ಫ್ಯಾಕ್ಟ್‌ಚೆಕ್‌: ಗೋವಾ-ಮಂಗಳೂರು ರಸ್ತೆಯಲ್ಲಿ ಅನಿಲ ಟ್ಯಾಂಕರ್‌ ಸ್ಪೋಟಗೊಂಡಿದೆ ಎಂದು ಬ್ರೆಝಿಲ್‌ನ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

ಗೋವಾ-ಮಂಗಳೂರು ರಸ್ತೆಯಲ್ಲಿ ಅನಿಲ ಟ್ಯಾಂಕರ್‌ ಸ್ಪೋಟಗೊಂಡಿದೆ ಎಂದು ಬ್ರೆಝಿಲ್‌ನ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.

Update: 2024-08-24 16:09 GMT

Goa-Mangalore Road

ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಅಬ್ಬರ ಆರಂಭವಾದಾಗಿನಿಂದ ಪದೇ ಪದೇ ಗುಡ್ಡಕುಸಿತವಾಗುತ್ತಿದೆ. ಅಂಕೋಲಾ ತಾಲೂಕಿನ ಶಿರೂರು ಬಳಿಯಿರುವ ಮಂಗಳೂರು-ಗೋವಾ ಹೆದ್ದಾರಿಗೆ ಹೊಂದಿಕೊಂಡಿರುವಂತಹ 125ಕ್ಕೂ ಹೆಚ್ಚು ಅಡಿ ಎತ್ತರದ ಗುಡ್ಡ ಕುಸಿದು ಅಲ್ಲಿನ ಜನ ಜೀವನ ಅಸ್ಥವ್ಯಸ್ಥವಾಗಿತ್ತು. ಅಷ್ಟೇ ಅಲ್ಲ ಈ ಮಳೆಯ ನಡುವೆ, ಗುಡ್ಡಕುಸಿತದ ತೀವ್ರತೆಗೆ ಕಲ್ಲು, ಮಣ್ಣುಗಳ ರಾಶಿ ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಅನಿಲ ಟ್ಯಾಂಕರ್‌ವೊಂದರ ಸಮೇತ ಎದುರಿಗೆ ಸಿಕ್ಕ ಎಲ್ಲವನ್ನೂ ನೇರವಾಗಿ ರಸ್ತೆಯ ಇನ್ನೊಂದು ಭಾಗದಲ್ಲಿದ್ದ ಗಂಗಾವಳಿ ನದಿಯ ಅರ್ಧ ಭಾಗದವರೆಗೆ ತಳ್ಳಿಕೊಂಡು ಹೋಗಿ ಎಸೆದಿತ್ತು. ಇದರಿಂದ ಅನಿಲ ಟ್ಯಾಂಕರ್‌ವೊಂದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿತ್ತು. ಇದರಿಂದ ಅನಿಲ ಟ್ಯಾಂಕರ್‌ವೊಂದು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದೆ. ಮಣ್ಣು, ಕಲ್ಲಿನ ರಾಶಿ ಅರ್ಧ ನದಿವರೆಗೆ ರಾಶಿ ಬಿದ್ದಿದ್ದರಿಂದ ನದಿಯ ಇನ್ನೊಂದು ಭಾಗಕ್ಕೆ ಸುನಾಮಿಯ ರೀತಿ ನೀರು ನುಗ್ಗಿದ್ದು, ಉಳುವರೆ ಗ್ರಾಮದ ಐದು ಮನೆಗಳಿಗೆ ಹಾನಿಯಾಗಿದೆ. ಈ ವೇಳೆ ಮನೆಯಲ್ಲಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, 16 ಮಂದಿ ಗಾಯಗೊಂಡಿದ್ದರು ಎಂದು ಅಧಿಕಾರಿಗಳು ಸಹ ತಿಳಿಸಿದ್ದರು.

ಈ ಮಧ್ಯೆ ಘಟನೆಯಲ್ಲಿ ನಾಪತ್ತೆಯಾಗಿದ್ದವರ ಪೈಕಿ ನಾಲ್ವರ ಶವ ಗೋಕರ್ಣ ಸಮೀಪ ಸಮುದ್ರದಲ್ಲಿ ಪತ್ತೆಯಾಗಿದೆ. ಈ ವೇಳೆ ಸಮುದ್ರದಲ್ಲಿ ಕೊಚ್ಚಿಕೊಂಡು ಹೋಗಿರುವ ಅನಿಲದ ಟ್ಯಾಂಕರ್‌ನಿಂದಾಗಿ ನದಿ ತೀರದಲ್ಲಿ ಅನಿಲ ಸೋರಿಕೆಯ ಆತಂಕ ವ್ಯಕ್ತವಾಗಿತ್ತು. 

ಇದರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಗೋವಾ-ಮಂಗಳೂರು ಹೆದ್ದಾರಿಗೆ ಸಂಬಂಧಿಸಿದ ವಿಡಿಯೋವೊಂದು ಹರಿದಾಡುತ್ತಿದೆ. ವಿಡಿಯೋವನ್ನು ಗಮನಿಸಿದರೆ, ಹೆದ್ದಾರಿಯಲ್ಲಿ ಗ್ಯಾಸ್‌ ಟ್ಯಾಂಕರ್‌ವೊಂಡು ಸ್ಪೋಟಗೊಂಡಿರುವುದನ್ನು ನೋಡಬಹುದು. ವಿಡಿಯೋವಿನಲ್ಲಿ ಗೋವಾ ಟು ಮಂಗಳೂರು ರಸ್ತೆಯಲ್ಲಿ ಗ್ಯಾಸ್‌ ಟ್ರಕ್‌ ಭಾರಿ ದುರಂತ ಎಂದು ಬರೆದಿರುವುದನ್ನು ನೋಡಬಹುದು.


ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋದಲ್ಲಿ ಹೇಳಿದ ಹಾಗೆ ಅನಿಲ ಟ್ಯಾಂಕರ್‌ ಸ್ಪೋಟಗೊಂಡಿರುವ ದೃಶ್ಯ ಗೋವಾ- ಮಂಗಳೂರು ಹೆದ್ದಾರಿಗೆ ಸಂಬಂಧಿಸಿದ್ದಲ್ಲ, ಬದಲಿಗೆ ಮೂಲ ವಿಡಿಯೋ ಬಿಝಿಲ್‌ನ ಪ್ಯಾರಾ ರಸ್ತೆಯಲ್ಲಿ ಸಂಭವಿಸಿದ್ದು.

ವೈರಲ್‌ ಸುದ್ದಿಯಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವೈರಲ್‌ ಆದ ಫೋಟೋವನ್ನು ಗೂಗಲ್‌ ರಿವರ್ಸ್‌ ಸರ್ಚ್‌ ಮೂಲಕ ಪರಿಶೀಲಿಸಿದಾಗ ನಮಗೆ ಜುಲೈ 4,2024ರಲ್ಲಿ ಉಫುಕ್‌ ನ್ಯೂಸ್‌ ಎಕ್ಸ್‌ ಖಾತೆಯಲ್ಲಿ ಇದೇ ವಿಡಿಯೋವನ್ನು ನಾವು ನೋಡಬಹುದು. ವಿಡಿಯೋವಿಗೆ ಇಂಗ್ಲೀಷ್‌ನಲ್ಲಿ ಶೀರ್ಷಿಕೆಯಾಗಿ, #WATCH : Live footage of a tanker explodes in the interior of Pará, Brazil. #Brazil #TankerExplode #Explosion #Fire ಎಂದು ಬರೆದು ಪೋಸ್ಟ್‌ ಮಾಡಲಾಗಿತ್ತು.

ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ನೋಡಿ: ಬ್ರೆಝಿಲ್‌ನ ಪ್ಯಾರಾ ಪ್ರದೇಶದಲ್ಲಿ ಟ್ಯಾಂಕರ್ ಸ್ಫೋಟಗೊಂಡ ನೇರಾ ದೃಶ್ಯಾವಳಿ.#ಬ್ರೆಝಿಲ್‌ #ಟ್ಯಾಂಕರ್‌ಸ್ಪೋಟ #ಸ್ಪೋಟ #ಬೆಂಕಿ ಎಂದು ಬರೆದು ಪೋಸ್ಟ್‌ ಮಾಡಿರುವುದನ್ನು ನಾವು ಗಮನಿಸಬಹುದು.

ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ಗೂಗಲ್‌ನಲ್ಲಿ ಕೀರ್ಡ್‌ನ ಮೂಲಕ ಹುಡುಕಾಟ ನಡೆಸಿದಾಗ ನಮಗೆ ಕೆಲವು ಮಾಧ್ಯಮ ಸಂಸ್ಥೆಗಳು ಮಾಡಿರುವ ವರಿಗಳು ಲಭ್ಯವಾದವು. "ಎಲ್‌ ಡೈರಿಯೋಮ್ಯಾಕ್ಸ್‌ ವೆಬ್‌ಸೈಟ್‌ನಲ್ಲಿ ಜುಲೈ 4, 2024ರಂದು ಸ್ಪ್ಯಾನಿಷ್‌ನಲ್ಲಿ ವರದಿಯಾಗಿರುವುದನ್ನು ನಾವು ನೋಡಬಹುದು. ವರದಿಯಲ್ಲಿ ಬ್ರೆಜಿಲ್‌ನ ಪ್ಯಾರಾ ರಾಜ್ಯದಲ್ಲಿ ಪ್ಯಾರಾಗೊಮಿನಾಸ್ ಮತ್ತು ಉಲಿಯಾನೊಪೊಲಿಸ್ ನಡುವಿನ ಹೆದ್ದಾರಿಯಲ್ಲಿ ಅನಿಲ ಸಾಗಿಸುವ ಪೈಪ್ ಸ್ಫೋಟದಲ್ಲಿ ಆರು ಜನರು ಗಾಯಗೊಂಡಿದ್ದಾರೆ. ಕ್ಯಾಮರಾಮನ್, ವರದಿಗಾರ ಮತ್ತು ತಂತ್ರಜ್ಞರು ಘಟನೆಯನ್ನು ವರದಿ ಮಾಡಲು ಅಲ್ಲಿಗೆ ಹೋಗಿದ್ದರು. ಸ್ಫೋಟಕ್ಕೆ ಕೆಲವೇ ಕ್ಷಣಗಳ ಮುನ್ನ ಅದೇ ಪ್ರದೇಶದಲ್ಲಿ, ವಾಹನವೊಂದು ಅಪಘಾತಕ್ಕೀಡಾಗಿತ್ತು ಎಂದು ವರದಿ ಮಾಡಿರುವುದನ್ನು ನಾವು ನೋಡಬಹುದು.

ಇದೇ ವಿಡಿಯೋವನ್ನು ಜುಲೈ,4 2024ರಂದು ರಿಯಾಲಿಡೇಡ್ಸ್‌ ವರದಿಯ ಪ್ರಕಾರ "ಉತ್ತರ ಬ್ರೆಜಿಲ್‌ನ ಪ್ಯಾರಾದ ಹೆದ್ದಾರಿಯಲ್ಲಿ ಅನಿಲ ಸಾಗಿಸುವ ಪೈಪ್‌ನ ಸ್ಫೋಟದಲ್ಲಿ, ಈವೆಂಟ್‌ನ್ನು ವರದಿ ಮಾಡಲು ಬಂದಿದ್ದ ಕ್ಯಾಮರಾಮನ್, ವರದಿಗಾರ ಮತ್ತು ತಂತ್ರಜ್ಞ ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ ಎಂದು ವರದಿ ಮಾಡಿರುವುದನ್ನು ನಾವು ನೋಡಬಹುದು.

ಇದರಿಂದ ಸಾಭೀತಾಗಿದ್ದೇನೆಂದರೆ, ಅನಿಲ ಸಾಗಿಸುವ ಟ್ಯಾಂಕರ್ ಸ್ಫೋಟಗೊಂಡ ಘನೆಯನ್ನು ನಡೆದಿದ್ದು ಉತ್ತರ ಬ್ರೆಜಿಲ್‌ನ ಪ್ಯಾರಾದ ಹೆದ್ದಾರಿಯಲ್ಲಿ, ಗೋವಾ-ಮಂಗಳೂರು ರಸ್ತೆಯದ್ದಲ್ಲ.

Claim :  ಗೋವಾ-ಮಂಗಳೂರು ರಸ್ತೆಯಲ್ಲಿ ಅನಿಲ ಟ್ಯಾಂಕರ್‌ ಸ್ಪೋಟಗೊಂಡಿದೆ ಎಂದು ಬ್ರೆಝಿಲ್‌ನ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
Claimed By :  whatsapp users
Fact Check :  False
Tags:    

Similar News