ಫ್ಯಾಕ್ಟ್‌ಚೆಕ್: ಮಂಜುನಿಂದಾಗಿ ಹೂಗಳಂತೆ ಕಾಣುವ ದೃಶ್ಯ ಅಸಲಿಯದ್ದಲ್ಲ, ವೈರ್ ಆದ ಫೋಟೋ ಎಐ ಮೂಲಕ ರಚಿಸಲಾಗಿದೆ.
ಮಂಜುನಿಂದಾಗಿ ಹೂಗಳಂತೆ ಕಾಣುವ ದೃಶ್ಯ ಅಸಲಿಯದ್ದಲ್ಲ, ವೈರ್ ಆದ ಫೋಟೋ ಎಐ ಮೂಲಕ ರಚಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹಲವರು ಚೀನಾದ ಸಾಂಗುವಾ ನದಿಯಲ್ಲಿ ಕಾಣುವ ಮಂಜುಗಡ್ಡೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಂಜುಗಡ್ಡೆಗಳು ಹೂವುಗಳ ರೂಪದಲ್ಲಿರುವ ಚಿತ್ರವನ್ನು ಹಂಚಿಕೊಂಡಿದ್ದರು.
ಕಂಸರ್‌ವೇಟಿವ್ ದೀವಾ ಎಂಬ ಎಕ್ಸ್ ಖಾತೆದಾರರ ತನ್ನ ಖಾತೆಯಲ್ಲಿ " ಈ ಸುಂದರ ಪ್ರಕೃತಿಯ ದೃಶ್ಯ ಕಂಡುಬಂದಿದ್ದು ಅಮೇರಿಕಾ ಉತ್ತರ ಭಾಗದಲ್ಲಿರುವ ಗ್ರೇಟ್ ಲೇಕ್ಸ್ ಪ್ರದೇಶದ್ದು, ಅತಿ ಕಡಿಮೆ ತಾಪಮಾನವಿದ್ದಾಗ ಮಂಜುಗಡ್ಡೆ ಬಿದ್ದು ಹೂವಿನ ಆಕೃತಿಯಲ್ಲಿ ಮೂಡುತ್ತದೆ. ಘನೀಕರಿಸದ ನೀರು ಹೆಚ್ಚಾದಂತೆ ಸಣ್ಣ ಸಣ್ಣ ಬಿರುಕುಗಳು ಉಂಟಾಗಿ ಆ ಬಿರುಕ ಮೂಲಕ ನೀರು ಹರಿದು ಬರುತ್ತದೆ.ಬಂದಂತಹ ನೀರು ಮೆಲ್ಲೆಗೆ ಹೆಪ್ಪುಗಟ್ಟುತ್ತದೆ. ಆ ಹೆಪ್ಪುಗಟ್ಟಿದ ನೀರು ಹೂವಿನ ಆಕಾರದಲ್ಲಿದೆ" ಎಂಬ ಶೀರ್ಷಿಕೆಯನ್ನಾಕಿ ಫೋಟೋವನ್ನು ಪೋಸ್ಟ್ ಮಾಡಿದ್ದರು.
The formation of ice flowers is a beautiful natural phenomenon in the Great Lakes region of North America.
— 𝓒𝓸𝓷𝓼𝓮𝓻𝓿𝓪𝓽𝓲𝓿𝓮 𝓓𝓲𝓿𝓪♔™ (@1776Diva) December 31, 2023
When the temperature drops under freezing temperatures, the non-frozen water under the ice layer is pushed upward, creating small cracks.
Then, as very little water… pic.twitter.com/cQBuFFR1tz
ಈ ಚಿತ್ರ 2023ರಲ್ಲಿ ಎನ್‌ಡಿಟಿವಿಯಲ್ಲಿ ವೈರಲ್ ಆಗಿತ್ತು ಇದೀಗ ಮತ್ತೆ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ಚಿತ್ರದಲ್ಲಿ ಯಾವುದೇ ಸತ್ಯಾಂಶವಿಲ್ಲ. ಹಿಮಗಡ್ಡೆಗಳ ಮೂಲಕ ಹೂವಿನ ಆಕಾರದಲ್ಲಿ ಮೂಡಿರುವ ಚಿತ್ರವನ್ನು ಎಐನ ಮೂಲಕ ರಚಿಸಲಾಗಿದೆ.
ಸಾಂಗುವ ನದಿಯಲ್ಲಿ ಕಂಡುಬರುವ ಹಿಮದ ಹೂವುಗಳನ್ನು ಕುರಿತು ನಾವು ಹುಡುಕಾಟ ನಡೆಸಿದಾಗ ನಮಗೆ ಚೈನಾದ ಹಿಲಾಂಗ್‌ಜಿಯಾಂಗ್‌ನಲ್ಲಿರುವ ಸಾಂಗುವಾ ನದಿಯಲ್ಲಿ ಕಾಣುವು ದೃಶ್ಯಗಳು "ಫಾರೆಸ್ಟ್ ಫ್ಲವರ್ಸ್" ಎಂಬ ಶೀರ್ಷಿಕೆಯೊಂದಿಗೆ 2022 ಡಿಸಂಬರ್‌ನಲ್ಲಿ ಪೀಪಲ್ಸ್ ಡೈಲಿ ಎಂಬ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದರು.
ನಾವು ವಿಡಿಯೋವಿನಲ್ಲಿರುವ ಚಿತ್ರದ ಬಗ್ಗೆ ಸತ್ಯಾಂಶವನ್ನು ತಿಳಿಯಲು ಚಿತ್ರಗಳನ್ನು "ಈಜ್ ಇಟ್ ಎಐ", "ಇಲ್ಯೂಮಿನಾರ್ಟಿ" ಎಂಬ ಎಐ ಟೂಲ್ಸ್‌ನಲ್ಲಿ ಹುಡುಕಾಡಿದಾಗ ನಮಗೆ ವೈರಲ್ ಆದ ಚಿತ್ರ ಎಐನ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.
ಈ ವಿಷಯದ ಬಗ್ಗೆ ಜನವರಿ 2024ರಲ್ಲಿ ಸ್ನೂಪ್ಸ್.ಕಾಂ ಎನ್ನುವ ವೆಬ್‌ಸೈಟ್‌ನವರೂ ಸಹ ಫ್ಯಾಕ್ಟ್‌ಚೆಕ್ ಮಾಡಿದ್ದಾರೆ.
ಹೀಗಾಗಿ ವೈರಲ್ ಆದ ಫೋಟೋ ಮತ್ತು ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಡಿಯೋ ಮತ್ತು ಫೋಟೋಗಳನ್ನು ಎಐನ ಮೂಲಕ ರಚಿಸಲಾಗಿದೆ.