ಫ್ಯಾಕ್ಟ್‌ಚೆಕ್: ಜನಪ್ರಿಯ ನಟ, ಹಾಸ್ಯನಟ ಅಲಿ ಪವನ್ ಕಲ್ಯಾಣ್‌ಗೆ ಕೈಮುಗಿದು ಕ್ಷಮೆಯಾಚಿಸಲಿಲ್ಲ.
ಜನಪ್ರಿಯ ನಟ, ಹಾಸ್ಯನಟ ಅಲಿ ಪವನ್ ಕಲ್ಯಾಣ್‌ಗೆ ಕೈಮುಗಿದು ಕ್ಷಮೆಯಾಚಿಸಲಿಲ್ಲ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ಹಾಸ್ಯನಟ ಅಲಿ ತೆಲುಗು ಚಿತ್ರರಂಗದಲ್ಲಿ ಉತ್ತಮ ಸ್ನೇಹಿತರು. ಪವನ್ ಕಲ್ಯಾಣ್ ಅಭಿನಯದ ಸಿನಿಮಾಗಳಲ್ಲಿ ಅಲಿಗೆ ಒಳ್ಳೆಯ ಪಾತ್ರವಿರುತ್ತದೆ. ಅಲಿ ಪವನ್ ಕಲ್ಯಾಣ್ ಚಿತ್ರಗಳಲ್ಲಿ ಕಾಣಿಸದೆ ಇರುವುದಿಲ್ಲ. ಹಾಗೆ ಪವನ್ ಕಲ್ಯಾಣ್ ಕೂಡ ಅಲಿ ಇಲ್ಲದೆ ಚಿತ್ರಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಆದರೆ ರಾಜಕೀಯದ ವಿಷಯದಲ್ಲಿ ಮಾತ್ರ ಇವರಿಬ್ಬರೂ ಅಡ್ಡದಾರಿ ಹಿಡಿದಿದ್ದಾರೆ. ಪವನ್ ಕಲ್ಯಾಣ್ ಜನಸೇನಾ ಪಕ್ಷ ಆರಂಭಿಸುವ ಮೂಲಕ ರಾಜಕೀಯದಲ್ಲಿ ಸಂಚಲನ ಮೂಡಿಸಿದರು. ಇದೀಗ ಆಂಧ್ರಪ್ರದೇಶ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ ಹಾಸ್ಯನಟ ಅಲಿ ವೈಸಿಪಿ ಪಕ್ಷದಲ್ಲಿದ್ದಾರೆ.
ಇತ್ತೀಚೆಗಷ್ಟೇ ಹಾಸ್ಯನಟ ಅಲಿ ಜನಸೇನೆ ಪವನ್ ಕಲ್ಯಾಣ್ ಬಳಿ ಕ್ಷಮೆಯಾಚಿಸಿದ್ದಾರೆ ಎಂಬ ಕೆಲವು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಕೆಲವು ವೀಡಿಯೊಗಳಂತೂ ಸುಳ್ಳು ಥಂಬ್‌ನೇಲ್‌ಗಳೊಂದಿಗೆ ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲಾಗುತ್ತಿದೆ.
ಫ್ಯಾಕ್ಟ್‌ಚೆಕ್
ವೈರಲ್ ವಿಡಿಯೋಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಡಿಯೋವಿನಲ್ಲಿ ನಟ ಆಲಿ ಹೇಳಿಕೆ ನೀಡಿದ್ದು ಒಂದಾದರೆ, ಯ್ಯೂಟ್ಯೂಬ್‌ನಲ್ಲಿ ತಪ್ಪು ತಪ್ಪು ಥಂಬ್‌ನೇಲ್ನ ಮೂಲಕ ವಿಡಿಯೋಗಳನನು ಅಪ್‌ಲೋಡ್ ಮಾಡಲಾಗುತ್ತಿದೆ.
‘ಪವನ್ ಕಲ್ಯಾಣ್‌ಗೆ ಕ್ಷಮೆಯಾಚಿಸುತ್ತಿರುವ ಆಲಿ’ ಎಂಬ ಕೀವರ್ಡ್ ಗಳನ್ನು ಬಳಸಿ ಗೂಗಲ್ ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯ ನಂತರ ಹಾಸ್ಯನಟ ಅಲಿ ಅವರು ಎಪಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಕ್ಷಮೆಯಾಚಿಸುವ ಕುರಿತು ಯಾವುದೇ ಹೇಳಿಕೆ ನೀಡಿಲ್ಲ ಎಂದು ತಿಳಿದು ಬಂದಿತು.
ಪವನ್ ಕಲ್ಯಾಣ್ ಬಗ್ಗೆ ಆಲಿ ಏನೇ ಕಾಮೆಂಟ್ ಮಾಡಿದರೂ ತೆಲುಗು ಮಾಧ್ಯಮಗಳು ಪ್ರಕಟಿಸುತ್ತಿದ್ದವು ಆದರೆ ನಮಗೆ ಯಾವುದೇ ಪೋಸ್ಟ್‌ಗಳು ಅಧವಾ ಸುದ್ದಿ ಕಾಣಿಸಲಿಲ್ಲ.
ಅಲ್ಲು ಶಿರಿಶ್ ಅಭಿನಯದ ಬಡ್ಡಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಹಾಸ್ಯನಟ ಆಲಿ ಮಾತನಾಡಿರುವುದನ್ನು ನಾವು ಕಂಡುಕೊಂಡೆವು ಆದರೆ ಆಲಿ ರಾಜಕೀಯದ ಕುರಿತು ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ.
NTV ಎಂಟರ್‌ಟೈನ್‌ಮೆಂಟ್‌ನ YouTube ಚಾನಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊವನ್ನು ನಾವು ಗಮನಿಸಿದ್ದೇವೆ. ಆ ವಿಡಿಯೋವಿನಲ್ಲಿ ಸಿನಿಮಾ ಮತ್ತು ಥಾಯ್ಲೆಂಡ್‌ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮಾತನಾಡಿದರು.
ವೈರಲ್ ಆದ ವಿಡಿಯೋದ ಸ್ಕ್ರೀನ್‌ಶಾಟ್‌ನ್ನು ತೆಗೆದುಕೊಂಡು ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್ ಮಾಡಿದೆವು. ವೈರಲ್ ವಿಡಿಯೋದಲ್ಲಿ, ಅವರು ಧರಿಸಿರುವ ಶರ್ಟ್‌ನೊಂದಿಗೆ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊವೊಂದು ಹೋಲಿಸಿದೆವು.
ಆ ವಿಡಿಯೋವಿನಲ್ಲಿ ಪ್ರಮುಖ ಪತ್ರಕರ್ತ ಮತ್ತು ಈನಾಡು ಸಂಘಟನೆಯ ಮುಖ್ಯಸ್ಥ ರಾಮೋಜಿ ರಾವ್ ಅವರ ಸಾವಿನ ಕುರಿತು ಅಲಿ ಮಾತನಾಡಿದ್ದರು. ರಾಮೋಜಿ ರಾವ್ ಅವರು ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಹಾಗೆ ಅಲಿ ಮತ್ತು ಅವರ ನಡುವಿನ ಸಂಬಂಧದ ಬಗ್ಗೆ ಮಾತನಾಡಿರುವುದನ್ನು ನಾವು ಕಂಡುಕೊಂಡೆವು.
ಇದನ್ನೇ ಆಧಾರವಾಗಿಟ್ಟುಕೊಂಡು ನಾವು ರಾಮೋಜಿ ರಾವ್ ಸಾವಿನ ಬಗ್ಗೆ ಅಲಿ ಅವರ ಪ್ರತಿಕ್ರಿಯಿಸಿದ ಸುದ್ದಿಗಾಗಿ ಹುಡುಕಾಟ ನಡೆಸಿದೆವು. ರಾಮೋಜಿರಾವ್ ಅವರ ನಿಧನಕ್ಕೆ ಹಾಸ್ಯನಟ ಅಲಿ ಸಂತಾಪ ಸೂಚಿಸುವ ವಿಡಿಯೋವೊಂದನ್ನು ಹಲವಾರು ತೆಲುಗು ಮಾಧ್ಯಮ ಸಂಸ್ಥೆಗಳು ಯೂಟ್ಯೂಬ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿರುವುದನ್ನು ನಾವು ಕಂಡುಕೊಂಡೆವು.
ಹೀಗಾಗಿ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸಾಭೀತಾಗಿದೆ. ಅಷ್ಟೇ ಅಲ್ಲ, ವೈರಲ್ ಆದ ವಿಡಿಯೋವಿನಲ್ಲಿ ನಟ, ಹಾಸ್ಯನಟ ಆಲಿ ಪವನ್ ಕಲ್ಯಾಣ್‌ಗೆ ಕ್ಷಮೆಯಾಚಿಸಿಲ್ಲ. ಆತ ರಾಮೋಜಿ ರಾವ್‌ರವರ ನಿಧನಕ್ಕೆ ಸಂತಾಪ ಸೂಚಿಸುವ ವಿಡಿಯೋವನ್ನು ತಪ್ಪು ಹೇಳಿಕೆಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.