ಫ್ಯಾಕ್ಟ್‌ಚೆಕ್‌: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಹಿರಿಯ ನಾಗರಿಕರು ದೇವರ ದರ್ಶನ ಮಾಡಿಕೊಳ್ಳಲು ಒಂದೇ ದಿನದಲ್ಲಿ ಎರಡು ದರ್ಶನ ಸ್ಲಾಟ್‌ಗಳನ್ನು ಬಿಡುಗಡೆ ಮಾಡಿರುವುದಾಗಿ ಟಿಟಿಡಿ ಘೋಷಿಸಿಲ್ಲ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ಹಿರಿಯ ನಾಗರಿಕರು ದೇವರ ದರ್ಶನ ಮಾಡಿಕೊಳ್ಳಲು ಒಂದೇ ದಿನದಲ್ಲಿ ಎರಡು ದರ್ಶನ ಸ್ಲಾಟ್‌ಗಳನ್ನು ಬಿಡುಗಡೆ ಮಾಡಿರುವುದಾಗಿ ಟಿಟಿಡಿ ಘೋಷಿಸಿಲ್ಲ

Update: 2024-06-29 17:21 GMT

TTD

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷದ ಮೈತ್ರಿಕೂಟವು ಭಾರಿ ಬಹುಮತದೊಂದಿಗೆ ಗೆದ್ದು ಸರ್ಕಾರವನ್ನು ರಚಿಸಿತು. ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೆ, ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ನಂತರ ಚಂದ್ರಬಾಬು ನಾಯ್ಡು ಅವರು ತಿರುಮಲ ದೇಗುಲಕ್ಕೆ ಭೇಟಿ ನೀಡಿ ವೆಂಕಟೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು. ತಿರುಪತಿ-ತಿರುಮಲ ಆಡಳಿತವನ್ನು ಶುದ್ಧೀಕರಿಸುವುದಾಗಿ ಭರವಸೆ ನೀಡಿದರು. ವೈಎಸ್ ಆರ್ ಸಿಪಿ ಸರ್ಕಾರದ ಅವಧಿಯಲ್ಲಿ ಟಿಟಿಡಿ ಟ್ರಸ್ಟ್ ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದರು.

ತಿರುಮಲದಲ್ಲಿ ಹಿರಿಯ ನಾಗರಿಕರಿಗೆ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಟಿಟಿಡಿ 2 ವಿಶೇಷ ಸ್ಲಾಟ್‌ಗಳನ್ನು ಒದಗಿಸುತ್ತಿದೆ ಎಂಬ ಸಂದೇಶವು ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯೊಂದು ವೈರಲ್ ಆಗುತ್ತಿದೆ. ಯಾತ್ರಾರ್ಥಿಗಳಿಗೆ ಸಾಂಬಾರ್ ಮತ್ತು ಮೊಸರು ಅನ್ನವನ್ನೂ ಸಹ ಉಚಿತವಾಗಿ ನೀಡಲಾಗುವುದು ಹಾಗೆ, ಎರಡು ಲಡ್ಡೂಗಳನ್ನು 20 ರೂಪಾಯಿಗೆ ಪಡೆಯಬಹುದು ಖರೀದಿಸಬಹುದು. ವೈರಲ್ ಪೋಸ್ಟ್‌ಗಳಲ್ಲಿ, ಹೆಚ್ಚಿನ ಲಡ್ಡೂಗಳು ಬೇಕಾದರೆ 25 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ ಎಂದು ಪೋಸ್ಟ್‌ ಮಾಡಲಾಗಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ

Good news from TTD to senior citizens.

Venkateswara's free darshan. Two slots have been arranged for senior citizens.

One at 10am and the other at 3pm. You need to present proof of age with photo ID and present it at the S1 counter.

The road crosses the road to the wall on the right of the temple from the gallery under the bridge. No need to climb any stairs. Good seating arrangement available.

When you sit inside - hot sambar rice and yogurt rice and hot milk are served.

Everything is free.

You will get two laddoos by paying Rs 20/-.

For more laddoos you rs. 25/- per laddu. Battery car available to drop you off at the counter counter, from the car parking area at the Temple exit gate.

All other queues will be stopped during darshan, only senior citizen darshan allowed without any pressure.

You can come out of the darshan within 30 minutes after seeing the Lord.

Contact help desk tirumala 08772277777

Information Details: TTD.

ಕ್ಯಾಪ್ಷನ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ,

ಹಿರಿಯ ನಾಗರಿಕರಿಗಾಗಿ ಟಿಟಿಡಿಯಿಂದ ಸಂತಸದ ಸುದ್ದಿ

ಹಿರಿಯ ನಾಗರಿಕರಿಗೆ ವೆಂಕಟೇಶ್ವರನ ಉಚಿತ ದರ್ಶನಕ್ಕೆ ಎರಡು ಸ್ಲಾಟ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ಬೆಳಿಗ್ಗೆ 10 ಗಂಟೆಗೆ ಮತ್ತು ಮಧ್ಯಾಹ್ನ 3 ಗಂಟೆಗೆ. ನೀವು ನಿಮ್ಮ ಫೋಟೋ,ID ಮತ್ತು ಏಜ್‌ ಫ್ರೂಫ್‌ನ್ನು S1 ಕೌಂಟರ್‌ನಲ್ಲಿ ಪ್ರಸ್ತುತಪಡಿಸಬೇಕು.

ಗ್ಯಾಲರಿಯಿಂದ ದೇವಸ್ಥಾನದ ಗೋಡೆಯನ್ನು ದಾಟಲು ಇದೀಗ ಯಾವುದೇ ಮೆಟ್ಟಿಲುಗಳನ್ನು ಹತ್ತುವ ಅಗತ್ಯವಿಲ್ಲ, ಕುಳಿತುಕೊಳ್ಳಲು ಇದೀಗ ಆಸನವನ್ನು ಏರ್ಪಡಿಸಲಾಗಿದೆ.

ಗ್ಯಾಲರಿಯಲ್ಲಿರುವಾಗ ಉಚಿತವಾಗಿ ಊಟಕ್ಕೆ ಅನ್ನ, ಸಾಂಬಾರ್, ಮೊಸರುನ್ನ ಮತ್ತು ಬಿಸಿ ಹಾಲುನ್ನು ಕೊಡಲಾಗುವುದು.

ಅಷ್ಟೇ ಅಲ್ಲ ಒಂದು ಲಡ್ಡುವಿಗೆ ರೂ.20/-, ಮತ್ತಷ್ಟು ಲಡ್ಡು ಬೇಕಾದರೆ ಪ್ರತಿ ಲಡ್ಡುವಿಗೆ 25/- ಕೊಟ್ಟು ಪಡೆದುಕೊಳ್ಳಬಹುದು.ದೇವಸ್ಥಾನದ ನಿರ್ಗಮನ ಗೇಟ್‌ನಲ್ಲಿರುವ ಕಾರ್ ಪಾರ್ಕಿಂಗ್ ಪ್ರದೇಶದಿಂದ, ಕೌಂಟರ್‌ನಲ್ಲಿ ನಿಮ್ಮನ್ನು ಡ್ರಾಪ್ ಮಾಡಲು ಬ್ಯಾಟರಿ ಕಾರ್ ಲಭ್ಯವಿದೆ.ದರ್ಶನದ ಸಮಯದಲ್ಲಿ ಇತರ ಎಲ್ಲಾ ಸರತಿ ಸಾಲುಗಳನ್ನು ನಿಲ್ಲಿಸಿ, ಯಾವುದೇ ಒತ್ತಡವಿಲ್ಲದೆ ಹಿರಿಯ ನಾಗರಿಕರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ.

ಭಗವಂತನ ದರ್ಶನದ ನಂತರ ನೀವು 30 ನಿಮಿಷಗಳಲ್ಲಿ ದರ್ಶನದಿಂದ ಹೊರಬರಬಹುದು.ಮತ್ತಷ್ಟು ಮಾಹಿತಿಗಾಗಿ ತಿರುಮಲ ಸಹಾಯವಾಣಿ ಸಂಖ್ಯೆ 08772277777 ಸಂಪರ್ಕಿಸಿ: TTD.

ಎಂದು ಬರೆದಿರುವ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Full View

Full View

Full View

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ತಿರುಮಲ ತಿರುಪತಿ ದೇವಸ್ಥಾನವು ಅಂತಹ ಯಾವುದೇ ಘೋಷಣೆಯನ್ನು ಮಾಡಿಲ್ಲ.

ನಾವು ವೈರಲ್ ಸಂದೇಶದಿಂದ ಕೆಲವು ಕೀವರ್ಡ್‌ಗಳನನ್ನು ಉಪಯೋಗಿಸಿಕೊಂಡು Googleನಲ್ಲಿ ಹುಡುಕಾಟ ನಡೆಸಿದೆವು. ವೈರಲ್ ಪೋಸ್ಟ್‌ನ ಪದಗಳನ್ನು ಒಲಗೊಂಡಿರುವ ಲೇಖನವೊಂಡು ಸೆಪ್ಟೆಂಬರ್ 2022 ರಲ್ಲಿ TV9 ವೆಬ್‌ಸೈಟ್‌ನಲ್ಲಿ ಪ್ರಕಟವಾಗಿರುವುದನ್ನು ನಾವು ಕಂಡುಕೊಂಡೆವು.

ಸುದ್ದಿಯ ಬಗ್ಗೆ ಮತ್ತಷ್ಟು ತಿಳಿಯಲು ನಾವು TTD ಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್‌ನಲ್ಲಿ ಹುಡುಕಾಟ ನಡೆಸಿದೆವು. ಹುಡುಕಾಟದಲ್ಲಿ ನಮಗೆ ಲೇಖನವೊಂದು ಕಂಡುಬಂದಿತು. ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ 3 ಗಂಟೆಗೆ ದರ್ಶನ ಪಡೆಯಬಹುದು ಎಂದಿರುವ ಪೋಸ್ಟ್‌ವೊಂಡು ನಾವು ಕಂಡುಕೊಂಡೆವು.

ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ದರ್ಶನ ಸೌಲಭ್ಯಗಳ ಕುರಿತು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಸುಳ್ಳು ಮತ್ತು ತಪ್ಪು ಸುದ್ದಿಗಳನ್ನು ನಂಬಬೇಡಿ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಗೆ ಮನವಿ ಮಾಡಿದೆ. ಭಕ್ತರಿಗೆ ಮೂರು ತಿಂಗಳು ಮುಂಚಿತವಾಗಿಯೇ ಟಿಕೆಟ್ ಬುಕ್‌ ಮಾಡಿಕೊಳ್ಳಬೇಕು ಎಂದು ಟಿಟಿಡಿ ಸ್ಪಷ್ಟಪಡಿಸಿದೆ. ಅಷ್ಟೇ ಅಲ್ಲ ಪ್ರತಿದಿನ ಸುಮಾರು 1,000 ಉಚಿತ ದರ್ಶನ ಟಿಕೆಟ್‌ಗಳನ್ನು ನೀಡಲಾಗುವುದು ಎಂದು ಪ್ರಕಟಿಸಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಇಂತಹ ಸುಳ್ಳು ಸುದ್ದಿಗಳು ಅಥವಾ ವದಂತಿಗಳನ್ನು ನಂಬಬೇಡಿ ಮತ್ತು ಸರಿಯಾದ ಮಾಹಿತಿಗಾಗಿ TTD ಅಧಿಕೃತ ವೆಬ್‌ಸೈಟ್ www.tirumala.org ಅಥವಾ https://ttdevastanms.ap.gov ಗೆ ಲಾಗ್ ಇನ್ ಮಾಡುವಂತೆ ಟಿಟಿಡಿ ಭಕ್ತರಿಗೆ ಮನವಿ ಮಾಡಿದೆ .

ದಿ ಹಿಂದೂ ವರದಿಯ ಪ್ರಕಾರ , ಟಿಟಿಡಿ ಹಿರಿಯ ನಾಗರಿಕರಿಗೆ ಆನ್‌ಲೈನ್‌ನಲ್ಲಿ ಮಾತ್ರ ಟಿಕೆಟ್‌ಗಳನ್ನು ನೀಡುತ್ತದೆ. ವೆಬ್‌ಸೈಟ್‌ನಲ್ಲಿ ಪ್ರತಿ ತಿಂಗಳ 23 ರಂದು ಮಧ್ಯಾಹ್ನ 3 ಗಂಟೆಗೆ ಟಿಕೆಟ್‌ ಬುಕ್‌ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗುವುದು. ಈಗಾಗಗಲೇ ಆಗಸ್ಟ್‌ವರೆಗಿನ ಕೋಟವನ್ನು ಭಕ್ತಾದಿಗಳು ಬುಕ್‌ ಮಾಡಿಕೊಂಡಿದ್ದಾರೆ.ಪ್ರಸ್ತುತ ಬುಕಿಂಗ್ ಕೋಟಾ ಇಲ್ಲ ಟಿಟಿಡಿ ಪೋಸ್ಟ್‌ ಮಾಡಿದೆ.

ಹೀಗಾಗಿ, ವೈರಲ್‌ ಆದ ಸುದ್ದಿಯಲಿ ಯಾವುದೇ ಸತ್ಯಾಂಶವಿಲ್ಲ. ಪ್ರಸ್ತುತ, ಟಿಟಿಡಿ ಪ್ರತಿದಿನ ಮಧ್ಯಾಹ್ನ 3 ಗಂಟೆಗೆ ಹಿರಿಯ ನಾಗರಿಕರಿಗೆ 1 ಸ್ಲಾಟ್‌ನ್ನು ನೀಡುತ್ತಿದೆ. ಹಿರಿಯ ನಾಗರಿಕರ ಸ್ಲಾಟ್‌ಗಳನ್ನು ಪರಿಷ್ಕರಿಸುವ ಯಾವುದೇ ಉದ್ದೇಶವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Claim :  ತಿರುಮಲ ತಿರುಪತಿ ದೇವಸ್ಥಾನದಲ್ಲಿ ಹಿರಿಯ ನಾಗರಿಕರು ದೇವರ ದರ್ಶನ ಮಾಡಿಕೊಳ್ಳಲು ಒಂದೇ ದಿನದಲ್ಲಿ ಎರಡು ದರ್ಶನ ಸ್ಲಾಟ್‌ಗಳನ್ನು ಬಿಡುಗಡೆ ಮಾಡಿರುವುದಾಗಿ ಟಿಟಿಡಿ ಘೋಷಿಸಿಲ್ಲ
Claimed By :  Social Media Users
Fact Check :  False
Tags:    

Similar News