ಫ್ಯಾಕ್ಟ್‌ಚೆಕ್‌: ಕೇಂದ್ರ ಸರ್ಕಾರ ಕಾಂಡೋಮ್‌ಗಳ ಮೇಲೆ ಯಾವುದೇ ರೀತಿಯ ಜಿಎಸ್‌ಟಿಯನ್ನು ವಿಧಿಸಿಲ್ಲ

ಕೇಂದ್ರ ಸರ್ಕಾರ ಕಾಂಡೋಮ್‌ಗಳ ಮೇಲೆ ಯಾವುದೇ ರೀತಿಯ ಜಿಎಸ್‌ಟಿಯನ್ನು ವಿಧಿಸಿಲ್ಲ;

facebooktwitter-grey
Update: 2025-01-17 02:30 GMT
ಫ್ಯಾಕ್ಟ್‌ಚೆಕ್‌: ಕೇಂದ್ರ ಸರ್ಕಾರ ಕಾಂಡೋಮ್‌ಗಳ ಮೇಲೆ ಯಾವುದೇ ರೀತಿಯ ಜಿಎಸ್‌ಟಿಯನ್ನು ವಿಧಿಸಿಲ್ಲ
  • whatsapp icon

ಜಿಎಸ್‌ಟಿ ಕೌನ್ಸಿಲ್‌ನ 55ನೇ ಸಭೆಯು ಡಿಸೆಂಬರ್ 21 ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ 55 ನೇ ಜಿಎಸ್‌ಟಿ ಕೌನ್ಸಿಲ್ ಸಭೆ ನಡೆದಿತ್ತು. GST ಕೌನ್ಸಿಲ್ ನಿರ್ದಿಷ್ಟ ಪ್ರದೇಶಗಳಲ್ಲಿ ತೆರಿಗೆ ಹೊರೆಯನ್ನು ಸರಳಗೊಳಿಸುವ ಮತ್ತು ಕಡಿಮೆ ಮಾಡುವ ಉದ್ದೇಶದಿಂದ 55 ನೇ ಜಿಎಸ್‌ಟಿ ಕೌನ್ಸಿಲ್ ಸಭೆ ತೆರಿಗೆ ಹೊರೆಯನ್ನು ಸರಳಗೊಳಿಸುವ ಮತ್ತು ಕಡಿಮೆ ಮಾಡುವ ಉದ್ದೇಶದಿಂದ ಹಲವಾರು ಪ್ರಮುಖ ಶಿಫಾರಸುಗಳನ್ನು ಮಾಡಿತ್ತು.

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಜಿಎಸ್‌ಟಿಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ. ʼಮಾಸ್‌ ಟಾಕ್ಸ್‌ʼ ಎಂಬ ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ನಿರ್ಮಲಾ ಸೀತಾರಾಮನ್‌ರವರ ಚಿತ್ರದೊಂದಿಗೆ ಚಿತ್ರದಲ್ಲಿ ಕ್ಯಾಪ್ಷನ್‌ ಆಗಿ ஆண்கள் கருத்தடை சாதனம் ஆணுறைக்கு (Condom) 69% ஜிஎஸ்டி வரி விதிக்கப்பட்டுள்ளதுʼ ಎಂದು ತಮಿಳಿನಲ್ಲಿ ಬರೆದಿರುವುದನ್ನು ಕಾಣಬಹುದು. ಹಾಗೆ ಈ ಚಿತ್ರಕ್ಕೆ ಶೀರ್ಷಿಕೆಯಾಗಿ ʼஅவங்க வெங்காயம் மட்டும்தான் சாப்பிட மாட்டாங்க அப்படின்னு நினைச்சேன்... பாவம் அவர் மேல இருந்த கோவத்த ஒட்டுமொத்த ஆண்கள் மீது காமிச்சுட்டாங்க. என்னுடைய ஆழ்ந்த இரங்கலை ஆண்களுக்கு தெரிவித்துக் கொள்கிறேன்ʼ ಎಂದು ಬರೆದು ಪೊಸ್ಟ್‌ ಮಾಡಿರುವುದನ್ನು ನಾವು ನೋಡಬಹುದು. ಕ್ಯಾಪ್ಷನ್‌ ಮತ್ತು ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಪುರುಷರು ಬಳಸುವ ಕಾಂಡೋಮ್‌ ಮೇಲೆ ಶೇಕಡ 69ರಷ್ಟು ಜಿಎಸ್‌ಟಿ ವಿಧಿಸಲಾಗಿದೆʼ, ʼಜಿಎಸ್‌ಟಿ ಬಿಸಿಗೆ ಕೇವಲ ಈರುಳ್ಳಿ ಮಾತ್ರ ತಿನ್ನೋದಿಲ್ಲ ಎಂದುಕೊಂಡೆ ಆದರೆ ಪುರುಷರ ಮೇಲಿನ ಸಿಟ್ಟು ಎಲ್ಲಾ ಗಂಡಸರ ಮೇಲೆ ತಿರಿಗಿದೆ. ಪುರುಷರಿಗೆ ನನ್ನ ಸಂತಾಪʼ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನೋಡಬಹುದು.

ವೈರಲ್‌ ಆದ ಪೋಸ್ಟ್‌ನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


ಇದೇ ಶೀರ್ಷಿಕೆಯೊಂದಿಗೆ ʼಡಾ. ಅದೀನಾ ಪ್ರಿಸಿಲ್ಲಾʼ ಎಂಬ ಎಕ್ಸ್‌ ಖಾತೆದಾರರರೊಬ್ಬರು ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವುದನ್ನು ನೋಡಬಹುದು

ವೈರಲ್‌ ಆದ ಪೋಸ್ಟ್‌ನ್ನು ನೀವಿಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಕಾಂಡೋಮ್‌ಗಳ ಮೇಲೆ ಯಾವುದೇ ರೀತಿಯ ಜಿಎಸ್‌ಟಿಯನ್ನು ವಿಧಿಸಿಲ್ಲ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಚಿತ್ರವನ್ನು ನಾವು ಗೂಗಲ್‌ ರಿವರ್ಸ್‌ ಇಮೇಜ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ಫಲಿತಾಂಶ ದೊರೆತಿಲ್ಲ. ನಂತರ ನಾವು ವೈರಲ್‌ ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಡಿಸಂಬರ್‌ 21,2024ರಂದು ನಡೆದ 55ನೇ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಯಾವ ಯಾವ ಸರಕುಗಳ ಮೇಲೆ ಎಷ್ಟು ಜಿಎಸ್‌ಟಿಯನ್ನು ಬದಲಾಯಿಸಿದ್ದಾರೆ ಎಂಬ ಮಾಹಿತಿ ನಮಗೆ ಪಿಐಬಿ ಪ್ರಕಟನೆಯಲ್ಲಿರುವ ಮಾಹಿತಿಯಲ್ಲಿ ತಿಳಿದುಬಂದಿತು. ಆದರೆ ಇದರಲ್ಲಿ ಕಾಂಡಮ್‌ಗೆ ವಿಧಿಸಿರುವ ಟ್ಯಾಕ್ಸ್‌ ಬಗ್ಗೆ ಎಲ್ಲಿಯೂ ಉಲ್ಲೇಖವಾಗಿಲ್ಲ.

ಮತ್ತಷ್ಟು ಮಾಹಿತಿಗಾಗಿ ನಾವು ಜಿಎಸ್‌ಟಿಯಿಂದ ವಿನಾಯಿತಿ ಪಡೆದ ಸರಕುಗಳ ಪಟ್ಟಿಗಳ ಕುರಿತ ಮಾಹಿತಿಯನ್ನು ಹುಡುಕುವಾಗ ನಮಗೆ ಇಂಡಿಯಾ ಫಿಲ್ಲಿಂಗ್ಸ್‌ ವೆಬ್‌ಸೈಟ್‌ನಲ್ಲಿ GST Exempted Goods: Exempted Goods Under GST ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿರುವ ವರದಿಯೊಂದನ್ನು ಕಂಡುಕೊಂಡೆವು.




ಈ ವರದಿಯಲ್ಲಿ ಕಾಂಡೋಮ್‌ಗಳಿಗೂ ಸಹ ಜಿಎಸ್‌ಟಿ ಯಿಂದ ವಿನಾಯಿತಿ ನೀಡಿರುವುದು ತಿಳಿದು ಬಂದಿತು. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಪೋಸ್ಟ್‌ನಲ್ಲಿ ಕಾಂಡೋಮ್‌ನ ಮೇಲೆ 69%ರಷ್ಟು ತೆರಿಗೆ ವಿಧಿಸಲಾಗಿದೆ ಎಂದು ಹಂಚಿಕೊಂಡಿದ್ದಾರೆ. ಆದರೆ, ಭಾರತದಲ್ಲಿ ಗರಿಷ್ಟ ಜಿಎಸ್‌ಟಿ ತೆರಿಗೆಯೇ 28%.




ಇನ್ನು ಈ ಸರಕುಗಳ ಮೇಲೆ GST ವಿನಾಯಿತಿ ಯಾಕೆ ಕೊಡುತ್ತಿದ್ದಾರೆ ಎಂದು ಕಾರಣಗಳನ್ನು ಸಹ ನೀಡಿದ್ದಾರೆ. ಸರಕುಗಳನ್ನು GST ಯಿಂದ ಹಲವಾರು ಕಾರಣಗಳಿಗಾಗಿ ವಿನಾಯಿತಿ ನೀಡಲಾಗಿದೆ:

1. ಕೈಗೆಟುಕುವಿಕೆ: ಅಗತ್ಯ ಸರಕುಗಳು ಮತ್ತು ಸೇವೆಗಳು ಎಲ್ಲರಿಗೂ, ವಿಶೇಷವಾಗಿ ಕಡಿಮೆ-ಆದಾಯದ ಗುಂಪುಗಳಿಗೆ ಆರ್ಥಿಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳುವುದು.

2. ಲಭ್ಯತೆ: ತೆರಿಗೆಗಳ ಹೆಚ್ಚುವರಿ ಆರ್ಥಿಕ ಹೊರೆಯಿಲ್ಲದೆ ಎಲ್ಲರಿಗೂ ನಿರ್ಣಾಯಕ ಜೀವನ ಅಗತ್ಯಗಳನ್ನು ತಲುಪುವಂತೆ ಮಾಡುವುದು.

3. ಸಮಾಜ ಕಲ್ಯಾಣ: ಜನಸಂಖ್ಯೆಯ ಒಟ್ಟಾರೆ ಕಲ್ಯಾಣ ಮತ್ತು ಆರೋಗ್ಯಕ್ಕೆ ಕೊಡುಗೆ ನೀಡುವ ಮೂಲಭೂತ ಅಗತ್ಯಗಳ ಬಳಕೆಯನ್ನು ಬೆಂಬಲಿಸುವುದು.

4. ಆರ್ಥಿಕ ಸ್ಥಿರತೆ: ದೇಶದ ಆರ್ಥಿಕತೆ ಮತ್ತು ಸಾರ್ವಜನಿಕ ಯೋಗಕ್ಷೇಮಕ್ಕೆ ಪ್ರಮುಖವಾದ ಅಗತ್ಯ ವಲಯಗಳನ್ನು ಸ್ಥಿರಗೊಳಿಸಲು ಸಹಾಯ ಮಾಡುವುದು.

5. ಸಮಾನತೆ: ಕಡಿಮೆ-ಆದಾಯದ ಖರ್ಚಿನ ಹೆಚ್ಚಿನ ಪ್ರಮಾಣವನ್ನು ರೂಪಿಸುವ ಅಗತ್ಯ ಉತ್ಪನ್ನಗಳ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡುವ ಮೂಲಕ ಆರ್ಥಿಕ ಅಸಮಾನತೆಗಳನ್ನು ಕಡಿಮೆ ಮಾಡುವುದು.

ಇದರಿಂದ ಸಾಭಿತಾಗಿದ್ದೇನೆಂದರೆ, ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಕಾಂಡೋಮ್‌ಗಳ ಮೇಲೆ ಯಾವುದೇ ರೀತಿಯ ಜಿಎಸ್‌ಟಿಯನ್ನು ವಿಧಿಸಿಲ್ಲ.

Claim :  ಕೇಂದ್ರ ಸರ್ಕಾರ ಕಾಂಡೋಮ್‌ಗಳ ಮೇಲೆ ಯಾವುದೇ ರೀತಿಯ ಜಿಎಸ್‌ಟಿಯನ್ನು ವಿಧಿಸಿಲ್ಲ
Claimed By :  Social Media Users
Fact Check :  False
Tags:    

Similar News