ಫ್ಯಾಕ್ಟ್ ಚೆಕ್: ಪ್ರಪಂಚದಲ್ಲೇ ಅತಿ ಎತ್ತರದ ಗಣೇಶನ ಮೂರ್ತಿ ಇರುವುದು ಥಾಯ್ಲಾಂಡ್‌ನಲ್ಲಿ, ಇಂಡೋನೇಷ್ಯಾದಲ್ಲಿ ಅಲ್ಲ.
ಪ್ರಪಂಚದಲ್ಲೇ ಅತಿ ಎತ್ತರದ ಗಣೇಶನ ಮೂರ್ತಿ ಇರುವುದು ಥಾಯ್ಲಾಂಡ್‌ನಲ್ಲಿ, ಇಂಡೋನೇಷ್ಯಾದಲ್ಲಿ ಅಲ್ಲ.;
ಭಾರತ ಮತ್ತು ವಿಶ್ವದಲ್ಲಿರುವ ಕೆಲವು ರಾಷ್ಟ್ರಗಳು ಗಣೇಶ ಚತುರ್ಥಿಯನ್ನ ಆಚರಿಸುತ್ತದೆ. ಅದರಲ್ಲೂ ಭಾರದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಂತಗ ಸಮಯಲ್ಲಿ ಫೇಸ್‌ಬುಕ್ ಪೋಸ್ಟ್‌ವೊಂದು ವೈರಲ್ ಆಗಿದೆ. ಪೋಸ್ಟ್ ಕಾರ್ಡ್ ಎಂಬ ಫೇಸ್ ಬುಕ್ ಪೇಜ್‌ನಲ್ಲಿ ಗಣೇಶನ ಮೂರ್ತಿಯನ್ನು ಕುರಿತು ಪೋಸ್ಟ್ ಒಂದು ವೈರಲ್ ಆಗಿತ್ತು. ಆ ಪೋಸ್ಟ್‌ನಲ್ಲಿ "ವಿಶ್ವದ ಅತಿ ಎತ್ತರವಾಗಿ ನಿಂತಿರುವ ಪ್ರಭು ಗಣೇಶನ ಮೂರ್ತಿ, ಇದು ಇರುವುದು ಭಾರತದಲ್ಲಿಯಲ್ಲ. ಕಟ್ಟರ್ ಇಸ್ಲಾಂ ರಾಷ್ಟ್ರ ಇಂಡೋನೇಷಿಯಾದಲ್ಲಿ. ಸನಾತನ ಧರ್ಮದ ಬೇರು ವಿಶ್ವಕ್ಕೆಲ್ಲಾ ಹಬ್ಬಿದೆ" ಎಂದು ಬರೆದಿರುವ ಪೋಸ್ಟ್‌ನ್ನು ಕಾಣಬಹುದು.
ಇದೇ ರೀತಿಯ ಕೆಲವೊಂದು ಏರಿಯಲ್ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ಗಳ ಮೂಲಕ ವೈರಲ್ ಆಗಿತ್ತು. ಈಗ ಮತ್ತೊಮ್ಮೆ ವಿಶ್ವದಲ್ಲೇ ಅತಿ ಎತ್ತರದ ಗಣೇಶನ ಪ್ರತಿಮೆ ಇದಾಗಿದೆ ಎಂಬ ವಿಡಿಯೋ ಪೋಸ್ಟ್ ಮಾಡಲಾಗಿದೆ.
2022ರಲ್ಲೂ ಸಹ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮನಿಷ್ ಗುಪ್ತ ಎನ್ನುವವರು ತಮ್ಮ X ಖಾತೆಯಲ್ಲಿ "128ಅಡಿ ಎತ್ತರದ ಕಂಚಿನ ಗಣೇಶನ ಪ್ರತಿಮೆ ಮುಸ್ಲಿಂ ರಾಷ್ಟ್ರವಾದ ಇಂಡೋನೇಷ್ಯಾದಲ್ಲಿದೆ" ಎಂದು ಪೋಸ್ಟ್ ಮಾಡಿದ್ದರು.
ಫ್ಯಾಕ್ಟ್ ಚೆಕ್:
ವೈರಲ್ ಆದ ಪೋಸ್ಟ್‌ನ್ನು ರಿವರ್ಸ್ ಇಮೇಜ್ ಮೂಲಕ ಹುಡುಕಿದಾಗ ನಮಗೆ ತಿಳಿದು ಬಂದಿದ್ದು ವೈರಲ್ಲ ಆದ ಸುದ್ದಿ ಸುಳ್ಳು. ಇಂಡೋನೇಷ್ಯಾದಲ್ಲಿ ಅತಿ ಎತ್ತರದ ಗಣೇಶನ ಪ್ರತಿಮೆ ಇದೆ ಎಂಬ ಸುದ್ದಿಯಲಿ ಯಾವುದೇ ಸತ್ಯಾಂಶವಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಪ್ರಪಂಚದಲ್ಲೇ ಅತಿ ಎತ್ತರದ ಪ್ರತಿಮೆ ಇರುವುದು ಥಾಯ್ಲೆಂಡ್‌ನ ಕ್ಲಾಂಗ್ ಕುಯೆನ್ ಜಿಲ್ಲೆಯ ಗಣೇಶ ಅಂತರಾಷ್ಟ್ರೀಯ ಉದ್ಯಾನವನದಲ್ಲಿ 128 ಅಡಿ ವಿಗ್ರಹವನ್ನು ನಾವು ನೋಡಬಹುದು.
ಯೂಟ್ಯೂಬ್‌ನಲ್ಲಿ 128 ಅಡಿಯ ಎತ್ತರದ ಕಂಚಿನ ಪ್ರತಿಮೆಯನ್ನು ನೋಡಬಹುದು.ವೀಡಿಯೋದಲ್ಲಿ ಕಾಣುವ ಗಣೇಶನ ಮೂರ್ತಿ ಥಾಯ್ಲೆಂಡ್‌ನಲ್ಲಿದೆ ಎನ್ನುವುದು ಈ ಮೂಲಕ ಸ್ಪಷ್ಟವಾಗುತ್ತದೆ.
shriganesh.com ವೆಬ್‌ಸೈಟ್‌ನಲ್ಲಿ ಈ ವಿಗ್ರಹದ ಕುರಿತು ಸಾಕಷ್ಟು ವಿವರಗಳನ್ನು ನೋಡಬಹುದು." ಈ ಪ್ರತಿಮೆಯನ್ನು 40,000 ಚದರ ಮೀಟರ್ ವಿಸ್ತೀರ್ಣದಲ್ಲಿ ಸ್ಥಾಪಿಸಿರುವ ಕಂಚಿನ ವಿಗ್ರಹ ಇದಾಗಿದೆ. ಇಲ್ಲಿ ಕಾಣಿಸುವ ಮೂರ್ತಿಯ ಕೈಯಲ್ಲಿ ಹಲಸಿನ ಹಣ್ಣು, ಕಬ್ಬು, ಬಾಳೆಹಣ್ಣು, ಮತ್ತು ಮಾವಿನ ಹಣ್ಣನ್ನು ಗಣೇಶನ ನಾಲ್ಕೂ ಕೈಯಲ್ಲಿ ಕಾಣಬಹುದು"
ಗೂಗಲ್ ಮ್ಯಾಪ್‌ನಲ್ಲಿ ಸ್ಟ್ರೀಟ್ ವ್ಯೂನಲ್ಲಿ ಥಾಯ್ಲೆಂಡ್‌ನ ಕ್ಲಾಂಗ್ ಕುಯೆನ್ ಜಿಲ್ಲೆಯ ಬ್ಯಾಂಗ್ ತಾಲತ್‌ನಲ್ಲಿ ಹುಡುಕಿದಾದ ವಿಶ್ವದಲ್ಲೇ ಅತಿ ಎತ್ತರದ ಗಣೇಶನ ಮೂರ್ತಿ ಇರುವುದು ಇಲ್ಲೇ ಎಂದು ಖಚಿತಪಡಿಸಿಕೊಂಡೆವು.
ಇಷ್ಟೇ ಅಲ್ಲ http://www.ganeshthailand.com ವೆಬ್‌ಸೈಟ್‌ನಲ್ಲಿ ಥ್ಯಾಯ್ಲೆಂಡ್‌ನಲ್ಲಿರುವ ಗಣೇಶನ ಮೂರ್ತಿಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ತಿಳಿದುಕೊಳ್ಳ ಬಹುದು ಮತ್ತು ಗಣೇಶನ ಪ್ರತಿಮೆಯ ಫೋಟೋ ಮತ್ತು ವೀಡಿಯೋವನ್ನು ವಿವಿಧ ಕೋನಗಳಲ್ಲಿ ನೋಡಬಹುದು .
ಇದರಿಂದ ಸಾಬೀತಾಗಿದ್ದೇನೆಂದರೆ ವಿಶ್ವದ ಅತಿ ಎತ್ತರದ ಗಣೇಶನ ಪ್ರತಿಮೆ ಥ್ಯಾಯ್ಲಾಂಡ್‌ನಲ್ಲಿದೆ, ಇಂಡೋನೇಷ್ಯಾದಲ್ಲಿ ಅಲ್ಲ.