ಫ್ಯಾಕ್ಟ್‌ಚೆಕ್: ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನ ಪತ್ರಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮನೆಮನೆಗೆ ನೀಡುತ್ತಿದ್ದಾರೆ ಎಂಬ ಸುದ್ದಿಯ ಅಸಲಿಯತ್ತೇನು?
ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ಆಹ್ವಾನ ಪತ್ರಿಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಮನೆಮನೆಗೆ ನೀಡುತ್ತಿದ್ದಾರೆ ಎಂಬ ಸುದ್ದಿಯ ಅಸಲಿಯತ್ತೇನು?
ಅಯೋಧ್ಯೆಯ ಶ್ರೀರಾಮಮಂದಿರದ ಉದ್ಘಾಟನಾ ಕಾರ್ಯಕ್ರಮ ಜನವರಿ 16,2024ರಂದು ಪ್ರಾರಂಭವಾಗಿ ಜನವರಿ 22ರ ತನಕ ನಡೆಯಿತು. ಈ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತಾದಿಗಳು ಪಾಲ್ಗೊಂಡಿದ್ದರು.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನಿಂದ ಸುಮಾರು 6000ಕ್ಕೂ ಹೆಚ್ಚು ಆಮಂತ್ರಣ ಪತ್ರಗಳನ್ನು ಭಾರತ ದೇಶದ ಕೆಲವು ಗಣ್ಯಾತಿಗಣ್ಯರಿಗೆ ಕಳಿಸಿಕೊಡಲಾಗಿತ್ತು. ಇದೇ ಆಮಂತ್ರಣಾ ಪತ್ರಿಕೆಯನ್ನಿಟ್ಟುಕೊಂಡು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯ ಬೀದಿ ಬೀದಿಯಲ್ಲಿನ ಮನೆಗಳಿಗೆ ತೆರಳಿ ಆಹ್ವಾನ ಪತ್ರಿಕೆಯನ್ನು ವಿತರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯ ಗಲ್ಲಿಗಲ್ಲಿಯ ಮನೆಗಳಿಗೆ ಆಮಂತ್ರಣಾ ಪತ್ರಿಕೆಯನ್ನಿಡುತ್ತಿದ್ದಾರೆ. ʼಸತ್ಯಮೇವ ಜಯತೇʼ ಎಂದು ಪೋಸ್ಟ್‌ಗಳನ್ನು ಮಾಡಲಾಗಿದೆ.
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ.
ವೈರಲ್ ಆದ ವಿಡಿಯೋವಿನಲ್ಲಿ ಕಾಣುವ ದೃಶ್ಯದ ಸಂದರ್ಭವೇನೆಂದರೆ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ಉಜ್ವಲಾ ಯೋಜನೆಯ ಫಲಾನುಭವಿಗಳೊಬ್ಬರ ಮನೆಗೆ ಭೇಟಿದಾಗ ಚಿತ್ರೀಕರಿಸಿರುವ ದೃಶ್ಯವದು.
ವೈರಲ್ ಆದ ಸುದ್ದಿಯ ಕುರಿತು ಅಸಲಿಯತ್ತೇನು ಎಂದು ಪರಿಶೀಲಿಸಲು ನಾವು ಅಯೋಧ್ಯೆಯ ಜನರನ್ನು ಮಹಾಮಸ್ತಾಭಿಷೇಕಕ್ಕೆ ಆಹ್ವಾನಿಸಿದ್ದಾರಾ ಎಂಬ ಕೀವರ್ಡ್‌ನೊಂದಿಗೆ ಹುಡಕಾಡಿದಾಗ ನಮಗೆ ಯಾವುದೇ ಸುದ್ದಿ ಸಿಗಲಿಲ್ಲ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಾಮಮಂದಿರದಲ್ಲಿ ಮಹಾಮಸ್ತಕಾಭಿಷೇಕವನ್ನು ಏರ್ಪಡಿಸಲಾಗುತ್ತಿದೆ. ಟ್ರಸ್ಟ್ ನಡೆಸುವ ಕಾರ್ಯಕ್ರಮಕ್ಕೂ ಭಾರತ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ.
ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ವಿಡಿಯೋದಲ್ಲಿರುವ ಕೆಲವು ಕೀ ಫ್ರೇಮ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಸುಮನ್ ಟಿವಿ ನ್ಯೂಸ್ ಚಾನೆಲ್‌ನಲ್ಲಿ ಜನವರಿ 1,2024ರಂದು ಅಪ್‌ಲೋಡ್ ಮಾಡಿರುವ ವಿಡಿಯೋವೊಂದು ಕಂಡು ಬಂದಿತು.ವಿಡಿಯೋವಿಗೆ ಶೀರ್ಷಿಕೆಯಾಗಿ “PM Modi at 10th crore Ujjwala Yojana Beneficiary’s home In Ayodhya I Latest Telugu News” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಅಪ್‌ಲೋಡ್ ಆಗಿತ್ತು.
ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿರುವ ಉಜ್ವಲ ಫಲಾನುಭವಿಗಳ ಮನೆಗೆ ಭೇಟಿ ನೀಡಿರುವ ವಿಡಿಯೋ ಇಲ್ಲಿದೆ.
ಸಿಎನ್‌ಬಿಸಿಟಿವಿ18.ಕಾಂ ವರದಿಯ ಪ್ರಕಾರ ಅಯೋಧ್ಯೆಯಲ್ಲಿರುವ ವಿಮಾನ ನಿಲ್ದಾಣವನ್ನು ಮತ್ತು ನವೀಕರಿಸಿದ ರೈಲ್ವೆ ನಿಲ್ದಾಣವನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಅಯೋಧ್ಯೆಗೆ ಆಗಮಿಸಿದರು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕವನ್ನು ಕಲ್ಪಿಸಲು 10 ಕೋಟಿ ಫಲಾನುಭವಿಗಳಿಗಾಗಿ ಈ ಯೋಜನೆಯನ್ನು ಮೇ 2016ರಲ್ಲಿ ಪ್ರಾರಂಭಿಸಿದರು.
https://www.indiatoday.in/india/story/ram-mandir-consecration-pm-modi-asks-devotees-to-make-ayodhya-trip-after-january-22-ceremony-2482334-2023-12-30
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಯೋಧ್ಯೆಯಲ್ಲಿ ಉಜ್ವಲ ಯೋಜನೆಯ ಫಲಾನುಭವಿಯಾದ ಮೀರಾ ಎಂಬ ಮಹಿಳೆಯ ಮನೆಗೆ ಪ್ರಧಾನಿ ನರೇಂದ್ರ ಮೋದಿಯವರು ಭೇಟಿ ನೀಡಿದ ದೃಶ್ಯವದು.