ಫ್ಯಾಕ್ಟ್‌ ಚೆಕ್‌ : ಚಂದ್ರಯಾನ 3, ಚಂದ್ರನ ಮೇಲೆ ನೀರು ಪತ್ತೆ ಮಾಡಿದ್ದು ಸುಳ್ಳು

ಚಂದ್ರಯಾನ -3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಹಾಗೂ ಚಂದ್ರನ ಮೇಲೆ ನೀರು ಪತ್ತೆ ಮಾಡಿದ ಸುದ್ದಿ ಸುಳ್ಳು.

Update: 2023-08-17 04:17 GMT

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ನಿಗದಿ ಮಾಡಿರುವಂತೆ ಚಂದ್ರಯಾನ -3 ಚಂದ್ರನ ಮೇಲೆ ಇನ್ನೂ ಇಳಿಯಬೇಕಿದ್ದು, ಆಗಸ್ಟ್‌ 23ರಂದು ನೌಕೆ ಇಳಿಯಲಿದೆ.

ಚಂದ್ರಯಾನ - 3, ಜುಲೈ 14ರಂದು ಉಡಾವಣೆಯಾಗಿದ್ದು, ಆಗಸ್ಟ್‌ 5ರಂದು ಚಂದ್ರನ ಕಕ್ಷೆ ಪ್ರವೇಶಿಸಿದೆ. ಆದರೆ ಈ ಹೊತ್ತಿಗಾಗಲೇ ಯಾವುದೇ ಆಧಾರವಿಲ್ಲದ, "ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ನೌಕೆ", " ಚಂದ್ರನ ಮೇಲೆ ನೀರು ಪತ್ತೆ" ಎಂಬ ಸುದ್ದಿಗಳು ಇಂಟರ್ನೆಟ್‌ ಕಾಣಿಸಿಕೊಳ್ಳಲು ಆರಂಭಿಸಿದವು.

ನೆಟಿಜನ್‌ಗಳು ಚಂದ್ರಯಾನ - 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಿತು ಎಂದು ಪ್ರತಿಪಾದಿಸಲಾರಂಭಿಸಿದರು. ಆದರೆ ನೌಕೆ ಇನ್ನೂ ಚಂದ್ರನ ಮೇಲೆ ಇಳಿದಿಲ್ಲ. ಆದರೆ ಚಂದ್ರನ ಮೇಲೆ ನೀರು ಪತ್ತೆ ಎಂಬ ಸುದ್ದಿಯೂ ಹರಿದಾಡಲಾರಂಭಿಸಿದೆ.



ಫ್ಯಾಕ್ಟ್ ಚೆಕ್‌

ಚಂದ್ರಯಾನ -3 ಚಂದ್ರನ ಮೇಲೆ ಇಳಿದ ಬಗ್ಗೆ ಅಥವಾ ನೀರು ಪತ್ತೆಯಾದ ಬಗ್ಗೆ ಯಾವುದೇ ಅಧಿಕೃತವಾದ ಮಾಹಿತಿ ಇಲ್ಲ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾಗಲಿ ಅಥವಾ ಯಾವುದೇ ಅಧಿಕೃತ ವಕ್ತಾರರು ಈ ಸುದ್ದಿಯನ್ನು ಖಚಿತಪಡಿಸಿಲ್ಲ.

ಸದ್ಯದ ಚಂದ್ರಯಾನ-3 ಟೈಮ್‌ಲೈನ್‌ ಪ್ರಕಾರ ನೌಕೆಯು ಇನ್ನು ಚಂದ್ರನ ಮೇಲೆ ಇಳಿದಿಲ್ಲ. ಆಗಸ್ಟ್‌ 6ರಂದು ಚಂದ್ರನ ಕಕ್ಷೆಯನ್ನು ಪ್ರವೇಶಿಸಿದ್ದು, ಆಗಸ್ಟ್‌ 9ಕ್ಕೆ ಕಕ್ಷೆಯು 174 ಕಿಮೀ x 1437 ಕಿಮೀ. ಕಡಿಮೆಯಾಗಿದೆ. ಈ ಕೆಳಗಿನ ಲಿಂಕ್‌ನಲ್ಲಿ ಚಂದ್ರಯಾನದ ಚಲನೆಯ ಅಪ್‌ಡೇಟ್‌ ಪಡೆದುಕೊಳ್ಳಬಹುದು.

https://www.isro.gov.in/Chandrayaan3.ಹ್ತ್ಮ್ಲ್



ಚಂದ್ರಯಾನ -3 ಆಗಸ್ಟ್‌ 6ರಂದು ಚಂದ್ರನ ಕಕ್ಷೆಗೆ ಪ್ರವೇಶಿಸಿದ ದೃಶ್ಯವನ್ನು ಸೆರೆಹಿಡಿದಿದ್ದು, ಇದು ನೌಕೆ ಚಂದ್ರನ ಮೇಲೆ ಇಳಿದಿಲ್ಲ ಎಂಬುದನ್ನ ಸ್ಪಷ್ಟಪಡಿಸುತ್ತದೆ.



ಹಿಂದೂಸ್ತಾನ್‌ ಟೈಮ್ಸ್‌ ಪ್ರಕಟಿಸಿದ ವರದಿಯಲ್ಲಿ ಪ್ರಕಟಿಸಿರುವ ಟೈಮ್‌ಲೈನ್‌ ಪ್ರಕಾರ, ಚಂದ್ರಯಾನ-3 ಆಗಸ್ಟ್‌ 23ರಂದು ಚಂದ್ರನ ಮೇಲೆ ಇಳಿಯಲಿದೆ. " ಎಲ್ಲವೂ ಸರಿಯಾಗಿ ನಡೆದರೆ, ನೌಕೆಯನ್ನು ಚಂದ್ರನ ಮೇಲೆ ಇಳಿಸುವ ಪ್ರಯತ್ನವನ್ನು ಸಂಜೆ 5.47ಕ್ಕೆ ಮಾಡಲಾಗುವುದು. ಆಗ ನೌಕೆಯು ಕೇವಲ 30 ಕಿ.ಮೀ. ಅಂತರವನ್ನು ಪ್ರಯಾಣಿಸಬೇಕಿರುತ್ತದೆ" ಎಂದು ವರದಿ ಉಲ್ಲೇಖಿಸಿದೆ. ಆದರೆ ಇಸ್ರೋ ಚಂದ್ರನ ಮೇಲೆ ಇಳಿಸುವ ದಿನವನ್ನು ಸೆಪ್ಟೆಂಬರ್‍‌ಗೆ ಮುಂದೂಡುವ ಸಾಧ್ಯತೆ ಇದೆ. ಚಂದ್ರನ ಮೇಲ್ಮೈ ಮತ್ತು ಚಲನೆಯ ಅಂಶಗಳನ್ನು ಆಧರಿಸಿ ನಿರ್ಧರಿಸಲಾಗುವುದು ಎಂದು ತಿಳಿಸಿದೆ.

ಈ ಎಲ್ಲ ಅಂಶಗಳ ಆಧಾರದ ಮೇಲೆ ಚಂದ್ರಯಾನ -3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಹಾಗೂ ಚಂದ್ರನ ಮೇಲೆ ನೀರು ಪತ್ತೆ ಮಾಡಿದ ಸುದ್ದಿ ಸುಳ್ಳು. 

Claim :  Chandrayaan-3 has landed on the moon and discovered pure water on the moon’s surface
Claimed By :  Social Media Users
Fact Check :  False
Tags:    

Similar News