ಫ್ಯಾಕ್ಟ್‌ಚೆಕ್‌: ವಿಮಾನದಲ್ಲಿ ವ್ಯಕ್ತಿಯೊಬ್ಬ ನಮಾಜ್‌ ಮಾಡಿದ್ದಕ್ಕೆ ಮಹಿಳೆಯೊಬ್ಬರು ಶಿವ ಸ್ತೋತ್ರ ಪಠಿಸುತ್ತಾರೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ

ವಿಮಾನದಲ್ಲಿ ವ್ಯಕ್ತಿಯೊಬ್ಬ ನಮಾಜ್‌ ಮಾಡಿದ್ದಕ್ಕೆ ಮಹಿಳೆಯೊಬ್ಬರು ಶಿವ ಸ್ತೋತ್ರ ಪಠಿಸುತ್ತಾರೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ

Update: 2024-09-15 13:34 GMT

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹದಿನಾಲ್ಕು ಸೆಕೆಂಡ್‌ಗಳ ವಿಡಿಯೋವೊಂದು ವೈರಲ್‌ ಆಗಿದೆ. ವಿಡಿಯೋವಿನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ನಮಾಜ್‌ ಮಾಡುವುದನ್ನು ನೋಡಿದ ಪಿಂಕ್‌ ಶರ್ಟ್‌ ಧರಿಸಿರುವ ಮಹಿಳೆಯೊಬ್ಬರು ಶಿವ ಸ್ತೋತ್ರವನ್ನು ಹಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ದೃಶ್ಯವನ್ನು ವಿಮಾನದ ಕ್ಯಾಬಿನ್‌ ಸಿಬ್ಬಂದಿಗಳು ರೆಕಾರ್ಡ್‌ ಮಾಡುತ್ತಿರುವುದನ್ನು ನೋಡಬಹುದು. ವಿಡಿಯೋದಲ್ಲಿ ಕಾಣುವ ಮಹಿಳೆ ಬಾಲಿವುಡ್‌ನ ಕೇದಾರನಾಥ್‌ ಚಿತ್ರದಲ್ಲಿನ ನಮೋ ನಮೋ ಶಂಕರ ಹಾಡನ್ನು ಹಾಡುತ್ತಿದ್ದಾರೆ.

ಸೆಪ್ಟಂಬರ್‌ 14,2024ರಂದು ನಮೋ ಮಲ್ಲೇಶ್‌ ಎಂಬ ಫೇಸ್‌ಬುಕ್‌ ಖಾತೆದಾರರ "ವಿಮಾನದಲ್ಲಿ ನಮಾಜ್ ಮಾಡಲು ಶುರು ಮಾಡಿದರು, ನಂತರ ಸನಾತನಿ ಮಹಿಳೆಯೊಬ್ಬರು ಮಹಾದೇವನ ಸ್ತೋತ್ರ ಹಾಡಲು ಶುರು ಮಾಡಿದರು. ಇದು ಅದ್ಭುತವಾಗಿದೆ.

ಹೀಗೆ ಮಾಡ್ಬೇಕು ಹರ್ ಹರ್ ಮಹಾದೇವ ಜೈ ಶ್ರೀ ರಾಮ್ #viralpost2024 #highlight #everyone #viralshorts" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದರು.

Full View

ಶಿವ ಬೆನ್ನೋಲಿ ವೈಬಿ ಎಂಬ ಫೇಸ್‌ಬುಕ್‌ ಖಾತೆದಾರ ನಾಗೇಶ್‌ ಪ್ರೀತಮ್‌ ಹಂಚಿಕೊಂಡಿದ್ದ ವಿಡಿಯೋವನ್ನು ತನ್ನ ಖಾತೆಯಲ್ಲಿ ಮರುಪೋಸ್ಟ್‌ ಮಾಡಿ "ವಿಮಾನದಲ್ಲಿ ನಮಾಜ್ ಮಾಡಲು ಶುರು ಮಾಡಿದರು, ನಂತರ ಸನಾತನಿ ಮಹಿಳೆಯೊಬ್ಬಳು ಮಹಾದೇವನ ಸ್ತೋತ್ರ ಹಾಡಲು ಶುರು ಮಾಡಿದರು. ಇದು ಅದ್ಭುತವಾಗಿದೆ..! ಜೈ ಶ್ರೀ ರಾಮ್. ಇದು ಬೇಕಿತ್ತು" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. 2024ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಮಾನದಲ್ಲಿದ್ದ ಮಹಿಳೆಯೊಬ್ಬರು ಶಿವಸ್ತೋತ್ರ ಹಾಡಿದ ವಿಡಿಯೋವದು.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಕೆಲವು ಪ್ರಮುಖ ಫ್ರೇಮ್‌ಗಳನ್ನು ಉಪಯೋಗಿಸಿ ನಾವು ಗೂಗಲ್‌ ರಿವರ್ಸ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಮಾರ್ಚ್‌ 8,2024ರಂದು ʼಸಾಯಿ ಕೀ ಭೇಟಿ ನಿಶಾ ಶಿವದಾಸನಿʼ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ವೈರಲ್‌ ವಿಡಿಯೋನಲ್ಲಿ ಕಾಣುವ ಮಹಿಳೆ ಹಾಡು ಹಾಡುತ್ತಿರುವುದನ್ನು ನೋಡಬಹುದು. ವಿಡಿಯೋವಿಗೆ ಶೀರ್ಷಿಕೆಯಾಗಿ “ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2024 ರ ಶುಭಾಶಯಗಳು | ನಿಶಾ ಶಿವದಾಸನಿ | ಇಂಡಿಗೋ ಏರ್‌ಲೈನ್ ಧನ್ಯವಾದಗಳು” ನೀಡಿರುವುದನ್ನು ನಾವು ನೋಡಬಹುದು.

ವಿಡಿಯೋವನ್ನು ನಾವು ನೋಡಿವುದಾದರೆ, ನಿಶಾ ಶಿವದಾಸನಿಯವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿಮಾನದಲ್ಲಿರುವ ಎಲ್ಲರ ಸಮ್ಮುಖದಲ್ಲಿ ಹಾಡನ್ನು ಹಾಡಿರುವುದನ್ನು ನಾವು ನೋಡಬಹುದು. ಹಾಡು ಹಾಡುವಾಗ ವಿಮಾನದಲ್ಲಿರುವ ಬೇರೆ ಪ್ರಯಾಣಿಕರು ಸಹ ನಿಶಾ ಅವರನ್ನು ಪ್ರೋತ್ಸಾಹಿಸಿದನ್ನು ನಾವು ವಿಡಿಯೋದಲ್ಲಿ ನೋಡಬಹುದು.

Full View

ಮಾರ್ಚ್‌ 31, 2024ರಂದು ʼಡ್ರಂಕ್‌ ಜರ್ನಲಿಸ್ಟ್‌ʼ ಎಂಬ ಎಕ್ಸ್‌ ಖಾತೆದಾರ ತನ್ನ ಎಕ್ಸ್‌ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್‌ ಮಾಡಿರುವುದನ್ನು ನಾವು ಕಂಡುಕೊಂಡೆವು.

ವಿಭೋರ್‌ ಆನಂದ್‌ ಎಂಬ ಎಕ್ಸ್‌ ಖಾತೆದಾರ ತಪ್ಪು ಮಾಹಿತಿಯೊಂದಿಗೆ ವಿಡಿಯೋವನ್ನು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವುದನ್ನು ನೋಡಿದ ʼಡ್ರಂಕ್‌ ಜರ್ನ್‌ಲಿಸ್ಟ್‌ʼ ಖಾತೆದಾರರ ವಿಡಿಯೋವಿಗೆ ಪ್ರತಿಕ್ರಿಯಿಸಿದ್ದನ್ನು ನಾವು ಕಂಡುಕೊಂಡೆವು. ನೀವು ಹಂಚಿಕೊಂಡಿರುವ ವಿಡಿಯೋವಿಗೂ ನಮಾಜ್‌ಗೂ ಯಾವುದೇ ಸಂಬಂಧವಿಲ್ಲ. ವಿಡಿಯೋವಿನಲ್ಲಿ ಕಾಣುವ ಮಹಿಳೆ ಶಿವಸ್ತೋತ್ರವನ್ನು ಹಾಡುತ್ತಿದ್ದಾರೆ. ಮುಸ್ಲೀಮರಿಗೂ ನಮಾಜ್‌ಗೂ ಯಾವುದೇ ಸಂಬಂಧವಿಲ್ಲ" ಎಂದು ಪೋಸ್ಟ್‌ ಮಾಡಿರುವುದನ್ನು ನೋಡಬಹುದು.

ಇತ್ತೀಚಿಗೆ ಇಂಡಿಯೋ ಏರ್‌ಲೈನ್ಸ್‌ನ ವಿಮಾನದಲ್ಲಿ ಮುಸ್ಲಿಂ ವ್ಯಕ್ತಿ ನಮಾಜ್‌ ಮಾಡುವಾಗ ಹಿಂದೂ ಮಹಿಳೆ ಶಿವಸ್ತೋತ್ರವನ್ನು ಹಾಡಿದ್ದಾರಾ ಎಂದು ನಾವು ಕೆಲವು ಗೂಗಲ್‌ನಲ್ಲಿ ಕೀವರ್ಡ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಆದರೆ ನಮಗೆ ಈ ಸುದ್ದಿಗೆ ಸಂಬಂಧಿಸಿದ ಯಾವುದೇ ವರದಿಯೂ ಕಂಡುಬಂದಿಲ್ಲ.

ಹೀಗಾಗಿ ವೈರಲ್‌ ಸುದ್ದಿಯಲ್ಲಿ ಯಾವುದೇ ಸತ್ಯಾಂವಿಲ್ಲ ಎಂದು ಸಾಭೀತಾಗಿದೆ. ವಿಮಾನದಲ್ಲಿ ಮುಸ್ಲಿಂರು ನಮಾಜ್‌ ಮಾಡುತ್ತಿರುವುದನ್ನು ನೋಡಿ ಹಿಂದೂ ಮಹಿಳೆ ಶಿವಸ್ತೋತ್ರ ಹಾಡುತ್ತಿದ್ದಾರೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋ 2024ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಹಿಳೆಯೊಬ್ಬರು ವಿಮಾನದಲ್ಲಿ ಶಿವಸ್ತೋತ್ರವನ್ನು ಹಾಡಿರುವ ವಿಡಿಯೋವದು

Claim :  ವಿಮಾನದಲ್ಲಿ ವ್ಯಕ್ತಿಯೊಬ್ಬ ನಮಾಜ್‌ ಮಾಡಿದ್ದಕ್ಕೆ ಮಹಿಳೆಯೊಬ್ಬರು ಶಿವ ಸ್ತೋತ್ರ ಪಠಿಸುತ್ತಾರೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ
Claimed By :  X users
Fact Check :  False
Tags:    

Similar News