ಫ್ಯಾಕ್ಟ್‌ಚೆಕ್‌: ಬೆಂಗಳೂರಿನಲ್ಲಿರುವ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಈ ವರ್ಷ 2.5ಕೋಟಿ ರೂ ಬಳಸಿ ಅಲಂಕರಿಸಿಲ್ಲ

ಬೆಂಗಳೂರಿನಲ್ಲಿರುವ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಈ ವರ್ಷ 2.5ಕೋಟಿ ರೂ ಬಳಸಿ ಅಲಂಕರಿಸಿಲ್ಲ

Update: 2024-09-19 13:15 GMT

Sri Satya Ganapati temple

ಕೆಲವು ದಿನಗಳ ಹಿಂದಷ್ಟೇ ನಾವೆಲ್ಲಾ ಗಣೇಶ ಚತುರ್ಥಿಯನ್ನು ಭಕ್ತಿ ಶ್ರದ್ದೆಯಿಂದ ಆಚರಿಸಿದೆವು. ದೇವಸ್ಥಾನಗಳನ್ನು ಹಬ್ಬ ಹರಿದಿನಗಳಲ್ಲಿ ವಿನೂತನ ಮತ್ತು ವಿಶಿಷ್ಟ ರೀತಿಯಲ್ಲಿ ಅಲಂಕೃತಗೊಳಿಸಲಾಗುತ್ತದೆ. ಗಣೇಶ ಚತುರ್ಥಿಯ ಅಂಗವಾಗಿ ಬೆಂಗಳೂರಿನ ಗಣೇಶ ದೇವಸ್ಥಾನದ ಅಲಂಕಾರಕ್ಕೆ ಸಂಬಂಧಿಸಿದ ವಿಡಿಯೋವೊಂದು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬೆಂಗಳೂರಿನ ಜೆ.ಪಿ ನಗರದ ಪುಟ್ಟೇಹಳ್ಳಿಯಲ್ಲಿರುವ ಶ್ರೀ ಸತ್ಯಗಣಪತಿ ದೇವಸ್ಥಾನವನ್ನು ಹಾಗೆ ದೇವಸ್ಥಾನದ ಆವರಣವನ್ನು ಆಡಳಿತಾ ಮಂಡಳಿ ಪ್ರತಿವರ್ಷ ವಿನೂತನವಾಗಿ ಹಣ್ಣು, ಹಂಪಲು, ಹೂಗಳು, ತರಕಾರಿಗಳು ಹೀಗೆ ಬಗೆಬಗೆಯ ವಸ್ತುಗಳಿಂದ ಅಲಂಕರಿಸುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ದೇವಸ್ಥಾನಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಸಾಮಾಜಿಕ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ. ಸೆಪ್ಟಂಬರ್‌ 15, 2024ರಂದು ಮೂರ್ತಿ ನೈನ್‌ ಎಂಬ ಎಕ್ಸ್‌ ಖಾತೆದಾರರು ವಿಡಿಯೋವೊಂದನ್ನು ಹಂಚಿಕೊಂಡು "#बेंगलुरु में एक गणेश पंडाल की सजावट भारतीय नोटों की करेंसी से की गई है। पंडाल में तकरीबन 90 लाख रुपए के नोट लगाए गए हैं, सजावट में करीब ढाई करोड़ खर्च किए गए हैं...... सूत्र।

क्या कहेंगे आप इस भक्ति भाव को" ಎಂಬ ಕ್ಯಾಪ್ಷನ್‌ನ್ನೀಡಿ ಪೋಸ್ಟ್‌ ಮಾಡಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಸುದ್ದಿಯನ್ನು #2024ganeshchaturti #GaneshUtsav2024 ಎಂಬ ಹ್ಯಾಷ್‌ಟ್ಯಾಗ್‌ನ್ನು ಬಳಸಿ ಹಂಚಿಕೊಳ್ಳುತ್ತಿರುವುದನ್ನು ನೋಡಬಹುದು.

ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಗಣೇಶನ ಪೆಂಡಾಲ್‌ ಅಲಂಕರಿಸಲು 2.5 ಕೋಟಿ ರೂಪಾಯಿ ಬಳಸಿದ್ದಾರೆ ಅದರಲ್ಲಿ 90ಲಕ್ಷ ರೂ ನಾಣ್ಯಗಳನ್ನು ಬಳಸಿದ್ದಾರೆ" ಎಂಬ ಶೀರ್ಷಿಕೆಯನ್ನೀಡಿ ಪೋಸ್ಟ್‌ ಮಾಡಿರುವುದನ್ನು ನಾವು ಕಂಡುಕೊಂಡೆವು.

ಭೋಲೆ ಬಾಬಾ ಶಕ್ತಿ ಎಂಬ ಯೂಟ್ಯೂಬ್‌ ಖಾತೆಯಲ್ಲೂ ಸಹ ಇದೇ ವಿಡಿಯೋವನ್ನು ಶೇರ್‌ ಮಾಡಿ "2.5 crore notes se saja hai.. Sri Satya Ganapathi, Bangalore. #ganesh #ganapathi ಎಂಬ ಶೀರ್ಷಿಕೆಯನ್ನೀಡಿ ಪೋಸ್ಟ್‌ ಮಾಡಿರುವುದನ್ನು ನಾವು ಕಾಣಬಹುದು

ಸೆಪ್ಟಂಬರ್‌ 16,2024ರಂದು ಏರ್‌ ಫೋರ್ಸ್‌2 ಏಕ್ಸ್‌ಫ್ಲೋರರ್‌ ಎಂಬ ಯೂಟ್ಯೂಬ್‌ ಖಾತೆಯಲ್ಲಿ "This ganesh pandal was made of using ₹2.5Crore Note #viral #youtubeshorts" ಎಂಬ ಶೀರ್ಷಿಎಕಯೊಂದಿಗೆ ಪೋಸ್ಟ್‌ ಮಾಡಿದ್ದಾರೆ.

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋ ಇತ್ತೀಚಿನದಲ್ಲ. 2023ರಲ್ಲಿ ಬೆಂಗಳೂರಿನ ಜೆಪಿ ನಗರದ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯಗಣಪತಿ ದೇವಸ್ಥಾನದ ಆವರಣವನ್ನು 2.5 ಕೋಟಿ ರೂ. ನಾಣ್ಯ ಮತ್ತು ನೋಟುಗಳನ್ನು ಬಳಸಿ ಅಲಂಕರಿಸಲಾಗಿತ್ತು.

ನಾವು ವೈರಲ್‌ ಆದ ವಿಡಿಯೋವಿನ ಕೆಲವು ಪ್ರಮುಖ ಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ ರಿವರ್ಸ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸೆಪ್ಟಂಬರ್‌ 20,2023ರಂದು ಟೈಮ್ಸ್‌ ಆಫ್‌ ಇಂಡಿಯಾ ಯೂಟ್ಯೂಬ್‌ ಚಾನೆಲ್‌ನಲ್ಲಿ ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ಮಾಡಿರುವ ಅಲಂಕಾರವನ್ನು ನಾವು ನೋಡಬಹುದು. ವಿಡಿಯೋವಿಗೆ ಕ್ಯಾಪ್ಷನ್‌ ಆಗಿ"In Bengaluru's Sri Sathyaganapati Temple in Puttenahalli, a one-of-a-kind display has captured attention, featuring both currency notes and coins. The temple's dedicated team of 150 individuals spent over a month preparing this unique decoration. Inside the temple, meticulously crafted garlands made from 5, 10, and 20 rupee coins, as well as denominations ranging from 10 to 500 rupee notes, adorn the interiors. Remarkably, the total value of the currency incorporated in this display amounts to approximately Rs 2.5 crore" ಎಂದು ಬರೆದು ಪೋಸ್ಟ್‌ ಮಾಡಿರುವುದನ್ನು ನಾವು ನೋಡಬಹುದು.

ಕ್ಯಾಪ್ಷನ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ "ಬೆಂಗಳೂರಿನ ಪುಟ್ಟೇನಹಳ್ಳಿಯಲ್ಲಿರುವ ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ನೋಟುಗಳು ಮತ್ತು ನಾಣ್ಯಗಳನ್ನು ಉಪಯೋಗಿಸಿ ದೇವಸ್ಥಾನದ ಆವರಣವನ್ನು 150 ಜನರ ತಂಡವು ಅಲಂಕಾರ ಮಾಡಿದ್ದಾರೆ. ಈ ಅಲಂಕಾರ ಮಾಡಲು ಒಂದುತಿಂಗಳ ಕಾಲ ತೆಗೆದುಕೊಂಡಿದೆ. ಗಣೇಶ ಚತುರ್ಥಿಯ ಪ್ರಯುಕ್ತ ಸುಮಾರು 56 ಲಕ್ಷ ಮೌಲ್ಯದ 5,10 ಮತ್ತು 20 ರೂಪಾಯಿ ನಾಣ್ಯಗಳನ್ನು ಬಳಸಿ, 10,20,50,100,200 ಮತ್ತು 500 ರೂಪಾಯಿಗಳ ನೋಟ್‌ಗಳನ್ನು ಬಳಸಿಕೊಂಡು ಹೂವಿನಂತೆ ಮಾಲೆಗಳನ್ನು ಮಾಡುವ ಮೂಲಕ ಆಲಂಕಾರ ಮಾಡಿದ್ದಾರೆ ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ.

ನಾವು ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ಈ ಸುದ್ದಿಗೆ ಸಂಬಂಧಿಸಿದ ಕೆಲವು ಕೀವರ್ಡ್‌ಗಳ ಮೂಲಕವೂ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಕೆಲವು ವರದಿಗಳೂ ಸಹ ಕಂಡುಬಂದಿತು. ಸೆಪ್ಟಂಬರ್‌ 18, 2023ರಂದು ವಿಜಯ ಕರ್ನಾಟಕದಲ್ಲಿ ವೈರಲ್‌ ಆದ ದೇವಸ್ಥಾನದ ಅಲಂಕರಣದ ಬಗ್ಗೆ ವರದಿಯಾಗಿರುವುದನ್ನು ನಾವು ಕೊಂಡುಕೊಂಡೆವು. ವರದಿಯಲ್ಲಿ "ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಮೂರ್ತಿ ಸುತ್ತಮುತ್ತ ಅದ್ಧೂರಿ ಅಲಂಕಾರ ಮಾಡುವುದು ದೊಡ್ಡ ಟ್ರೆಂಡ್‌ ಆಗಿದೆ. ಹೆಚ್ಚು ಖರ್ಚು ಮಾಡಿ ಅಥವಾ ವಿಶೇಷವಾಗಿ ಅಲಂಕಾರ ಮಾಡಿ ವಿವಿಧ ಸಂಘಗಳು ಖುಷಿಪಡುತ್ತವೆ. ಅಂತೆಯೇ ಭಕ್ತಾಧಿಗಳು ಕೂಡಾ ಅತ್ಯುತ್ತಮ ಅಲಂಕಾರ ಮಾಡಿದ ಸಾರ್ವಜನಿಕ ಗಣೇಶೋತ್ಸವಕ್ಕೆ ಭೇಟಿ ನೀಡುತ್ತಾರೆ. ಸದ್ಯ ಬೆಂಗಳೂರಿನ ಜೆಪಿ ನಗರದ ನೋಟು, ನಾಣ್ಯಗಳಿಂದ ಅಲಂಕರಿಸಿದ ಗಣೇಶ ಉತ್ಸವ ದೇಶದ ಮಟ್ಟದಲ್ಲಿ ಫೇಮಸ್‌ ಆಗಿದೆ" ಎಂದು ವರದಿಯಾಗಿರುವುದನ್ನು ನಾವು ನೋಡಬಹುದು.

ಝೀ ಕನ್ನಡ.ಇಂಡಿಯಾ ವೆಬ್‌ಸೈಟ್‌ನಲ್ಲೂ ಸಹ ಗೌರಿ- ಗಣೇಶ ಹಬ್ಬದ ಸಂಭ್ರಮ: ನೋಟು - ನಾಣ್ಯದಿಂದ ಗಣೇಶನಿಗೆ ವಿಶೇಷ ಅಲಂಕಾರದ ಬಗ್ಗೆ ವರದಿಯಾಗಿರುವುದನ್ನು ನಾವು ನೋಡಬಹುದು.


ನಾವು ಸತ್ಯಗಣಪತಿ ದೇವಸ್ಥಾನದಲ್ಲಿ ಈ ವರ್ಷ ಯಾವ ರೀತಿಯ ಅಲಂಕಾರವನ್ನು ಮಾಡಲಾಗಿದೆ ಎಂದು ತಿಳಿಯಲು ದೇವಸ್ಥಾನದ ಟ್ರಸ್ಟಿ ರಾಮ್‌ ಮೋಹನ್‌ ರಾಜ್‌ರನ್ನು ಸಂಪರ್ಕಿಸಿದೆವು. ಪ್ರತಿವರ್ಷ ಹೊಸದೊಂದು ಥೀಮ್​​ನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಹಾಗೂ ವಿಶೇಷ ಅಲಂಕಾರದ ಮೂಲಕ ದೇಶದ ಗಮನವನ್ನು ಸೆಳೆಯುತ್ತಿದ್ದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಈ ಬಾರಿ 36ಕ್ಕೂ ಹೆಚ್ಚು ವಿಧದ ಹಣ್ಣು ಹಾಗೂ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ ಎಂದರು ಹೇಳಿದರು.




ಇದೇ ಸುದ್ದಿಯನ್ನು ನಾವು ಈಟಿವಿ ಭಾರತ್‌ ವೆಬ್‌ಸೈಟ್‌ನಲ್ಲಿ "ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ವೈಭವದ ಗಣೇಶೋತ್ಸವ; 36 ವಿಧದ ಹಣ್ಣು - ಹೂವುಗಳಿಂದ ಅಲಂಕಾರ - Sathyaganapati Temple" ಎಂಬ ಹೆಡ್‌ಲೈನ್‌ನೊಂಡಿದೆ ವರದಿ ಮಾಡಿರುವುದನ್ನು ನೋಡಬಹುದು.


ಸೆಪ್ಟಂಬರ್‌ 14,2024ರಂದು ಏಷಿಯನೆಟ್‌ ಸುವರ್ಣ ನ್ಯೂಸ್‌ ಚಾನೆಲ್‌ನಲ್ಲಿ "ನೋಟುಗಳಿಂದ ಗಣಪತಿಗೆ ವಿಶೇಷ ಅಲಂಕಾರ.." ಎಂಬ ಶೀರ್ಷಿಕೆನ್ನೀಡಿ ವಿಡಿಯೋಗೆ ಕ್ಯಾಪ್ಷನ್‌ ಆಗಿ "ಕೋಟ್ಯಂತರ ರೂ. ಮೌಲ್ಯದ ನೋಟುಗಳಿಂದ ಗಣಪತಿಗೆ ವಿಶೇಷ ಅಲಂಕಾರ. ಗಣೇಶ ಹಬ್ಬದ ಪ್ರಯುಕ್ತ 50 ಲಕ್ಷ ರೂ. ಮೊತ್ತದ ನಾಣ್ಯಗಳಿಂದ ಶೃಂಗಾರ. ವಿಕ್ರಂ ಲ್ಯಾಂಡರ್‌, ಚಂದ್ರಯಾನ - 3, ಮೇರಾ ಭಾರತ್‌ ಮಹಾನ್‌ ಥೀಮ್‌ ಅಡಿಯಲ್ಲಿ ಬೆಂಗಳೂರಿನ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್‌ನಿಂದ ಈ ಬಾರಿ ವಿಶಿಷ್ಟ ಗಣೇಶೋತ್ಸವ ಆಚರಿಸಲಾಗುತ್ತಿದೆ. ಸೆ.18 ರಂದು ಬೆಳಿಗ್ಗೆಯಿಂದ ವಿಶೇಷ ಪೂಜೆ ಆಯೋಜನೆ, ದೇವರ ದರ್ಶನ ನಡೆಯುತ್ತದೆ" ಬರೆದು ವಿಡಿಯೋವನ್ನು ಹಂಚಿಕೊಂಡಿದ್ದಾರೆ

Full View



ಸೆಪ್ಟಂಬರ್‌ 7, 2024ರಂದು ಟಿವಿ9 ಕನ್ನಡ ಯೂಟ್ಯೂಬ್‌ ಚಾನೆಲ್‌ನಲ್ಲಿ ಜೆಪಿನಗರದ ಪುಟ್ಟೆನಹಳ್ಳಿಯ ಶ್ರೀ ಶ್ರೀ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ ಫುಲಪುಷ್ಟಗಳಿಂದ ಕಂಗೊಳಿಸುತ್ತಿರುವ ದೃಶ್ಯಗಳನ್ನು ನೋಡಬಹುದು.

Full View

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ವೈರಲ್‌ ಆದ ವಿಡಿಯೋದಲ್ಲಿ ಕಾಣುವ ಅಲಂಕಾರವನ್ನು 2024ರಲ್ಲಿ ಜೆಪಿನಗರದ ಪುಟ್ಟೆನಹಳ್ಳಿಯ ಶ್ರೀ ಶ್ರೀ ಸತ್ಯಸಾಯಿ ಗಣಪತಿ ದೇವಸ್ಥಾನದಲ್ಲಿ ಮಾಡಿರುವುದಲ್ಲ. ವೈರಲ್‌ ಆದ ವಿಡಿಯೋ ಮತ್ತು ಫೋಟೋಗಳು 2023ರಲ್ಲಿ ಅಲಂಕರಿಸಿರುವುದು.

Claim :  ಬೆಂಗಳೂರಿನಲ್ಲಿರುವ ಶ್ರೀ ಸತ್ಯ ಗಣಪತಿ ದೇವಸ್ಥಾನದಲ್ಲಿ ಈ ವರ್ಷ 2.5ಕೋಟಿ ರೂ ಬಳಸಿ ಅಲಂಕರಿಸಿಲ್ಲ
Claimed By :  Social Media Users
Fact Check :  Misleading
Tags:    

Similar News