ಫ್ಯಾಕ್ಟ್‌ ಚೆಕ್: ಇಸ್ಕಾನ್ ರಥಯಾತ್ರೆಯಿಂದಾಗಿ ಅಮೇರಿಕಾದಲ್ಲಿರುವ 7 ಲಕ್ಷ ಕ್ರೈಸ್ತರು ಹಿಂದೂ ಧರ್ಮಕ್ಕೆ ಸೇರಿದ್ದಾರೆಂಬ ವೈರಲ್‌ ಆದ ವೀಡಿಯೋದಲ್ಲಿ ಯಾವುದೇ ಸತ್ಯತೆ ಇಲ್ಲ.

ಇಸ್ಕಾನ್ ರಥಯಾತ್ರೆಯಿಂದಾಗಿ ಅಮೇರಿಕಾದಲ್ಲಿರುವ 7 ಲಕ್ಷ ಕ್ರೈಸ್ತರು ಹಿಂದೂ ಧರ್ಮಕ್ಕೆ ಸೇರಿದ್ದಾರೆಂಬ ವೈರಲ್‌ ಆದ ವೀಡಿಯೋದಲ್ಲಿ ಯಾವುದೇ ಸತ್ಯತೆ ಇಲ್ಲ.

Update: 2023-10-26 04:00 GMT

ಹರೇ ಕೃಷ್ಣ ಹರೇ ಕೃಷ್ಣ ಎಂಬ ಸ್ತುತಿಗಳನ್ನು ಹಾಡುತ್ತಾ ಬೀದಿ ಬೀದಿಯಲ್ಲಿ ಮರೆರವಣಿಗೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಮೆರವಣಿಗೆಯಲ್ಲಿ ಪಾಲ್ಗೊಂಡ ಅಮೇರಿಕಾದ 7 ಲಕ್ಷ ಕ್ರಿಶ್ಚಿಯನ್ನರು ಹಿಂದೂ ಧರ್ಮಕ್ಕೆ ಸೇರಿದ್ದಾರೆ ಎಂದು ಸಾಕಷ್ಟು ಸಾಮಾಜಿಕ ಬಳಕೆದಾರರು ತಮ್ಮ X ಖಾತೆಯಲ್ಲಿ ಬರೆದುಕೊಂಡಿದ್ದಾರೆ.



ಫ್ಯಾಕ್ಟ್‌ ಚೆಕ್‌

ನಮಗೆ ದೊರೆತ ವೀಡಿಯೋದಲ್ಲಿರುವ ಪ್ರಮುಖ ಫ್ರೇಮ್‌ಗಳನ್ನು ರಿವರ್ಸ್‌ ಇಮೇಜ್‌ ಮೂಲಕ ಚಿತ್ರದಲ್ಲಿರುವ ಕೆಲವು ಅಂಶಗಳನ್ನು ನಾವು ಯೂಟ್ಯೂಬ್‌ನಲ್ಲಿ ಹುಡುಕಿದಾಗ ನಮಗೆ ಕೆಲವಷ್ಟು ವೀಡಿಯೋಗಳನ್ನು ನಾವು ಕಂಡುಕೊಂಡವು. ಎರಡು ತಿಂಗಳ ಹಿಂದೆ ಅಂದರೆ ಜುಲೈ 31ರಂದು @naik78 ಎಂಬ ಯೂಟ್ಯೂಬ್‌ ಬಳಕೆದಾರ ʼಲಂಡನ್‌ ರಥಯಾತ್ರೆ 2023ʼ ಎಂಬ ಶೀರ್ಷಿಕೆಯಲ್ಲಿ ವಿಡಿಯೋ ಅಪ್ಲೋಡ್ ಆಗಿತ್ತು ಈ ವಿಡಿಯೋವನ್ನು 334 ಸಾವಿರ ವೀಕ್ಷಣೆಯನ್ನು ಕಂಡಿತ್ತು.

Full View


Full View

ಜುಲೈ 30,2023 ರಂದು ಲಂಡನ್‌ನಲ್ಲಿ ನಡೆದ ರಥಯಾತ್ರೆಯ ಸಂದರ್ಭದಲ್ಲಿ ತೆಗೆದ ವಿಡಿಯೋ ಇದಾಗಿತ್ತು.


Full View

1967ರಿಂದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇಸ್ಕಾನ್ ವತಿಯಿಂದ ಪ್ರತಿ ವರ್ಷ "ರಥಯಾತ್ರೆ" ಅಥವಾ "ರಥೋತ್ಸವ"ವನ್ನು ಏರ್ಪಾಡಿಸಲಾಗುತ್ತದೆ. ಇದನ್ನು ಪ್ರಪಂಚದಾದ್ಯಂತ ಕೃಷ್ಣನ ಭಕ್ತರು ಆಚರಿಸುತ್ತಾರೆ. ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ನಡೆಸಲಾಗುತ್ತದೆ. ಅದರಲ್ಲೂ ಲಂಡನ್‌ನಲ್ಲಿ ಅದ್ದೂರಿಯಾಗಿ ಆಚರಿಸುತ್ತಾರೆ. ಲಂಡನ್‌ನ ಹೈಡ್ ಪಾರ್ಕ್ ಕಾರ್ನರ್‌ನಿಂದ ಪ್ರಾರಂಭವಾದ ಮೆರವಣಿಗೆ ಟ್ರಾಫಲ್ಗರ್ ಸ್ಕ್ವೇರ್‌ನಲ್ಲಿ ಮುಕ್ತಾಯಗೊಳ್ಳುತ್ತದೆ. ಅಲ್ಲಿ ರಾತ್ರಿಯವರೆಗೆ ಉತ್ಸವಗಳು ಮುಂದುವರಿಯುತ್ತವೆ. ಲಂಡನ್‌ನ ರಥಯಾತ್ರೆಯ ಸಮಯದಲ್ಲಿ ತೆಗೆದ ಈ ವೀಡಿಯೋವನ್ನು ಕೆಲವರು ತಪ್ಪಾಗಿ ಹಂಚಿಕೊಂಡಿದ್ದಾರೆ.

ಇಸ್ಕಾನ್ ರಥಯಾತ್ರೆಯಿಂದಾಗಿ ಅಮೇರಿಕಾದಲ್ಲಿರುವ 7 ಲಕ್ಷ ಕ್ರೈಸ್ತರು ಹಿಂದೂ ಧರ್ಮಕ್ಕೆ ಸೇರಿದ್ದಾರೆಂಬ ಸುದ್ದಿ ವೈರಲ್‌ ಮಾಡಿದ್ದಾರೆ. ಈ ವಿಡಿಯೋ ಲಂಡನ್‌ನಲ್ಲಿ ಚಿತ್ರೀಕರಿಸಿದ್ದು, ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯತೆ ಇಲ್ಲ.

Claim :  7 lakh Christians in America have joined Hinduism.
Claimed By :  X users
Fact Check :  False
Tags:    

Similar News