ಫ್ಯಾಕ್ಟ್‌ಚೆಕ್‌: ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕ್ರಿಕೆಟಿಗ ಮೊಹಮ್ಮದ್ ಶಮಿಯನ್ನು ಮದುವೆಯಾಗಿದ್ದಾರಾ?

ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕ್ರಿಕೆಟಿಗ ಮೊಹಮ್ಮದ್ ಶಮಿಯನ್ನು ಮದುವೆಯಾಗಿದ್ದಾರಾ?

Update: 2024-06-29 16:12 GMT

ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ ಸುದ್ದಿಯಲ್ಲಿರುತ್ತಾರೆ. ಕಳೆದ ವರ್ಷ ಭಾರತದ ಮಾಜಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ತಮ್ಮ ಪತಿ ಶೋಯೆಬ್ ಮಲಿಕ್ ಅವರಿಂದ ಬೇರ್ಪಟ್ಟಿದ್ದರು. ಹಾಗೆ ಭಾರತೀಯ ಕ್ರಿಕೆಟಿಗ ಮೊಹಮ್ಮದ್‌ ಶಮಿ ತನ್ನ ಪತ್ನಿ ಸಿನ್ ಜಹಾನ್‌ನಿಂದ ಬೇರ್ಪಟ್ಟಿರುವ ಶಮಿಯನ್ನು ಸಾನಿಯಾ ಮಿರ್ಜಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಸಾಮಾಜಿಕ ಬಳಕೆದಾರರು ಹಂಚಿಕೊಂಡಿದ್ದಾರೆ.

Full View

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ಫೋಟೋವನ್ನು ಎಡಿಟ್‌ ಮಾಡಲಾಗಿದೆ.

ಸಾನಿಯಾ ಮಿರ್ಜಾ ಮತ್ತು ಮೊಹಮ್ಮದ್ ಶಮಿಯನ್ನು ಮದುವೆಯಾಗಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ.

ವೈರಲ್‌ ಆದ ಸುದ್ದಿಯಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ರಿವರ್ಸ್ ಇಮೇಜ್ ಸರ್ಚ್‌ ಮಾಡಿದೆವು. ಹುಡುಕಾಟದಲ್ಲಿ ನಮಗೆ ಇಂಡಿಯಾ ಟುಡೇ ವೆಬ್‌ಸೈಟ್‌ನಲ್ಲಿ ಸಾನಿಯಾ ಮಿರ್ಜಾ ಮದುವೆಯ ಆಲ್ಬಂವೊಂದು ಕಾಣಿಸಿತು. ವೈರಲ್‌ ಆದ ಸಾನಿಯಾ ಫೋಟೋ ಸಾನಿಯಾ ಮಿರ್ಜಾ 2010 ರಲ್ಲಿ ಕ್ರಿಕೆಟಿಗ ಶೋಯೆಬ್ ಮಲಿಕ್ ಜೊತೆ ಮದುವೆಯಾದಾಗ ಕ್ಲಿಕ್ಕಿಸಿಕೊಂಡಿರುವ ಫೋಟೋ. ಸಾನಿಯಾ ಫೋಟೋ ಜೊತೆಗೆ ಮಲಿಕ್ ಸ್ಥಾನದಲ್ಲಿ ಶಮಿ ಇರುವಂತೆ ಎಡಿಟ್ ಮಾಡಲಾಗಿದೆ.


"ಸಾನಿಯಾ ಮಿರ್ಜಾ - ಶೋಯಬ್ ಮಲಿಕ್ ಮದುವೆ" ಎಂಬ ಕೀವರ್ಡ್‌ನ್ನು ಬಳಸಿ ನಾವು ಗೂಗಲ್‌ನಲ್ಲಿ ಹುಡುಕಿದಾಗ ಎನ್‌ಡಿಟಿವಿ ಪ್ರಕಟಿಸಿದ ಲೇಖನವೊಂದು ನಮಗೆ ಕಾಣಿಸಿತು.

ಲೇಖನದಲ್ಲಿ ಸಾನಿಯಾ ಮಿರ್ಜಾ ಅವರ ತಂದೆ ಇಮ್ರಾನ್ ಮಿರ್ಜಾ ಅವರು "ಸಾನಿಯಾ ಮದುವೆಯ ಬಗ್ಗೆ ಹರಿದಾಡುತ್ತಿರುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ. ಸಾನಿಯಾ ಕ್ರಿಕೆಟರ್‌ ಶಮಿಯನ್ನು ಮದುವೆಯಾಗಿಲ್ಲ" ಎಂದು ಬರೆದಿರುವ ಲೇಖನವೊಂದು ನಮಗೆ ಸಿಕ್ಕಿತ್ತು.

ಹೆಚ್ಚಿನ ತನಿಖೆಯಲ್ಲಿ, ನಮಗೆ ಜೂನ್ 21, 2024 ರಂದು ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಪ್ರಕಟಿಸಿರುವ ಲೇಖನವನ್ನು ಸಿಕ್ಕಿತು. "ವೈರಲ್‌ ಆಗುತ್ತಿರುವ ಸಾನಿಯಾ ಮತ್ತು ಶಮಿ ಚಿತ್ರಗಳಲ್ಲಿ ಯಾವುದೇ ಸತ್ಯಾಂಶವಿಲ್ಲ, ಮೂಲ ಚಿತ್ರ 2010ರಲ್ಲಿ ಸಾನಿಯಾ ಮದುವೆಯ ಸಮಯದಲ್ಲಿ ಕ್ಲಿಕ್ಕಿಸಿಕೊಂಡಿರುವ ಚಿತ್ರ. ಆ ಚಿತ್ರವನ್ನು ಎಡಿಟ್‌ ಮಾಡಲಾಗಿದೆ. ಮದುವೆ ಫೋಟೋವಿನಲ್ಲಿ ಶೋಯೆಬ್‌ನ ಸ್ಥಾನದಲ್ಲಿ ಶಮಿಯನ್ನು ಎಡಿಟ್‌ ಮಾಡಿ ಸಾಮಾಜಿಕ ಮಧ್ಯಮಗಳಲ್ಲಿ ಪೋಸ್ಟ್‌ ಮಾಡಲಾಗಿದೆ ಎಂದು ಲೇಖನವೊಂದು ಪ್ರಕಟಿಸಲಾಗಿತ್ತು.

ಮತ್ತಷ್ಟು ನಿಜಾಂಶವನ್ನು ತಿಳಿಯಲು ನಾವು ಸಾನಿಯಾ ಮಿರ್ಜಾರ ಅಧಿಕೃತ ಸಾಮಾಜಿಕ ಮಾಧ್ಯಮಗಳನ್ನು ಪರಿಶೀಲಿಸಿದಾಗ, ವೈರಲ್‌ ಆದ ಸುದ್ದಿಗೆ ಸಂಬಂಧಿಸಿದ ಯಾವುದೇ ಪೋಸ್ಟ್‌ಗಳು ನಮಗೆ ಕಂಡುಬಂದಿಲ್ಲ. ಅವರ ಇತ್ತೀಚಿನ ಪೋಸ್ಟ್‌ನಲ್ಲಿ, ಅವರು ಹಜ್ ಬಗ್ಗೆ ಪೋಸ್ಟ್ ಮಾಡಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ಕೂಡ ಸಾನಿಯಾ ಮಿರ್ಜಾ ಮತ್ತು ಸನಾ ಖಾನ್ ತಮ್ಮ ಕುಟುಂಬದೊಂದಿಗೆ ಹಜ್‌ಗೆ ತೆರಳಿದ್ದರು ಎಂದು ಲೇಖನವನ್ನು ಪ್ರಕಟಿಸಿತ್ತು. ಈ ಲೇಖನದಲ್ಲಿ, TOI ತನ್ನ ಸಹೋದರಿ ಅನಮ್ ಮತ್ತು ತಂದೆ ಇಮ್ರಾನ್ ಜೊತೆಗಿನ ಚಿತ್ರವನ್ನು ಸಾನಿಯಾ ಮಿರ್ಜಾ ಫೋಟೋಗಳನ್ನು ಪ್ರಕಟಿಸಿತ್ತು.

ಜನಪ್ರಿಯ ಡಿಜಿಟಲ್ ಪ್ರಕಾಶಕ RVCJ ಮೀಡಿಯಾ ಕೂಡ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಇವು ಕೇವಲ ವದಂತಿಗಳು ಎಂದು ಪೋಸ್ಟ್ ಮಾಡಿರುವುದನ್ನು ನಾವು ಕಂಡುಕೊಂಡೆವು.

ಇದರಿಂದ ಸಾಭೀತಾಗಿದ್ದೇನೆಂದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ಆದ ಫೋಟೋವನ್ನು ಎಡಿಟ್‌ ಮಾಡಲಾಗಿದೆ.

Claim :  ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಕ್ರಿಕೆಟಿಗ ಮೊಹಮ್ಮದ್ ಶಮಿಯನ್ನು ಮದುವೆಯಾಗಿದ್ದಾರಾ?
Claimed By :  Social Media Users
Fact Check :  False
Tags:    

Similar News