆಂದು ಪ್ರಕಟಣೆಯನ್ನು ಹೊರಡಿಸಿತ್ತು.
ʼದಿಶಾʼ ಪತ್ರಿಕೆಗೆ ಸಿಗುತ್ತಿರುವ ಜನಪ್ರಿಯತೆ ಮತ್ತು ಜನರ ಮನದಲ್ಲಿ ನಂಬಿಕೆಗೆ ಧಕ್ಕೆ ತರಲು ಕೆಲವು ರಾಜಕೀಯ ವ್ಯಕ್ತಿಗಳು ಇಂತಹ ಸುಲ್ಳು ಸುದ್ದಿಯನ್ನು ಹರಡುತ್ತಿದ್ದಾರೆ. ʼದಿಶಾʼ ಪತ್ರಿಕೆಯ ಯಾವ ಆವೃತ್ತಿಯಲ್ಲೂ ಸಹ ಈ ರೀತಿಯ ಸುದ್ದಿ ಪ್ರಕಟವಾಗಲಿಲ್ಲ.ಜನರಲ್ಲಿ ಗೊಂದಲ ಮೂಡಿಸಲು ಈ ಮಾರ್ಫ್ ಕ್ಲಿಪಿಂಗ್‌ನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ದಿಶಾ ಪತ್ರಿಕೆಯಲ್ಲಿ ವಿವರಿಸಿದ್ದರು.
ಹೀಗಾಗಿ ವೈರಲ್ ಆದ ಸದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ದಿಶಾ ಪತ್ರಿಕೆಯಲ್ಲಿ ಚಂದ್ರಬಾಬು ಮತ್ತು ರೇವಂತ್ ರೆಡ್ಡಿಯವರು ಮಧ್ಯರಾತ್ರಿ ಸಭೆಯನ್ನು ನಡಸಿದ್ದಾರೆ ಎಂಬ ಸುದ್ದಿ ಅಕ್ಷರಶಃ ಸುಳ್ಳು.