ಫ್ಯಾಕ್ಟ್‌ಚೆಕ್‌: ನಿರ್ಮಾಪಕ ಅಲ್ಲು ಅರವಿಂದ್ ಅವರು ಎಪಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಕ್ಷಮೆ ಯಾಚಿಸಲಿಲ್ಲ

ನಿರ್ಮಾಪಕ ಅಲ್ಲು ಅರವಿಂದ್ ಅವರು ಎಪಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಕ್ಷಮೆ ಯಾಚಿಸಲಿಲ್ಲ

Update: 2024-06-30 15:48 GMT

ತೆಲುಗು ಚಿತ್ರ ನಿರ್ಮಾಪಕರು ಜೂನ್ 24ರಂದು ವಿಜಯವಾಡದಲ್ಲಿ ಎಪಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರೊಂದಿಗೆ ಪವನ್ ಕ್ಯಾಂಪ್‌ ಕಚೇರಿಯಲ್ಲಿ ಸಭೆ ನಡೆಸಿದರು. ಎಪಿ ಸಿನಿಮಾಟೋಗ್ರಫಿ ಸಚಿವ ಕಂದುಲ ದುರ್ಗೇಶ್, ನಿರ್ಮಾಪಕರಾದ ಅಲ್ಲು ಅರವಿಂದ್, ಸಿ.ಅಶ್ವನಿದತ್, ದಿಲ್ ರಾಜು, ಎ.ಎಂ.ರತ್ನಂ, ಎಸ್.ರಾಧಾಕೃಷ್ಣ, ಭೋಗವಲ್ಲಿ ಪ್ರಸಾದ್, ಡಿವಿವಿ ದಾನಯ್ಯ, ಯರ್ಲಗಡ್ಡ ಸುಪ್ರಿಯಾ, ಎನ್.ವಿ.ಪ್ರಸಾದ್, ಬನ್ನಿ ವಾಸ್, ನವೀನ್ ಎರ್ನೇನಿ, ಸೂರ್ಯದೇವರ ಜಿ ನಾಗವಂಶಿ, ಟಿ. ವಿಶ್ವಪ್ರಸಾದ್ ಮತ್ತಿತರರು ಈ ಸಭೆಯಲ್ಲಿ ಭಾಗವಹಿಸಿದ್ದರು.

ಖ್ಯಾತ ನಿರ್ಮಾಪಕ ಗೀತಾ ಆರ್ಟ್ಸ್ ಮಾಲೀಕ ಅಲ್ಲು ಅರವಿಂದ್ ಹಾಗೂ ಪವನ್ ಕಲ್ಯಾಣ್ ಬಗ್ಗೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದೆ. ಎಪಿ ವಿಧಾನಸಭಾ ಚುನಾವಣೆಗೂ ಮುನ್ನ ಮೆಗಾ ಫ್ಯಾಮಿಲಿ ನಾಯಕರು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಪರ ಪ್ರಚಾರ ಮಾಡಿದರು ಆದರೆ ನಟ ಅಲ್ಲು ಅರ್ಜುನ್ ಮಾತ್ರ ನಂದ್ಯಾಲಕ್ಕೆ ತೆರಳಿ ವೈಸಿಪಿ ಅಭ್ಯರ್ಥಿಯಾಗಿರುವ ತಮ್ಮ ಸ್ನೇಹಿತೆ ಶಿಲ್ಪಾ ರವಿಚಂದ್ರ ರೆಡ್ಡಿ ಪರ ಪ್ರಚಾರ ನಡೆಸಿದರು. ಈ ಘಟನೆಯ ನಂತರ ಮೆಗಾ ಅಭಿಮಾನಿಗಳು ಅಲ್ಲು ಅರ್ಜುನ್‌ರನ್ನು ಟೀಕಿಸಲು ಶುರು ಮಾಡಿದ್ದಾರೆ.

ಅಲ್ಲು ಅರ್ಜುನ್ ಪ್ರಚಾರ ಮಾಡಿದ ವೈಸಿಪಿ ಅಭ್ಯರ್ಥಿ ಚುನಾವಣೆಯಲ್ಲಿ ಸೋತರು, ಜನಸೇನೆಯ ಅಭ್ಯರ್ಥಿ ಪವನ್ ಕಲ್ಯಾಣ್ ಪಿಠಾಪುರಂನಲ್ಲಿ ಗೆದ್ದು ಉಪ ಮುಖ್ಯಮಂತ್ರಿಯಾದರು. ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರನ್ನು ಭೇಟಿ ಮಾಡಲು ಹೋದಾಗ ಅಲ್ಲು ಅರ್ಜುನ್ ಪರವಾಗಿ ಕ್ಷಮೆ ಕೇಳಲು ಅಲ್ಲಿಗೆ ಹೋಗಿದ್ದರು ಎಂದು ಹಲವು ಯೂಟ್ಯೂಬ್ ಚಾನೆಲ್‌ಗಳು ಥಂಬ್‌ನೇಲ್‌ಗಳನ್ನು ಹಂಚಿಕೊಂಡಿದ್ದಾರೆ.



ಫ್ಯಾಕ್ಟ್‌ಚೆಕ್‌

ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ಮೂಲ ವಿಡಿಯೋವಿನಲ್ಲಿ ಹೇಳಿದ್ದು ಒಂದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿರುವುದು ಮತ್ತೊಂದು. ಹಾಗೆ ಯೂಟ್ಯೂಬ್ ಥಂಬ್‌ನೇಲ್‌ಗಳಲ್ಲಿ ಮತ್ತೊಂದನ್ನು ಪ್ರಚಾರ ಮಾಡುತ್ತಿದ್ದಾರೆ. ಅಲ್ಲು ಅರವಿಂದ್‌ ಕ್ಷಮೆಯಾಚನೆ ಎಂದು ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಹುಡುಕಾಟ ನಡೆಸಿದಾಗ ನಮಗೆ ಅಂತಹ ಸುದ್ದಿ ನಮಗೆ ಯಾವುದೂ ಕಂಡುಬಂದಿಲ್ಲ

ಅಲ್ಲು ಅರವಿಂದ್, ಪವನ್ ಕಲ್ಯಾಣ್ ಎಂಬ ಕೀವರ್ಡ್ ಬಳಸಿ ನಾವು ಹುಡುಕಾಟ ನಡೆಸಿದಾಗ ನಮಗೆ ಪವನ್ ಕಲ್ಯಾಣ್ ನಿರ್ಮಾಪಕರ ಜೊತೆಗಿನ ಸಭೆಗೆ ಸಂಬಂಧಿಸಿದ ಹಲವು ಮಾಧ್ಯಮ ವರದಿಗಳು ನಮಗೆ ಸಿಕ್ಕಿದವು.

ಈ ವರದಿಗಳಲ್ಲಿ ಅಲ್ಲು ಅರವಿಂದ್ ಅವರು ಪವನ್ ಕಲ್ಯಾಣ್ ಬಳಿ ಕ್ಷಮೆ ಕೇಳಿದ್ದಾರೆ ಎಂಬ ಸುದ್ದಿಯ ಬಗ್ಗೆ ನಮಗೆ ಯಾವುದೇ ವರದಿಯೂ ಸಿಗಲಿಲ್ಲ.

ಪವನ್ ಕಲ್ಯಾಣ್-ನಿರ್ಮಾಪಕರ ಸಭೆಯ ನಂತರ ಅಲ್ಲು ಅರವಿಂದ್ ಕೂಡ ಮಾಧ್ಯಮಗಳೊಂದಿಗೆ ಮಾತನಾಡಿದರು. "ನಾವು ಪವನ್ ಕಲ್ಯಾಣ್ ಅವರನ್ನು ನಾವು ಮರ್ಯಾದ ಪೂರ್ವಕವಾಗಿ ಭೇಟಿಯಾಗಲು ಬಂದಿದ್ದೇವೆ. ಈ ಸಭೆಯಲ್ಲಿ ನೆಮ್ಮದಿಯಾಗಿ ಮಾತನಾಡಿಕೊಂಡಿದ್ದಲ್ಲದೆ, ಸಿಎಂ ಚಂದ್ರಬಾಬು ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಅಭಿನಂದಿಸಲು ಒಂದು ದಿನ ಮೀಸಲಿಡುವಂತೆ ಕೋರಿದ್ದೇವೆ. ಸಿಎಂ ಚಂದ್ರಬಾಬು ಅಪಾಯಿಂಟ್‌ಮೆಂಟ್ ಸಿಕ್ಕರೆ ಎಲ್ಲಾ ಉದ್ಯಮದ ವಿವಿಧ ಕ್ಷೇತ್ರಗಳ ಜನರು ಆಗಮಿಸಿ ಮುಖ್ಯಮಂತ್ರಿ ಚಂದ್ರಬಾಬು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಅಭಿನಂದಿಸುತ್ತೇವೆ ಎಂದು ಅಲ್ಲು ಅರವಿಂದ್ ಹಲವು ಮಾಧ್ಯಮ ಸಂಸ್ಥೆಗಳು ಈ ಹೇಳಿಕೆಯೊಂದಿಗೆ ಲೇಖನಗಳನ್ನು ಪ್ರಕಟಿಸಿರುವುದನ್ನು ನಾವು ಕಂಡುಕೊಂಡೆವು.

https://10tv.in/telugu-news/movies/allu-aravind-comments-after-movie-producers-meeting-with-deputy-cm-pawan-kalyan-837507.html

https://www.eenadu.net/videos/playvideo/video-film-producer-allu-aravind-comments-after-meeting-with-ap-deputy-cm-pawan-kalyan/2/54918

https://telugu.abplive.com/andhra-pradesh/producer-allu-aravind-comments-after-meeting-with-ap-deputy-cm-pawan-kalyan-168553

ವೈರಲ್ ಥಂಬ್‌ನೇಲ್‌ಗಳನ್ನು ಬಳಸಿ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ನಮಗೆ ಅಲ್ಲು ಅರವಿಂದ್‌ ಏರ್‌ಪೋರ್ಟ್‌ನಿಂದ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿರುವ ದೃಶ್ಯಗಳೆಂದು ನಾವು ಗುರುತಿಸಿದೆವು.

Full View

Full View

ಹಾಗಾಗಿ, ಅಲ್ಲು ಅರವಿಂದ್ ಅವರು ಎಪಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಕ್ಷಮೆ ಯಾಚಿಸಿದ್ದಾರೆ ಎಂಬ ವೈರಲ್ ಹೇಳಿಕೆಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಕೇವಲ ಜನರನ್ನು ದಾರಿ ತಪ್ಪಿಸಲು ಕೆಲವು ಮಾಧ್ಯಮ ಬಳಕೆದಾರರು ತಪ್ಪು ಪೋಸ್ಟ್‌ಗಳನ್ನು ಮಾಡುತ್ತಿದ್ದಾರೆ.

Claim :  ಅಲ್ಲು ಅರವಿಂದ್ ಅವರು ಎಪಿ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಕ್ಷಮೆ ಯಾಚಿಸಲಿಲ್ಲ
Claimed By :  Social Media Users
Fact Check :  False
Tags:    

Similar News