ಫ್ಯಾಕ್ಟ್‌ಚೆಕ್‌: ವೈರಲ್ ವೀಡಿಯೊ ಕಾಣಿಸುತ್ತಿರುವುದು ಛತ್ತೀಸ್‌ಗಢದ ಎಸ್‌ಡಿಎಂ ಅಲ್ಲ ಬದಲಿಗೆ ಅದು ಜಗನ್ ಕ್ಯಾಬಿನೆಟ್‌ನಲ್ಲಿ ಮಂತ್ರಿ ವಿಡದಲಾ ರಜನಿ

ವೈರಲ್ ವೀಡಿಯೊ ಕಾಣಿಸುತ್ತಿರುವುದು ಛತ್ತೀಸ್‌ಗಢದ ಎಸ್‌ಡಿಎಂ ಅಲ್ಲ ಬದಲಿಗೆ ಅದು ಜಗನ್ ಕ್ಯಾಬಿನೆಟ್‌ನಲ್ಲಿ ಮಂತ್ರಿ ವಿಡದಲಾ ರಜನಿ

Update: 2024-05-20 20:40 GMT

Chattisgarh SDM

ಮೇ 7, 2024 ರಂದು ಛತ್ತೀಸ್‌ಗಢದ ಏಳು ಸಂಸದ ಸ್ಥಾನಗಳಾದ ಛತ್ತೀಸ್‌ಗಢದ ರಾಯ್‌ಪುರ, ಬಿಲಾಸ್‌ಪುರ್, ದುರ್ಗ್, ಕೊರ್ಬಾ, ರಾಯ್‌ಗಢ, ಜಾಂಜ್‌ಗೀರ್ ಚಂಪಾ ಮತ್ತು ಸುರ್ಗುಜಾ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಿತು. ಅಲ್ಲಿ ಒಟ್ಟು 168 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಮಹಿಳಾ ನಾಯಕಿಯೊಬ್ಬರು ಮಸೀದಿಗೆ ಭೇಟಿ ನೀಡಿ ಅಲ್ಲಿದ್ದ ಜನರನ್ನು ಉದ್ದೇಶಿಸಿ ಮಾತನಾಡುತ್ತಿರುವ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೈರಲ್‌ ಆದ ವಿಡಿಯೋವಿನಲ್ಲಿ ಕಾಣಿಸುವ ಮಹಿಳೆ ಛತ್ತೀಸ್‌ಗಢದ ಎಸ್‌ಡಿಎಂ ನಿಕಿತಾ ಸಿಂಗ್ ಎಂಬ ಹೇಳಿಕೆಯೊಂದಿಗೆ ವಿಡಿಯೋ ವೈರಲ್‌ ಆಗುತ್ತಿದೆ. ನಿಕಿತಾ ಸಿಂಗ್‌ ಮಸೀದಿ ನಿರ್ಮಿಸಲು ಭೂಮಿಯನ್ನು ಮುಸ್ಲೀಮರಿಗೆ ನೀಡಿದ್ದು ಮಾತ್ರವಲ್ಲದೆ ನಮಾಜ್ ಸಮಯದಲ್ಲಿ ಮಸೀದಿಗೆ ಭೇಟಿ ನೀಡಿ ಅವರೊಂದಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ವೈರಲ್‌ ಆಗಿದೆ.

ವಿಡಿಯೋವಿಗೆ ಹಿಂದಿಯಲ್ಲಿ ಶೀರ್ಷಿಕೆಯಾಗಿ "“इस नफ़रत भरे माहौल में एक मोहब्बत भरा पैगाम "छत्तीसगढ़ की dear SDM निकिता सिंह ने मस्जिद के लिए दी जगह और उस जगह पर नमाज भी पढवाई। हमारे देश की खूबसूरती यहीं तो है धन्यवाद SDM निकिता जी “ ಎಂದು ಬರೆದು ಪೋಸ್ಟ್‌ ಮಾಡಲಾಗಿದೆ.

ವೈರಲ್‌ ಪೋಸ್ಟ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ " ದ್ವೇಷ ತುಂಬಿದ ಈ ಪ್ರಪಂಚದಲ್ಲಿ ಛತ್ತೀಸ್‌ಗಢದ ಎಸ್‌ಡಿಎಮ್‌ ನಿಕಿತಾ ಸಿಂಗ್‌ ಮಸೀದಿಯ ನಿರ್ಮಾಣಕ್ಕೆ ಭೂಮಿಯನ್ನು ನೀಡಿದ್ದಲ್ಲದೇ, ನಮ್ಮೊಂದಿಗೆ ನಮಾಜ್‌ ಸಹ ಮಾಡುತ್ತಿದ್ದಾರೆ. ಹೀಗೆ ಪ್ರಪಂಚದಲ್ಲಿ ಪ್ರೀತಿಯ ಸಂದೇಶವನ್ನು ಮೆರೆಯುತ್ತಿದ್ದಾರೆ. ಧನ್ಯವಾದಗಳು SDM ನಿಕಿತಾ ಜೀ" ಎಂಬ ಸಂದೇಶದೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.

Full View

Full View

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ವೀಡಿಯೊದಲ್ಲಿ ಕಾಣಿಸುವ ಮಹಿಳೆ ಛತ್ತೀಸ್‌ಗಢದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ನಿಕಿತಾ ಸಿಂಗ್ ಅಲ್ಲ ಬದಲಿಗೆ ಆಂಧ್ರಪ್ರದೇಶದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ವಿಡದಲಾ ರಜಿನಿ.

ನಾವು ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ವಿಡಿಯೋವಿನಲ್ಲಿರುವ ಕೆಲವು ಪ್ರಮುಖ ಕೀವರ್ಡ್‌ಗಳನ್ನು ಬಲಸಿ ಗೂಗಲ್‌ನಲ್ಲಿ ರಿವರ್ಸ್‌ ಇಮೇಜ್‌ ರಿಸರ್ಚ್‌ ನಡೆಸಿದೆವು. ಹುಡುಕಾಟದಲ್ಲಿ ನಮಗೆ ವೈರಲ್‌ ವಿಡಿಯೋವಿನಲ್ಲಿ ಕಾಣುವ ಮಹಿಳೆ ಆಂಧ್ರಪ್ರದೇಶದ ಪ್ರಸ್ತುತ ಸಿಎಂ ಜಗನ್ಮೋಹನ್ ರೆಡ್ಡಿ ಅವರ ಸಂಪುಟದಲ್ಲಿ ಸಚಿವೆ, ವೈಎಸ್‌ಆರ್‌ಸಿಪಿ ಪಕ್ಷದ ನಾಯಕಿ, ಆಂಧ್ರಪ್ರದೇಶದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ವಿಡದಲಾ ರಜಿನಿ ಎಂಬುವುದನ್ನು ನಾವು ಕಂಡುಕೊಂಡೆವು.

ಇದೇ ವಿಡಿಯೋ ಏಪ್ರಿಲ್‌,9, 2024ರಂದು 4ಟಿವಿ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ “ముస్లిం, మైనారిటీ లకు అండగా ఉన్నాం..ఉంటాం | Minister Vidadala Rajini Attends Iftar Party “. ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ಮೂಲ ವಿಡಿಯೋವಿನಲ್ಲಿ ಬರುವ 54 ಸೆಕೆಂಡ್‌ನಿಂದ ವೈರಲ್‌ ಆದ ವಿಡಿಯೋವಿನ ಕ್ಲಿಪ್ಪಿಂಗ್‌ನ್ನು ನೋಡಬಹುದು.

Full View

ನಾವು ಸಚಿವೆ ವಿಡಡಾಲ ರಜಿನಿಯ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋವಿಗಾಗಿ ಹಡುಕಾಟ ನಡೆಸಿದಾಗ ನಮಗೆ ಏಪ್ರಿಲ್ 6, 2024 ರಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೈರಲ್ ವೀಡಿಯೊವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು. ವೈರಲ್‌ ವಿಡಿಯೋವಿಗೆ ಶೀರ್ಷಿಕೆಯಾಗಿ, “ముస్లిం,మైనారిటీ లకు అండగా ఉన్నాం..ఉంటాం. #ManathoManaRajinamma #YSRCongressPartyGunturWest #iftar ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದರು.

Full View

ನಾವು ನಿಕಿತಾ ಸಿಂಗ್, ಛತ್ತೀಸ್‌ಗಢ ಎಸ್‌ಡಿಎಂ ಎಂಬ ಕೀವರ್ಡ್‌ನ ಮೂಲಕ ಹುಡುಕಿದಾಗ, ನಮಗೆ ಛತ್ತೀಸ್‌ಗಢದಲ್ಲಿ ಆ ಹೆಸರಿನಲ್ಲಿರುವ ಯಾರೊಬ್ಬರ ಬಗ್ಗೆಯೂ ನಮಗೆ ಯಾವುದೇ ಸುದ್ದಿ ವರದಿಯಾಗಿರುವುದು ಕಾಣಿಸಲಿಲ್ಲ. ಛತ್ತೀಸ್‌ಗಢ ಸರ್ಕಾರದ ವೆಬ್‌ಸೈಟ್‌ನಲ್ಲೂ ಸಹ ನಮಗೆ ಎಸ್‌ಡಿಎಮ್‌ ನಿಕಿತಾ ಸಿಂಗ್ ಎಂಬ ಹೆಸರಿನಲ್ಲಿ ನಮಗೆ ಯಾವುದೇ ಮಾಹಿತಿ ದೊರೆತಿಲ್ಲ.

ಹೀಗಾಗಿ ವೈರಲ್‌ ವಿಡಿಯೋವಿನಲ್ಲಿ ಕಾಣುವ ವ್ಯಕ್ತಿ ಮಹಿಳೆ ಛತ್ತೀಸ್‌ಗಢದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ನಿಕಿತಾ ಸಿಂಗ್ ಅಲ್ಲ ಬದಲಿಗೆ ಆಂಧ್ರಪ್ರದೇಶದ ವೈಎಸ್‌ಆರ್‌ಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ವಿಡದಲಾ ರಜಿನಿ.

Claim :  ವೈರಲ್ ವೀಡಿಯೊ ಕಾಣಿಸುತ್ತಿರುವ ಮಹಿಳೆ ಛತ್ತೀಸ್‌ಗಢದ ಎಸ್‌ಡಿಎಂ ನಿಕಿತಾ ಸಿಂಗ್‌ ಅಲ್ಲ ಬದಲಿಗೆ ಅದು ಜಗನ್ ಕ್ಯಾಬಿನೆಟ್‌ನಲ್ಲಿ ಮಂತ್ರಿ ವಿಡದಲಾ ರಜನಿ
Claimed By :  Social Media Users
Fact Check :  False
Tags:    

Similar News