ಫ್ಯಾಕ್ಟ್ ಚೆಕ್: ಬುರ್ಜ್ ಖಲೀಫಾ ಸಮೀಪದಲ್ಲಿ ಕಂಡದ್ದು 3ಡಿ ಜಾಹೀರಾತಲ್ಲ, ಕಂಪ್ಯೂಟರ್ ಗ್ರಾಫಿಕ್
ಈ ವೈರಲ್ ವಿಡಿಯೋದಲ್ಲಿ ಕಾಣಿಸುತ್ತಿರುವುದು ಕಂಪ್ಯೂಟರ್ ಗ್ರಾಫಿಕ್ ಇಮೇಜರಿ ರೂಪದ ಜಾಹೀರಾತೇ ಹೊರತು, ದುಬೈನ ಬುರ್ಜ್ ಖಲೀಫಾ ಬಳಿ ಇರುವ 3ಡಿ ಜಾಹೀರಾತಲ್ಲ.
ಈ ವೈರಲ್ ವಿಡಿಯೋದಲ್ಲಿ ಕಾಣಿಸುತ್ತಿರುವುದು ಕಂಪ್ಯೂಟರ್ ಗ್ರಾಫಿಕ್ ಇಮೇಜರಿ ರೂಪದ ಜಾಹೀರಾತೇ ಹೊರತು, ದುಬೈನ ಬುರ್ಜ್ ಖಲೀಫಾ ಬಳಿ ಇರುವ 3ಡಿ ಜಾಹೀರಾತಲ್ಲ.
ದುಬೈನ ಅತಿ ಎತ್ತರದ ಕಟ್ಟಡದ ಬುರ್ಜ್ ಖಲೀಫಾ ಬಳಿಯಲ್ಲಿ ಈಜುಡುಗೆಯನ್ನು ಧರಿಸಿ, ನಸುಗೆಂಪು ಬಣ್ಣದ ಡಬ್ಬಿಯಿಂದ ದೈತ್ಯಕಾರಾದ ಬಾರ್ಬಿಹೊರಬರುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಇದು 3ಡಿ ಜಾಹೀರಾತು ಕ್ಯಾಂಪೇನ್‌ನ ಭಾಗವೆಂದು ಹೇಳಲಾಗಿದೆ.
ಈ ವಿಡಿಯೋಕ್ಕೆ"ಬುರ್ಜ್ ಖಲೀಫಾದ ಎದುರು 3ಡಿ ಜಾಹೀರಾತು" ಎಂದು ಅಡಿ ಶೀರ್ಷಿಕೆ ನೀಡಲಾಗಿದೆ.
ವಿಡಿಯೋ ಹಾದಿ ತಪ್ಪಿಸುವಂತಿದೆ. ವಿಡಿಯೋದಲ್ಲಿರುವುದು ಕಂಪ್ಯೂಟರ್ ಗ್ರಾಫೀಕ್ ಇಮೇಜರಿ ರೂಪದ ಜಾಹೀರಾತಾಗಿದ್ದು, ಹಾಲಿವುಡ್ ಚಿತ್ರ ' ಬಾರ್ಬಿ' ಪ್ರಚಾರಕ್ಕಾಗಿ ಐ ಸ್ಟುಡಿಯೋ ಸೃಷ್ಟಿಸಿದೆ. ಇದು ಬುರ್ಜ್ ಖಲೀಫಾ ಬಳಿ ನಿಲ್ಲಿಸಿರುವ 3ಡಿ ಜಾಹೀರಾತಲ್ಲ.
"3ಡಿ ಬಾರ್ಬಿ ಮೂವಿ ಅಡ್ವಟೈಸ್‌ಮೆಂಟ್" ಎಂಬ ಕೀ ವರ್ಡ್ ಬಳಸಿ ಹುಡುಕಾಟ ನಡೆಸಿದಾಗ ನಮಗೆ ಸಿಕ್ಕ ವಿಡಿಯೋಗಳು, ಕಂಪ್ಯೂಟರ್ ಗ್ರಾಫಿಕ್ ಇಮೇಜ್ ಎಂಬುದನ್ನು ಖಚಿತಪಡಿಸಿದವು.
ಎನ್‌ಡಿಟಿವಿ ವರದಿಯ ಪ್ರಕಾರ, ವಿಡಿಯೋದಲ್ಲಿ, ಬುರ್ಜ್ ಖಲೀಫಾ ಬಳಿ ಇರುವ ದೊಡ್ಡ ಪ್ಯಾಕ್‌ನಲ್ಲಿರುವ ದೈತ್ಯ ಬಾರ್ಬಿ ಗೊಂಬೆಯು ಕಂಪ್ಯೂಟರ್ ಗ್ರಾಫಿಕ್ ಆಗಿದ್ದು, ಇದನ್ನು ಐ ಸ್ಟುಡಿಯೋ ಸೃಷ್ಟಿಸಿದೆ. ಕಪ್ಪು ಬಿಳಿ ಪಟ್ಟಿರುವ ಸ್ಟ್ಯ್ರಾಪ್ ಇಲ್ಲದ ಜಂಪ್‌ಸೂಟ್, ಕಣ್ಣಿಗೆ ಕ್ಯಾಟ್ ಐ ಕನ್ನಡಕ ಮತ್ತು ಕಪ್ಪು ಹೀಲ್ಸ್ ಧರಿಸಿರುವ ಬಾರ್ಬಿ ತಾನಿರುವ ಪ್ಯಾಕ್‌ನಿಂದ ಹೊರಗೆ ಹೆಜ್ಜೆ ಇರಿಸುತ್ತಿರುವಂತೆ ವಿಡಿಯೋದಲ್ಲಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ 35 ಲಕ್ಷ ವ್ಯೂವ್‌ಗಳನ್ನು ಪಡೆದುಕೊಂಡು ಸಾಕಷ್ಟು ವೈರಲ್ ಆಗಿದೆ.
ಐ ಸ್ಟುಡಿಯೋ, ಯುಎಇ ಮತ್ತು ಕೆಎಸ್‌ಎಯಲ್ಲಿರುವ ಸೋಷಿಯಲ್ ಮೀಡಿಯಾ ಏಜೆನ್ಸಿಯಾಗಿದ್ದು, ಸೃಜನಶೀಲ ಬರವಣಿಗೆ, ಕಂಪ್ಯೂಟರ್ ಗ್ರಾಫಿಕ್ ಅನಿಮೇಷನ್, ಇಲ್ಲಸ್ಟ್ರೇಷನ್, ಪ್ರಚಾರ ತಂತ್ರ ರೂಪಿಸುವ ಮತ್ತು ಅಭಿವೃದ್ಧಿ ಪಡಿಸುವ ಕ್ಷೇತ್ರದಲ್ಲಿ ಗುರುತಿಸಿಕೊಂಡಿದೆ. ಜುಲೈ 20ರಂದು ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಇವರು ಪ್ರಕಟಿಸಿದ್ದು, ಲಕ್ಷಾಂತರ ಜನರನ್ನು ತಲುಪಿ ವೈರಲ್ ಆಯಿತು.
ಇಂಡಿಯಾ ಟುಡೆ ಕೂಡ, ಇದು ಐ ಸ್ಟುಡಿಯೊದವರು ಕಂಪ್ಯೂಟರ್ ಗ್ರಾಫಿಕ್ ಬಳಸಿ ಸೃಷ್ಟಿಸಿದ ವಿಡಿಯೋ ಎಂದು ಖಚಿತಪಡಿಸಿದೆ. ವರದಿಯ ಪ್ರಕಾರ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಬಾರ್ಬಿ ಗೊಂಬೆಯ ಬಿಡುಗಡೆಯು ವಿಳಂಬವಾಗಿ, ಆಗಸ್ಟ್ 31ಕ್ಕೆ ನಿಗದಿಯಾಗಿದೆ. ಬಾರ್ಬಿ ಚಿತ್ರದ ಮಾರ್ಕೆಂಟಿಂಗ್ ತಂಡವು ಚಿತ್ರದ ಬಗೆಗಿನ ಕುತೂಹಲವನ್ನು ಬಿಡುಗಡೆಯ ದಿನದವರೆಗೆ ಉಳಿಸಲು ಈ ಜಾಹೀರಾತು ರೂಪಿಸಿದೆ. ಜನರೂ ಈ ಅನನ್ಯವಾದ ಜಾಹೀರಾತನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದು, ಬಾರ್ಬಿ ಮಾರ್ಕೆಂಟಿಂಗ್ ತಂಡವು ಪ್ರಶಂಸೆಗೆ ಅರ್ಹ ಎದು ಕಮೆಂಟ್ ಮಾಡಿದ್ದಾರೆ.
ಸ್ಕೈ ನ್ಯೂಸ್ ಕೂಡ ವಿಡಿಯೋವನ್ನು, "ದುಬೈನ ಬುರ್ಜ ಖಲೀಫಾ ಬಳಿ ಕಂಪ್ಯೂಟರ್ ಗ್ರಾಫಿಕ್ ನಿಂದ ಮಾಡಿದ ದೈತ್ಯ ಬಾರ್ಬಿ" ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿದೆ.
ಹಾಗಾಗಿ ವೈರಲ್ ವಿಡಿಯೋದಲ್ಲಿರುವುದು ಹಾಲಿವುಡ್ ಬಾರ್ಬಿ ಚಿತ್ರದ ಪ್ರಚಾರಕ್ಕಾಗಿ ಕಂಪ್ಯೂಟರ್ ಗ್ರಾಫಿಕ್ ಬಳಸಿ ರೂಪಿಸಿದ ಜಾಹೀರಾತೇ ಹೊರತು, 3ಡಿ ಜಾಹೀರಾತಲ್ಲ. ವಿಡಿಯೋ ಹಾದಿ ತಪ್ಪಿಸುವಂತಿದೆ.