ಫ್ಯಾಕ್ಟ್‌ಚೆಕ್‌: ವೈರಲ್ ಆಗಿರುವ ವಿಡಿಯೋದಲ್ಲಿರುವ ಕಾಣುವ ಹುಡುಗಿ ಅಂಜಲಿ ಬಿರ್ಲಾ ಅಲ್ಲ. ಅಂಜಲಿ ಬಿರ್ಲಾ 2019ರಲ್ಲಿಯೇ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ

ವೈರಲ್ ಆಗಿರುವ ವಿಡಿಯೋದಲ್ಲಿರುವ ಕಾಣುವ ಹುಡುಗಿ ಅಂಜಲಿ ಬಿರ್ಲಾ ಅಲ್ಲ. ಅಂಜಲಿ ಬಿರ್ಲಾ 2019ರಲ್ಲಿಯೇ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ

Update: 2024-07-16 19:48 GMT

Anjali Birla

ಓಂ ಬಿರ್ಲಾ ಸತತ ಎರಡನೇ ಬಾರಿಗೆ ಲೋಕಸಭೆಯ ಸ್ಪೀಕರ್ ಆಗಿ ನೇಮಕಗೊಂಡಿದ್ದಾರೆ. ಜೂನ್ 27, 2024 ರಂದು ಅವರು ಮತ್ತೆ ಸ್ಪೀಕರ್ ಆಗಿ ತಮ್ಮ ಕಾರ್ಯವನ್ನು ಮುನ್ನಡೆಸಿಕೊಂಡು ಹಹೋಗುತ್ತಿದ್ದಾರೆ. ಓಂ ಬಿರ್ಲಾ ರಾಜಸ್ಥಾನದ ಕೋಟಾದಿಂದ ಚುನಾವಣೆಯಲ್ಲಿ ಗೆದ್ದಿದ್ದರು. ಮತ್ತೆ ಸ್ಪೀಕರ್ ಆದ ನಂತರ, ಓಂ ಬಿರ್ಲಾ ಚಿಕ್ಕ ಮಗಳು ಅಂಜಲಿ ಬಿರ್ಲಾ ಪೋಸ್ಟ್‌ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಸಿವಿಲ್ಸ್‌ ಸರ್ವಿಸ್‌ ಪರಿಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಆಜೆ ಸಾಮಾನ್ಯವಾಗಿ ಮಾಡೆಲಿಂಗ್‌ನಲ್ಲಿ ನಿರತರಾರಿದ್ದರು, ಆದರೆ ಅವರು ಇದ್ದಕ್ಕಿದ್ದಂತೆ ಸಿವಿಲ್ ಅನ್ನು ಕ್ರ್ಯಾಕ್ ಮಾಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕೆಲವು ಎಕ್ಸ್‌ ಬಳಕೆದಾರರು ಮಾರ್ಡ್ರನ್‌ ಬಟ್ಟೆ ತೊಟ್ಟಿರುವ ಹುಡಿಗಿ ಕಾರಿನ ಮುಂದೆ ನಿಂತಿರುವ ವಿಡಿಯೋವೊಂದನ್ನು ಹಂಚಿಕೊಂಡು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ ಬಿರ್ಲಾ ಮಗಳು ಐಆರ್‌ಪಿಎಸ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾಳೆ ಎಂಬ ಕ್ಯಾಪಕ್ಷನ್‌ನೊಂಡಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು.

‘లోక్ సభ స్పీకర్ ఓం బిర్లా మోడలింగ్ కుమార్తె అంజలి బిర్లా అకస్మాత్తుగా IRPS పరీక్షలో వచ్చి 2019 సంవత్సరంలో మొదటి ప్రయత్నంలోనే IRPS అయ్యింది.’ ಎಂದು ತೆಲುಗಿನಲ್ಲಿ ಶೀರ್ಷಿಕೆಯನ್ನೀಡಿ ಪೋಸ್ಟ್‌ ಮಾಡಿದ್ದಾರೆ.


ಈ ಟ್ವಿಟ್‌ ಈಗ ಡಿಲೇಟ್‌ ಮಾಡಲಾಗಿದೆ. ಡಿಲೇಟ್‌ ಮಾಡಲಾದ ಆರ್ಕೈವ್‌ನ್ನು ನೀವು ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ವಿಡಿಯೋದಲ್ಲಿ ಕಾಣಿಸುವ ಹುಡುಗಿ ಓಂ ಬಿರ್ಲಾ ಮಗಳು ಅಂಜಲಿ ಬಿರ್ಲಾ ಅಲ್ಲ.

ನಾವು ಈ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ಗೂಗಲ್‌ನಲ್ಲಿ ಅಂಜಲಿ ಬಿರ್ಲಾ ಈಆಪ್‌ಪಿಎಸ್‌ ಪರಿಕ್ಷೆ ಎಂಬ ಕೀವರ್ಡ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಅಂಜಲಿ ಬಿರ್ಲಾ ಸಿವಿಲ್ ಸರ್ವೀಸಸ್ ಪರೀಕ್ಷೆ 2019 ರಲ್ಲಿ ತೇರ್ಗಡೆಯಾಗಿದ್ದಾರೆಂದು ತಿಳಿದು ಬಂದಿತು. ಅಷ್ಟೇ ಅಲ್ಲ ಅಂಜಲಿ ಬಿರ್ಲಾರನ್ನು ವೈರಲ್‌ ಆದ ಹುಡುಗಿಗೆ ಹೋಲಿಸಿದಾಗ, ವೈರಲ್‌ ಆದ ವಿಡಿಯೋವಿನಲ್ಲಿ ಕಾಣಿವ ವ್ಯಕ್ತಿ ಅಂಜಲಿ ಬರ್ಲಾ ಅಲ್ಲ ಎಂದು ತಿಳಿದುಬಂದಿತು.


2021 ರ ಜನವರಿಯಲ್ಲಿ ಪ್ರಕಟವಾದ ಲೇಖನದ ಪ್ರಕಾರ , "ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿ ಅಂಜಲಿ UPSC ಅನ್ನು ಮೊದಲ ಪ್ರಯತ್ನದಲ್ಲಿ ಭೇದಿಸಿದ್ದಾರೆ" ಎಂದು ವರದಿಯಾಗಿದೆ. ಲೈವ್‌ಮಿಂಟ್‌ನಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಅಂಜಲಿ ಬಿರ್ಲಾ ಹೊಸದಾಗಿರುವ ರಾಮ್‌ಜಾಸ್ ಕಾಲೇಜಿನಿಂದ ರಾಜಕೀಯ ವಿಜ್ಞಾನವನ್ನು (ಆನರ್ಸ್) ಓದಿದ್ದಾರೆ. UPSC 89 ಅನ್ನು ಶಿಫಾರಸು ಮಾಡಿದ ಅಭ್ಯರ್ಥಿಗಳಲ್ಲಿ ಇವರೂ ಒಬ್ಬರು, ಅಂಜಲಿ ಬರ್ಲಾ ತಮ್ಮ ಮೊದಲ ಪ್ರಯತ್ನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಪೋಸ್ಟ್‌ ಮಾಡಿದ್ದಾರೆ.

2019,ಆಗಸ್ಟ್ 4, 2020 ರಂದು ಸಿವಿಲ್‌ ಸರ್ವಿಸ್‌ ಪರೀಕ್ಷೆಯ ಫಲಿತಾಂಶಗಳನ್ನು ಘೋಷಿಸಲಾಗಿತ್ತು. ಐಎಎಸ್, ಐಎಫ್‌ಎಸ್, ಐಪಿಎಸ್, ಇತರೆ ಗ್ರೂಪ್ 'ಎ', ಗ್ರೂಪ್ 'ಬಿ' ಕೇಂದ್ರ ಸೇವೆಗಳಲ್ಲಿ 927 ಹುದ್ದೆಗಳಿಗೆ ನೇಮಕಾತಿಗಾಗಿ 829 ಅಭ್ಯರ್ಥಿಗಳನ್ನು ಅರ್ಹತೆಯ ಕ್ರಮದಲ್ಲಿ ಶಿಫಾರಸು ಮಾಡಲಾಗಿತ್ತು. ಆಯೋಗವು 2019 ರ ನಾಗರಿಕ ಸೇವಾ ಪರೀಕ್ಷೆಯ ಆಧಾರದ ಮೇಲೆ ರಚಿಸಲಾದ ಮೀಸಲು ಪಟ್ಟಿಯಲ್ಲಿ ಅಂಜಲಿ ಬಿರ್ಲಾ ಸೇರಿದಂತೆ 89 ಅಭ್ಯರ್ಥಿಗಳನ್ನು ವಿವಿಧ ನಾಗರಿಕ ಸೇವೆಗಳಿಗೆ ಶಿಫಾರಸು ಮಾಡಿದೆ.

ಎನ್‌ಡಿಟಿವಿ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಕಟಿಸಿದ ಸಂದರ್ಶನದಲ್ಲಿ, ಅಂಜಲಿ ಬಿರ್ಲಾ ಅವರು ಸಿವಿಲ್‌ ಸರ್ವಿಸ್‌ ಪರಿಕ್ಷೆಯಲ್ಲಿ ಹಾಜರಾಗದೆ ಉತ್ತೀರ್ಣರಾಗಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿತ್ತು. ಆದರೆ ಜನರ ಸೇವೆಯನ್ನು ಮಾಡಲು ಈ ಊಹಾಪೋಹ ಮತ್ತು ಸುಳ್ಳು ಸುದ್ದಿಯಳನ್ನು ಮೆಟ್ಟಿ ನಿಲ್ಲ ಬೇಕಾಗಿತ್ತು. "ಟ್ರೋಲಿಂಗ್ ವಿರುದ್ಧ ಕಾನೂನು ಬರಬೇಕು. ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಂದು ನಾನು ಬಲಿಪಶು, ನಾಳೆ ಬೇರೆಯವರು ಬಲಿಯಾಗಬಹುದು" ಎಂದು ಅಂಜಲಿ ಬಿರ್ಲಾ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಸಿಎಸ್‌ಇಗೆ ಆಯ್ಕೆಯಾಗುವ ವದಂತಿಗಳ ನಡುವೆ ಅವರು ಈ ಸಂದರ್ಶನವನ್ನು ನೀಡಿದರು.

Full View

UPSC ಪ್ರಕಟಿಸಿದ ಪತ್ರಿಕಾ ಟಿಪ್ಪಣಿಯ ಪ್ರಕಾರ, ಅಂಜಲಿ ಬಿರ್ಲಾ 2019ರಲ್ಲಿ ನಡೆದ ಸಿವಿಲ್‌ ಸರ್ವಿಸ್‌ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. UPSC ಮೀಸಲು ಪಟ್ಟಿಯಲ್ಲಿ ಅಂಜಲಿ ಬಿರ್ಲಾ ಹೆಸರು ಇರುವುದನ್ನು ನಾವು ಕಂಡುಕೊಂಡೆವು. ಸಿವಿಲ್‌ ಸರ್ವಿಸ್‌ ಪರೀಕ್ಷೆಯ ನಿಯಮ 16 (4) & (5) ರ ಪ್ರಕಾರ ಅರ್ಹತೆಯ ಕ್ರಮದಲ್ಲಿ ಕ್ರೋಢೀಕೃತ ಮೀಸಲು ಪಟ್ಟಿಯಾಗಿದೆ. UPSC ಫಲಿತಾಂಶಗಳ ಸ್ಕ್ರೀನ್‌ಶಾಟ್‌ಗಳು ಇಲ್ಲಿವೆ ಇದರಿಂದ ಸಾಭೀತಾಗಿದೆ.


ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ. ವೈರಲ್‌ ವಿಡಿಯೋದಲ್ಲಿ ಕಾಣಿಸುವ ಹುಡುಗಿ ಓಂ ಬಿರ್ಲಾ ಮಗಳು ಅಂಜಲಿ ಬಿರ್ಲಾ ಅಲ್ಲ. 

Claim :  ವೈರಲ್ ಆಗಿರುವ ವಿಡಿಯೋದಲ್ಲಿರುವ ಕಾಣುವ ಹುಡುಗಿ ಅಂಜಲಿ ಬಿರ್ಲಾ ಅಲ್ಲ. ಅಂಜಲಿ ಬಿರ್ಲಾ 2019ರಲ್ಲಿಯೇ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ
Claimed By :  Social Media Users
Fact Check :  False
Tags:    

Similar News