ಫ್ಯಾಕ್ಟ್‌ಚೆಕ್: ರೈಲಿಗೆ ಹತ್ತಿಸಲು ಹೋಗಿ ನಾಯಿ ಹಳಿ ಮೇಲೆ ಬಿದ್ದು ಸಾವನ್ನಪಿಲ್ಲ, ಸಣ್ಣಪುಟ್ಟ ಗಾಯಗಳಾಗಿವೆ.
ರೈಲಿಗೆ ಹತ್ತಿಸಲು ಹೋಗಿ ನಾಯಿ ಹಳಿ ಮೇಲೆ ಬಿದ್ದು ಸಾವನ್ನಪಿಲ್ಲ, ಸಣ್ಣಪುಟ್ಟ ಗಾಯಗಳಾಗಿವೆ.;

ನಾಯಿಯೊಂದನ್ನು ರೈಲು ಹತ್ತಿಸಲು ಹೋಗಿ ಆ ನಾಯಿ ರೈಲು ಹಳಿಗಳ ಕೆಳಗೆ ಬಿದ್ದಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯಗಳು ಭಯಾನಕವಾಗಿದ್ದು ನಾಯಿಯನ್ನು ಈ ರೀತಿ ಹಿಂಸೆ ಮಾಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಜನ ಈ ವೈರಲ್ ವಿಡಿಯೋವನ್ನು ನೋಡಿ ಕಣ್ಣೀರಾಗಿದ್ದಾರೆ.
ವೈರಲ್ ಆದ ವಿಡಿಯೋವನ್ನು ನೋಡುವುದಾದರೆ, ಈ ವಿಡಿಯೋದಲ್ಲಿ ಹೊರಟಿದ್ದ ರೈಲಿಗೆ ಸಾಕು ನಾಯಿಯನ್ನು ಮಾಲೀಕರೊಬ್ಬರು ಹತ್ತಿಸಲು ಪ್ರಯತ್ನಿಸಿದ್ದಾರೆ. ಆದರೆ ರೈಲು ಮುಂದಕ್ಕೆ ಚಲಿಸಿದರಿಂದ ರೈಲು ಹತ್ತುವುದಕ್ಕೆ ನಾಯಿಗೆ ಸಾಧ್ಯವಾಗಿಲ್ಲ. ಈ ಸಂದರ್ಭದಲ್ಲಿ ನಾಯಿ ಪರದಾಡಿರುವ ದೃಶ್ಯಗಳು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ನಾಯಿ ರೈಲು ಹತ್ತಲು ಆಗಲಾಗದೆ ರೈಲು ಹಾಗೂ ಪ್ಲಾಟ್‌ಫಾರಂನ ನಡುವೆ ಸಿಲುಕಿಕೊಂಡಿರುವ ಹೃದಯ ವಿದ್ರಾವಕ ವಿಡಿಯೋ ಇದೀಗ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ. ವ್ಯಕ್ತಿಯೊಬ್ಬ ನಾಯಿಯನ್ನು ಎಳೆದುಕೊಂಡು ಚಲಿಸುತ್ತಿರುವ ರೈಲಿನಲ್ಲಿ ಹತ್ತಿಸುವುದಕ್ಕೆ ಪ್ರಯತ್ನಿಸಿದ್ದಾನೆ. ಆದರೆ ಈ ವೇಳೆ ನಾಯಿಯ ಕುತ್ತಿಗೆಗೆ ಕಟ್ಟಲಾಗಿದ್ದ ಬೆಲ್ಟ್ ಕಳಚಿಕೊಂಡು ನಾಯಿ ಓಡುತ್ತಿರುವ ರೈಲಿನ ಕೆಳಗೆ ಬಿದ್ದಿದೆ. ಮಾಲೀಕನ ನಿರ್ಲಕ್ಷದಿಂದ ನಾಯಿ ಸಾವನಪ್ಪಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಏಪ್ರಿಲ್ 02, 2025ರಂದು ʼನವಸಮಾಜ.ಕಾಂʼ ವೆಬ್‌ಸೈಟ್‌ನಲ್ಲಿ ʼಚಲಿಸುವ ರೈಲು ಹತ್ತಲು ಹೋಗಿ ಭಾರೀ ಅನಾಹುತ- ಸಾಕು ನಾಯಿಯನ್ನು ಕೈಯಾರೆ ಕೊಂಡ ಮಾಲೀಕ: Videoʼ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವರದಿಯಲ್ಲಿ ʼಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ ಪ್ರಯಾಣಿಕನೊಬ್ಬ ಚಲಿಸುವ ರೈಲಿಗೆ ತನ್ನ ಸಾಕು ನಾಯಿಯ ಜೊತೆ ಹತ್ತಲು ಹೋಗಿ ದೊಡ್ಡಾನಾಹುತ ನಡೆದು ಹೋಗಿದೆ. ರೈಲು ಚಲಿಸಲು ಪ್ರಾರಂಭಿಸಿದ ಕಾರಣ, ಶ್ವಾನದ ಬೆಲ್ಟ್ ಹಿಡಿದು ಎಳೆದುಕೊಂಡು ಓಡಿ ಬರುವ ಈ ವ್ಯಕ್ತಿ ಬಲವಂತವಾಗಿ ನಾಯಿಯನ್ನು ಬೋಗಿಗೆ ಹತ್ತಿಸಲು ಪ್ರಯತ್ನ ಪಡ್ತಾನೆ. ಆದ್ರೆ ಚಲಿಸುವ ರೈಲು ಹತ್ತಲಾಗದೆ,ಈ ವೇಳೆ ಶ್ವಾನ ರೈಲಿನ ಅಡಿ ಸಿಲುಕಿ ಸಾವನ್ನಪ್ಪಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯ ಅಜಾಗರೂಕತೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲʼ
ವೈರಲ್ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು.
ಏಪ್ರಿಲ್ 02,2025ರಂದಯ ಯೂಟ್ಯೂಬ್ ಖಾತೆದಾರರೊಬ್ಬರು ʼಚಲಿಸುತ್ತಿದ್ದ ಟ್ರೈನ್ ಹತ್ತಿಸಲು ಹೋಗಿ ನಾಯಿ ಬಲಿ! || NAMMUR EXPRESS NEWSʼ ಎಂಬ ಶೀರ್ಷಿಕೆಯೊಂದಿಗೆ ಒಬ್ಬ ವ್ಯಕ್ತಿ ನಾಯಿಯನ್ನು ರೈಲಿನ ಒಳಗೆ ಹತ್ತಿಸುವಾಗ ನಾಯಿ ಬೆಲ್ಟ್ ಕಳಚಿ ರೈಲಿನ ಅಡಿ ಬೀಳುವ ದೃಶ್ಯದ ವಿಡಿಯೋವನ್ನು ಹಂಚಿಕೊಂಡು ನಾಯಿಯನ್ನು ಚಲಿಸುತ್ತಿದ್ದ ರೈಲಿಗೆ ಹತ್ತಿಸಲು ಹೋಗಿ ನಾಯಿ ಸಾವನ್ನಪ್ಪಿದೆ ಎಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. Archived
ವೈರಲ್ ಆದ ಮತ್ತೊಂದು ವಿಡಿಯೋವನ್ನು ನೀವಿಲ್ಲಿ, ಇಲ್ಲಿ ನೋಡಬಹುದು ನೋಡಬಹುದು.
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿವೆ. ವಾಸ್ತವವಾಗಿ, ರೈಲು ಅಪಘಾತದಲ್ಲಿ ನಾಯಿ ಸಾವನ್ನಪಿಲ್ಲ, ಸಣ್ಣಪುಟ್ಟ ಗಾಯಗಳಾಗಿವೆ.
ನಾವು ವೈರಲ್ ಆದ ಸುದ್ದಿಯಲ್ಲಿ ಸತ್ಯಾಂಶವನ್ನು ತಿಳಿಯಲು ಗೂಗಲ್‌ನಲ್ಲಿ ವೈರಲ್ ಆದ ವಿಡಿಯೋವಿನ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ, ಏಪ್ರಿಲ್ 02, 2025ರಂದು ಟಿವಿ9 ಕನ್ನಡ ವೆಬ್‌ಸೈಟ್‌ನಲ್ಲಿ ʼಹೊರಟಿದ್ದ ರೈಲಿಗೆ ಸಾಕು ನಾಯಿ ಹತ್ತಿಸಲು ಹೋದ ಮಾಲೀಕ, ಹತ್ತಲಾಗದೆ ಕೆಳಗೆ ಬಿದ್ದ ನಾಯಿʼ ಎಂಬ ಶೀರ್ಷಿಕೆಯನ್ನೀಡಿ ವರದಿ ಮಾಡಲಾಗಿದೆ. ವರದಿಯಲ್ಲಿ ʼಏನೇ ಅನಿವಾರ್ಯತೆ ಇದ್ದರೂ ರೈಲು(Train) ಹೊರಟ ಮೇಲೆ ಅಥವಾ ರೈಲು ನಿಲ್ದಾಣದಲ್ಲಿ ನಿಲ್ಲುವ ಮೊದಲು ಇಳಿಯುವ ಅಥವಾ ಹತ್ತುವ ಸಾಹಸ ಮಾಡಬಾರದು. ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಯನ್ನು ಕರೆದುಕೊಂಡು ರೈಲ್ವೆ ನಿಲ್ದಾಣಕ್ಕೆ ಬಂದಿದ್ದ, ರೈಲು ಆಗಲೇ ಹೊರಟಿತ್ತು. ರೈಲಿಗೆ ನಾಯಿಯನ್ನು ಮೊದಲು ಹತ್ತಿಸಲು ಹೋಗಿ ಅದು ರೈಲು ಹಾಗೂ ಪ್ಲಾಟ್ಫಾರಂ ನಡುವೆ ಸಿಕ್ಕಿ ಹಾಕಿಕೊಂಡು ನಂತರ ಕೆಳಗೆ ಬಿದ್ದಿದೆ. ಆದರೆ ನಾಯಿ ಪವಾಡವೆಂಬಂತೆ ಬದುಕುಳಿದಿದೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋ ಪ್ರಾಣಿ ಪ್ರಿಯರು ಮತ್ತು ಕಾರ್ಯಕರ್ತರಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆʼ ಎಂದು ವರದಿ ಮಾಡಲಾಯಿತು.
ʼಪವರ್ ಟಿವಿ ಕನ್ನಡʼ ವೆಬ್‌ಸೈಟ್‌ನಲ್ಲಿ ʼಚಲಿಸುತ್ತಿದ್ದ ರೈಲಿಗೆ ನಾಯಿ ಹತ್ತಿಸಲು ಹೋಗಿ ಅದರ ಪ್ರಾಣಕ್ಕೆ ಕುತ್ತು ತಂದ ಮಾಲೀಕʼ ಎಂಬ ಶೀರ್ಷಿಕೆಯನ್ನೀಡಿ ವರದಿಯೊಂದನ್ನು ಮಾಡಿರುವುದನ್ನು ಕಂಡಿದ್ದೇವೆ. ವರದಿಯಲ್ಲಿ ʼಸಾಕು ಪ್ರಾಣಿಗಳನ್ನು ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವ ಹಾಗೆ ನೋಡಿಕೊಳ್ಳುವುದನ್ನು ನಾವು ಕಂಡಿರುತ್ತೇವೆ. ಅವುಗಳ ಸುರಕ್ಷತೆ ಮತ್ತು ಅವುಗಳ ಯೋಹ ಕ್ಷೇಮಕ್ಕೆ ಮಾಲೀಕರು ಸಾಕಷ್ಟು ಕಾಳಜಿ ವಹಿಸುತ್ತಾರೆ. ಅದರಲ್ಲೂ ಸಾರ್ವಜನಿಕ ಪ್ರದೇಶಗಳಲ್ಲಿ ಪ್ರಾಣಿಗಳನ್ನು ಕರೆದುಕೊಂಡು ಓಡಾಡುವ ಸಂದರ್ಭದಲ್ಲಿ ಮತ್ತಷ್ಟು ಜಾಗರೂಕತೆಯನ್ನು ವಹಿಸಬೇಕಾಗುತ್ತದೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ನಾಯಿಯನ್ನು ಚಲಿಸುತ್ತಿದ್ದ ರೈಲಿಗೆ ಹತ್ತಿಸಲು ಹೋಗಿ ಅದರ ಪ್ರಾಣಕ್ಕೆ ಕುತ್ತು ತಂದಿದ್ದಾನೆ. ಈ ವೈರಲ್ ವಿಡಿಯೋದಲ್ಲಿ ಮಾಲೀಕನೊಬ್ಬ ತನ್ನ ನಾಯಿಯನ್ನು ಚಲಿಸುತ್ತಿದ್ದ ರೈಲಿಗೆ ಹತ್ತಿಸಲು ಹೋಗಿದ್ದಾನೆ. ಆದರೆ ಭಯಗೊಂಡ ನಾಯಿ ರೈಲು ಹತ್ತಲು ಕಷ್ಟಪಟ್ಟಿದೆ. ಈ ವೇಳೆ ನಾಯಿಯ ಕೊರಳಿಗೆ ಕಟ್ಟಿದ್ದ ಬೆಲ್ಟ್ ಬಿಚ್ಚಿಕೊಂಡಿದ್ದು. ನಾಯಿ ನೇರವಾಗಿ ಚಲಿಸುತ್ತಿದ್ದ ರೈಲಿನ ಕೆಳಗೆ ಬಿದ್ದಿದೆ. ಈ ದೃಷ್ಯ ನೋಡುವವರ ಎದೆ ಝಲ್ ಎನಿಸುವಂತಿದ್ದು. ಸದ್ಯ ಮೂಲಗಳ ಪ್ರಕಾಣ ನಾಯಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.ʼ ಎಂದು ವರದಿ ಮಾಡಲಾಗಿದೆ.
ಏಪ್ರಿಲ್ 02, 2025ರಂದು, ನ್ಯೂಸ್ 18 ವೆಬ್‌ಸೈಟ್‌ನಲ್ಲಿ ʼJhansi railway station Dog news : एसी कोच में चढ़ते समय ट्रेन के नीचे आ गया डॉग, वायरल वीडियो का सच कर देगा हैरानʼ ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಲಾಗಿದೆ. ವರದಿಯಲ್ಲಿ ʼಝಾನ್ಸಿ ರೈಲು ನಿಲ್ದಾಣದಲ್ಲಿ ಮುಂಬೈ ಕಡೆಗೆ ಹೋಗುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್‌ನ ಬೋಗಿಯನ್ನು ಹತ್ತುವಾಗ ಸಾಕು ನಾಯಿಯೊಂದು ಚಲಿಸುವ ರೈಲಿನ ಕೆಳಗೆ ಸಿಲುಕಿತು. ಅದೃಷ್ಟವಶಾತ್, ನಾಯಿಯ ಜೀವ ಉಳಿಸಲಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 28 ಸೆಕೆಂಡುಗಳ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗುತ್ತಿದೆʼ ಎಂದು ವರದಿಯಾಗಿದೆ.
ವೈರಲ್ ಆದ ಸುದ್ದಿ ಸಾಮಾಜಿಕ ಜಾಲತಾಣದ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿವೆ. ವಾಸ್ತವವಾಗಿ, ರೈಲು ಅಪಘಾತದಲ್ಲಿ ನಾಯಿ ಸಾವನ್ನಪಿಲ್ಲ, ಸಣ್ಣಪುಟ್ಟ ಗಾಯಗಳಾಗಿವೆ.