ಫ್ಯಾಕ್ಟ್‌ಚೆಕ್‌: ರಾಜಸ್ಥಾನದ ಹೊಲಗಳಲ್ಲಿ ಉಲ್ಕಾಶಿಲೆ ಬಿದ್ದಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ

ರಾಜಸ್ಥಾನದ ಹೊಲಗಳಲ್ಲಿ ಉಲ್ಕಾಶಿಲೆ ಬಿದ್ದಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ

Update: 2024-09-30 18:01 GMT

Asteroid 2024 RN 16

ಸೆಪ್ಟೆಂಬರ್ 2024 ರಲ್ಲಿ ಕ್ಷುದ್ರಗ್ರಹ 2024 RN16 ಭೂಮಿಯಿಂದ ಸುರಕ್ಷಿತವಾಗಿ ಹಾದುಹೋಯಿತು. 110-ಅಡಿ ವ್ಯಾಸ ಮತ್ತು ಗಂಟೆಗೆ 104, 761 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದ್ದರಿಂದ ನಮ್ಮ ಗ್ರಹಕ್ಕೆ ಹೋಡೆಯಬಹುದೆಂದು ಸಂದೇಹವನ್ನು ಸಹ ವ್ಯಕ್ತ ಪಡಿಸಿದ್ದರು ಆದರೆ, ಕ್ಷುದ್ರಗ್ರಹ 2024 RN16ಯಿಂದ ಭೂಮಿಗೆ ಯಾವುದೇ ಹಾನಿ ಉಂಟಾಗಲಿಲ್ಲ.

ಇತ್ತೀಚೆಗೆ ರಾಜಸ್ಥಾನದಲ್ಲಿ ಉಲ್ಕಾಶಿಲೆ ಬಿದ್ದಿರುವುದನ್ನು ನೋಡಿದ್ದೇವೆ ಎಂದು ರಾಜಸ್ಥಾನದ ಕೆಲವು ಸ್ಥಳೀಯರು ಹೇಳಿದ್ದಾರೆ. ಆದರೆ, ಅಧಿಕಾರಿಗಳು ಅಧಿಕೃತವಾಗಿ ಯಾವುದೇ ಸುದ್ದಿಯನ್ನು ಖಚಿತಪಡಿಸಿಲ್ಲ. ಈ ಖಗೋಳ ಘಟನೆ ಭಾರತ-ಪಾಕಿಸ್ತಾನ ಗಡಿಯಲ್ಲಿ ನಡೆದಿದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಕೆಲವು ಚಿತ್ರಗಳನ್ನು ಹಂಚಿಕೊಂಡು ಹೇಳುತ್ತಿದ್ದಾರೆ. ಕೆಲವರು ಇದು ಉಲ್ಕಾಶಿಲೆ ಎಂದು ಹೇಳಿದರೆ, ಇನ್ನು ಕೆಲವರು ಇದು ಪ್ರತಿದಿನ ಸಂಭವಿಸುವ ನಿಯಮಿತ ಖಗೋಳ ಘಟನೆ ಎಂದು ಸುದ್ದಿಯನ್ನು ತಳ್ಳಿಹಾಕಿದರು.

ಸಾಮಾಜಿಕ ಜಾಲತಾಣದಲ್ಲಿ ಕೆಲವು ಬಳಕೆದಾರರು ಖಗೋಳ ವಸ್ತುವೊಂದು ಭೂಮಿಗೆ ಬೀಳುತ್ತಿರುವ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಈ ವಿಡಿಯೋ ಈಗ ವೈರಲ್‌ ಆಗಿರುವುದನ್ನು ನಾವು ಕಾಣಬಹುದು.

Full View

Full View

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೋದಲ್ಲಿ ಕಾಣುವ ದೃಶ್ಯ ರಾಜಸ್ಥಾನದಲ್ಲಿ ಸಂಬಂಧಿಸಿದಲ್ಲ. ಈ ವಿಡಿಯೋವನ್ನು VFX ಮೂಲಕ ರಚಿಸಲಾಗಿದೆ.

ನಾವು ವೈರಲ್‌ ಆದ ವಿಡಿಯೋದಿಂದ ಕೆಲವು ಪ್ರಮುಖ ಕೀಫ್ರೇಮ್‌ಗಳನ್ನು ಬಳಸಿ ಹುಡುಕಾಟ ನಡಸಿದೆವು. ಹುಡುಕಾಟದಲ್ಲಿ ನಮಗೆ ರಾಜಸ್ಥಾನದ ಯಾವುದೇ ಪ್ರದೇಶದಲ್ಲಿ ಅಥವಾ ಭಾರತದ ಯಾವುದೇ ಭಾಗಗಳಲ್ಲಾಗಲೀ ಇಂತಹ ಯಾವುದೇ ಘಟನೆ ಸಂಭವಿಸಿರುವುದಾಗಿ ನಮಗೆ ಖಚಿತ ಮಾಹಿತಿ ಸಿಗಲಿಲ್ಲ ಹಾಗೆ ನಮಗೆ ಯಾವುದೇ ಸುದ್ದಿ ಮಾಧ್ಯಮ ವರದಿಗಳು ಸಹ ಕಂಡುಬಂದಿಲ್ಲ.

ನವೆಂಬರ್ 2023 ರಲ್ಲಿ ಅನ್ರಿಯಲ್ vfx ಯೂಟ್ಯೂಬ್‌ ಚಾನೆಲ್‌ನಲ್ಲಿ ʼmeteor fall sceneʼ ಎಂಬ ಶೀರ್ಷಿಕೆಯೊಂದಿಗೆ ಕೆಲವು ಹ್ಯಾಶ್‌ಟ್ಯಾಗ್‌ಗಳ ಜೊತೆಗೆ ವೀಡಿಯೊವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು.

#монтаж #meteor #fall #vfx #aftereffects #vfxbreakdown #unrealfxy #boom

https://www.youtube.com/watch?v=xDM_Chm-zc8

ಇದೇ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ ಚಾನೆಲ್‌ನಲ್ಲಿ #vfx #cgi #unrealvfx ಇತ್ಯಾದಿ ಹ್ಯಾಶ್‌ಟ್ಯಾಗ್‌ಗಳೊಂದಿಗೆ ನೋಡಬಹುದು.

Full View

unreallvfx ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಉಲ್ಕಾಪಾತಕ್ಕೆ ಸಂಬಂಧಿಸಿದ ಸಾಕಷ್ಟು ವೀಡಿಯೊಗಳನ್ನು ನೋಡಬಹುದು. ಆ ಖಾತೆಯ ಬಯೋವನ್ನು ನೋಡುವುದಾದರೆ, Digital creator , VFX/CGI/VIDEO EDITOR ಎಂದು ಬರೆದಿರುವುದನ್ನು ನಾವು ನೋಡಬಹುದು.

ಮಾರ್ಚ್ 16, 2024 ರಂದು unreallvfx ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡ ವೈರಲ್ ವೀಡಿಯೊ ಇಲ್ಲಿದೆ, ವಿಡಿಯೋವಿನ ಶೀರ್ಷಿಕೆಯಾಗಿ "ನನ್ನ ಖಾತೆಯನ್ನು ಫಾಲೋ ಮಾಡುವವರಿಗೆ 40% ರಿಯಾತಿಯಲ್ಲಿ ವಿಡಿಯೋ ಎಡಿಟಿಂಗ್‌ ಟೂಲ್ಸ್‌ ಪಡೆಯಬಹುದು. ರಿಯಾಯಿತಿ ದರದಲ್ಲಿ ನೀವು ಕೊಂಡುಕೊಳ್ಳಲು ಬಯಸಿದ್ದಲ್ಲಿ ನನ್ನ ಬಯೋವಿನಲ್ಲಿರುವ ಲಿಂಕ್‌ನ ಮೇಲೆ ಕ್ಲಿಕ್‌ ಮಾಡಿ ಎಂದು ಬರೆದಿದ್ದಾರೆ. ಹಾಗೆ VIDEO OLINDI: Kazakhstan. ISHLOV BERDI: @unreallvfx — 3D Moushn Dizayner. ISHLOV BERILDI: Adobe After Effects dasturida ಎಂಬ ಶಿರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಾಣಬಹುದು.

ಹೀಗಾಗಿ ವೈರಲ್‌ ಆದ ವಿಡಿಯೋ ಸಾಮಾಜಿಕ ಬಳಕೆದಾರರನ್ನು ತಪ್ಪುದಾರಿಗೆಳೆಯುವ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದ ವಿಡಿಯೋದಲ್ಲಿ ಕಾಣುವ ದೃಶ್ಯ ರಾಜಸ್ಥಾನದಲ್ಲಿ ಸಂಬಂಧಿಸಿದಲ್ಲ.

Claim :  ರಾಜಸ್ಥಾನದ ಹೊಲಗಳಲ್ಲಿ ಉಲ್ಕಾಶಿಲೆ ಬಿದ್ದಿದೆ ಎಂಬ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ
Claimed By :  Social Media Users
Fact Check :  False
Tags:    

Similar News