ಫ್ಯಾಕ್ಟ್‌ಚೆಕ್‌: ಉದ್ಯಮಿ ರತನ್‌ ಟಾಟಾರವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ.

ಉದ್ಯಮಿ ರತನ್‌ ಟಾಟಾರವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ.

Update: 2024-10-08 04:30 GMT

Ratan Tata

ರತನ್ ಟಾಟಾ ಭಾರತದಲ್ಲಿ ಈ ಹೆಸರನ್ನು ಕೇಳದ ವ್ಯಕ್ತಿಯೇ ಇಲ್ಲ ಎನ್ನಬಹುದು. ಅನೇಕ ಉದ್ಯಮಿಗಳಿಗೆ ಟಾಟಾರವರ ವ್ಯಕ್ತಿತ್ವ ಮತ್ತು ಸಾಧನೆ ಸ್ಫೂರ್ತಿದಾಯಕ. ರತನ್‌ ಟಾಟಾರವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಯಾವ ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತಾ ಇಂದಿನ ಯುವ ಜನತೆಗೆ ದೊಡ್ಡ ಸ್ಫೂರ್ತಿಯಾಗಿದ್ದಾರೆ. ಭಾರತದಲ್ಲಿನ ಅಚ್ಚುಮೆಚ್ಚಿನ ಉದ್ಯಮಿಗಳಲ್ಲಿ ರತನ್ ಟಾಟಾ ಕೂಡ ಒಬ್ಬರು. ರತನ್‌ರವರ ವಿನಯತೆ ಮತ್ತು ನಮ್ರತಾ ಗುಣಗಳು ಪ್ರತಿಯೊಬ್ಬರ ಮನಸ್ಸು ಮುಟ್ಟುತ್ತದೆ. 1991 ರಲ್ಲಿ ಜೆಆರ್‌ಡಿ ಟಾಟಾ ತನ್ನ ಸ್ಥಾನದಿಂದ ಕೆಳಗಿಳಿದ ನಂತರ ರತನ್ ಟಾಟಾರವರು ಟಾಟಾ ಸನ್ಸ್‌ನ ಅಧಿಕಾರವನ್ನು ವಹಿಸಿಕೊಂಡಿದ್ದರು. 2016-17ರ ಮಧ್ಯೆ ಕೆಲವು ತಿಂಗಳ ಕಾಲ ತಾತ್ಕಾಲಿಕವಾಗಿ ಆ ಹುದ್ದೆಯಲ್ಲಿದ್ದರು. ಇದೀಗ ಎನ್ ಚಂದ್ರಶೇಖರನ್ ಅವರು ಟಾಟಾ ಸನ್ಸ್ ಛೇರ್ಮನ್ ಆಗಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ರತನ್‌ ಟಾಟಾರವರಿಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ.

ಅಕ್ಟೋಬರ್‌ 07, 2024ರಂದು ʼಜಸ್ಟ್‌ ಕನ್ನಡʼ ಕನ್ನಡ ವೆಬ್‌ಸೈಟ್‌ನಲ್ಲಿ "ಉದ್ಯಮಿ ರತನ್ ಟಾಟಾ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು" ಎಂಬ ಹೆಡ್‌ಲೈನ್‌ನೊಂದಿಗೆ ವರದಿಯೊಂದನ್ನು ನಾವು ಕಂಡುಕೊಂಡೆವು. ವರದಿಯಲ್ಲಿ, ಖ್ಯಾತ ಉದ್ಯಮಿ ರತನ್ ಟಾಟಾರವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ, ಅವರನ್ನು ಮುಂಬೈನ ಬೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಪಿ ಕಡಿಮೆಯಾಗಿದ್ದರಿಂದ ರತನ್ ಟಾಟಾರನ್ನು ಬೆಳಗ್ಗೆ 12.30am ರಿಂದ 1.00am ರ ನಡುವೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಮೂಲಗಳು ತಿಳಿಸಿವೆ. ಖ್ಯಾತ ಹೃದ್ರೋಗ ತಜ್ಞ ಡಾ.ಶಾರುಖ್ ಆಸ್ಪಿ ಗೋಲ್ವಾಲಾ ನೇತೃತ್ವದ ತಜ್ಞರ ತಂಡವು ಉದ್ಯಮಿ ರತನ್ ಟಾಟಾ ಅವರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.


ಎಎನ್‌ಐ ಕನ್ನಡ ವೆಬ್‌ಸೈಟ್‌ನಲ್ಲೂ ಸಹ "BREAKING.. ಉದ್ಯಮಿ ರತನ್ ಟಾಟಾ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು" ಎಂಬ ಶೀರ್ಷಿಕೆಯೊಂದಿಗೆ ವರದಿಯಾಗಿದೆ. ಈ ವರದಿಯಲ್ಲಿ "ರತನ್ ಟಾಟಾ ಲೋ ಬಿಪಿಯಿಂದ ಬಳಲುತ್ತಿದ್ದರು, ಹೀಗಾಗಿ ಟಾಟಾರನ್ನು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ರತನ್‌ ಟಾಟಾ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶೀಘ್ರವೇ ಅವರು ಗುಣಮುಖರಾಗಲಿ ಅಂತ ಭಾರತೀಯರು ಪ್ರಾರ್ಥಿಸುತ್ತಿದ್ದಾರೆ" ಎಂದು ವರದಿಯಾಗಿರುವುದನ್ನು ನಾವು ನೋಡಬಹುದು


ಅಕ್ಟೋಬರ್‌ 7, 2024ರಂದು ʼಲಾಸ್ಟ್‌ಬೆಂಚರ್ಸ್‌ʼ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ "Ratan Tata was rushed to the hospital at around 12.30-1am in a critical condition. His blood pressure had drastically fallen. He had to be immediately admitted to the ICU, where a team of intensivists, under the leadership of well-known cardiologist Dr Sharukh Aspi Golwalla, is monitoring his condition." ಎಂಬ ಶೀರ್ಷಿಕೆಯೊಂದಿಗೆ ಪೊಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಲೋ ಬಿಪಿಯೊಂದ ಬಳಲುತ್ತಿದ್ದ ರತನ್‌ಟಾಟಾರನ್ನು ಮುಂಜಾನೆ 12.30- 1.00am ನಡುವೆ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು. ದಾಖಲಿಸಿದ ಕೂಡಲೇ ಟಾಟಾರನ್ನು ಐಸಿಯುಗೆ ಶಿಪ್ಟ್‌ ಮಾಡಿ ಹೃದ್ರೋಗ ತಜ್ಞರ ತಂಡವೊಂದು ರತನ್‌ ಟಾಟಾರವರ ಆರೋಗ್ಯದ ತಪಾಸಣೆ ಮಾಡುತ್ತಿದ್ದಾರೆ" ಎಂದು ಬರೆದಿರುವುದನ್ನು ನೋಡಬಹುದು.

Full View 

ಇಂಡಿಯಾ ಟುಡೆ ಯೂಟ್ಯೂಬ್‌ ಚಾನೆಲ್‌ನಲ್ಲಿ "Ratan Tata Admitted To Mumbai's Breach Candy Hospital Late At Night | India Today News" ಎಂಬ ಶೀರ್ಷಿಕೆಯೊಂದಿಗೆ ಇರುವ ವಿಡಿಯೋವನ್ನು ನೋಡಬಹುದು

Full View 

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ನೋಡುವುದಾದರೆ, ರತನ್ ಟಾಟಾರವರು ವಯೋಸಹಜ ವೈದ್ಯಕೀಯ ತಪಾಸಣೆಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ʼಆಸ್ಪತ್ರೆಗೆ ದಾಖಲಾದ ರತನ್‌ ಟಾಟಾʼ ಎಂಬ ಕೀವರ್ಡ್‌ನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ರತನ್‌ ಟಾಟಾರವರೇ ಖುದ್ದಾಗಿ ಅವರ ಎಕ್ಸ್‌ ಖಾತೆಯಲ್ಲಿ ತನ್ನ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ರತನ್‌ ಟಾಟಾರವರು ತಮ್ಮ ಪೋಸ್ಟ್‌ನಲ್ಲಿ "am aware of recent rumors circulating regarding my health and want to assure everyone that these claims are unfounded. I am currently undergoing medical check-ups due to my age and related medical conditions. There is no cause for concern. I remain in good spirits and request that the public and media respect refrain from spreading misinformation. Sincerely, Ratan N Tata" ಎಂದು ಪೋಸ್ಟ್‌ನಲ್ಲಿ ಬರೆದು ಹಂಚಿಕೊಂಡಿದ್ದಾರೆ

ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼನನ್ನ ಆರೋಗ್ಯದ ಬಗ್ಗೆ ಸಾಮಾಜಿಕ ಮಾಧ್ಯಗಳಲ್ಲಿ ವದಂತಿಗಳು ಹಬ್ಬಿರುವುದು ನನಗೆ ಗೊತ್ತಾಗಿದೆ. ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಲು ಬಯಸುತ್ತೇನೆ. ನನ್ನ ಆಸ್ಪತ್ರೆಗೆ ವಯೋಸಹಜ ವೈದ್ಯಕೀಯ ಸಮಸ್ಯೆಗಳ ತಪಾಸಣೆಗಾಗಿ ಬಂದಿರುವುದು. ನಾನು ಆರೋಗ್ಯವಾಗಿದ್ದೇನೆ , ಯಾರೂ ಆತಂಕ ಪಡಬೇಡಿ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲವು ಮಾದ್ಯಮಗಳು ಸುಳ್ಳು ಮಾಹಿತಿಯನ್ನು ಹರಡದಂತೆ ಎಚ್ಚರವಹಿಸಬೇಕೆಂದು ಕೋರುತ್ತೇನೆ,’ ಎಂದು ರತನ್ ಟಾಟಾ ಪೋಸ್ಟ್‌ ಮಾಡಿದ್ದಾರೆ.

ಕನ್ನಡ ಮಾಧ್ಯಮ ಸಂಸ್ಥೆ ಟಿವಿ9 ಕನ್ನಡ, ನ್ಯೂಸ್‌ 18 ಕನ್ನಡ, ಈದಿನ, ಈಟಿವಿ ಭಾರತ್‌ ಕರ್ನಾಟಕ, ಪಬ್ಲಿಕ್‌ ಟಿವಿ ಹೀಗೆ ಕೆಲವು ಪ್ರಸಿದ್ದ ಮಾಧ್ಯಮ ಸಂಸ್ಥೆಗಳು ವೈರಲ್‌ ಆದ ಸುದ್ದಿಯನ್ನು ತಳ್ಳಾಕಿರುವುದನ್ನು ನಾವು ವರದಿಯಲ್ಲಿ ನೋಡಬಹುದು.


ಬಿಸಿನೆಸ್‌ ಸ್ಟ್ಯಾಂಡರ್ ಎಂಬ ಯೂಟ್ಯೂಬ್‌ ಖಾತೆಯಲ್ಲಿ "Ratan Tata addresses hospitalisation rumours | Health update" ಎಂಬ ಶೀರ್ಷಿಕೆಯೊಂದಿಗಿರುವ ವಿಡಿಯೋವನ್ನು ನಾವು ನೋಡಬಹುದು

Full View 

ಅಕ್ಟೋಬರ್‌ 08, 2024ರಂದು ಗ್ಯಾರಂಟಿ ನ್ಯೂಸ್‌ ಎಂಬ ಯೂಟ್ಯೂಬ್‌ ಖಾತೆಯಲ್ಲಿ "What happened to Ratan Tata? | ಅಯ್ಯೋ ರತನ್ ಟಾಟಾಗೆ ಏನಾಯ್ತು.? ಹೇಗಿದ್ದಾರೆ.? " ಎಂಬ ಹೆಡ್‌ಲೈನ್‌ನೊಂಡಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋವಿನಲ್ಲಿ " ಸೋಶಿಯಲ್‌ ಮಿಡಿಯಾದಲ್ಲಿ ವದಂತಿ ಹಬ್ಬಿಸಬೇಡಿ, ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮ ಸಂಸ್ಥೆಗಳಿಗೆ ವಿನಂತಿಸಿ ಕೊಳ್ಳುವುದೇನಂದರೆ, ನನ್ನ ಆರೋಗ್ಯ ಚೆನ್ನಾಗಿದೆ. ಜನರಲ್‌ ಚೆಕ್‌ಅಪ್‌ಗಾಗಿ ನಾನು ಆಸ್ಪತ್ರೆಗೆ ಬಂದಿದ್ದೇನೆ" ಎಂದು ರತನ್‌ ಟಾಟಾರವರು ಮಾಡಿರುವ ಪೋಸ್ಟ್‌ ಬಗ್ಗೆ ವಿಡಿಯೋದಲ್ಲಿ ಹೇಳಿದ್ದಾರೆ.

Full View 

ಹೀಗಾಗಿ ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ ಎಂದು ಸಾಭೀತಾಗಿದೆ. ಖುದ್ದು ರತನ್‌ ಟಾಟಾರವರೆ ವೈರಲ್‌ ಆದ ಸುದ್ದಿಯಲ್ಲಿ ಸತ್ಯಾಂಶವಿಲ್ಲ ನಾನು ಆರೋಗ್ಯವಾಗಿದ್ದೇನೆ ಎಂದು ಪೋಸ್ಟ್‌ ಮಾಡಿರುವುದನ್ನು ನಾವು ನೋಡಬಹುದು.

Claim :  ಉದ್ಯಮಿ ರತನ್‌ ಟಾಟಾರವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿಯಲ್ಲಿ ಸತ್ಯಾಂಶವಿಲ್ಲ.
Claimed By :  Social Media Users
Fact Check :  False
Tags:    

Similar News