ಫ್ಯಾಕ್ಟ್‌ಚೆಕ್ : ನರೇಂದ್ರ ಮೋದಿ ಹೊಗಳಿ ಬರೆದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಸಂಪಾದಕ ಜೋಸೆಫ್ ಹೋಪ್ ಲೇಖನ ಸುಳ್ಳು
ನ್ಯೂಯಾರ್ಕ್ ಟೈಮ್ಸ್ ಪ್ರಧಾನ ಸಂಪಾದಕ ಜೋಸೆಫ್ ಹೋಪ್, ಮೋದಿಯವರನ್ನು ಹೊಗಳಿದ ಬರೆದಿದ್ದಾರೆ ಎನ್ನಲಾದ ಲೇಖನಕ್ಕೆ ಸಂಬಂಧಿಸಿದ ವೈರಲ್ ಪೋಸ್ಟ್ ನಕಲಿ.
ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಪ್ರಧಾನ ಸಂಪಾದಕರಾದ ಜೋಸೆಫ್ ಹೋಪ್ ಅವರು ಬರೆದಿದ್ದಾರೆಂದು ಹೇಳುವ ಲೇಖನ ಕುರಿತು ಸೋಷಿಯಲ್ ಮೀಡಿಯಾಪೋಸ್ಟ್‌ವೊಂದು ವೈರಲ್ ಆಗಿದೆ. ಎಕ್ಸ್ ( ಮೊದಲು ಟ್ವಿಟರ್) ಮತ್ತು ಫೇಸ್‌ಬುಕ್ ಹಲವು ಬಳಕೆದಾರರು ಪ್ರತಿಷ್ಠಿತ ಪತ್ರಿಕೆಯಲ್ಲಿ ಈ ಲೇಖನ ಪ್ರಕಟವಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಈ ಲೇಖನದಲ್ಲಿ ನರೇಂದ್ರ ಮೋದಿಯವರು ಹೀಗೆ ಹೊಗಳಾಗಿದೆ: " ನರೇಂದ್ರ ಮೋದಿ ಅವರ ಮೊದಲ ಗುರಿ ಭಾರತವನ್ನು ಉತ್ತಮ ದೇಶವನ್ನಾಗಿ ಮೇಲಕ್ಕೆತ್ತುವುದು. ಯಾವುದೇ ಅಡೆತಡೆಗಳು ಇಲ್ಲದೇ ಹೋದರೆ ಭಾರತವೂ ಭವಿಷ್ಯದಲ್ಲಿ ವಿಶ್ವದ ಅತ್ಯಂತ ಬಲಶಾಲಿ ರಾಷ್ಟ್ರವಾಗಲು ಶಕ್ತವಾಗಿದೆ. ಅಮೆರಿಕ, ಇಂಗ್ಲೆಂಡ್, ರಷ್ಯಾ ಮತ್ತು ಜಪಾನ್‌ನಂತಹ ರಾಷ್ಟ್ರಗಳಿಗೆ ಇದು ಅಚ್ಚರಿ ಉಂಟ ಮಾಡಲಿದೆ"
ಸೋಷಿಯಲ್ ಮೀಡಿಯಾದಲ್ಲಿ "ನರೇಂದ್ರ ಮೀದಿ, ಜೋಸೆಫ್ ಹೋಪ್" ಕೀ ವರ್ಡ್‌ಗಳನ್ನು ಬಳಸಿ ಹುಡುಕಿದಾಗ, ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ ಹಲವು ಪೋಸ್ಟ್‌ಗಳು ದೊರೆತವು. ಆದರೆ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಯಾವುದೇ ಉಲ್ಲೇಖವು ನಮಗೆ ದಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ದೊರೆಯಲಿಲ್ಲ. ನಮ್ಮ ತನಿಖೆಯ ಮೂಲಕ ತಿಳಿದು ಮತ್ತೊಂದು ಮಹತ್ವದ ಸಂಗತಿ ಎಂದರೆ, ಪತ್ರಿಕೆಯ ಸಂಪಾದಕರು ಜೋಸೆಫ್ ಕಾನ್ ಎಂದೂ, ಅವರ ಸ್ಥಾನವೂ ಕಾರ್ಯಕಾರಿ ಸಂಪಾದಕ. ಅಂದರೆ ವೈರಲ್ ಪೋಸ್ಟ್ ಹೇಳಿದಂತೆ ಪ್ರಧಾನ ಸಂಪಾದಕ ಜೋಸೆಫ್ ಹೋಪ್ ಅಲ್ಲ.
ಇನ್ನೊಂದು ಗಮನಿಸಬೇಕಾದ ಸಂಗತಿಯೆಂದರೆ ಈ ನಕಲಿ ಲೇಖನವು 2021ರಿಂದಲೂ ಹರಿದಾಡುತ್ತಿದೆ. ಇಂಡಿಯಾ ಟುಡೆ ಪತ್ರಿಕೆಯು ಈ ಲೇಖನಕ್ಕೆ ಸಂಬಂಧಿಸಿದಂತೆ ಫ್ಯಾಕ್ಟ್‌ಚೆಕ್ ಮಾಡಿತ್ತು. ಫ್ಯಾಕ್ಟ್‌ಚೆಕ್ ತಾಣವಾದ ಬೂಮ್‌ಲೈವ್, ದಿ ನ್ಯೂಯಾರ್ಕ್ ಟೈಮ್ಸ್ ಸಂವಹನ ನಿರ್ದೇಶಕರಾದ ನಿಕೋಲ್ ಟೇಲರ್ ಅವರನ್ನು ಸಂಪರ್ಕಿಸಿ, ಲೇಖನದ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಂಡಿದೆ. ಲೇಖನ ಹರಿದಾಡಲು ಆರಂಭಿಸಿದಾಗ ಕಾರ್ಯಕಾರಿ ಸಂಪಾದಕರಾಗಿ ಡೀನ್ ಬಾಕ್ವೆ ಇದ್ದರು ಎಂಬುದನ್ನು ನಿಕೋಲ್ ಖಚಿತಪಡಿಸಿದ್ದಾರೆ.
ದಿ ಲಾಜಿಕಲ್ ಇಂಡಿಯನ್ ಕೂಡ, ಈ ವೈರಲ್ ಪೋಸ್ಟ್‌ಗೆ ಸಂಬಂಧಿಸಿದಂತೆ ಫ್ಯಾಕ್ಟ್‌ಚೆಕ್ ಮಾಡಿದೆ. 2021ರ ಜನವರಿಯಲ್ಲಿ ದಿ ನ್ಯೂಯಾರ್ಕ್ ಟೈಮ್ಸ್ ಅಧಿಕೃತವಾಗಿ ಈ ವೈರಲ್ ಪೋಸ್ಟ್ ನಕಲಿ ಎಂದು ಎಕ್ಸ್ ತಾಣದಲ್ಲಿ ಸ್ಪಷ್ಟಪಡಿಸಿತ್ತು.
ಲೇಖನದಲ್ಲಿರುವ ಕಾಗುಣಿತದ ಲೋಪಗಳು ಮತ್ತು ಭಾಷೆಯಲ್ಲಿರುವ ತೊಡಕುಗಳೇ ಈ ಲೇಖನದ ಅಧಿಕೃತತೆಯ ಬಗ್ಗೆ ಅನುಮಾನ ಹುಟ್ಟಿಸುತ್ತವೆ. ಇವು ದಿ ನ್ಯೂಯಾರ್ಕ್ ಟೈಮ್ಸ್‌ನ ಸಂಪಾದಕೀಯ ಮಾನದಂಡಗಳಿಗಿಂತ ಕಡಿಮೆ ಎಂಬುದು ಮೇಲ್ನೋಟಕ್ಕೆ ತಿಳಿಯುತ್ತದೆ.
ಈ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ಟೈಮ್ಸ್ ಪ್ರಧಾನ ಸಂಪಾದಕ ಜೋಸೆಫ್ ಹೋಪ್, ಮೋದಿಯವರನ್ನು ಹೊಗಳಿದ ಬರೆದಿದ್ದಾರೆ ಎನ್ನಲಾದ ಲೇಖನಕ್ಕೆ ಸಂಬಂಧಿಸಿದ ವೈರಲ್ ಪೋಸ್ಟ್ ನಕಲಿ. ಜೋಸೆಫ್ ಹೋಪ್ ಆಗಲಿ, ಅಥವಾ ದಿ ನ್ಯೂಯಾರ್ಕ್ ಟೈಮ್ಸ್ ಇನ್ನಾರೇ ಆಗಲಿ ಭಾರತದ ಪ್ರಧಾನಿಯನ್ನು ಹೊಗಳಿ ಯಾವುದೇ ಲೇಖನ ಬರೆದಿಲ್ಲ (ಲಿಂಕ್).