ಫ್ಯಾಕ್ಟ್‌ಚೆಕ್‌: ದೇಶದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆಯನ್ನು ಎಕ್ಸ್‌-ರೇ ಮೂಲಕ ಫಿಲ್ಟರ್ ಮಾಡಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಲಿಲ್ಲ

ದೇಶದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆಯನ್ನು ಎಕ್ಸ್‌-ರೇ ಮೂಲಕ ಫಿಲ್ಟರ್ ಮಾಡಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಲಿಲ್ಲ

Update: 2024-04-27 21:02 GMT

2024 ರ ಸಾರ್ವತ್ರಿಕ ಚುನಾವಣೆಯಿಂದಾಗಿ ರಾಜಕೀಯದಲ್ಲಿ ವಾತಾವರಣವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಮತದಾರರನ್ನು ಸೆಳೆಯಲು ದಿನವೂ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಹೊಸ ಹೊಸ ಪ್ರಣಾಳಿಕೆಗಳನ್ನು ಮಂಡಿಸುತ್ತಿದೆ. ಏಪ್ರಿಲ್ 6ರಂದು ರಾಹುಲ್ ಗಾಂಧಿ ತೆಲಂಗಾಣದ ಹೈದರಾಬಾದ್‌ನಲ್ಲಿ ನ್ಯಾಯ ಪತ್ರ (ಕಾಂಗ್ರೆಸ್ ಮ್ಯಾನಿಫೆಸ್ಟೋ)ವನ್ನು ಅನಾವರಣಗೊಳಿಸಿದರು.

ಕಾಂಗ್ರೆಸ್ ನಾಯಕ ಹಿಂದಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡುತ್ತಿರುವ 42 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

“देश का एक्सरे करदेंगे, दूध का दूध पानी का पानी होजाएगा, माईनोरिटिस को पता लगेगा की देशमे उनकी भागीदारी कितनी है। इसके बाद हम फाईनैनसिअल और इंस्टिट्यूशनल सर्वे करेंगे ये पता लगाएंगे हिंदुस्तान का धन किसके हाथ में, कौन सी बर्ग के हाथ में है । और इस ऐतिहासिक कदम के बाद, हम क्रांतिकारी काम सुरु करेंगे । जो आपका हक बनता है बो हम आपकेलिये आपको देनेका काम करेंगे”। ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ರಾಹುಲ್ ಗಾಂಧಿ ಅವರಿಗೆ ಹಿಂದೂ ಫೋಬಿಯಾ ಮತ್ತು ಮಾರ್ಕ್ಸ್‌ವಾದಿ - ಇಸ್ಲಾಮಿಸ್ಟ್ ವಿಚಾರಗಳನ್ನು ಮರೆಮಾಚುತ್ತಿಲ್ಲ. #WealthRedistributionPlan ಎಂಬ ಹ್ಯಾಶ್‌ಟ್ಯಾಗ್‌ನೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ವೈರಲ್‌ ವಿಡಿಯೋವನ್ನು ಎಡಿಟ್‌ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್‌ ಆದ ಸುದ್ದಿಯ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾಔಉ "ನ್ಯಾಯ್ ಪತ್ರ - ಹೈದರಾಬಾದ್‌ನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಲಾಂಚ್" ಎಂಬ ಕೀವರ್ಡ್‌ ಮೂಲಕ ಹುಡುಕಾಡಿದಾಗ ನಮಗೆ, ರಾಹುಲ್ ಗಾಂಧಿ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ಕ್ಲಿಪ್‌ನ ಮೂಲ ಆವೃತ್ತಿಯನ್ನು ನಾವು 31.55 ಸಮಯದ ಸ್ಟ್ಯಾಂಪ್‌ನಲ್ಲಿ ಕಂಡುಕೊಂಡೆವು. ಮೂಲ ವಿಡಿಯೋವಿನಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣದಲ್ಲಿ ಅಲ್ಪಸಂಖ್ಯಾತರ ಜೊತೆಗೆ ದಲಿತರು, ಬುಡಕಟ್ಟುಗಳು, ಒಬಿಸಿಗಳು ಮತ್ತು ಸಾಮಾನ್ಯ ವರ್ಗದ ಬಡವರ ಬಗ್ಗೆ ಪ್ರಸ್ತಾಪಿಸಿದ್ದಾರೆ.

Full View

ಮತ್ತಷ್ಟು ಮಾಹಿತಿಯನ್ನು ಕಲೆಹಾಕಲು ನಾವು ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಮೂಲಕ ಹುಡುಕಾಟ ನಡೆಸಿದಾಗ ನಮಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ತಮ್ಮ ಖಾತೆಯಲ್ಲಿ ಮೂಲ ವಿಡಿಯೋವನ್ನು ಹಂಚಿಕೊಂಡಿರುವುದನ್ನು ನಾವು ಕಂಡುಕೊಂಡೆವು.

ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಮೂಲ ಭಾಷಣದಲ್ಲಿ ರಾಹುಲ್ ಗಾಂಧಿ ಅಲ್ಪಸಂಖ್ಯಾತರ ಬಗ್ಗೆ ಮಾತ್ರವಲ್ಲ ದಲಿತರು, ಬುಡಕಟ್ಟುಗಳು, ಒಬಿಸಿಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ.

Claim :  ದೇಶದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆಯನ್ನು ಎಕ್ಸ್‌-ರೇ ಮೂಲಕ ಫಿಲ್ಟರ್ ಮಾಡಬೇಕು ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಲಿಲ್ಲ
Claimed By :  Social Media Users
Fact Check :  False
Tags:    

Similar News