ಫ್ಯಾಕ್ಟ್‌ಚೆಕ್‌: ಭಾರತ ಸರ್ಕಾರವು 'ಪಿಎಂ ಕರ್ದಾತ ಕಲ್ಯಾಣ ಯೋಜನೆ' ಎಂಬ ಯಾವುದೇ ಯೋಜನೆಯನ್ನು ಪ್ರಾರಂಭಿಸಿಲ್ಲ.

ಭಾರತ ಸರ್ಕಾರವು 'ಪಿಎಂ ಕರ್ದಾತ ಕಲ್ಯಾಣ ಯೋಜನೆ' ಎಂಬ ಯಾವುದೇ ಯೋಜನೆಯನ್ನು ಪ್ರಾರಂಭಿಸಿಲ್ಲ.;

facebooktwitter-grey
Update: 2025-04-12 12:30 GMT
ಫ್ಯಾಕ್ಟ್‌ಚೆಕ್‌: ಭಾರತ ಸರ್ಕಾರವು ಪಿಎಂ ಕರ್ದಾತ ಕಲ್ಯಾಣ ಯೋಜನೆ ಎಂಬ ಯಾವುದೇ ಯೋಜನೆಯನ್ನು ಪ್ರಾರಂಭಿಸಿಲ್ಲ.
  • whatsapp icon

​ಸರ್ಕಾರವು ಇತ್ತೀಚೆಗೆ ಪಿಎಂ ಕರ್ದಾತ ಕಲ್ಯಾಣ ಯೋಜನೆ ಎಂಬ ಹೊಸ ಯೋಜನೆಯನ್ನು ಪರಿಚಯಿಸಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 'ಪ್ರಧಾನ ಮಂತ್ರಿ ಕರ್ದತಾ ಕಲ್ಯಾಣ ಯೋಜನೆ'ಯಡಿ ತೆರಿಗೆದಾರರಿಗೆ ವಿವಿಧ ನಿಬಂಧನೆಗಳ ಕುರಿತು ಚರ್ಚಿಸುತ್ತಿರುವ ವ್ಯಕ್ತಿಯ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ. ಈ ಹೊಸ ಯೋಜನೆಯಡಿಯಲ್ಲಿ ಭಾರತ ಸರ್ಕಾರವು ಪ್ರಯಾಣ ರಿಯಾಯಿತಿಗಳು ಮತ್ತು ಉಚಿತ ಇಂಟರ್ನೆಟ್ ಡೇಟಾದಂತಹ ಪ್ರಾಮಾಣಿಕ ತೆರಿಗೆದಾರರಿಗೆ ಬಹುಮಾನಗಳನ್ನು ನೀಡುತ್ತಿದೆ ಎಂದು ವಿವಿಧ ವೆಬ್‌ಸೈಟ್‌ಗಳು ಹೇಳಿಕೊಳ್ಳುತ್ತವೆ.

ಏಪ್ರಿಲ್‌ 07, 2025ರಂದು ಎಕ್ಸ್‌ ಖಾತೆದಾರರೊಬ್ಬರು ತಮ್ಮ ಖಾತೆಡಯಲ್ಲಿ ʼGood News!! For all Tax Payersʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. (ಆರ್ಕೈವ್‌)

ವೈರಲ್‌ ಸುದ್ದಿಯ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.


​ಏಪ್ರಿಲ್‌ 02, 2025ರಂದು ಹಿಂದಿ ಯೋಜನ ಎಂಬ ವೆಬ್‌ಸೈಟ್‌ನಲ್ಲಿ ʼkardata kalyan Yojana:जानिए क्या है करदाता कल्याण योजनाʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದ್ದಾರೆ. ವರದಿಯಲ್ಲಿ ʼಕರ್ದಾತ ಕಲ್ಯಾಣ್ ಯೋಜನೆ ಕಾರ್ಡ್ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ: ಭಾರತ ಸರ್ಕಾರವು ತೆರಿಗೆದಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಯಾವಾಗಲೂ ವಿವಿಧ ಯೋಜನೆಗಳನ್ನು ಪ್ರಾರಂಭಿಸಿದೆ. ಇವುಗಳಲ್ಲಿ ಒಂದು ಪ್ರಮುಖ ಯೋಜನೆ "ತೆರಿಗೆದಾರರ ಕಲ್ಯಾಣ ಯೋಜನೆ" , ಇದು ತೆರಿಗೆದಾರರಿಗೆ ಆರ್ಥಿಕ ನೆರವು, ತೆರಿಗೆ ವಿನಾಯಿತಿಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ತೆರಿಗೆದಾರರನ್ನು ತೆರಿಗೆ ಪಾವತಿಯ ಕಡೆಗೆ ಪ್ರೋತ್ಸಾಹಿಸುತ್ತದೆ. ತೆರಿಗೆದಾರರ ಕಲ್ಯಾಣ ಯೋಜನೆಯು ಭಾರತ ಸರ್ಕಾರವು ತೆರಿಗೆದಾರರಿಗೆ ಆರ್ಥಿಕ ಭದ್ರತೆ ಮತ್ತು ತೆರಿಗೆ ವಿನಾಯಿತಿ ನೀಡುವ ಪ್ರಮುಖ ಗುರಿಯೊಂದಿಗೆ ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ಯೋಜನೆಯಡಿಯಲ್ಲಿ, ತೆರಿಗೆದಾರರಿಗೆ ವಿವಿಧ ಪ್ರೋತ್ಸಾಹಕಗಳನ್ನು ನೀಡಲಾಗುತ್ತದೆ,

1. ತೆರಿಗೆ ವಿನಾಯಿತಿಗಳು

2. ತೆರಿಗೆ ಪಾವತಿಯ ಸುಲಭತೆ

3. ಆರ್ಥಿಕ ನೆರವು

4. ತೆರಿಗೆ ಜಾಗೃತಿ ಕಾರ್ಯಕ್ರಮ

ಈ ಯೋಜನೆಯನ್ನು ಮುಖ್ಯವಾಗಿ ಸಣ್ಣ ಮತ್ತು ಮಧ್ಯಮ ವರ್ಗದ ತೆರಿಗೆದಾರರಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆʼ ಎಂದು ವರದಿ ಮಾಡಿದ್ದಾರೆ.


​ಏಪ್ರಿಲ್‌ 02, 2025ರಂದು ಬುಲಾಂಡ್ಯ್‌ ಇಂಡಿಯಾ ಎಂಬ ವೆಬ್‌ಸೈಟ್‌ನಲ್ಲಿ ʼPradhan Mantri Kardata Kalyan Yojana: A Government Initiative Rewarding Honest Taxpayersʼ ಎಂದಯ ವರದಿ ಮಾಡಿದೆ. ವರದಿಯಲ್ಲಿ ʼಪ್ರಧಾನ ಮಂತ್ರಿ ಕರ್ದತಾ ಕಲ್ಯಾಣ ಯೋಜನೆ ಸರ್ಕಾರಿ ಉಪಕ್ರಮವಾಗಿದ್ದು, ಇದು ಪ್ರಾಮಾಣಿಕ ತೆರಿಗೆದಾರರಿಗೆ ಕಾರ್ ಮೈಲ್ಸ್, ಪ್ರಯಾಣ ರಿಯಾಯಿತಿಗಳು ಮತ್ತು ಉಚಿತ ಜಿಯೋ ಡೇಟಾದಂತಹ ಪ್ರಯೋಜನಗಳನ್ನು ನೀಡುತ್ತದೆ. ಈ ಯೋಜನೆಯು ರಾಷ್ಟ್ರೀಯ ಅಭಿವೃದ್ಧಿಗೆ ತೆರಿಗೆದಾರರ ಕೊಡುಗೆಗಳನ್ನು ಶ್ಲಾಘಿಸುವುದರ ಜೊತೆಗೆ ತೆರಿಗೆ ಅನುಸರಣೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.ʼ ವರದಿ ಮಾಡಿದನ್ನು ನಾವಿಲ್ಲಿ ನೋಡಬಹುದು.


​​ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ತೆರಿಗೆದಾರರಿಗೆ ಪ್ರತಿಫಲ ನೀಡಲು ಭಾರತ ಸರ್ಕಾರ 'ಪಿಎಂ ಕರ್ದಾತ ಕಲ್ಯಾಣ ಯೋಜನೆ' ಎಂಬ ಯಾವುದೇ ಯೋಜನೆಯನ್ನು ಪ್ರಾರಂಭಿಸಿಲ್ಲ. ಕೇಂದ್ರ ಸರ್ಕಾರ ಪ್ರಮಾಣಿಕ ತೆರಿಗೆದಾರರಿಗೆ ಪಿಎಂ ಕರ್ದಾತ ಕಲ್ಯಾಣ ಯೋಜನೆ ಹೆಸರಿನಲ್ಲಿ ಉಚಿತ ಇಂಟರ್ನೆಟ್ ಡೇಟಾ, ಹಲವು ನೇರ ತೆರಿಗೆಗಳ ಸೇವೆಗಳಿಂದ ವಿನಾಯಿತಿ ನೀಡುತ್ತಿದೆ ಎಂಬುದು ಸುಳ್ಳು. ಆ ರೀತಿಯ ಯಾವುದೇ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿಲ್ಲ.

ನಾವು ವೈರಲ್‌ ಆದ ಸುದ್ದಿಯ ಬಗ್ಗೆ ಸತ್ಯಾಂಶವನ್ನು ತಿಳಿಯಲು ಸುದ್ದಿಗೆ ಸಂಬಂಧಿಸಿದ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಬಳಸಿ ಹುಡುಖಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ. ವೈರಲ್‌ ಆದ ವಿಡಿಯೋದಲ್ಲಿ ‘ಪಿಎಂ ಕರ್ದತಾ ಕಲ್ಯಾಣ ಯೋಜನೆ’ಯನ್ನು ಹಣಕಾಸು ಸಚಿವರು 2025ರ ಬಜೆಟ್ ಭಾಷಣದ ಸಮಯದಲ್ಲಿ ಘೋಷಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಭಾರತ ಸರ್ಕಾರದ ಅಧಿಕೃತ ವೆಬ್‌ಸೈಟ್ indiabudget.gov.inನಲ್ಲಿ 2025ರ ಬಜೆಟ್ ಭಾಷಣ ಮತ್ತು ಹಂಚಿಕೆ ವಿವರಗಳನ್ನು ಪರಿಶೀಲಿಸಿದಾಗ , ಅಂತಹ ಯಾವುದೇ ಯೋಜನೆಯನ್ನು ಘೋಷಣೆ ಮಾಡಿರುವುದು ಕಂಡು ಬಂದಿಲ್ಲ.


​ಮತ್ತೊಮ್ಮೆ ನಾವು ವೈರಲ್‌ ಆದ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದೆವು. ಏಪ್ರಿಲ್‌ 01, 2025ರಂದು ʼಲೇಬರ್‌ ಲಾ ಅಟ್ವೈಸರ್‌ʼ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡ ವಿಡಿಯೋವನಿ 32ನೇ ಸೆಕೆಂಡ್‌ನಲ್ಲಿ ಏಪ್ರಿಲ್‌ ಫೋಲ್ಸ್‌ ಡೇ ಎಂದು ಬರೆದಿರುವುದನ್ನು ನೋಡಬಹುದು. ಹಾಗೇ ವಿಡಿಯೋವಿನ ಕ್ಯಾಪ್ಷ್‌ನ್‌ ನಲ್ಲಿ ʼನಿಮ್ಮ ಪ್ರಸ್ತುತ PMKKY ಅರ್ಹತೆಯು ಹಿಂದಿನ ವರ್ಷದಲ್ಲಿ ನೀವು ಪಾವತಿಸಿದ ಆದಾಯ ತೆರಿಗೆಯನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ನೀವು FY2,5 ರಲ್ಲಿ 8 ಲಕ್ಷ ಆದಾಯವನ್ನು ಪಾವತಿಸಿದ್ದರೆ, ನಿಮಗೆ FY25-26 ಕ್ಕೆ ಗೋಲ್ಡ್ ಕಾರ್ಡ್ ನೀಡಲಾಗುತ್ತದೆ. FY26 ರಲ್ಲಿ ನೀವು 5 ಲಕ್ಷಕ್ಕಿಂತ ಕಡಿಮೆ ತೆರಿಗೆ ಆದಾಯವನ್ನು ಪಾವತಿಸಿದರೆ, ಮುಂದಿನ ಹಣಕಾಸು ವರ್ಷದಲ್ಲಿ ನಿಮ್ಮನ್ನು ಸಿಲ್ವರ್ ಶ್ರೇಣಿಗೆ ಇಳಿಸಲಾಗುತ್ತದೆ. Rupay ಕಾರ್ಡ್‌ಗಳ ಮೂಲಕ ಪಾವತಿಸಿದರೆ ಮಾತ್ರ ಶಾಲಾ ಶುಲ್ಕದ ಮೇಲಿನ ರಿಯಾಯಿತಿ ಲಭ್ಯವಿದೆ. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ 2 ಮಕ್ಕಳ ಶಾಲಾ ಶುಲ್ಕದ ಮೇಲೆ ಮಾತ್ರ ರಿಯಾಯಿತಿ ಅನ್ವಯಿಸುತ್ತದೆ. ಸಚಿವರ ಸಭೆಗಳು ಲಭ್ಯತೆಗೆ ಒಳಪಟ್ಟಿರುತ್ತವೆ, ಪ್ರತಿ ಸಭೆಗೆ ಗರಿಷ್ಠ 15 ನಿಮಿಷಗಳನ್ನು ಅನುಮತಿಸಲಾಗುತ್ತದೆ. ಪ್ರಸ್ತುತ ಹಣಕಾಸು ವರ್ಷಕ್ಕೆ 1 ಕಾರ್ ಮೈಲ್ INR 1/- ಗೆ ಸಮಾನವಾಗಿರುತ್ತದೆ. ಬಳಕೆಯಾಗದ ಕಾರ್ ಮೈಲ್‌ಗಳನ್ನು ಮುಂದಿನ ಹಣಕಾಸು ವರ್ಷಕ್ಕೆ ಮುಂದಕ್ಕೆ ಸಾಗಿಸಲಾಗುವುದಿಲ್ಲ. ಸರ್ಕಾರಿ ಪೋರ್ಟಲ್ ಬಳಸಿ ರೂಪೇ ಕಾರ್ಡ್‌ಗಳ ಮೂಲಕ ಮಾಡಿದ ಎಲ್ಲಾ ಭಾರತೀಯ ಹೋಟೆಲ್‌ಗಳು ಮತ್ತು ದೇಶೀಯ ವಿಮಾನ ಬುಕಿಂಗ್‌ಗಳಿಗೆ ಕಾರ್ ಮೈಲ್‌ಗಳನ್ನು ಪುನಃ ಪಡೆದುಕೊಳ್ಳಬಹುದು. ಅನಿಯಮಿತ JIO ಡೇಟಾ ಪ್ರತಿ ಮೌಲ್ಯಮಾಪಕರಿಗೆ ಒಬ್ಬ ವ್ಯಕ್ತಿಗೆ ಲಭ್ಯವಿರುತ್ತದೆ. ತೆರಿಗೆದಾರರು ತಮ್ಮ ಸ್ವಂತ ಮೊಬೈಲ್ ಸಂಖ್ಯೆ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರ ಸಂಖ್ಯೆಯನ್ನು ರೀಚಾರ್ಜ್ ಮಾಡಲು ಆಯ್ಕೆ ಮಾಡಬಹುದು. ಯಾವುದೇ ಲಿಂಕ್ ಇಲ್ಲ, ಏಕೆಂದರೆ ಇಂದು ಏಪ್ರಿಲ್ 1 ಆಗಿದೆ. ಹ್ಯಾಪಿ ಏಪ್ರಿಲ್‌ ಫೂಲ್ಸ್‌ ಡೇ #ಜಗೃಕ್ ಜನತಾʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.



​5 ಏಪ್ರಿಲ್‌ 2025ರಂದು , ಭಾರತ ಸರ್ಕಾರದ ಪಿಐಬಿ ಫ್ಯಾಕ್ಟ್ ಚೆಕ್ ಘಟಕವು ತನ್ನ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವುದು ಕಂಡು ಬಂದಿದೆ. ಇದರಲ್ಲಿ “ಪಿಎಂ ಕರ್ದಾತ ಕಲ್ಯಾಣ ಯೋಜನೆ” ಬಗ್ಗೆ ಇದೊಂದು ನಕಲಿ ಸುದ್ದಿ ಎಂದು ಸ್ಪಷ್ಟ ಪಡಿಸಿದೆ. ಪೋಸ್ಟ್‌ನಲ್ಲಿ “ಭಾರತ ಸರ್ಕಾರವು ‘ಪಿಎಂ ಕರ್ದಾತ ಕಲ್ಯಾಣ ಯೋಜನೆ’ ಎಂಬ ಹೊಸ ಯೋಜನೆಯಡಿಯಲ್ಲಿ ಪ್ರಯಾಣ ರಿಯಾಯಿತಿಗಳು, ಕಾರ್ ಮೈಲ್‌ಗಳು ಮತ್ತು ಉಚಿತ ಇಂಟರ್ನೆಟ್ ಡೇಟಾದಂತಹ ಬಹುಮಾನಗಳನ್ನು ಪ್ರಾಮಾಣಿಕ ತೆರಿಗೆದಾರರಿಗೆ ನೀಡುತ್ತಿದೆ ಎಂದು ಹೇಳಿಕೊಳ್ಳುತ್ತದೆ. ಈ ಪ್ರತಿಪಾದನೆ ಸುಳ್ಳು. ಪಿಎಂ ಕರ್ದಾತ ಕಲ್ಯಾಣ ಯೋಜನೆ ಎಂಬಂತಹ ಯಾವುದೇ ಯೋಜನೆ ಇಲ್ಲ.” ಎಂದು ಸ್ಪಷ್ಟವಾಗಿ ಉಲ್ಲೇಖಿಸಿರುವುದು ಕಂಡು ಬಂದಿದೆ.

ಇದರಿಂದ ಸಾಭೀತಾಗಿದ್ದೇನೆಂದರೆ, ವೈರಲ್‌ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವಾಸ್ತವವಾಗಿ ತೆರಿಗೆದಾರರಿಗೆ ಪ್ರತಿಫಲ ನೀಡಲು ಭಾರತ ಸರ್ಕಾರ 'ಪಿಎಂ ಕರ್ದಾತ ಕಲ್ಯಾಣ ಯೋಜನೆ' ಎಂಬ ಯಾವುದೇ ಯೋಜನೆಯನ್ನು ಪ್ರಾರಂಭಿಸಿಲ್ಲ. ಕೇಂದ್ರ ಸರ್ಕಾರ ಪ್ರಮಾಣಿಕ ತೆರಿಗೆದಾರರಿಗೆ ಪಿಎಂ ಕರ್ದಾತ ಕಲ್ಯಾಣ ಯೋಜನೆ ಹೆಸರಿನಲ್ಲಿ ಉಚಿತ ಇಂಟರ್ನೆಟ್ ಡೇಟಾ, ಹಲವು ನೇರ ತೆರಿಗೆಗಳ ಸೇವೆಗಳಿಂದ ವಿನಾಯಿತಿ ನೀಡುತ್ತಿದೆ ಎಂಬುದು ಸುಳ್ಳು. ಆ ರೀತಿಯ ಯಾವುದೇ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿಲ್ಲ.

Claim :  ಭಾರತ ಸರ್ಕಾರವು 'ಪಿಎಂ ಕರ್ದಾತ ಕಲ್ಯಾಣ ಯೋಜನೆ' ಎಂಬ ಯಾವುದೇ ಯೋಜನೆಯನ್ನು ಪ್ರಾರಂಭಿಸಿಲ್ಲ.
Claimed By :  Social Media Users
Fact Check :  False
Tags:    

Similar News