ಫ್ಯಾಕ್ಟ್‌ಚೆಕ್: 2022ರ ಕೋವಿಡ್-19 ನಾಲ್ಕನೇ ಅಲೆಗೆ ಸಂಬಂಧಿಸಿದ ಹಳೆಯ ವಿಡಿಯೋವನ್ನು 2024ರದ್ದು ಎಂದು ಹಂಚಿಕೊಳ್ಳಲಾಗುತ್ತಿದೆ
2022ರ ಕೋವಿಡ್-19 ನಾಲ್ಕನೇ ಅಲೆಗೆ ಸಂಬಂಧಿಸಿದ ಹಳೆಯ ವಿಡಿಯೋವನ್ನು 2024ರದ್ದು ಎಂದು ಹಂಚಿಕೊಳ್ಳಲಾಗುತ್ತಿದೆ
ಮಹಾಮಾರಿ ಕೊರೊನಾ ವೈರಸ್ ಹೋಗಿದೆ ಅಂತ ತಿಳಿದು ಜನರು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ರಕ್ಕಸಿ ಕೊರೊನಾ ಗುಪ್ತಗಾಮಿನಿಯಾಗಿ ನಮ್ಮ ಸುತ್ತಲೇ ಸಂಚರಿಸುತ್ತದೆ. ಪ್ರಪಂಚದಲ್ಲಿ ಕರೋನಾ ಸಾಂಕ್ರಾಮಿಕದಿಂದ ಉಂಟಾದ ವಿನಾಶವು ಹಲವು ದಶಕಗಳವರೆಗೆ ಕರಾಳ ನೆನಪಾಗಿ ಉಳಿಯುತ್ತದೆ. ಅದರಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಇನ್ನೂ ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದೀಗ ಮತ್ತೆ ಕರೋನಾಗೆ ಸಂಬಂಧಿಸಿದ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋವಿನ್ನು ಗಮನಿಸಿದರೆ, ಇದೊಂದು ರಿಪಬ್ಲಿಕ್ ನ್ಯೂಸ್ ಚಾನೆಲ್‌ನ ವರದಿ. ವರದಿಯಲ್ಲಿ ನಿರೂಪಕ ಸೈಯದ್ ಸುಹೇಲ್ ʼ 2025ರ ಜನವರಿಯಲ್ಲಿ ಕರೋನಾ-19 ನಾಲ್ಕನೇ ಅಲೆ ಭಾರತವನ್ನು ಅಪ್ಪಳಿಸಲಿದೆ ಎಂದು ವಿಡಿಯೋ ವರದಿಯಲ್ಲಿ ಹೇಳುವುದನ್ನು ನಾವು ನೋಡಬಹುದು.
ಡಿಸಂಬರ್ 20, 2024ರಂದು ʼಸಂಜೀವ್ ಯಾದವ್ 302ʼ ಎಂಬ ಇನ್‌ಸ್ಟಾಗ್ರಾಮ್ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು ʼकोरोना फिर से आ रहा है 2025 मे फिर से लगेंगे लॉकडाउनʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ2025ಕ್ಕೆ ಮತ್ತೆ ಬರಲಿದೆ ಮಹಾಮಾರಿ ಕರೋನಾ ಮತ್ತೆ ಲಾಕ್‌ಡೌನ್ ಆಗಲಿದೆʼ ಎಂದು ಬರೆದು ಪೊಸ್ಟ್ ಮಾಡಿದ್ದಾರೆ.
ವೈರಲ್ ಆದ ಪೊಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು
ಡಿಸಂಬರ್ 24, 2024ರಂದು ಯೂಟ್ಯೂಬ್ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼCoronavirus ki chauthi laharʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ʼಮಿನಾರಲ್ ಎಫ್2ಎಮ್ʼ ಎಂಬ ಯೂಟ್ಯೂಬ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು ʼbreaking news Bhayanak #videoʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
ಸನೋಜ್ ಸಿಂಗ್ ಎಂಬ ಯೂಟ್ಯೂಬ್ ಖಾತೆದಾರ ತನ್ನ ಆಕತೆಯಲ್ಲಿ ʼचीन में कोरोना जनवरी में भारत में आने वाला हैʼ ಎಂಬ ಶೀರ್ಷಿಕೆಯೊಂದಿಗೆ ವೂತಲ್ ಆದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಜನವರಿಯಲ್ಲಿ ಚೀನಾದ ಕೊರೊನಾ ಭಾರತಕ್ಕೆ ಅಪ್ಪಳಿಸಲಿದೆʼ ಎಂಬ ಶೀರ್ಷಿಕೆಯನ್ನೀಡಿ ಪೊಸ್ಟ್ ಮಾಡಿರುವುದನ್ನು ನಾವು ನೋಡಬಹುದು.
ಮತ್ತಷ್ಟು ಪೊಸ್ಟ್‌ಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ, ಇಲ್ಲಿ ನೋಡಬಹುದು
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಜನವರಿ 2023ರಲ್ಲಿ ಕರೋನ-19ನ ನಾಲ್ಕನೇ ಅಲೆಯ ಬಗ್ಗೆ ಮಾಡಿದ್ದ ವರದಿಯನ್ನು, ಡಿಸಂಬರ್ 2024ರದ್ದು ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ನಾವು ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಡಿಸಂಬರ್ 29, 2022ರಂದು ʼರಿಪಬ್ಲಿಕ್ ಭಾರತ್ʼ ಎಕ್ಸ್ ಖಾತೆಯಲ್ಲಿ ʼभारत में जिनपिंग का जासूस ! देखिए 'ये भारत की बात है', सैयद सुहेल के साथ रिपब्लिक भारत परʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಹಂಚಿಕೊಂಡಿರುವುದನ್ನು ನೀವಿಲ್ಲಿ ನೋಡಬಹುದು. ಈ ವಿಡಿಯೋದಲ್ಲಿ ನಿರೂಪಕ ಧರಿಸಿರುವ ಬಟ್ಟೆ ಮತ್ತು ವೈರಲ್ ಆದ ವಿಡಿಯೋದಲ್ಲಿ ಕಾಣುವ ಉಡುಪು ಒಂದೇ ಆಗಿದೆ. ಹಾಗೆ ವಿಡಿಯೋವಿನ ಶೀರ್ಷಿಕೆಯಲ್ಲಿ ಯೂಟ್ಯೂಬ್‌ನ ಲಿಂಕ್‌ವೊಂದನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು. ಆದರೆ ಈ ವಿಡಿಯೋವನ್ನು ಡಿಲೇಟ್ ಮಾಡಲಾಗಿದೆ ಎಂದು ತೋರಿಸುತ್ತದೆ.
ಮತ್ತಷ್ಟು ಹುಡುಕಾಟದಲ್ಲಿ ನಮಗೆ, ಜನವರಿ 01, 2023ರಂದು ʼಸ್ಟಾರ್ ನ್ಯೂಸ್ ಲೈವ್ʼ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ʼ#कोरोना जानलेवा हो सकता है जनवरीʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ನೋಡಬಹುದು. ಈ ವಿಡಿಯೋ ವರದಿಯಲ್ಲಿ ʼಕೋವಿಡ್-19 ನಾಲ್ಕನೇ ಅಲೆಯ ಬಗ್ಗೆ ಚರ್ಚಿಸುತ್ತಿರುವುದನ್ನು ಕಾಣಬಹುದು. ಜನವರಿ 2023ರಲ್ಲಿ ಅಪ್ಪಳಿಸಲಿದೆ. ಮುಂದಿನ 35-40 ದಿನಗಳು ಮಾರಣಾಂತಕವಾಗಿರುತ್ತದೆʼ ಎಂದು ವರದಿ ಮಾಡಿರುವುದನ್ನು ನೋಡಬಹುದು.
ನಾವು ಸರ್ಕಾರದ ಅಧಿಕೃತ ಪುಟವಾದ ʼಆರೋಗ್ಯ ಮತ್ತು ಕುಟುಂಬ ಕಲ್ಯಾಣʼ ಸಚಿವಾಲಯದ ಪ್ರಕಾರ ಡಿಸಂಬರ್ 16, 2024ರ ಪ್ರಕಾರ, ಭಾರತದಲ್ಲಿ ಕೊರೊನಾ-19 ಸಕ್ರಿಯ ಪ್ರಕರಣಗಲ ಸಂಖ್ಯೆ 11. ಹಾಗೂ ಇಲ್ಲಿಯವರೆಗೂ ಭಾರತ ಸರ್ಕಾರ ಅಥವಾ ಆರೋಗ್ಯ ಸಂಸ್ಥೆಗಳು 2025ರಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದೆ ಎಂಬ ಮಾಹಿತಿ ಯಾವುದೂ ನೀಡಿಲ್ಲ.
ಹೀಗಾಗಿ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳಕೆಯುವ ಕೆಲಸ ಮಾಡುತ್ತದೆ. ಜನವರಿ 2023ರಲ್ಲಿ ಕರೋನ-19ನ ನಾಲ್ಕನೇ ಅಲೆಯ ಬಗ್ಗೆ ಮಾಡಿದ್ದ ವರದಿಯನ್ನು, ಡಿಸಂಬರ್ 2024ರದ್ದು ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.