ಫ್ಯಾಕ್ಟ್‌ಚೆಕ್: ಬಿಜೆಪಿ ಸರ್ಕಾರ ಅಂಬೇಡ್ಕರ್‌ರವರ ಭಾವಚಿತ್ರವುಳ್ಳ 500 ರೂ. ಹೊಸ ನೋಟುಗಳನ್ನು ಮುದ್ರಿಸುತ್ತಿಲ್ಲ
ಬಿಜೆಪಿ ಸರ್ಕಾರ ಅಂಬೇಡ್ಕರ್‌ರವರ ಭಾವಚಿತ್ರವುಳ್ಳ 500 ರೂ. ಹೊಸ ನೋಟುಗಳನ್ನು ಮುದ್ರಿಸುತ್ತಿಲ್ಲ;
ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ 500ರೂ ನೋಟಿನ ಮೇಲೆ ಮಹಾತ್ಮಾ ಗಾಂಧೀಜಿಯವರ ಚಿತ್ರದ ಬದಲಿಗೆ ಡಾ.ಬಿ.ಆರ್ ಅಂಬೇಡ್ಕರ್‌ರವರ ಚಿತ್ರವಿರುವ ನೋಟಿನ ಚಿತ್ರವೊಂದು ಹರಿದಾಡುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ಅಂಬೇಡ್ಕರ್ ಅವರ ಜಯಂತಿಯಂದು ಅವರ ಭಾವಚಿತ್ರವಿರುವ 500 ರೂ. ಹೊಸ ನೋಟುಗಳನ್ನು ಮುದ್ರಿಸಲು ಯೋಜಿಸುತ್ತಿದೆ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಫೊಟೋವೊಂದನ್ನು ಹಂಚಿಕೊಂಡಿದ್ದಾರೆ.
ಸತೀಶ್ ಗೌತಮ್ ಎಂಬ ಎಕ್ಸ್ ಖಾತೆದಾರ ತನ್ನ ಖಾತೆಯಲ್ಲಿ ʼबस जल्दी ही परम पूज्य बोधिसत्व बाबा साहेब डॉ. भीमराव अंबेडकर जी की तस्वीर 500 के नोट पर देखने को मिल सकती है ऐसी भ्रांतिया फैलायी जा रही है क्या ये सच है lʼ #DrAmbedkarʼ ಎಂಬ ಶೀರ್ಷಿಕೆಯನ್ನೀಡಿ ಚಿತ್ರವನ್ನು ಹಂಚಿಕೊಂಡು ಪೊಸ್ಟ್ ಮಾಡಿದ್ದಾರೆ.
ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಶೀಘ್ರದಲ್ಲೇ 500 ರೂಪಾಯಿ ನೋಟಿನ ಮೇಲೆ ಅತಿ ಪೂಜ್ಯ ಬೋಧಿಸತ್ವ ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರ ಚಿತ್ರ ಕಾಣಸಿಗುತ್ತದೆ, ಇದು ನಿಜವೇ? ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವಿಲ್ಲಿ ನೋಡಬಹುದು
ವೈರಲ್ ಪೋಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು
ʼಸೋಷಲ್ ಅವೇರ್‌ನೆಸ್ ಎಸ್‌ಎʼ ಎಂಬ ಯೂಟ್ಯೂಬ್ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಮುಂದಿನ ದಿನಗಳಲ್ಲಿ ಡಾ.ಬಿ.ಆರ್ ಅಂಬೇಡ್ಕರ್‌ರವರ 500ರೂ ನೋಟು ಬರಲಿದೆ ಎಂದು ಹೇಳುವುದನ್ನು ನೋಡಬಹುದು.
Looking at the political scenario in this country, the day is not far when we will have Babasaheb on our currency notes. Jai Bhimʼ ಎಂಬ ಶೀರ್ಷಿಕೆಯನ್ನೀಡಿ ಪೋಸ್ಟ್ ಮಾಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼ ಈ ದೇಶದ ರಾಜಕೀಯ ಸನ್ನಿವೇಶವನ್ನು ನೋಡಿದರೆ ನಮ್ಮ ಕರೆನ್ಸಿ ನೋಟುಗಳಲ್ಲಿ ಬಾಬಾಸಾಹೇಬ್ ಇರುವ ದಿನ ದೂರವಿಲ್ಲ. ಜೈ ಭೀಮ್ʼ ಎಂದು ಬರೆದಿರುವುನದನ್ನು ನಾವಿಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. 500 ರೂಪಾಯಿ ನೋಟಿನಲ್ಲಿ ಅಂಬೇಡ್ಕರ್ ಅವರ ಚಿತ್ರ ಸಂಪೂರ್ಣವಾಗಿ ನಕಲಿಯದ್ದು. ವೈರಲ್ ಆದ ಚಚಿತ್ರವನ್ನು ಎಐ ಸಹಾಯದಿಂದ ರಚಿಸಲಾಗಿದೆ.
ವೈರಲ್ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟ ನಡೆಸಿದಾಗ ನಮಗೆ ಈ ಸುದ್ದಿಗೆ ಸಂಬಂಧಿಸಿದ ಯಾವುದೇ ವರದಿ ಅಥವಾ ಯಾವುದೇ ಸತ್ಯಾಂಶ ತಿಳಿದು ಬಂದಿಲ್ಲ. ನಾವು ಚಿತ್ರವನ್ನು ಪರಿಶೋದಿಸಿದಾಗ ಈ ಚಿತ್ರ ಸಂಪೂರ್ಣವಾಗಿ ನಕಲಿ ತಿಳಿದು ಬಂದಿತು. ಈ ಚಿತ್ರವನ್ನು ಎಐ ಮೂಲಕ ರಚಿಸಲಾಗಿದೆ. ಭಾರತ ದೇಶದಲ್ಲಿ ನೋಟಿನ ಅಮಾನ್ಯೀಕರಣದ ನಂತರ 500 ರೂಪಾಯಿ ಮುಖ ಬೆಲೆಯ ನೋಟಿನ ಮೇಲೆ ಮಹಾತ್ಮ ಗಾಂಧಿಯ ಚಿತ್ರವನ್ನು ಮುದ್ರಿಸಿದರು ಇದನ್ನು ಬಿಟ್ಟು ಈ ನೋಟಿನಲ್ಲಿ ಯಾವುದೇಬದಲಾವಣೆ ಬಗ್ಗೆ ಸರ್ಕಾರ ಮಾಹಿತಿ ನೀಡಿಲ್ಲ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಅಧಿಕೃತ ವೆಬ್‌ಸೈಟ್‌ನಲ್ಲಿ ಹುಡುಕಾಟ ನಡೆಸಿದಾಗ ನಮಗೆ ಆ ಪುಟದಲ್ಲಿ ಅಂಬೇಡ್ಕರ್ ಅವರ ಚಿತ್ರದೊಂದಿಗೆ ಹೊಸ ₹500 ನೋಟಿನ ಪರಿಚಯದ ಕುರಿತು ಬ್ಯಾಂಕ್‌ನಿಂದ ಯಾವುದೇ ಅಧಿಸೂಚನೆ ನೀಡಿರುವುದು ನಮಗೆ ತಿಳಿದುಬಂದಿಲ್ಲ. 2016ರಲ್ಲಿ ಹಳೆಯ ₹500 ಮತ್ತು ₹1,000 ನೋಟುಗಳ ಅಮಾನ್ಯೀಕರಣದ ನಂತರ ಮತ್ತೆ ಹೊಸ ನೋಟನ್ನು ಪರಿಚಯಿಸಲಾದ ನೋಟಿನಲ್ಲಿಯೂ ಸಹ ನಾವು ಮಹಾತ್ಮ ಗಾಂಧಿಯವರ ಚಿತ್ರವನ್ನೇ ನೋಡಬಹುದು. ನೋಟು ಅಮಾನ್ಯೀಕರಣದ ನಂತರ ಆರ್‌ಬಿಐ 10, 20, 50, 100, 200, 500, 2000 ರೂಪಾಯಿಗಳ ಹೊಸ ನೋಟುಗಳನ್ನು ಬಿಡುಗಡೆ ಮಾಡಿತು. ಅಂದಿನಿಂದ ನೋಟಿನ ಮುಂಭಾಗ ಹಾಗೆಯೇ ಇದೆ. ಬ್ಯಾಂಕ್ ನೋಟುಗಳ ಆವೃತ್ತಿಯ ಬಗ್ಗೆ ಮತ್ತಷ್ಟು ಮಾಹಿತಿಗಾಗಿ ನಾವು ಆರ್‌ಬಿಐ ವೆಬ್‌ಸೈಟ್‌ನಲ್ಲಿರುವ FAQ ವಿಭಾಗವನ್ನು ನೋಡಬಹುದು. ಇಲ್ಲಿಯೂ ನಮಗೆ ಯಾವುದೇ ಮಾಹಿತಿ ಕಂಡುಬಂದಿಲ್ಲ.
ಹೊಸ ಐನೂರು ರೂಪಾಯಿ ನೋಟಿನಲ್ಲಿ ಮಹಾತ್ಮಗಾಂಧಿ ಸರಣಿಯದ್ದೇ ಇದೆ, ನೋಟು ಬದಲಾಗಿಲ್ಲ. ಆರ್‌ಬಿಐ ವೆಬ್‌ಸೈಟ್‌ನಲ್ಲೂ ಈ ಕುರಿತು ಯಾವುದೇ ಮಾಹಿತಿ ನಮಗೆ ಲಭ್ಯವಾಗಿಲ್ಲ. ಆರ್‌ಬಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 500 ರೂ ನೋಟಿನ ಮುಂಭಾಗದಲ್ಲಿ ಮಹಾತ್ಮ ಗಾಂಧಿಯವರ ಚಿತ್ರ ಮತ್ತು ಹಿಂಭಾಗದಲ್ಲಿ ಕೆಂಪು ಕೋಟೆಯಿರುವುದನ್ನು ನಾವು ಕಾಣಬಹುದು.
ವೈರಲ್ ಫೋಟೋವನ್ನು ಎಐ ಡಿಟೆಕ್ಟರ್ ಟೂಲ್ ಸಹಾಯದಿಂದ ಪರಿಶೀಲಿಸಲಾಗಿದ್ದು, ಈ ಚಿತ್ರ ನಕಲಿಯದ್ದು ಎಂದು ಕಂಡುಬಂದಿದೆ. ಸ್ಟೇಬಲ್ ಡಿಫ್ಯೂಷನ್, ಮಿಡ್‌ಜರ್ನಿ ಮತ್ತು ಡೆಲ್ಇ 2 ನಂತಹ AI ಪರಿಕರಗಳನ್ನು ಬಳಸಿಕೊಂಡು ಈ ಚಿತ್ರವನ್ನು ರಚಿಸಲಾಗಿದೆ. ಈ ನೋಟಿನ ಫೋಟೋ ಬದಲಾವಣೆಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಅನ್ನು ಖಾಸಗಿ ವೆಬ್ಸೈಟ್ವೊಂದು ಸಂಪರ್ಕಿಸಿದಾಗ ರಿಸರ್ವ್ ಬ್ಯಾಂಕ್ ಅಂತಹ ನಿರ್ಧಾರ ತೆಗೆದುಕೊಂಡರೆ ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಡೇಟ್ ಮಾಡುತ್ತೇವೆ ಎಂದು ತಿಳಿಸಿದೆ ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ 500 ರೂಪಾಯಿ ನೋಟಿನಲ್ಲಿ ಅಂಬೇಡ್ಕರ್ ಅವರ ಚಿತ್ರ ಸಂಪೂರ್ಣವಾಗಿ ನಕಲಿ ಎಂಬುದು ತನಿಖೆಯಿಂದ ಸಾಭೀತಾಗಿದೆ. ಈ ಚಿತ್ರವನ್ನು ಕೃತಕ ಬುದ್ಧಿಮತ್ತೆಯ ಸಹಾಯದಿಂದ ಈ ಚಿತ್ರವನ್ನು ರಚಿಸಲಾಗಿದೆ. ಇಲ್ಲಿಯವರೆಗೆ ಗಾಂಧಿ ಸರಣಿಯ ನೋಟುಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಹಿಂದೆ ಅಯೋಧ್ಯೆಯ ಶ್ರೀ ರಾಮಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೂ ಮೊದಲು ಇದೇ ರೀತಿಯ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶ್ರೀರಾಮ ಸರಣಿಯ 500 ರೂಪಾಯಿಯ ಹೊಸ ನೋಟುಗಳನ್ನು ಸರ್ಕಾರ ಬಿಡುಗಡೆ ಮಾಡಲಿದೆ ಎಂಬ ಹೇಳಿಕೆಯೊಂದಿಗೆ ಫೋಟೋವನ್ನು ಅನೇಕರು ಹಂಚಿಕೊಂಡಿದ್ದರು.
ಹೀಗಾಗಿ ವೈರಲ್ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. 500 ರೂಪಾಯಿ ನೋಟಿನಲ್ಲಿ ಅಂಬೇಡ್ಕರ್ ಅವರ ಚಿತ್ರ ಸಂಪೂರ್ಣವಾಗಿ ನಕಲಿಯದ್ದು. ವೈರಲ್ ಆದ ಚಚಿತ್ರವನ್ನು ಎಐ ಸಹಾಯದಿಂದ ರಚಿಸಲಾಗಿದೆ.