ಫ್ಯಾಕ್ಟ್‌ಚೆಕ್‌: 2024ರಲ್ಲಿ ವಿದೇಶದಲ್ಲಿ ಐಪಿಎಲ್‌ ನಡೆಯಲಿದೆಯೆಂದು ಬಿಸಿಸಿಐ ಘೋಷಣೆ ಮಾಡಿದೆಯಾ?

2024ರಲ್ಲಿ ವಿದೇಶದಲ್ಲಿ ಐಪಿಎಲ್‌ ನಡೆಯಲಿದೆಯೆಂದು ಬಿಸಿಸಿಐ ಘೋಷಣೆ ಮಾಡಿದೆಯಾ?

Update: 2024-03-23 19:06 GMT

IPL matches

ಏಪ್ರಿಲ್ 19 ರಿಂದ ಜೂನ್ 1, 2024 ರವರೆಗೆ ಭಾರತದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. 44 ದಿನಗಳ ಕಾಲ ನಡೆಯುವ ಈ ಸುದೀರ್ಘ ಚುನಾವಣಾ ಪ್ರಕ್ರಿಯೆಯು ಜೂನ್ 4, 2024 ರಂದು ಮತಗಳ ಎಣಿಕೆಯೊಂದಿಗೆ ಕೊನೆಗೊಳ್ಳುತ್ತದೆ.

ಚುನಾವಣೆಯ ಬೆನ್ನಲ್ಲೇ, ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್-2024 ಮಾರ್ಚ್ 22, 2024ರಿಂದಲೇ ಪ್ರಾರಂಭವಾಗಲಿದೆ. ಇನ್ನು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಮೊದಲ ಪಂದ್ಯ ಚೆನ್ನೈನಲ್ಲಿ ನಡೆಯಲಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಸಿಸಿಐ 2024ರ ಏಪ್ರಿಲ್ 7ರವರೆಗೆ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಇನ್ನುಳಿದ ಪಂದ್ಯಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಉಹಾಪೋಹಗಳ ಚರ್ಚೆ ನಡೆಯುತ್ತಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಎಕ್ಸ್‌ ಖಾತೆಯಲ್ಲಿ ಚುನಾವಣಾ ವೇಳಾಪಟ್ಟಿಯನ್ನು ಪರಿಗಣಿಸಿ ಉಳಿದ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಲಾಗುವುದು ಎಂಬ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.

IPL is set to be shifted to the UAE due to elections, so Dhoni will be playing in IPL 2025 as well, as he said his last match will be in Chepauk. ಎಂದು ಪೋಸ್ಟ್‌ ಮಾಡಿದ್ದರು. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ನಮಗೆ ತಿಳಿದಿದ್ದೇನೆಂದರೆ, "ಚುನಾವಣೆಯಿಂದಾಗಿ ಐಪಿಎಲ್ ಅನ್ನು ಯುಎಇಗೆ ಸ್ಥಳಾಂತರಿಸಲಾಗುವುದು, ಆದ್ದರಿಂದ ಧೋನಿ ಐಪಿಎಲ್-2025 ರಲ್ಲೂ ಆಡುತ್ತಾರೆ, ಧೋನಿಯ ಕೊನೆಯ ಪಂದ್ಯ ಚೆಪಾಕ್‌ನಲ್ಲಿ ನಡೆಯಲಿದೆ."ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ಗಳು ವೈರಲ್ ಮಾಡಲಾಗಿದೆ

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಐಪಿಎಲ್ ಟೂರ್ನಿ ಪೂರ್ತಿ ಭಾರತದಲ್ಲೇ ನಡೆಯಲಿದೆ ಎಂದು ಬಿಸಿಸಿಐ ಸ್ಪಷ್ಟನೆ ನೀಡಿದೆ.

ನಾವು ಈ ಸುದ್ದಿಯ ಕುರಿತು ಮತ್ತಷ್ಟು ಮಾಹಿತಿಯನ್ನು ತಿಳಿಯಲು ಕೆಲವು ಕೀವರ್ಟ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಾವು ಸಾಕಷ್ಟು ಮಾಧ್ಯಮ ವರದಿಗಳನ್ನು ಕಂಡುಕೊಂಡೆವು.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ , ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಸುದ್ದಿಯನ್ನು ತಳ್ಳಿಹಾಕಿದ್ದಾರೆ. ಐಪಿಎಲ್ 2024ರಲ್ಲಿ ನಡೆಯುವ ಸಂಪೂರ್ಣ ಸೀಸನ್ ಭಾರತದಲ್ಲಿ ನಡೆಯಲಿದೆ ಎಂದು ಖಚಿತಪಡಿಸಿದ್ದಾರೆ. ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ ಕ್ರಿಕ್‌ಬಜ್‌ನೊಂದಿಗೆ ಮಾತನಾಡಿದ ಜಯ್ ಶಾ, ಐಪಿಎಲ್ 2024 ರ ಸೆಕೆಂಡ್‌ ಇನ್ನಿಂಗ್‌ಸ್‌ ವಿದೇಶದಲ್ಲಿ ನಡೆಯುವುದಿಲ್ಲ ಈ ಊಹಾಪೋಹಗಳನ್ನು ಯಾರೂ ನಂಬಬೇಡಿ ಎಂದು ವೈರಲ್‌ ಆದ ಹೇಳಿಕೆಯನ್ನು ತಳ್ಳಿಹಾಕಿದರು.

ಕ್ರಿಕ್‌ಬಜ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬಿಸಿಸಿಐ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವಿದೇಶದಲ್ಲಿ ನಡೆಯುವುದಿಲ್ಲ ಎಂದು ಖಚಿತಪಡಿಸಿದ್ದಾರೆ. ಭಾರತದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗಳ ಕಾರಣ ಯುಎಇಯಲ್ಲಿ ಪಂಧ್ಯಾವಳಿ ನಡೆಯಲಿದೆ ಎಂದು ಬಂದಂತಹ ಸುದ್ದಿಯ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿತು.

ಡೆಕ್ಕನ್‌ ಹೆರಾಲ್ಡ್‌ ವರದಿಯ ಪ್ರಕಾರ, ಈ ವರ್ಷ ಈಪಿಎಲ್‌ ದುಬೈನಲ್ಲಿ ನಡೆಯಲಿದೆ ಎಂಬ ಸುದ್ದಿಯನ್ನು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ನಿರಾಕರಿಸಿದ್ದಾರೆ ಎಂದು ವರದಿ ಮಾಡಿತ್ತು. ಅಷ್ಟೇ ಅಲ್ಲ ದ್ವಿತಿಯಾರ್ಥದಲ್ಲಿ ನಡೆಯುವ ಪಂದ್ಯಾವಳಿಯ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಧುಮಾಲ್‌ ಪಿಟಿಐಗೆ ತಿಳಿಸಿದ್ದಾರೆ.

ಹೀಗಾಗಿ, ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ. ಐಪಿಎಲ್‌ನ ಎಲ್ಲಾ ಪಂಧ್ಯಗಳು ಭಾರತದಲ್ಲೇ ನಡೆಯಲಿದೆ ಎಂದು ಸ್ಪಷ್ಟನೆಯೂ ಸಿಕ್ಕೆದೆ.

Claim :  Indian Premier League 2024 is set to shift to UAE due to upcoming general elections
Claimed By :  X users
Fact Check :  False
Tags:    

Similar News