ಫ್ಯಾಕ್ಟ್‌ಚೆಕ್‌: ಭಾರತದದ ವಿರುದ್ದ ಮಾತನಾಡುತ್ತಿರುವ ಮಕ್ಕಳು ಪಾಕಿಸ್ತಾನದವರು ಭಾರತದವರಲ್ಲ

ಭಾರತದದ ವಿರುದ್ದ ಮಾತನಾಡುತ್ತಿರುವ ಮಕ್ಕಳು ಪಾಕಿಸ್ತಾನದವರು ಭಾರತದವರಲ್ಲ

Update: 2024-11-09 06:00 GMT

children speaking against India

ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಇಬ್ಬರು ಮಕ್ಕಳು ರಿಪೋರ್ಟರ್‌ ಒಬ್ಬರ ಜೊತೆ ಮಾತನಾಡುತ್ತಿರುವುದನ್ನು ನೋಡಬಹುದು. ವಿಡಿಯೋದಲ್ಲಿ ಮುಸ್ಲಿಂ ಹುಡುಗನೊಬ್ಬ ವರದಿಗಾರನೊಂದಿಗೆ ಭಾರತದ ವಿರುದ್ದ ಮಾತನಾಡುತ್ತಿರುವುದನ್ನು ಕಾಣಬಹುದು. ವಿಡಿಯೋದಲ್ಲಿ ಮುಸ್ಲಿಂ ಹುಡುಗರಿಬ್ಬರು ʼಭಾರತೀಯರು ಒಂದು ಖಾಲದಲ್ಲಿ ಇದ್ದರು ಎನ್ನುವ ಹಾಗೆ ಮಾಡುತ್ತೇವೆ. ದೇವರು ಬಯಸಿದರೆ ಕೇವಲ ಆರು ತಿಂಗಳಲ್ಲಿ ಭಾರತವನ್ನು ನಿರ್ಮೂಲ ಮಾಡುತ್ತಾರೆ. ಭಾರತೀಯರು ನಮಗೆ ಏನೂ ಕೆಟ್ಟದು ಮಾಡಲಾಗುವುದಿಲ್ಲ" ಎಂದು ಹೇಳುವುದನ್ನು ಕಾಣಬಹುದು.

ʼಮಲ್ಲಿಕಾರ್ಜುನ N1986ʼ ಎಂಬ ಎಕ್ಸ್‌ ಖಾತೆದಾರ ತನ್ನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಂಡು "Indian Madarsa students training by Mulla's. ಇಸ್ಲಾಂ ಮುಸ್ಲಿಂ ಇದರ ಕರಾಳ ಸತ್ಯ. ಇಡೀ ಪ್ರಪಂಚದಲ್ಲಿ ಇವರು ನೆಮ್ಮದಿಯಿಂದ ಇರೋದಿಲ್ಲ. ನೆಮ್ಮದಿಯಾಗಿ ಇರುವವರನ್ನು ನೆಮ್ಮದಿಯಾಗಿ ಬದುಕಲು ಬಿಡುವುದಿಲ್ಲ. ಇಸ್ಲಾಮಿನ ಮುಸ್ಲಿಮೀನ ಕರಾಳ ಸತ್ಯ ಇದೆ" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


ನವಂಬರ್‌ 4, 2024ರಂದು ʼತ್ರಿನೇತ್ರ ಸೂತ್ರಧಾರʼ ಎಂಬ ಫೇಸ್‌ಬುಕ್‌ ಖಾತೆದಾರ ಇದೇ ವಿಡಿಯೋವನ್ನು ಶೇರ್‌ ಮಾಡಿ "ಈಗ ಅರ್ಥವಾಯಿತ ಮದ್ರಸಾಗಳಲ್ಲಿ ನೀಡುತ್ತಿರುವ ಶಿಕ್ಷಣದ ಮಹತ್ವ ಏನಂತ! ಇನ್ನೂ ಮಕ್ಕಳವು" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ

Full View

ಹಿಂದೂತ್ವ ಸಪೋರ್ಟ್‌ ಎಂಬ ಯೂಟ್ಯೂಬ್‌ ಖಾತೆಯಲ್ಲಿ ʼआज मदरसे का ज्ञान भी देख लोʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಶೇರ್‌ ಮಾಡಿದ್ದಾರೆ

Full View


ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್‌ ಆದ ವಿಡಿಯೋದಲ್ಲಿ ಕಾಣುವ ಮಕ್ಕಳು ಪಾಕಿಸ್ತಾನದವರು, ವಿಡಿಯೋದಲ್ಲಿ ಕಾಣುವ ಮಕ್ಕಳು ಭಾರತದವರಲ್ಲ.

ನಾವು ವೈರಲ್‌ ಆದ ಸುದ್ದಿಯ ಕುರಿತು ನಿಜಾಂಶವನ್ನು ತಿಳಿಯಲು ವಿಡಿಯೋದಲ್ಲಿ ಕಾಣುವ ಕೆಲವು ಕೀಫ್ರೇಮ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹಾಗೆ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ʼD7 ನ್ಯೂಸ್‌ʼ ಮೈಕ್‌ನ್ನು ಗಮನಿಸಿದೆವು. ಇದನ್ನೇ ಆಧಾರವಾಗಿ ಮಾಡಿಕೊಂಡು ನಾವು ಹುಡುಕಾಟ ನಡೆಸಿದೆವು. ಗೂಗಲ್‌ನಲ್ಲಿ ಡD7 ನ್ಯೂಸ್‌ ಎಂಬ ಕೀವರ್ಡ್‌ನ್ನು ಉಪಯೋಗಿಸಿ ಹುಡುಕಾಟ ನಡೆಸಿದಾಗ ನಮಗೆ D7 NEWS PAKISTAN OFFICIAL ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ವೈರಲ್‌ ಆದ ವಿಡಿಯೋ ಅಪ್‌ಲೋಡ್‌ ಮಾಡಿರುವುದನ್ನು ಕಂಡುಕೊಂಡೆವು.

ಆಗಸ್ಟ್‌ 7, 2024ರಂದು ʼD7 NEWS PAKISTAN OFFICIALʼ ಯೂಟ್ಯೂಬ್‌ ಚಾನೆಲ್‌ನಲ್ಲಿ ʼ5 SALON TAK HAM MUSLIM KA KHATMA KAR DENGE | VIRAL VIDEO | D7NEWSPAKISTAN | Yogi Adityanath VS Dr Zakir Naik ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದರು. 12 ನಿಮಿಷ ಸುದೀರ್ಘ ಆವೃತ್ತಿಯಲ್ಲಿ ವೈರಲ್‌ ಆದ ವಿಡಿಯೋವನ್ನು 11.02 - 12.49 ನಿಮಿಷದಲ್ಲಿ ನೋಡಬಹುದು. ವಿಡಿಯೋವನ್ನು ಗಮನಿಸಿದರೆ ವರದಿಗಾರ ಜನರೊಂದಿಗೆ ಮಾತನಾಡುತ್ತಿರುವುದನ್ನು ನೋಡಬಹುದು. ವರದಿಗಾರ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಹೇಳಿಕೆಗೆ ಸಂಬಂಧಿಸಿ ವರದಿಗಾರ ಜನರೊಂದಿಗೆ ಮಾತನಾಡುತ್ತಿರುವುದನ್ನು ನೋಡಬಹುದು. ವರದಿಗಾರ ಜನರ ಬಳಿ ಬಂದು "ಯೋಗಿ ಆದಿತ್ಯಾನಾಥ್‌ ಐದು ವರ್ಷಗಳಲ್ಲಿ ನಾವು ಭಾರತದ ಎಲ್ಲಾ ಮುಸ್ಲೀಮರನ್ನು ನಾಶಪಡಿಸುತ್ತೇವೆ ಎಂದು ಹೇಳಿದ್ದಾರೆ. ಮುಸ್ಲಿಮರನ್ನು ನಿರ್ಮೂಲ ಮಾಡಲು ಸಾಧ್ಯವಾ? ಎಂಬ ಪ್ರಶ್ನೆಯನ್ನು ವರದಿಗಾರ ಕೇಳುವ ಪ್ರಶ್ನೆಗಳಿಗೆ ಜನರು ತಮ್ಮ ಪ್ರತಿಕ್ರಿಯೆಯನ್ನು ನೀಡಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದು. ಈ ಯೂಟ್ಯೂಬ್‌ ಚಾನೆಲ್‌ನ ಹೆಸರನ್ನು ನೋಡಿದರೆ ಗೊತ್ತಾಗುತ್ತದೆ ಈ ಚಾನೆಲ್‌ ಪಾಕಿಸ್ತಾನದದ್ದು ಎಂದು ಗೊತ್ತಾಗುತ್ತದೆ.

Full View

ನಾವು ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ವಾಸ್ತವವಾಗಿ ಯೋಗಿ ಆದಿತ್ಯಾನಾಥ್‌ ಮುಸ್ಲಿಂ ಸಮುದಾಯದವರನ್ನು ತೊಡೆದು ಹಾಕುತ್ತೇವೆ ಎಂದು ಹೇಳಿದ್ದಾರಾ ಎಂದು ಹುಡುಕಿದೆವು. ಹುಡುಕಾಟದಲ್ಲಿ ನಮಗೆ ಯಾವುದೇ ವರದಿಗಳಾಗಲಿ, ಮಾಹಿತಿಯಾಗಲಿ ನಮಗೆ ಸಿಗಲಿಲ್ಲ.

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್‌ ಆದ ವಿಡಿಯೋದಲ್ಲಿ ಕಾಣುವ ಮಕ್ಕಳು ಪಾಕಿಸ್ತಾನದವರು, ವಿಡಿಯೋದಲ್ಲಿ ಕಾಣುವ ಮಕ್ಕಳು ಭಾರತದವರಲ್ಲ.

Claim :  ಭಾರತದದ ವಿರುದ್ದ ಮಾತನಾಡುತ್ತಿರುವ ಮಕ್ಕಳು ಪಾಕಿಸ್ತಾನದವರು ಭಾರತದವರಲ್ಲ
Claimed By :  Facebook user
Fact Check :  False
Tags:    

Similar News