ಫ್ಯಾಕ್ಟ್‌ಚೆಕ್‌: ಪಕ್ಷಿಗಳು ಒಂದು ಕೆಜಿಗಿಂತ ಹೆಚ್ಚು ಚಿನ್ನವನ್ನು ಕದ್ದಿವೆ ಎಂದು ಎಐ ವಿಡಿಯೋ ಹಂಚಿಕೆ

ಪಕ್ಷಿಗಳು ಒಂದು ಕೆಜಿಗಿಂತ ಹೆಚ್ಚು ಚಿನ್ನವನ್ನು ಕದ್ದಿವೆ ಎಂದು ಎಐ ವಿಡಿಯೋ ಹಂಚಿಕೆ;

facebooktwitter-grey
Update: 2025-04-11 02:30 GMT
ಫ್ಯಾಕ್ಟ್‌ಚೆಕ್‌: ಪಕ್ಷಿಗಳು ಒಂದು ಕೆಜಿಗಿಂತ ಹೆಚ್ಚು ಚಿನ್ನವನ್ನು ಕದ್ದಿವೆ ಎಂದು ಎಐ ವಿಡಿಯೋ ಹಂಚಿಕೆ
  • whatsapp icon

ಸತತ ಇಳಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಇವತ್ತು ಏರಿಕೆ ಕಂಡಿದೆ. 22 ಕ್ಯಾರಟ್ ಚಿನ್ನದ ಬೆಲೆ ಗ್ರಾಮ್​​ಗೆ 65 ರೂನಷ್ಟು ಹೆಚ್ಚಾಗಿದೆ. ಡಾಲರ್ ಮೌಲ್ಯ ಕುಸಿತ, ಷೇರು ಮಾರುಕಟ್ಟೆ ಕುಸಿತದ ಮಧ್ಯೆ ಚಿನ್ನಕ್ಕೆ ಬೇಡಿಕೆ ಬರುವ ಅಂದಾಜಿದೆ. ಅದಕ್ಕೆ ಅನುಗುಣವಾಗಿ ಚಿನ್ನದ ಬೆಲೆ ಹೆಚ್ಚಿದೆ. ಭಾರತದಲ್ಲಿ ಮಾತ್ರವಲ್ಲ, ವಿಶ್ವದ ಹಲವು ದೇಶಗಳಲ್ಲಿ ಸ್ವರ್ಣ ದರ ಏರಿಕೆ ಆಗಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಅಚ್ಚರಿ ಎಂಬಂತೆ ಗ್ರಾಮ್​​ಗೆ ಒಂದು ರೂನಷ್ಟು ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 82,900 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 90,440 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 9,300 ರೂಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 82,900 ರೂಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 9,300 ರೂಪಾಯಿಯಲ್ಲಿ ಇದೆ. ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಪಕ್ಷಿಗಳು ಚಿನ್ನವನ್ನು ಕದ್ದಿದೆ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದ ಬಳಕೆದಾರರು ವ್ಯಾಪಕವಾಗಿ ಹಂಚಿಕೊಳ್ಳುತ್ತಿದ್ದಾರೆ.

ಬೆಂಗಳೂರಿನ ಹೈಕೋರ್ಟ್ ರಸ್ತೆಯಲ್ಲಿರುವ ಮೂರು ಆಭರಣ ಅಂಗಡಿಗಳಿಂದ ಎರಡು ಪಕ್ಷಿಗಳು ಒಂದು ಕೆಜಿಗಿಂತ ಹೆಚ್ಚು ಚಿನ್ನವನ್ನು ಕದ್ದಿವೆ ಎಂಬ ಹೇಳಿಕೆಯೊಂದಿಗೆ ಚಿನ್ನದ ಆಭರಣಗಳಿಂದ ಮಾಡಿದ ಗೂಡಿನಲ್ಲಿ ಎರಡು ಪಕ್ಷಿಗಳನ್ನು ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಏಪ್ರಿಲ್‌ 06, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಯಲ್ಲಿ ʼThese birds stole more than a kilogram of gold from three jewellery shops to build their nest in Bengaluru High court road. As they could recover this gold only after the birds are hatched, these jewellery shop owners tightened security near this tree.ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ʼಬೆಂಗಳೂರು ಹೈಕೋರ್ಟ್ ರಸ್ತೆಯಲ್ಲಿ ಗೂಡು ಕಟ್ಟಲು ಈ ಪಕ್ಷಿಗಳು ಮೂರು ಆಭರಣ ಅಂಗಡಿಗಳಿಂದ ಒಂದು ಕಿಲೋಗ್ರಾಂಗೂ ಹೆಚ್ಚು ಚಿನ್ನವನ್ನು ಕದ್ದಿವೆ. ಪಕ್ಷಿಗಳು ಮೊಟ್ಟೆಯೊಡೆದ ನಂತರವೇ ಈ ಚಿನ್ನವನ್ನು ಮರಳಿ ಪಡೆಯಲು ಸಾಧ್ಯವಾದ್ದರಿಂದ, ಈ ಆಭರಣ ಅಂಗಡಿ ಮಾಲೀಕರು ಈ ಮರದ ಬಳಿ ಭದ್ರತೆಯನ್ನು ಬಿಗಿಗೊಳಿಸಿದರು.ʼ ಎಂದು ಬರೆದಿರುವುದನ್ನು ನೋಡಬಹುದು.

ವೈರಲ್‌ ಆದ ಸುದ್ದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು. (ಆರ್ಕೈವ್)


​ಏಪ್ರಿಲ್‌ 06, 2025ರಂದು ಇನ್ಸ್ಟಾಗ್ರಾಮ್  ಖಾತೆದಾರರೊಬ್ಬರು ʼಬೆಂಗಳೂರು ಹೈಕೋರ್ಟ್ ರಸ್ತೆಯಲ್ಲಿ ಗೂಡು ಕಟ್ಟಲು ಈ ಪಕ್ಷಿಗಳು ಮೂರು ಆಭರಣ ಅಂಗಡಿಗಳಿಂದ ಒಂದು ಕಿಲೋಗ್ರಾಂಗೂ ಹೆಚ್ಚು ಚಿನ್ನವನ್ನು ಕದ್ದಿವೆ. ಪಕ್ಷಿಗಳು ಮೊಟ್ಟೆಯೊಡೆದ ನಂತರವೇ ಈ ಚಿನ್ನವನ್ನು ಮರಳಿ ಪಡೆಯಲು ಸಾಧ್ಯವಾದ್ದರಿಂದ, ಈ ಆಭರಣ ಅಂಗಡಿ ಮಾಲೀಕರು ಈ ಮರದ ಬಳಿ ಭದ್ರತೆಯನ್ನು ಬಿಗಿಗೊಳಿಸಿದರು ಖಂಡಿತವಾಗಿಯೂ ಇದು ಭಾರತದಲ್ಲಿ ಮಾತ್ರ ಸಂಭವಿಸಬಹುದು!ʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮತ್ತಷ್ಟು ಪೊಸ್ಟ್‌ಗಳನ್ನು ನೀವಿಲ್ಲಿ, ಇಲ್ಲಿ ನೋಡಬಹುದು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ನಾವು ವೈರಲ್‌ ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಅಲ್ಲಿಯೂ ನಮಗೆ ಯಾವುದೇ ಅಧಿಕೃತ ಮಾಹಿತಿ ಸಿಗಲಿಲ್ಲ. ಒಂದು ವೇಳೆ ಈ ಸುದ್ದಿ ನಿಜವಾಗಿದ್ದರೆ ಖಂಡಿತಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವುದು. ಆದರೆ ನಮಗೆ ಯಾವುದೇ ವರದಿಗಳು ಸಿಗಲಿಲ್ಲ

ಗೂಗಲ್‌ನಲ್ಲಿ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, 1.4 ಮಿಲಿಯನ್‌ಗೂ ಅಧಿಕವಾಗಿ ಅನುಯಾಯಿಗಳನ್ನು ಹೊಂಡಿರುವ ಸುದೇಂದ್ರ ಘರ್ವಾಲೆ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ, ಏಪ್ರಿಲ್‌ 01, 2025ರಂದು ವೈರಲ್‌ ಆದ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನೋಡಬಹುದು. ಆತನ ಬಯೋವಿನಲ್ಲಿ ʼ ಡಿಜಿಟಲ್ ಸೃಷ್ಟಿಕರ್ತ ಮತ್ತು AI & ಕಲಾ ಉತ್ಸಾಹಿʼ ಎಂದು ಬರೆದುಕೊಂಡಿರುವುದನ್ನು ನೋಡಬಹುದು.


​ಆತನ ಇನ್‌ಸ್ಟಾಗ್ರಾಮ್‌ನ್ನು ಪರಿಶೀಲಿಸಿದಾಗ ನಮಗೆ ಆ ಖಾತೆಯಲ್ಲಿ ಸಾಕಷ್ಟು ಎಐ ರಚಿತ ವಿಡಿಯೋಗಳನ್ನು ಪೊಸ್ಟ್‌ ಮಾಡಿರುವುದನ್ನು ನೋಡಬಹುದು. ಎಐ ಮೂಲಕ ರಚಿಸಲಾದ ಫೋಟೋ ಅಥವಾ ವಿಡಿಯೋಗಳೆಲ್ಲಾ ವಾಸ್ತವವಾಗಿ ಇರುವ ಹಾಗೆ ಅದ್ಭುತವಾಗಿ ರಚಿಸಲ್ಪಟ್ಟಿದೆ ಹೀಗಾಗಿ ಮೂಲ ವಿಡಿಯೋ ಇಲ್ಲಿಯವರೆಗೆ 8.7 ಮಿಲಿಯನ್ ವೀಕ್ಷಣೆಗಳು ಮತ್ತು ಒಂದು ಪಾಯಿಂಟ್ ಎರಡು ನಾಲ್ಕು ಲಕ್ಷಗಳನ್ನು ಗಳಿಸಿಕೊಂಡಿದೆ


ವೈರಲ್‌ ಆದ ವಿಡಿಯೋವಿನ ವಿವಿಧ ಫ್ರೇಮ್‌ಗಳನ್ನು ಉಪಯೋಗಿಸಿ ಎಐ ಡಿಟೆಕ್ಟರ್‌ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಎಐ ಡಿಟೆಕ್ಟರ್‌ ಟೂಲ್‌ ʼಸೈಟ್‌ ಇಂಜಿನ್‌ʼ ಟೂಲ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ಆದ ವಿಡಿಯೋ 97% ಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ಸಾಭೀತಾಗಿದೆ.

​ಈ ಮಾಹಿತಿಯನ್ನು ಮತ್ತಷ್ಟು ಖಚಿತ ಪಡಿಸಿಕೊಳ್ಳಲು ನಾವು ಎಐ ಇಮೇಜ್ ಡಿಟೆಕ್ಷನ್ ಟೂಲ್ ʼಹೈವ್ ಮಾಡರೇಶನ್‌ʼ ನಲ್ಲಿ ಫೊಟೋವನ್ನು ಪರಿಶೀಲಿಸಿದೆವು. ಪರಿಶೀಲನೆಯಲ್ಲಿ ನಮಗೆ ಈ ಚಿತ್ರ 99.3 ಪ್ರತಿಶಾತದಷ್ಟು ಎಐ ಮೂಲಕ ರಚಿಸಲಾಗಿದೆ ಎಂದು ತಿಳಿದುಬಂದಿತು.


​​Wasitai.com ನಲ್ಲಿ ಚಿತ್ರವನ್ನು ಪರೀಶಿಲಿಸಿದಾಗ ಅಲ್ಲಿಯೂ ಸಹ ಈ ಚಿತ್ರ ಎಐ ಬಳಸಿ ರಚಿಸಿರುವುದು ಎಂದು ಸಾಭಿತಾಯಿತು.


​ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವಾಗಿ ವೈರಲ್‌ ಆದ ವಿಡಿಯೋವನ್ನು ಎಐ ಮೂಲಕ ರಚಿಸಲಾಗಿದೆ.

Claim :  ಪಕ್ಷಿಗಳು ಒಂದು ಕೆಜಿಗಿಂತ ಹೆಚ್ಚು ಚಿನ್ನವನ್ನು ಕದ್ದಿವೆ ಎಂದು ಎಐ ವಿಡಿಯೋ ಹಂಚಿಕೆ
Claimed By :  Social Media Users
Fact Check :  False
Tags:    

Similar News