ಫ್ಯಾಕ್ಟ್‌ಚೆಕ್: ತೆಲಂಗಾಣದ ಚುನಾವಣೆಯ ಸಮೀಕ್ಷೆಯನ್ನು ಎನ್‌ಡಿಟಿವಿ ಪ್ರಕಟಿಸಿಲ್ಲ.
ತೆಲಂಗಾಣದ ಚುನಾವಣೆಯ ಸಮೀಕ್ಷೆಯನ್ನು ಎನ್‌ಡಿಟಿವಿ ಪ್ರಕಟಿಸಿಲ್ಲ.
2014ರಿಂದಲೂ ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ ಅಧಿಕಾರದಲ್ಲಿದೆ. ಇನ್ನೇನು ಎರಡೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು ತೆಲಂಗಾಣದಲ್ಲಿ ಹಲವು ಪಕ್ಷದ ನಾಯಕರು ಸರ್ಕಾರವನ್ನು ರಚಿಸಲು ಉತ್ಸಾಹದಲ್ಲಿದೆ. ತೆಲಂಗಾಣದಲ್ಲಿ ಒಟ್ಟು 119 ರಾಜ್ಯ ವಿಧಾನಸಭೆ ಸ್ಥಾನಗಳಿದೆ.
ಇದರ ನಡುವೆ ಹಲವು ಮಾಧ್ಯಮ ಸಂಸ್ಥೆಗಳು ನಡೆಸಿರುವಂತಹ ವೋಟಿಂಗ್ ಸಮೀಕ್ಷೆಯಲ್ಲಿ ಕಾಂಗ್ರೇಸ್ ಪಕ್ಷ ಬಿಆರ್‌ಎಸ್ ಪಕ್ಷಕ್ಕಿಂತಲೂ ಅಧಿಕ ಮತಗಳಿಂದ ಗೆಲ್ಲ ಬಹುದು ಎಂಬ ಸಮೀಕ್ಷೆ ಹೊರಬಿದ್ದಿದೆ. ತೆಲಂಗಾಣದಲ್ಲಿ ನಡೆಯುವ ಅಸೆಂಬ್ಲಿ ಚುನಾವಣೆ 2023 ರಲ್ಲಿ ಪ್ರತಿ ಪಕ್ಷಕ್ಕೆ ಬರುವ ಮತಗಳ ಅಂದಾಜಿನ ಸಂಖ್ಯೆಯನ್ನು ತೊರಿಸಲಾಗಿದೆ. NDTV ಪೋಲ್ ಆಫ್ ಪೋಲ್ಸ್, ABP C ವೋಟರ್ ಪೋಲ್, ದಿ ಸೌತ್ ಫಸ್ಟ್, ಇತ್ಯಾದಿಗಳು ಪ್ರಕಟಿಸಿದ ಎಕ್ಸಿಟ್ ಪೋಲ್ ಸಮೀಕ್ಷೆಗಳ ಮತ ಸಂಖ್ಯೆಯನ್ನು ಇಲ್ಲಿ ನೋಡಬಹುದು.
ವೈರಲ್ ಆದ ಚಿತ್ರದಲ್ಲಿ "ಕಾಂಗ್ರೇಸ್ 68ರಿಂದ 76 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು. ಬಿಜೆಪಿ 3-5 ಸ್ಥಾನ, ಬಿಆರ್‌ಎಸ್ 30-35 ಸ್ಥಾನ, ಎಐಎಮ್‌ಐಎಮ್ ಗೆ 5-7 ಸ್ಥಾನ ಮತ್ತು ಐಎನ್‌ಡಿಗೆ 2-4 ಸ್ಥಾನ ಬರಬಹುದು ಎಂದು ಎನ್‌ಡಿಟೀವಿ ಪ್ರಕಟಿಸುವ ಸಮೀಕ್ಷೆಯಲ್ಲಿ ನೋಡಬಹುದು. #telanganaelection # NDTVPolls #congressvictory "
ಫ್ಯಾಕ್ಟ್‌ಚೆಕ್
ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಎನ್‌ಡಿಟಿವಿ ಅಂತಹ ಯಾವುದೇ ಎಕ್ಸಿಟ್ ಸಮಿಕ್ಷೆಯನ್ನು ಪ್ರಕಟಿಸಿಲ್ಲ.
ಎನ್‌ಡಿಟಿವಿ ವೆಬ್‌ಸೈಟ್‌ನಲ್ಲಿ ಈ ಕುರಿತು ಯಾವುದಾದರೂ ಸುದ್ದಿ ಸಿಗಬಹುದೆಂದು ಹುಡುಕಿದಾಗ ನಮಗೆ ಅಂತಹದ್ದು ಯಾವುದೂ ಸಿಗಲಿಲ್ಲ. ಸುದ್ದಿ ಅಥವಾ ಪೋಸ್ಟ್ ಕಂಡುಬಂದಿಲ್ಲ.
ಎನ್‌ಡಿಟಿವಿಯ ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳಲ್ಲಿ ಹುಡುಕಿದಾಗ #telangana2023 ಎಂದು ಹುಡುಕಿದಾಗ NDTV ಯಾವುದೇ ಸಮೀಕ್ಷೆಯನ್ನು ನಡೆಸಿಲ್ಲ ಎಂಬ ಪೋಸ್ಟ್ ಕಂಡುಕಂಡೆವು. ಪೋಸ್ಟ್‌ನಲ್ಲಿ ದಯವಿಟ್ಟು ಯಾರು ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ ಎಂದು ಬರೆಯಲಾಗಿತ್ತು.
ಕೆಲವು X ಖಾತೆದಾರರು " ಎನ್‌ಡಿಟಿವಿ ಯಾವುದೇ ಸಮೀಕ್ಷೆಯನ್ನು ನಡೆಸಿಲ್ಲ, ಯಾರೂ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ" ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆದ ಪೋಸ್ಟ್‌ನ್ನು ಹಂಚಿಕೊಂಡಿದ್ದರು.
ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲೂ ಎನ್‌ಡಿಟಿವಿ ಯಾವುದೇ ಪೋಲ್ ಆಫ್ ಪೋಲ್ಸ್‌ನ್ನು ಪ್ರಕಟಿಸಿಲ್ಲ ಎಂದು ತನ್ನ ವೆಬ್‌ಸೈಟ್ ಲಾಸ್ಟ್ಲೀ..ಕಾಂನಲ್ಲಿ ಪ್ರಕಟಿಸಿದೆ. ಬಿಜೆಪಿ ಮತ್ತು ಬಿಆರ್‌ಎಸ್ ಪಾರ್ಟಿಯ ಕಳಪೆ ಪ್ರದರ್ಶನದಿಂದ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂದು ಹೇಳುವ ಪೋಸ್ಟ್ ನಕಲಿಯದ್ದಾಗಿದೆ.
ಆದ್ದರಿಂದ ವೈರಲ್ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಎನ್‌ಡಿಟಿವಿ ಯಾವುದೇ ಎಕ್ಸಿಟ್ ಪೋಲ್‌ನ ಫಲಿತಾಂಶವನ್ನು ಬಿಡುಗಡೆ ಮಾಡಿಲ್ಲ.