ಫ್ಯಾಕ್ಟ್‌ಚೆಕ್: ಅನಕಾಪಲ್ಲಿಯ ಸಂಸದ ಅಭ್ಯರ್ಥಿಯ ಮನೆಯಲ್ಲಿ ವಶಪಡಿಸಿಕೊಂಡ ಹಣದ ಕಂತೆಯ ಅಸಲಿಯತ್ತೇನು?
ಅನಕಾಪಲ್ಲಿಯ ಸಂಸದ ಅಭ್ಯರ್ಥಿಯ ಮನೆಯಲ್ಲಿ ವಶಪಡಿಸಿಕೊಂಡ ಹಣದ ಕಂತೆಯ ಅಸಲಿಯತ್ತೇನು?
ಆಂಧ್ರಪ್ರದೇಶದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಇತ್ತೀಚಿಗಷ್ಟೇ ಮುಗಿದಿದೆ. ಆಡಳಿತಾ ಪಕ್ಷ ವೈಎಸ್‌ಆರ್‌ಸಿಪಿ ಹಾಗೂ ಮೂರು ಬಾರಿ ಸಿಎಂ ಆದಂತಹ ಚಂದ್ರಬಾಬು ನಾಯ್ಡು ಅವರ ಟಿಡಿಪಿ-ಬಿಜೆಪಿ-ಜನಸೇನಾ ಮೈತ್ರಿಕೂಟದ ನಡುವೆ ತೀವ್ರ ಪೈಪೋಟಿ ಈ ಬಾರಿ ನಡೆಯಲಿದೆ. ಮೇ13,2024ರಂದು 4ಕೋಟಿಗೂ ಅಧಿಕ ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದರು.
ಅನಕಪಲ್ಲಿಯಲ್ಲಿರುವ ಟಿಡಿಪಿ-ಬಿಜೆಪಿ-ಜನಸೇನಾ ಅಭ್ಯರ್ಥಿಯ ಬೆಂಬಲಿಗ ಸಿಎಂ ರಮೇಶ್ ಮನೆಯಲ್ಲಿ ಹಣದ ಕಂತೆಗಳನ್ನು ಜಪ್ತಿ ಮಾಡಲಾಗಿದೆ ಎಂಬ ಕ್ಯಾಪ್ಷನ್‌ನೊಂದಿಗೆ ನೋಟಿನ ಕಂತೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ನೋಡಬಹುದಾಗಿದೆ.
ವಿಡಿಯೋವಿಗೆ ತೆಲುಗಿನಲ್ಲಿ ‘అనకాపల్లి కూటమి ఎంపీ అభ్యర్థి ముఖ్య అనుచరుడి ఇంట్లో బయటపడ్డ నోట్ల కట్టలు.’ ಎಂಬ ಕ್ಯಾಪ್ಷನ್‌ನೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ಕನ್ನಡಕ್ಕೆ ಕ್ಯಾಪ್ಷನ್‌ನ್ನು ಅನುವಾದಿಸಿದಾಗ "ಅನಕಾಪಲ್ಲಿ ಮೈತ್ರಿಕೂಟದ ಸಂಸದ ಅಭ್ಯರ್ಥಿಯ ಬೆಂಬಲಿಗನ ಮನೆಯಲ್ಲಿ ಹಣದ ನೋಟುಗಳ ಬಂಡಲ್‌ಗಳು ಪತ್ತೆ' ಎಂದು ಬರೆದಿದ್ದನ್ನು ನಾವು ಕಂಡುಕೊಂಡೆವು.
అనకాపల్లి కూటమి ఎంపీ అభ్యర్థి ముఖ్య అనుచరుడి ఇంట్లో బయటపడ్డ నోట్ల కట్టలు 🙄🙄 pic.twitter.com/biOr9uGj4w
— Nagesh | Siddham (@Nagesh_Siddham) May 6, 2024
ಫ್ಯಾಕ್ಟ್‌ಚೆಕ್
ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ವೀಡಿಯೊದಲ್ಲಿ ಕಾಣುವ ಕರೆನ್ಸಿ ನೋಟುಗಳು ಅನಕಾಪಲ್ಲಿಯ ಅಭ್ಯರ್ಥಿಯ ಬೆಂಬಲಿಗನ ಮನೆಯಲ್ಲಿ ದೊರೆತಿಲ್ಲ. ಬದಲಿಗೆ ಈ ವಿಡಿಯೋದಲ್ಲಿ ಕಾಣಿಸುವ ನೋಟಿನ ಕಂತೆ ಜಾರ್ಖಂಡ್‌ನ ಸಚಿವರೊಬ್ಬರ ಬೆಂಬಲಿಗರಿಗೆ ಸೇರಿದ್ದು.
ಅನಕಾಪಲ್ಲಿ ಬಿಜೆಪಿ ಸಂಸದ ಅಭ್ಯರ್ಥಿ ಸಿ.ಎಂ.ರಮೇಶ್ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದಾಗ ಕಂತೆ ಕಂತೆ ನೋಟುಗಳು ಪತ್ತೆಯಾಗಿರುವ ಕುರಿತು ವರದಿಗಳೇನಾದರೂ ಇದೆಯಾ ಎಂದು ಪರಿಶೀಲಿಸಿದಾಗ ನಮಗೆ ಯಾವುದೇ ವರದಿಗಳು ಸಿಕ್ಕಿಲ್ಲ.
Oneindia.com ವರದಿಯ ಪ್ರಕಾರ ಸಂಸದ ಅಭ್ಯರ್ಥಿ ಸಿಎಂ ರಮೇಶ್ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಮತ್ತು ಅವರಿಗೆ ಬೆದರಿಕೆ ಹಾಕಿದ್ದಾರೆ ಎಂಬ ಕಾರಣಕ್ಕೆ ಸಿಎಂ ರಮೇಶ್ ವಿರುದ್ಧ ವಂಚನೆ ಪ್ರಕರಣದಲ್ಲಿ ಪೊಲೀಸ್ ಕೇಸ್ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ನಾವು ಮತ್ತಷ್ಟು ಮಾಹಿತಿಯನ್ನು ಹೊರತೆಗೆಯಲು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಬಳಸಿ ವೀಡಿಯೊದಿಂದ ಹೊರತೆಗೆಯಲಾದ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಉಪಯೋಗಿಸಿ ಹುಡುಕಾಟ ನಡೆಸಿದಾಗ ನಮಗೆ ಮೇ 6ರಂದು ರಂದು ಪ್ರಕಟಿಸಲಾದ ವಿಡಿಯೋವೊಂದು ಕಂಡುಬಂದಿತು. ಆ ವಿಡಿಯೋದಲ್ಲಿ ಕಾಣಿಸುವುದು ನೋಟಿನ ಕಂತೆಯಯ ಮೂಲ ವಿಡಿಯೋ ಆಂಧ್ರಪ್ರದೇಶದಲ್ಲ ಬದಲಿಗೆ ಜಾರ್ಖಾಂಡದ್ದು ಎಂದು ಸಾಭೀತಾಯಿತು.
ವಿ6 ನ್ಯೂಸ್ ಮತ್ತು ಟಿವಿ9 ತೆಲುಗು ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಸುದ್ದಿ ವರದಿಯ ಪ್ರಕಾರ ಜಾರ್ಖಂಡ್‌ನಲ್ಲಿರುವ ಸಚಿವರೊಬ್ಬರ ಬೆಂಬಲಿಗನ ಮನೆಯ ಮೇಲೆ ಇಡಿ ದಾಳಿ ನಡೆಸಿದಾಗ ಅಲ್ಲಿ ಅಧಿಕಾರಿಗಳಿಗೆ 30ಕೋಟಿಗೂ ಅಧಿಕ ಕಪ್ಪು ಹಣ ಪತ್ತೆಯಾಗಿದೆ ಎಂದು ವರದಿ ಮಾಡಿತ್ತು. ಪತ್ತೆಯಾದ ಬ್ಲಾಕ್ ಹಣವನ್ನು ಇಡಿ ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಎನ್‌ಡಿಟಿವಿ ವರದಿಯ ಪ್ರಕಾರ , ಜಾರ್ಖಂಡ್‌ನ ರಾಜಧಾನಿ ರಾಂಚಿಯ ಅನೇಕ ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದಾಗ, ಜಾರ್ಖಂಡ್ ಸಚಿವರ ಸಹಾಯಕನ ಮನೆಯಲ್ಲಿ ಇಡಿ ದಾಳಿ ನಡೆಸಿದ ಸಮಯದಲ್ಲಿ ಆತನ ಮನೆಯಲ್ಲಿ 24ಕೋಟಿಗೂ ಅಧಿಕ ನಗದು ಪತ್ತೆಯಾಗಿದೆ ಎಂದು ವರದಿಯಾಗಿದೆ.
ಇತ್ತೀಚಿಗೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇಡಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ, ಜಾರ್ಖಂಡ್‌ನ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾಜಿ ಮುಖ್ಯಸ್ಥ ಇಂಜಿನಿಯರ್ ವೀರೇಂದ್ರ ರಾಮ್ ಮತ್ತು ಅವರ ಆಪ್ತ ವಲಯಕ್ಕೆ ಸಂಬಂಧಿಸಿದ ಕೆಲವು ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ. ಕಳೆದ ವರ್ಷ 2023ರ ಫೆಬ್ರವರಿಯಲ್ಲಿ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ವೀರೇಂದ್ರ ರಾಮ್ ಅವರನ್ನು ಇಡಿ ಬಂಧಿಸಿತ್ತು.
ANI ಮಾಧ್ಯಮ ಸಂಸ್ಥೆಯೂ ತನ್ನ ಎಕ್ಸ್ ಖಾತೆಯಲ್ಲಿ ವೈರಲ್ ವಿಡಿಯೋವಿನ ಪೂರ್ತಿ ಆವೃತ್ತಿಯನ್ನು ತನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ. ಹಂಚಿಕೊಂಡ ವಿಡಿಯೊವಿಗೆ ಶೀರ್ಷಿಕೆಯಾಗಿ "“Counting of notes still underway at the residence of household help of Sanjiv Lal - PS to Jharkhand Rural Development minister Alamgir Alam in Ranchi where a large amount of cash has been recovered so far" ಎಂದು ಬರೆದು ಪೋಸ್ಟ್ ಮಾಡಲಾಗಿತ್ತು.
#WATCH | Jharkhand: Counting of notes still underway at the residence of household help of Sanjiv Lal - PS to Jharkhand Rural Development minister Alamgir Alam in Ranchi where a large amount of cash has been recovered so far. More than Rs 20 crores has been counted so far.… pic.twitter.com/Vj6AtCRxy6
— ANI (@ANI) May 6, 2024
ಹೀಗಾಗಿ ವೈರಲ್ ಆದ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್ ವೀಡಿಯೊದಲ್ಲಿ ಕಾಣುವ ಕರೆನ್ಸಿ ನೋಟುಗಳು ಅನಕಾಪಲ್ಲಿಯ ಅಭ್ಯರ್ಥಿಯ ಬೆಂಬಲಿಗನ ಮನೆಯಲ್ಲಿ ದೊರೆತಿಲ್ಲ. ಬದಲಿಗೆ ಈ ವಿಡಿಯೋದಲ್ಲಿ ಕಾಣಿಸುವ ನೋಟಿನ ಕಂತೆ ಜಾರ್ಖಂಡ್‌ನ ಸಚಿವರೊಬ್ಬರ ಬೆಂಬಲಿಗರಿಗೆ ಸೇರಿದ್ದು.