ಹಾಲಿನ ಟಬ್‌ನಲ್ಲಿ ವ್ಯಕ್ತಿಯೊಬ್ಬ ಸ್ನಾನ ಮಾಡುತ್ತಿರುವ ವಿಡಿಯೋ ಕೇರಳಗೆ ಸಂಬಂಧಿಸಿದಲ್ಲ

ಹಾಲಿನ ಟಬ್‌ನಲ್ಲಿ ವ್ಯಕ್ತಿಯೊಬ್ಬ ಸ್ನಾನ ಮಾಡುತ್ತಿರುವ ವಿಡಿಯೋ ಕೇರಳಗೆ ಸಂಬಂಧಿಸಿದಲ್ಲ

Update: 2024-11-14 04:00 GMT

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ವೈರಲ್‌ ಆಗುತ್ತಿದೆ. ವಿಡಿಯೋವನ್ನು ಗಮನಿಸಿದರೆ ಒಬ್ಬ ವ್ಯಕ್ತಿ ಚೊಂಬನ್ನು ಬಳಸಿ ಬಿಳಿಯಾಗಿರುವ ನೀರನ್ನು ಉಪಯೋಗಿಸಿ ಟಬ್‌ನಲ್ಲಿ ಕೂತು ಸ್ನಾನ ಮಾಡುತ್ತಿರುವುದನ್ನು ನಾವು ನೋಡಬಹುದು.

ನವಂಬರ್‌ 06, 2024ರಂದು ʼಬಕರಿ ನ್ಯೂಸ್‌ʼ ಎಂಬ ಎಕ್ಸ್‌ ಖಾತೆದಾರ ತನ್ನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡು "केरल की एक दूध डेयरी (फैक्ट्री) का नजारा देखिए | जहां एक मुस्लिम व्यक्ति दूध के टब में नहा रहा है और वही दूध पैक करके बाजार में बेचा जा रहा है| इस घटना की जांच होना जरुरी है कि ये बात सच है या नहीं ???" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಕೇರಳಾದಲ್ಲಿರುವ ಒಂದು ಹಾಲಿನ ಡೈರಿ ಕಾರ್ಖಾನೆಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಹಾಲಿನ ಟಬ್‌ನಲ್ಲಿ ಸ್ನಾನ ಮಾಡುತ್ತಿರುವ ದೃಶ್ಯವನ್ನು ನೋಡಿ ಮತ್ತು ಅದೇ ಹಾಲನ್ನು ಮಾರುಕಟ್ಟೆಯಲ್ಲಿ ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದು ನಿಜವೋ ಅಲ್ಲವೋ ಎಂಬುದು ಮುಖ್ಯವೇ? ಎಂದು ಬರೆದು ಪೋಸ್ಟ್‌ ಮಾಡಲಾಗಿದೆ

ವೈರಲ್‌ ಆದ ವಿಡಿಯೋವಿನ ಸ್ಕ್ರೀನ್‌ಶಾಟ್‌ನ್ನು ನೀವಿಲ್ಲಿ ನೋಡಬಹುದು


ಮತ್ತೊಬ್ಬ ಫೇಸ್‌ಬುಕ್‌ ಖಾತೆದಾರರು "They wanted to feed this milk to Hindus . I am not trying advertise but when I am in India I buy only Amul because they don’t feed non veg to cows and such adulteration will not happen" ಎಂಬ ಶೀರ್ಷಿಕೆಯನ್ನೀಡಿ ವಿಡಿಯೋವನ್ನು ಪೊಸ್ಟ್‌ ಮಾಡಿದ್ದಾರೆ. ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಈ ಹಾಲನ್ನು ಹಿಂದೂಗಳಿಗೆ ಕುಡಿಸಲು ಬಯಸುತ್ತಿದ್ದಾರೆ. ನಾನು ಯಾವುದೇ ರೀತಿಯ ಜಾಹೀರಾತು ಮಾಡಲು ಪ್ರಯತ್ನಿಸುತ್ತಿಲ್ಲ. ಆದರೆ ನಾನು ಭಾರತದಲ್ಲಿರುವವರೆಗೂ ನಾನು ಅಮುಲ್ ಬ್ರಾಂಡ್‌ನ ಹಾಲನ್ನು ಮಾತ್ರ ಖರೀದಿಸುತ್ತೇನೆ ಏಕೆಂದರೆ ಅವರು ಹಸುಗಳಿಗೆ ಮಾಂಸಾಹಾರಿ ಆಹಾರವನ್ನು ನೀಡುವುದಿಲ್ಲ ಜೊತೆಗೆ ಯಾವುದೇ ಕಲಬೆರಕೆ ಮಾಡುವುದಿಲ್ಲ" ಎಂದು ಬರೆದು ಪೊಸ್ಟ್‌ ಮಾಡಿದ್ದಾರೆ.

Full View


Full View


Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ವೈರಲ್‌ ಆದ ವಿಡಿಯೋ ಚಿತ್ರೀಕರಿಸಿರುವುದು ಕೇರಳದ್ದಲ್ಲ, ಈ ಘಟನೆ ನಡೆದಿರುವುದು ಟರ್ಕಿಯಲ್ಲಿ.

ನಾವು ವೈರಲ್‌ ಆದ ವಿಡಿಯೋವಿನಲ್ಲಿರುವ ನಿಜಾಂಶವನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀಫ್ರೆಮ್‌ಗಳನ್ನು ಉಪಯೋಗಿಸಿ ಗೂಗಲ್‌ ರಿವರ್ಸ್‌ ಇಮೇಜ್‌ ಸರ್ಚ್‌ ಮೂಲಕ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಜೂನ್‌ 10, 2022ರಂದು ಟರ್ಕಿಯ ವೆಬ್‌ಸೈಟ್‌ "TRT HABER" ಎಂಬ ವೆಬ್‌ಸೈಟ್‌ನಲ್ಲಿ "He took a milk bath in a cauldron, was acquitted and won compensation" ಎಂಬ ಶೀರ್ಷಿಕೆಯೊಂದಿಗಿರುವ ವರದಿಯನ್ನು ನಾವು ಕಂಡುಕೊಂಡೆವು. ವರದಿಯಲ್ಲಿ ʼಕೊನ್ಯಾದಲ್ಲಿನ ಡೈರಿ ಪ್ಲಾಂಟ್‌ನಲ್ಲಿ ಉದ್ಯೋಗಿಯಾಗಿರುವ ಎಮ್ರೆ ಸಯಾರ್ ಎಂಬ ವ್ಯಕ್ತಿ ಹಾಲಿನಲ್ಲಿ ಸ್ನಾನ ಮಾಡಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ನವೆಂಬರ್ 06,2020 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡ ಇನ್ನೊಬ್ಬ ಕೆಲಸಗಾರ ಉಗುರ್ ತುರ್ಗುಟ್ ಎಂಬ ವ್ಯಕ್ತಿಯನ್ನೂ ಸಹ ಬಂಧಿಸಲಾಯಿತು. ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಡೈರಿ ಪ್ಲಾಂಟ್‌ಗೆ ದಂಡ ವಿಧಿಸಿ, ಅವರ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಎಂದು ವರದಿಯಾಗಿದೆ.


ನವಂಬರ್‌ 11, 2020ರಂದು ʼಎನ್‌ಟಿವಿʼ ಯೂಟ್ಯೂಬ್‌ ಚಾನೆಲ್‌ನಲ್ಲಿ "Worker Bathes in Milk Tub At Dairy plant | Tik Tok Viral Video | Ntv" ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Full View

ನಾವು ʼಬಾತ್‌ ಮಿಲ್ಕ್‌ ವರ್ಕರ್‌ʼ ಎಂಬ ಕೀವರ್ಡ್‌ನ್ನು ಉಪಯೋಗಿಸಿ ಗೂಗಲ್‌ನಲ್ಲಿ ಹುಡುಕಾಟ ನಡೆಸಿದಾಗ ನಮಗೆ ಸಾಕಷ್ಟು ಮಾಧ್ಯಮ ವರದಿಗಳು ಕಾಣಿಸಿದವು. ನವಂಬರ್‌ 13, 2020ರಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವೆಬ್‌ಸೈಟ್‌ನಲ್ಲಿ "Worker takes a bath in milk tub at dairy plant in Turkey; arrested after video goes viral" ಎಂಬ ಶಿರ್ಷಿಕೆಯೊಂದಿಗೆ ವರದಿಯನ್ನು ಮಾಡಿದೆ. ವರದಿಯಲ್ಲಿ ʼಟರ್ಕಿಯ ಕೊನ್ಯಾದ ಸೆಂಟ್ರಲ್ ಅನಾಟೋಲಿಯನ್ ಪ್ರಾಂತ್ಯದ ಡೈರಿ ಪ್ಲಾಂಟ್‌ನಲ್ಲಿ ಕೆಲಸಗಾರನೊಬ್ಬ ಹಾಲಿನ ತೊಟ್ಟಿಯಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಆತನನ್ನು ಬಂಧಿಸಲಾಗಿದೆʼ ಎಂದು ವರದಿಯಾಗಿದೆ.

ಎನ್‌ಡಿಟಿವಿಯ ವರದಿಯ ಪ್ರಕಾರ ʼವೈರಲ್‌ ಆದ ವೀಡಿಯೊ ಟರ್ಕಿಯ ಕೊನ್ಯಾದ ಸೆಂಟ್ರಲ್ ಅನಾಟೋಲಿಯನ್ ಪ್ರಾಂತ್ಯದ ಕೋನಿಯಲ್ಲಿರುವ ಡೈರಿ ಪ್ಲಾಂಟ್​ನದ್ದಾಗಿದೆ. ಹಾಲಿನಲ್ಲಿ ಸ್ನಾನ ಮಾಡುತ್ತಿದ್ದ ವ್ಯಕ್ತಿಯ ಹೆಸರು ಎಮ್ರೆ ಸಾಯರ್. ಆತ ಟಿಕ್‌ಟಾಕ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದ ವಿಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿಯನ್ನು ಬಂಧಿಸಲಾಯಿತು ಜೊತೆಗೆ ಡೈರಿ ಪ್ಲಾಂಟ್‌ನ್ನು ಸಹ ಮುಚ್ಚಲಾಗಿದೆ. ಆದರೆ ಡೈರಿ ಪ್ಲಾಂಟ್‌ನ ಮಾಲಿಕ ಹೇಳುತ್ತಿರುವುದೇನೆಂದರೆ, ವಿಡಿಯೋದಲ್ಲಿ ಕಾಣುವ ವ್ಯಕ್ತಿ ಹಾಲಿನಲ್ಲಿ ಸ್ನಾನ ಮಾಡಲಿಲ್ಲ, ವಾಸ್ತವವಾಗಿ ಬಾಯ್ಲರ್‌ಗಳನ್ನು ತೊಳೆಯಲು ನೀರುನ ಜೊತೆಗೆ ಬಿಳಿಯ ದ್ರವದ ಮಿಶ್ರಣದಲ್ಲಿ ಆತ ಇದ್ದ. ಯಾರೋ ನಮ್ಮ ಕಂಪನಿಯಗೆ ಮಾನನಷ್ಟಗೊಳಿಸಲು ಈ ರೀತಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ ಎಂದು ಮಾಲೀಕರು ಹೇಳಿದ್ದಾರೆ ಎಂದು ಮಾಧ್ಯಮ ವರದಿಗಳಲ್ಲಿ ಉಲ್ಲೇಖಿಸಲಾಗಿದೆ.ʼ


ನವಂಬರ್‌ 05, 2020ರಂದು ʼATV Haberʼ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲೂ ಈ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಾಣಬಹುದು

Full View


Full View

ಹೀಗಾಗಿ ವೈರಲ್‌ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ ಎಂಬುವುದು ಸಾಭೀತಾಗಿದೆ. ವೈರಲ್‌ ಆದ ವಿಡಿಯೋ ಕೇರಳಾದಲ್ಲ ಬದಲಿಗೆ ಈ ವಿಡಿಯೋ 2022ರ ಟರ್ಕಿಗೆ ಸಂಬಂಧಿಸಿದ ಹಳೆಯ ವಿಡಿಯೋ.

Claim :  ಹಾಲಿನ ಟಬ್‌ನಲ್ಲಿ ವ್ಯಕ್ತಿಯೊಬ್ಬ ಸ್ನಾನ ಮಾಡುತ್ತಿರುವ ವಿಡಿಯೋ ಕೇರಳಗೆ ಸಂಬಂಧಿಸಿದಲ್ಲ
Claimed By :  Social Media users
Fact Check :  False
Tags:    

Similar News