ಫ್ಯಾಕ್ಟ್‌ಚೆಕ್‌: ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಪ್ರಧಾನಿ ಮೋದಿಯನ್ನು ಹೊಗಳಿಲ್ಲ

ಭಾರತದ ಮಾಜಿ ರಾಷ್ಟ್ರಪತಿ ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ ಎಂಬ ಪ್ರತಿಪಾದನೆ ಸುಳ್ಳು. ಅವರು ಯಾವುದೇ ಹೇಳಿಕೆಯನ್ನು ನೀಡಿಲ್ಲ.;

Update: 2023-09-28 10:15 GMT
Kannada Factcheck, Pratibha Patil, Indian Prime Minister, Narendra Modi, Former President,
  • whatsapp icon

ಭಾರತದ ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅವರನ್ನು ಉಲ್ಲೇಖಿಸಿದ ಪೋಸ್ಟ್‌ವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪೋಸ್ಟ್‌ 2018ರಿಂದ ವೈರಲ್‌ ಆಗಿದ್ದು, ಇಲ್ಲಿಯವರೆಗೆ ಹಲವು ಫ್ಯಾಕ್ಟ್‌ ಚೆಕ್‌ ಸಂಸ್ಥೆಗಳು ಪರಿಶೀಲಿಸಿವೆ. ಆದರೂ ಈ ಪೋಸ್ಟ್‌ ಅನ್ನು ಸೋಷಿಯಲ್‌ ಮೀಡಿಯಾ ಬಳಕೆದಾರರು ಈಗಲೂ ಹಂಚಿಕೊಳ್ಳುತ್ತಿದ್ದಾರೆ.

ಈ ಪೋಸ್ಟ್‌ ಪ್ರಕಾರ ಮಾಜಿ ರಾಷ್ಟ್ರಪತಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ. " ದೇಶದ ಮಾಜಿ ರಾಷ್ಟ್ರಪತಿ, ಶ್ರೀಮತಿ ಪ್ರತಿಭಾ ಪಾಟೀಲ್, ಪ್ರಧಾನಿ ಮೋದಿಯವರ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ನಾನು ಕಾಂಗ್ರೆಸ್‌ ಪಕ್ಷದವಳಾದರೂ, ನಾನಿಂದು ಒಬ್ಬ ಸಾಮಾಜಿಕ ಕಾರ್ಯಕರ್ತೆಯಾಗಿ, ದೇಶದ ಜನತೆಗೆ ಹೇಳಬಯಸುವುದೇನೆಂದರೆ, ಭಾರತವನ್ನು ಉತ್ತಮ ದೇಶವನ್ನಾಗಿ ಮಾಡಲು ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ. ಏಕೆಂದರೆ ಭಾರತದ ನಾಗರಿಕರನ್ನು ಹೊಸದಿಕ್ಕಿನತ್ತ ಒಯ್ಯುವ ನಿರ್ಧಾರಗಳನ್ನು ಕೈಗೊಳ್ಳುವ ಸಾಮರ್ಥ್ಯ ಅವರಿಗಿದೆ. ಮೋದಿಯವರು ಭಾರತಕ್ಕೆ ಹೊಸ ದಿಕ್ಕು ತೋರಿದ್ದಾರೆ. ನಾನು ದೇಶದ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದೇನೆ. ಆದರೆ ಪ್ರಧಾನಿ ಮೋದಿಯಂತಹವರನ್ನು ನಾನು ಎಂದೂ ನೋಡಿಲ್ಲ" ಎಂದು ಈ ಪೋಸ್ಟ್‌ನಲ್ಲಿ ಬರೆಯಲಾಗಿದೆ.


Full View


Full View


ಫ್ಯಾಕ್ಟ್‌ ಚೆಕ್‌

ಈ ಪ್ರತಿಪಾದನೆ ತಪ್ಪು. ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ.

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್‌ ಮೋದಿ ಹೊಗಳಿದ ಕುರಿತು ಕೀ ವರ್ಡ್‌ ಬಳಸಿ ಹುಡುಕಾಡಿದಾಗ ನಮಗೆ ಯಾವುದೇ ಸುದ್ದಿ ಬರಹಗಳು ದೊರೆಯಲಿಲ್ಲ.

ಬದಲಿಗೆ ಈ ಹೇಳಿಕೆ ಸುತ್ತ ಪ್ರಕಟವಾದ ಹಲವು ಫ್ಯಾಕ್ಟ್‌ಚೆಕ್‌ ನಮಗೆ ದೊರೆತವು.

ಅಲ್ಲದೆ ನಾವು ರಾಷ್ಟ್ರಪತಿಗಳ ಅಧಿಕೃತ ತಾಣದಲ್ಲಿ PresidentofIndia.gov.ಇನ್  ಪತ್ರಿಕಾ ಹೇಳಿಕೆಗಾಗಿ ಹುಡುಕಾಡಿದೆವು.

2018ರಿಂದಲೂ ಈ ಪೋಸ್ಟ್‌ ವೈರಲ್ ಆಗಿರುವುದರಿಂದ ಆಗ ಪ್ರಕಟವಾದ ಫ್ಯಾಕ್ಟ್‌ಚೆಕ್‌ವೊಂದನ್ನು ಪರಿಶೀಲಿಸಿದೆವು.  ದಿ ಕ್ವಿಂಟ್‌ನಲ್ಲಿ ಪ್ರಕಟವಾದ ಫ್ಯಾಕ್ಟ್‌ಚೆಕ್‌ನಲ್ಲಿ ಮಾಜಿ ರಾಷ್ಟ್ರಪತಿಯವರ ಕಚೇರಿಯೂ ಈ ಸಂಬಂಧ ಸ್ಪಷ್ಟನೆ ನೀಡಿತ್ತು. "ಈ ಪ್ರತಿಪಾದನೆ ಸಂಪೂರ್ಣ ತಪ್ಪಾಗಿದ್ದು, ಇದು ಸುಳ್ಳು ಸುದ್ದಿ. ಬಹಳ ಕಾಲದಿಂದ ವೈರಲ್‌ ಆಗಿದೆ' ಎಂದು ಅಧಿಕಾರಿಗಳು ಉತ್ತರಿಸಿದ್ದರು.

ಹಾಗಾಗಿ ಭಾರತದ ಮಾಜಿ ರಾಷ್ಟ್ರಪತಿ ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರನ್ನು ಹೊಗಳಿದ್ದಾರೆ ಎಂಬ ಪ್ರತಿಪಾದನೆ ಸುಳ್ಳು. ಅವರು ಯಾವುದೇ ಹೇಳಿಕೆಯನ್ನು ನೀಡಿಲ್ಲ. 

Claim :  Former President of India Pratibha Patil praised Indian PM Narendra Modi
Claimed By :  Social Media Users
Fact Check :  False
Tags:    

Similar News