ಫ್ಯಾಕ್ಟ್‌ಚೆಕ್: ಮಹಿಳೆಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು ಆಗ್ರಾದಲ್ಲಲ್ಲ, ಪಂಜಾಬ್‌ನ ಜಲಂಧರ್‌ನಲ್ಲಿ
ಮಹಿಳೆಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು ಆಗ್ರಾದಲ್ಲಲ್ಲ, ಪಂಜಾಬ್‌ನ ಜಲಂಧರ್‌ನಲ್ಲಿ
ರಸ್ತೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಈ ನಾಯಿಗಳ ಕಾಟದಿಂದ ಸಾರ್ವಜನಿಕರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಹಿಂದಿಂಡಾಗಿ ಓಡಾಡುವ ನಾಯಿಗಳು ಮಹಿಳೆಯರ ಮೇಲೆ, ಮಕ್ಕಳ ಮೇಲೆ, ವೃದ್ದರ ಮೇಲೆ ದಾಳಿ ನಡೆಸುತ್ತಿರುವ ಘಟನೆಯನ್ನು ನಾವು ಪ್ರತಿದಿನ ನೋಡುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಕೆಲವೊಮ್ಮೆ ಏಕಾಏಕಿ ರಸ್ತೆಗೆ ನಾಯಿಗಳು ನುಗ್ಗುವುದರಿಂದ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕೀಡಾಗಿ ಕೈಕಾಲು ಮುರಿದುಕೊಂಡಿರುವ ಉದಾಹರಣೆಗಳೂ ಸಹ ಇವೆ.
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಬೀದಿ ನಾಯಿಗಳ ಹಾವಳಿಗೆ ಸಂಬಂಧಿಸಿದ ವಿಡಿಯೋವೊಂದು ಹರಿದಾಡುತ್ತಿದೆ. ವಿಡಿಯೋವಿನಲ್ಲಿ ಬೀದಿ ನಾಯಿಗಳ ಗುಂಪೊಂದು ಮಹಿಳೆಯ ಮೇಲೆ ದಾಳಿ ಮಾಡುತ್ತಿರುವುದನ್ನು ನೋಡಬಹುದು. ಆ ಮಹಿಳೆ ಸಹಾಯಕ್ಕಾಗಿ ಕಿರುಚಾಡುತ್ತಿದ್ದರೂ ಆಕೆಗೆ ಸಹಾಯ ಮಾಡಲು ಸಕಾಲದಲ್ಲಿ ಯಾರೂ ಬಂದಿಲ್ಲ. ಈ ವೇಳೆ ಆ ಮಹಿಳೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೂ ನಾಯಿಗಳ ಗುಂಪು ಮಹಿಳೆಯನ್ನು ಎಳೆದೊಯ್ದು ಮತ್ತಷ್ಟು ಆಕ್ರಮಣಕಾರಿಯಾಗಿ ದಾಳಿ ನಡೆಸುವುದನ್ನು ನಾವು ವೈರಲ್ ಆದ ವಿಡಿಯೋದಲ್ಲಿ ನೋಡಬಹುದು.
ಡಿಸಂಬರ್ 24, 2024ರಂದು ʼಟಿವಿ9 ಕನ್ನಡʼ ವೆಬ್‌ಸೈಟ್‌ನಲ್ಲಿ ʼವಾಕಿಂಗ್ ಮಾಡುವಾಗ ವೃದ್ಧೆಯನ್ನು ದರದರನೆ ಎಳೆದುಕೊಂಡು ಹೋಗಿ ಕಚ್ಚಿ ಕೊಂದ 7 ಬೀದಿ ನಾಯಿಗಳು; ವಿಡಿಯೋ ನೋಡಿʼ ಎಂಬ ಹೆಡ್‌ಲೈನ್‌ನೊಂಡಿಗೆ ವರದಿ ಮಾಡಿರುವುದನ್ನು ನೋಡಬಹುದು. ವರದಿಯಲ್ಲಿ ʼಉತ್ತರ ಪ್ರದೇಶದ ಆಗ್ರಾದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಬೆಳಗ್ಗೆ ವಾಕಿಂಗ್ ಹೋಗಿ ಮನೆಗೆ ತೆರಳುತ್ತಿದ್ದ ವೃದ್ಧೆಯ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಈ ದೃಶ್ಯ ಪಕ್ಕದ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಾಯಿಗಳ ಅಟ್ಟಹಾಸಕ್ಕೆ ಆ ವೃದ್ಧೆ ಪ್ರಾಣ ಕಳೆದುಕೊಂಡಿದ್ದಾರೆ. ಆ ಮಹಿಳೆ ಸಹಾಯಕ್ಕಾಗಿ ಕಿರುಚಾಡಿದರೂ ಯಾರೂ ರಕ್ಷಣೆಗೆ ಮುಂದಾಗಲಿಲ್ಲ. ತೀವ್ರವಾದ ಗಾಯದಿಂದ ಆ ವೃದ್ಧೆ ಮೃತಪಟ್ಟಿದ್ದಾರೆʼ ಎಂದು ವರದಿ ಮಾಡಿದ್ದಾರೆ. ವೈರಲ್ ಆದ ವರದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಡಿಸಂಬರ್ 24, 2024ರಂದು ʼವಾರ್ತಾ ಭಾರತಿʼ ವೆಬ್‌ಸೈಟ್‌ನಲ್ಲಿ ಆಗ್ರಾ | ವಾಕಿಂಗ್ ತೆರಳಿದ್ದ ಮಹಿಳೆ ಮೇಲೆ ದಾಳಿ ಮಾಡಿ ಎಳೆದೊಯ್ದ ಬೀದಿನಾಯಿಗಳು: ವೀಡಿಯೊ ವೈರಲ್ʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು. ವರದಿಯಲ್ಲಿ ಉತ್ತರಪ್ರದೇಶದ ಆಗ್ರಾದ ಈದ್ಗಾ ಪ್ರದೇಶದ ಕಟ್ಘರ್ ಕಾಲೋನಿಯಲ್ಲಿ ವಾಕಿಂಗ್‌ಗೆ ತೆರಳಿದ್ದ ಮಹಿಳೆಯೋರ್ವರ ಮೇಲೆ ಬೀದಿ ನಾಯಿಗಳು ಮಾರಣಾಂತಿಕವಾಗಿ ದಾಳಿ ಮಾಡಿದೆ ಎಂದು ವರದಿ ಮಾಡಿರುವುದನ್ನು ನೋಡಬಹುದು.
ʼಸನ್ಮಾರ್ಗʼ ಎಂಬ ವೆಬ್‌ಸೈಟ್‌ನಲ್ಲಿ ʼವಾಕಿಂಗ್ ಹೋದಾಗ ವೃದ್ಧ ಮಹಿಳೆಯನ್ನು ಎಳೆದಾಡಿದ ಬೀದಿ ನಾಯಿಗಳು; ಭಯಾನಕ ವಿಡಿಯೋʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದಾರೆ. ವರದಿಯಲ್ಲಿ ಉತ್ತರ ಪ್ರದೇಶದ ಆಗ್ರಾದಲ್ಲಿ ಬೀದಿ ನಾಯಿಗಳ ದಾಳಿಯ ಘಟನೆಯ ವಿಡಿಯೋ ವೈರಲ್ ಆಗಿದ್ದು, ಇದು ಗಂಭೀರ ಆತಂಕಕ್ಕೆ ಕಾರಣವಾಗಿದೆ. ಈದ್ಗಾ ಪ್ರದೇಶದ ಕಟ್ಘರ್ ಕಾಲೋನಿಯಲ್ಲಿ, 12ರಂದು ಬೆಳಗಿನ ವಾಕಿಂಗ್ ಹೋದ ವೇಳೆ ವೃದ್ಧೆಯೊಬ್ಬರ ಮೇಲೆ ಏಳು ಬೀದಿ ನಾಯಿಗಳು ದಾಳಿ ಮಾಡಿದ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದಿದೆ.
ಉದಯವಾಣಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ʼಆಗ್ರಾ: ಮಹಿಳೆ ಮೇಲೆ ಬೀದಿ ನಾಯಿಗಳ ಭಯಾನಕ ದಾಳಿ!ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು.
ʼಭಾರತ್ ಸಮಾಚಾರ್ʼ ಎಂಬ ಎಕ್ಸ್ ಖಾತೆಯಲ್ಲಿ ʼआगरा - आगरा का एक रोंगटे खड़े करने वाला सीसीटीवी| आवारा कुत्तों ने महिला पर बोला जानलेवा हमला| आदमखोर कुत्ते महिला को खींचते प्लाट में ले गया |बचने के लिए चीखती चिल्लाती रही बुजुर्ग महिला | आधा दर्जन से ज्यादा कुत्तों ने महिला पर बोला हमला | सुबह के समय घर से टहलने निकली थी पीड़ित महिला | महिला के चीखने की आवाज सुनकर कॉलोनी के लोग पहुंचे | लोगों ने आदमखोर कुत्तों को भागकर महिला को बचाया गया | घायल महिला को इलाज के लिए अस्पताल में कराया गया भर्ती | आगरा के ईदगाह कटघर कॉलोनी का मामला. #Agra | @agrapolice | @Uppolice" ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಆಗ್ರಾ - ಆಗ್ರಾದಲ್ಲಿ ಬೀದಿ ನಾಯಿಗಳು ಮಹಿಳೆಯ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆಗ್ರಾದ ಈದ್ಗಾ ಕಾಲೋನಿಯಲ್ಲಿ ಬೆಳಗ್ಗೆ 8:30ರ ಸುಮಾರಿಗೆ ಮಹಿಳೆ ಮನೆಯಿಂದ ವಾಕಿಂಗ್ ಹೋಗಿದ್ದರು. ದಾರಿಯಲ್ಲಿ ಕಂಡು ಬಂದ ಬೀದಿ ನಾಯಿಗಳ ದಂಡು ಅವಳನ್ನು ಸುತ್ತುವರೆದಿತ್ತು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮತ್ತಷ್ಟು ವೈರಲ್ ಆದ ವರದಿಯನ್ನು ಮತ್ತು ಪೋಸ್ಟ್‌ಗಳನ್ನು ನೀವಿಲ್ಲಿ, ಇಲ್ಲಿ, ಇಲ್ಲಿ ನೋಡಬಹುದು
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್ ಆದ ವಿಡಿಯೋ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದ ಘಟನೆಯಲ್ಲ. ಇದು ಪಂಜಾಬ್‌ನ ಜಲಂಧರ್‌ನಲ್ಲಿ ನಡೆದಿರುವ ಘಟನೆ,
ನಾವು ಸತ್ಯಾಂಶವನ್ನು ತಿಳಿಯಲು ವೈರಲ್ ಆದ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಡಿಸಂಬರ್ 24, 2024ರಂದು ಉತ್ತರ ಪ್ರದೇಶದ ಪೊಲೀಸರು ಹಾಗೂ ಆಗ್ರಾದ ಕಮಿಷನರ್ ಅವರ ಅಧಿಕೃತ ಎಕ್ಸ್ ಖಾತೆ ʼಪೊಲೀಸ್ ಕಮಿಷನರ್ ಅಗ್ರಾʼ ಎಂಬ ಖಾತೆಯಲ್ಲಿ ಪೊಲೀಸರು ವೈರಲ್ ಆದ ವಿಡಿಯೋವಿನ ಬಗ್ಗೆ ಸ್ಪಷ್ಟತೆ ನೀಡಿರುವುದನ್ನು ನಾವಿಲ್ಲಿ ನೋಡಬಹುದು. ವೈರಲ್ ಆದ ವಿಡಿಯೋವಿಗೆ ಶೀರ್ಷಿಕೆಯಾಗಿ ʼसोशल मीडिया पर वायरल वीडियो व कुछ समाचार पत्रों में भी खबर प्रकाशित हुई है कि आगरा में एक महिला पर कुत्तों के झुंड ने हमला किया। यह घटना पूर्व में पंजाब, जालंधर की है ना की आगरा की। कृपया खबरों की पुष्टि करने के बाद ही उसे मीडिया में प्रकाशित/शेयर करें।ʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಆಗ್ರಾದಲ್ಲಿ ಮಹಿಳೆಯೊಬ್ಬರ ಮೇಲೆ ನಾಯಿಗಳ ಹಿಂಡು ದಾಳಿ ಮಾಡಿರುವ ಬಗ್ಗೆ ಕೆಲವು ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗಿದೆ. ಈ ಘಟನೆ ನಡೆದಿರುವುದು ಪೂರ್ವ ಪಂಜಾಬ್‌ನ ಜಲಂಧರ್‌ನಲ್ಲಿ, ಆಗ್ರಾದಲ್ಲಿ ಅಲ್ಲ. ದಯವಿಟ್ಟು ಸುದ್ದಿಗಳನ್ನು ಪರಿಶೀಲಿಸಿದ ನಂತರವೇ ಮಾಧ್ಯಮಗಳಲ್ಲಿ ಪ್ರಕಟಿಸಿ ಎಂಬ ಶೀರ್ಷಿಕೆಯನ್ನೀಡಿ ಪೊಸ್ಟ್ ಮಾಡಿರುವುದನ್ನು ನಾವಿಲ್ಲಿ ನೋಡಬಹುದು.
ಮತ್ತಷ್ಟು ನಿಜಾಂಶವನ್ನು ತಿಳಿಯಲು ನಾವು ಕೆಲವು ಪ್ರಮುಖ ಕೀವರ್ಡ್‌ಗಳನ್ನು ಉಪಯೋಗಿಸಿಕೊಂಡು ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ನ್ಯೂಸ್ 18 ಪಂಜಾಬ್‌ನ ವೆಬ್‌ಸೈಟ್‌ನಲ್ಲಿ ʼबुजुर्ग महिला पर कुत्तों के झुंड का जानलेवा हमला, सड़क पर गिराकर 25 जगहों पर काटाʼ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದಾರೆ. ಹೆಡ್‌ಲೈನ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ ʼವೃದ್ಧೆಯ ಮೇಲೆ ನಾಯಿಗಳ ಹಿಂಡು ಮಾರಣಾಂತಿಕ ದಾಳಿ, ಆಕೆಯನ್ನು ರಸ್ತೆಗೆ ಎಸೆದು 25 ಕಡೆ ಕಚ್ಚಿದೆ.ʼ ಎಂದು ಬರೆದುರುವುದನ್ನು ನೋಡಬಹುದು. ಇನ್ನು ವರದಿಯಲ್ಲಿ ʼಪಂಜಾಬ್‌ನ ಜಲಂಧರ್‌ನಲ್ಲಿ ವೃದ್ಧೆಯೊಬ್ಬಳ ಮೇಲೆ ನಾಯಿಗಳು ಮಾರಣಾಂತಿಕವಾಗಿ ದಾಳಿ ಮಾಡಿದ್ದು, ವಿಡಿಯೋ ನೋಡಿದವರ ಹೃದಯ ಕಲಕಿದೆ. ಈ ಮಾರಣಾಂತಿಕ ದಾಳಿಯಲ್ಲಿ 8 ನಾಯಿಗಳು ಮಹಿಳೆಯನ್ನು 25 ಸ್ಥಳಗಳಲ್ಲಿ ಕಚ್ಚಿವೆ. ಜಲಂಧರ್ ನಗರದಲ್ಲಿ ನಾಯಿಗಳ ಭೀತಿಯಿಂದಾಗಿ ಗುರುದ್ವಾರ ಸಾಹಿಬ್‌ನಿಂದ ಒಂಟಿಯಾಗಿ ಹಿಂದಿರುಗುತ್ತಿದ್ದ 65 ವರ್ಷದ ಮಹಿಳೆಯೊಬ್ಬರನ್ನು ಬೀದಿ ನಾಯಿಗಳು ಸುತ್ತುವರಿದು ದಾಳಿ ನಡೆಸಿವೆ. ಸದ್ಗುರು ಕಬೀರ್ ಚೌಕ್ ಬಳಿಯ ದೂರದರ್ಶನ ಎನ್‌ಕ್ಲೇವ್ ಹಂತ-2 ಬಳಿ ಈ ಘಟನೆ ನಡೆದಿದೆ. ವೃದ್ಧೆಯನ್ನು ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆʼ ಎಂದು ವರದಿ ಮಾಡಿರುವುದನ್ನು ನಾವಿಲ್ಲಿ ನೋಡಬಹುದು
ʼಇಂಡಿಯಾ ಟುಡೆʼ ವೆಬ್‌ಸೈಟ್‌ನಲ್ಲಿ ʼVideo: Woman, 65, attacked by stray dogs on deserted road in Jalandharʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿರುವುದನ್ನು ನಾವು ನೋಡಬಹುದು. ಶೀರ್ಷಿಕೆ ಮತ್ತು ವರದಿಯಲ್ಲಿ ʼವಿಡಿಯೋ: ಜಲಂಧರ್‌ನ ನಿರ್ಜನ ರಸ್ತೆಯಲ್ಲಿ 65 ವರ್ಷದ ಮಹಿಳೆಯ ಮೇಲೆ ಬೀದಿ ನಾಯಿಗಳ ದಾಳಿʼ ಎಂಬ ಹೆಡ್‌ಲೈನ್ ನೀಡಿದ್ದಾರೆ. ಇನ್ನು ವರದಿಯಲ್ಲಿ ʼಪಂಜಾಬ್‌ನ ಜಲಂಧರ್‌ನ ನಿರ್ಜನ ರಸ್ತೆಯಲ್ಲಿ ಏಳರಿಂದ ಎಂಟು ಬೀದಿ ನಾಯಿಗಳ ಗುಂಪೊಂದು ದಾಳಿ ಮಾಡಿ ಕಚ್ಚಿದಾಗ 65 ವರ್ಷದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ವೇಳೆ ಮಹಿಳೆ ಒಬ್ಬರೇ ನಡೆದುಕೊಂಡು ಗುರುದ್ವಾರದಿಂದ ಹಿಂತಿರುಗುತ್ತಿದ್ದಳು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆಗೆ 25 ಕಡಿತಗಳು ಮತ್ತು ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆʼ ಎಂದು ವರದಿಯಲ್ಲಿದೆ.
ಮತ್ತಷ್ಟು ವರದಿಗಳನ್ನು ನಾವು ಇಂಡಿಯಾ.ಕಾಂ ಮತ್ತು ಆಜ್ ತಕ್‌ನಲ್ಲಿ ನೋಡಬಹುದು.
ಇದರಿಂದ ಸಾಭೀತಾಗಿದ್ದೇನೆಂದರೆ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತದೆ, ವಾಸ್ತವವಾಗಿ ಮಹಿಳೆಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು ಆಗ್ರಾದಲ್ಲಿ ಅಲ್ಲ, ಇದು ಪಂಜಾಬ್‌ನ ಜಲಂಧರ್‌ನಲ್ಲಿ ನಡೆದ ಘಟನೆ.