ಫ್ಯಾಕ್ಟ್‌ಚೆಕ್: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ನಟಿ ರಶ್ಮಿಕಾ ಮಂದಣ್ಣ ಅಲ್ಲ. ವೈರಲ್ ಆದ ವೀಡಿಯೋದಲ್ಲಿ ಯಾವುದೇ ಸತ್ಯಾಂಶವಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ನಟಿ ರಶ್ಮಿಕಾ ಮಂದಣ್ಣ ಅಲ್ಲ. ವೈರಲ್ ಆದ ವೀಡಿಯೋದಲ್ಲಿ ಯಾವುದೇ ಸತ್ಯಾಂಶವಲ್ಲ.
ನಟಿ ರಶ್ಮಿಕಾ ಮಂದಣ್ಣ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಆಗಿದೆ. ವೈರಲ್‌ಆದ ವೀಡಿಯೋದಲ್ಲಿ ಮಹಿಳೆಯೊಬ್ಬರು ಕಪ್ಪು ಬಣ್ಣದ ಉಡುಪನಲ್ಲಿ ಲಿಫ್ಟ್‌ಗೆ ಪ್ರವೇಶಿಸುವ ಮುನ್ನ ವೀಡಿಯೋ ಚಿತ್ರೀಕರಿಸುತ್ತಿದ್ದ ವ್ಯಕ್ತಿಗೆ ʼಹಾಯ್ʼ ಎಂದು ಹೇಳಿ ಲಿಫ್ಟ್‌ವಒಳಗೆ ಪ್ರವೇಶಿಸುವುದನ್ನು ಈ ವೀಡಿಯೋದಲ್ಲಿ ಕಾಣಬಹುದು. ಈ ವೀಡಿಯೋವನ್ನು ನೋಡಿದ ನೆಟಿಜನ್‌ವಇದು ರಶ್ಮಿಕಾ ಮಂದಣ್ಣನಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. “ಯೇ ರಶ್ಮಿಕಾ ಹೈ?? Crushmikaaaaa” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಲಾಗುತ್ತಿದೆ.
ಫ್ಯಾಕ್ಟ್‌ಚೆಕ್
ವೈರಲ್‌ಅದ ವೀಡಿಯೋ ನಟಿ ರಶ್ಮಿಕಾ ಮಂದಣ್ಣನದಲ್ಲ. ಈ ವಿಡಿಯೋವನ್ನು ಆರ್ಟಿಫಿಶಿಯಲ್‌ಇಂಟಲಿಜೆಂಟ್ಸ್ ಮೂಲಕ ಮಾಡಿರುವಂತಹ ವೀಡಿಯೋವಿದು.
ವೈರಲ್ ಆಗಿರುವ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಮಾಡಿರುವ ಬದಲಾವಣೆಗಳು ಸ್ಪಷ್ಟವಾಗಿ ತಿಳಿಯುತ್ತದೆ. ಈ ವೀಡಿಯೊದಲ್ಲಿ ಕಾಣುವ ಮೂರು ವಿಭಿನ್ನ ಫ್ರೇಮ್‌ಗಳನ್ನು ಕೆಳಗೆ ತೋರಿಸಿರುವ ಕೊಲಾಜ್‌ನಲ್ಲಿ ನೋಡಬಹುದು. ಮೊದಲ ಫ್ರೇಮ್‌ನಲ್ಲಿ ಹುಡುಗಿ ಲಿಫ್ಟ್‌ಗೆ ಪ್ರವೇಶಿಸುವ ಹುಡುಗಿಯ ಮುಖವು ಭಿನ್ನವಾಗಿದೆ. ಎರಡನೇ ಫ್ರೇಮ್‌ಮತ್ತು ಮೂರನೇ ಫ್ರೇಮ್‌ನಲ್ಲಿ ನೋಡುವುದಾದರೆ ಈ ಹುಡುಗಿಯ ಮುಖ ಹೋಗಿ ನಟಿ ರಶ್ಮಿಕಾ ಮಂದಣ್ಣನ ಮುಖವಾಗಿ ರೂಪಾಂತರಗೊಂಡಿರುತ್ತದೆ.
ನಮ್ಮ ತನಿಖೆಯಲ್ಲಿ ಕಂಡುಬಂದಿದ್ದು ಏನೆಂದರೆ ಈ ಡೀಪ್‌ಫೇಕ್‌ವೀಡಿಯೋವನ್ನು ಕೃತಕ ಮಾಧ್ಯಮವಾದ AI ಮೂಲಕ ಚಿತ್ರೀಕರಿಸಲಾಗಿದೆ. AI ಬಳಸಿಕೊಂಡು ಒಬ್ಬರ ಮುಖವನ್ನು ಇನ್ನೋಬ್ಬ ವ್ಯಕ್ತಿಯ ಫೋಟೋ ಅಥವಾ ವೀಡಿಯೋವಾಗಿ ಬದಲಾಯಿಸಬಹುದು.
ವೈರಲ್ ಆಗುತ್ತಿರುವ ವೀಡಿಯೋ ರಶ್ಮಿಕಾ ಮಂದಣ್ಣದಲ್ಲ ಬದಲಿದೆ ಬ್ರಿಟೀಷ್-ಇಂಡಿಯನ್‌ಇನ್ಫ್ಲೂಯನ್ಸ್‌ರ್‌ಆದ ಝರಾ ಪಟೇಲ್.ಈ ವೀಡಿಯೋವಿನ ಮೂಲವನ್ನು ತಿಳಿಯಲು ನಾವು ವೀಡಿಯೋವಿನಲ್ಲಿ ಬರುವ ಒಂದು ಫ್ರೇಮ್‌ನ ಸ್ಕ್ರೀನ್‌ಶಾಟ್‌ನ್ನು ತೆಗೆದು ರಿವರ್ಸ್‌ಇಮೇಜ್‌ಮೂಲಕ ಹುಡುಕಿದಾಗ ಮೂಲ ವೀಡಿಯೊ ಅಕ್ಟೋಬರ್9ರಂದು ʼzaarapatellll' ಎಂಬ Instagram ಖಾತೆಯಲ್ಲಿ ಅಪ್‌ಲೋಡ್‌ಮಾಡಿರುವುದನ್ನು ಕಂಡುಕೊಂಡೆವು.
ಇಷ್ಟೇ ಅಲ್ಲ ಖುದ್ದು ರಶ್ಮಿಕಾ ಮಂದಣ್ಣ ತನ್ನ X ಖಾತೆಯಲ್ಲಿ ಡೀಪ್‌ಫೇಕ್‌ವೀಡಿಯೋ ವೈರಲ್‌ಆದ ತಕ್ಷಣ ತಮ್ಮ ಕಳಕಳಿಯನ್ನು ವ್ಯಕ್ತಪಡಿಸಿದರು." ಇದನ್ನು ಹಂಚಿಕೊಳ್ಳಲು ನನಗೆ ತುಂಬಾ ಬೇಸರವಾಗಿದೆ, ಮತ್ತು ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ನನ್ನ ಡೀಫ್‌ಫೇಕ್‌ವೀಡಿಯೋವಿನ ಬಗ್ಗೆ ಮಾತನಾಡಬೇಕಾಗಿದೆ. ಇಂತಹ ಡೀಪ್‌ಫೇಕ್‌ವೀಡಿಯೋವಿನ ಮೂಲಕ ನನಗೆ ಮಾತ್ರವಲ್ಲ, ಪ್ರತಿ ಹೆಣ್ಣು ಮಕ್ಕಳೂ ಸಹ ಭಯಪಡುವ ಹಾಗೆ ಮಾಡಿದೆ. ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಇದೇ ವಿಡಿಯೋ ನನ್ನ ಶಾಲೆ ಅಥವಾ ಕಾಲೇಜಿನ ಸಮಯದಲ್ಲಿ ಹೊರಬಂದಿದ್ದರೆ ನನ್ನ ಮೇಲೆ ಯಾವ ರೀತಿ ಮಾನಸಿಕವಾಗಿ ಪ್ರಭಾವ ಉಂಟು ಮಾಡುತ್ತಿತ್ತೋ ಗೊತ್ತಿಲ್ಲ ಎಂಬ ಶೀರ್ಷಿಕೆಯನ್ನು ನೀಡಿ ಸೈದರಾ ಬಾದ್‌ಪೋಲೀಸ್‌ರನ್ನು ಟ್ಯಾಗ್‌ಮಾಡಿ ಕಾನೂನು ಕ್ರಮವನ್ನು ತೆಗೆದು ಕೊಳ್ಳಲು ಆಗ್ರಹಿಸಿದ್ದಾರೆ.
ಮತ್ತಷ್ಟು ಮಾಹಿತಿಯನ್ನು ಶೇಖರಿಸಲು ಈ ಕುರಿತು ನಾವು ಹುಡುಕಾಡಿದಾಗ ನಮಗೆ X ಖಾತೆದಾರ ಅಭಿಷೇಕ್ ಕುಮಾರ್ ಎನ್ನುವ ಜರ್ನಲಿಸ್ಟ್ ಮಾಡಿರುವ ಒಂದು ಪೋಸ್ಟ್‌ನ್ನು ಕಂಡುಕೊಂಡೆವು. ಅವರ ಪೋಸ್ಟ್‌ನಲ್ಲಿ ಫೇಕ್ ಕಂಟೆಂಟ್‌ನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕು ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಶೇರ್ ಮಾಡಿದ್ದರು. ಆ ವೀಡಿಯೋವಿಗೆ “There is an urgent need for a legal and regulatory framework to deal with deepfake in India. You might have seen this viral video of actress Rashmika Mandanna on Instagram. But wait, this is a deepfake video of Zara Patel. This thread contains the actual video.” ಎಂದು ಬರೆದುಕೊಂಡಿದ್ದರು.
ಇದೆ ಪೋಸ್ಟ್‌ನ್ನು ಅಮಿತಾಬ್ ಬಚ್ಚನ್ ಸಹ ತಮ್ಮ X ಖಾತೆಯಲ್ಲಿ ಶೇರ್ ಮಾಡಿ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ರಶ್ಮಿಕಾ ಮಂದಣ್ಣನ ಡೀಪ್ ಫೇಕ್ ವಿಡಿಯೋವಿಗೆ ಕೇಂದ್ರ ಮಂತ್ರಿ ರಾಜಿವ್ ಚಂದ್ರಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. ಸುಳ್ಳು ಮಾಹಿತಿ ಹರಡುವುದನ್ನು ತಡೆಯುವ ಜವಾಬ್ದಾರಿ ಸಾಮಾಜಿಕ ಜಾಲತಾಣಗಳ ಮೇಲಿದೆ, ಭಾರತೀಯರ ಭದ್ರತೆ ಮತ್ತು ವಿಶ್ವಾಸವನ್ನು ಹೆಚ್ಚಿಸಲು ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ ಎಂದು ತಮ್ಮ X ಖಾತೆಯ ಮೂಲಕ ವಿಷಯವನ್ನು ಹಂಚಿಕೊಂಡಿದ್ದರು.ಸಚಿವ ಚಂದ್ರಶೇಖರ್ ಹಲವು ಐಟಿ ಕಾಯ್ದೆಯ ನಿಬಂಧನೆಗಳನ್ನು ನೆಟಿಜನ್‌ಗಳೊಂದಿಗೆ ಹಂಚಿಕೊಂಂಡರು. ಸರ್ಕಾರ ಅಥವಾ ಬಳಕೆದಾರರಿಂದ ದೂರಿನ 36 ಗಂಟೆಗಳ ಒಳಗೆ ಸಂಸ್ಥೆಗಳು ಸುಳ್ಳು ಮಾಹಿತಿಯನ್ನು ತೆಗೆದುಹಾಕಬೇಕಾಗುತ್ತದೆ. ಡೀಪ್ ಫೇಕ್ ಟೆಕ್ನಾಲಜಿ ತುಂಬಾ ಅಪಾಯಕಾರಿಯಾಗಿದ್ದು, ಸುಳ್ಳು ಮಾಹಿತಿಯನ್ನು ಸುಲಭವಾಗಿ ಹರಡಬಹುದು. ಹೀಗಾಗಿ ಸಾಮಾಜಿಕ ಜಾಲತಾಣಗಳು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆಯೆಂದು ಎಂದು ಕೇಂದ್ರ ಮಂತ್ರಿ ಸೂಚಿಸಿದ್ದಾರೆ.
ಹೀಗಾಗಿ ವೈರಲ್ ಆದ ವೀಡಿಯೋದಲ್ಲಿ ಕಂಡುಬಂದಿರುವುದು ನಟಿ ರಶ್ಮಿಕಾ ಮಂದಣ್ಣ ಅಲ್ಲ, ಝರಾ ಪಟೇಲ್‌ನ ವೀಡಿಯೋವನ್ನು AI ಮುಖಾಂತರ ಮಾರ್ಫಿಂಗ್‌ಮಾಡಲಾಗಿದೆ. ವೈರಲ್‌ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ.