ಫ್ಯಾಕ್ಟ್‌ಚೆಕ್‌: ಅಮರಾವತಿ ರಾಜಧಾನಿ ನೀರಿನಲ್ಲಿ ಮುಳಿಗಿರುವ ಚಿತ್ರ ವೈರಲ್‌

ಅಮರಾವತಿ ರಾಜಧಾನಿ ನೀರಿನಲ್ಲಿ ಮುಳಿಗಿರುವ ಚಿತ್ರ ವೈರಲ್‌

Update: 2024-07-31 18:20 GMT

Amaravati

ಕಳೆದೊಂದು ವಾರದಿಂದ ಆಂಧ್ರಪ್ರದೇಶದ ಕೆಲವೆಡೆ ಭಾರಿ ಮಳೆಯಾಗುತ್ತಿದೆ. ಕರಾವಳಿಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದಾರೆ. ಹೀಗಾಗಿ ಹಲವು ಪ್ರದೇಶಗಳಲ್ಲಿ ಶಾಲಾ-ಕಾಲೇಜುಗಳನ್ನು ಸಹ ಮುಚ್ಚಲಾಗಿದೆ. ಉತ್ತರ ಆಂಧ್ರಪ್ರದೇಶ ಮತ್ತು ಗೋದಾವರಿ ಡೆಲ್ಟಾ ಪ್ರದೇಶದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಒಡಿಶಾ, ತೆಲಂಗಾಣ ಮತ್ತು ಮಹಾರಾಷ್ಟ್ರದ ಮೇಲ್ಭಾಗದ ಜಲಾನಯನ ಪ್ರದೇಶಗಳಿಂದ ಹೆಚ್ಚಿನ ನೀರು ಒಳಹರಿವು ಆಗುತ್ತಿರುವುದರಿಂದ ಗೋದಾವರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ.

ಹೀಗಾಗಿ ತಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗುವ ಹಲವು ದೃಶ್ಯಗಳು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಇದರ ನಡುವೆ, ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯಲ್ಲಿ ಪ್ರಸ್ತುತ ಪ್ರವಾಹ ಪರಿಸ್ಥಿತಿಯನ್ನು ತೋರಿಸುವ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ತನ್ನ ಸಾಮಾಜಿಕ ಖಾತೆಯಲ್ಲಿ “బాబు గారు కడుతున్న సింగపూర్ ఇప్పుడు స్విమ్మింగ్ పూల్ అయింది అందరు దానిలో దూకి ఎంజాయ్ చేయండి” ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ.

ಮತ್ತೊಬ್ಬ ಎಕ್ಸ್‌ ಬಳಕೆದಾರರು “amravati drainage , will anyone invest here?” ಎಂದು ಪೋಸ್ಟ್‌ ಮಾಡಿದ್ದಾರೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋ ಇತ್ತೀಚಿನದಲ್ಲ ಈ ವಿಡಿಯೋ 2019ರಿಂದ ಸಾಮಾಜಿಕ ಜಾಲತಾಣದಲ್ಲಿದೆ.

ನಾವು ಸುದ್ದಿಯಲ್ಲಿನ ಸತ್ಯಾಂಶವನ್ನು ತಿಳಿಯಲು ವೈರಲ್‌ ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮಾಡಿದೆವು. ಹುಡುಕಾಟದಲ್ಲಿ ನಮಗೆ ಈ ಚಿತ್ರವನ್ನು r/indiaspeaks ಎಂಬ ಖಾತೆಯಲ್ಲಿ ಈ ಫೋಟೋವನ್ನು ‘Situation in Amaravati (AP) after floods’ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು.

ಆಗಸ್ಟ್‌ 17,2019ರಂದು ಮತ್ತೊಂದು ಫೇಸ್‌ಬುಕ್‌ ಖಾತೆಯಲ್ಲಿ ಇದೇ ಫೋಟೋವನ್ನು ‘వరద వస్తే అమరావతి లో పరిస్థితి ఇలా ఉంటుంది' ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿತ್ತು.

Full View

ಇದೇ ಚಿತ್ರವನ್ನು ಹಲವಾರು ಸುದ್ದಿ ಮಾಧ್ಯಮಗಳು ಮತ್ತು ವೆಬ್‌ಸೈಟ್‌ಗಳು ತಮ್ಮ ಲೇಖನಗಳಲ್ಲಿ ಬಳಸಿಕೊಂಡಿರುವುದನ್ನು ನಾವು ಕಂಡುಕೊಂಡೆವು. 2022 ರ ಅಕ್ಟೋಬರ್ 6 ರಂದು teluguglobal.com ನಲ್ಲಿ ಅಮರಾವತಿಯ ಪ್ರವಾಹ ಪರಿಸ್ಥಿತಿಯನ್ನು ಚರ್ಚಿಸುವ ಲೇಖನದಲ್ಲೂ ಸಹ ನಾವು ಈ ಚಿತ್ರವನ್ನು ನೋಡಬಹುದು.

ಇದೇ ಚಿತ್ರವನ್ನು ಜನವರಿ 2020ರಲ್ಲಿ ಇನ್ನೊಬ್ಬ ಫೇಸ್‌ಬುಕ್ ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದರು.

Full View

ಹೀಗಾಗಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ವಿಡಿಯೋ ಇತ್ತೀಚಿನದಲ್ಲ 2019ರಿಂದ ಇಂಟರ್‌ನೆಟ್‌ನಲ್ಲಿ ಇರುವುದನ್ನು ನಾವು ನೋಡಬಹುದು.

Claim :  ಅಮರಾವತಿ ರಾಜಧಾನಿ ನೀರಿನಲ್ಲಿ ಮುಳಿಗಿರುವ ಚಿತ್ರ ವೈರಲ್‌
Claimed By :  Social Media Users
Fact Check :  False
Tags:    

Similar News