ಫ್ಯಾಕ್ಟ್‌ಚೆಕ್‌: ಗುಂತಕಲ್ ಶಾಸಕ ಮಧುಸೂದನ್ ಗುಪ್ತಾ ಇವಿಎಂ ಧ್ವಂಸ ಮಾಡಿದ್ದಾರೆ ಎಂಬ ಸುದ್ದಿಯ ಅಸಲಿಯತ್ತೇನು?

ಗುಂತಕಲ್ ಶಾಸಕ ಮಧುಸೂದನ್ ಗುಪ್ತಾ ಇವಿಎಂ ಧ್ವಂಸ ಮಾಡಿದ್ದಾರೆ ಎಂಬ ಸುದ್ದಿಯ ಅಸಲಿಯತ್ತೇನು?

Update: 2024-06-15 11:07 GMT

Janasena leader

ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆ ಮೇ 13, 2024 ರಂದು ನಡೆಯಿತು. ಆಗಿದ್ದ ಆಡಳಿತ ಪಕ್ಷ YSRCP ಮತ್ತು ವಿರೋಧ ಪಕ್ಷವಾದ TDP ನಡುವೆ ತೀವ್ರ ಪೈಪೋಟಿಯ ಜೊತೆಗೆ ಹಿಂಸಾಚಾರದ ಘಟನೆಗಳೂ ಸಹ ನಡೆದವು.

ಹತ್ತು ಜಿಲ್ಲೆಗಳಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚುವಿಕೆ ಮತ್ತು ಹಲ್ಲೆಗಳು ಸಹ ವರದಿಯಾಗಿತ್ತು. ಮಾಚರ್ಲ, ಗುರಜಾಳ, ತಾಡಿಪತ್ರಿ ಕ್ಷೇತ್ರಗಳಲ್ಲಿ ಗಲಾಟೆಗಳೂ ಸಹ ನಡೆದಿತ್ತು.

ಮೇ 21, 2024 ರಂದು ಮಚರ್ಲಾದ ಮತಗಟ್ಟೆಯೊಳಗೆ ಇವಿಎಂನ್ನು ನಾಶಪಡಿಸಿದ ಪಿನ್ನೆಲ್ಲಿಯ ಸಿಸಿಟಿವಿ ದೃಶ್ಯಾವಳಿ ವೈರಲ್ ಆದ ನಂತರ, ಪೊಲೀಸರು ಆತನ ವಿರುದ್ಧ ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಚುನಾವಣೆ ವೇಳೆ ವಿವಿಪ್ಯಾಟ್ ಯಂತ್ರವನ್ನು ನಾಶಪಡಿಸಿದ ಆರೋಪವೂ ಸಹ ಆತನ ಮೇಲಿದೆ.

ಈ ಘಟನೆಯ ನಂತರ, ಗುಂತಕಲ್ ಮೂಲದ ಮತ್ತೊಬ್ಬ ನಾಯಕ ಮಧುಸೂದನ್ ಗುಪ್ತಾ ಇವಿಎಂ ಅನ್ನು ನಾಶಪಡಿಸುತ್ತಿರುವ ಮತ್ತೊಂದು ವೀಡಿಯೊ ವೈರಲ್ ಆಗಿದೆ. ವಿಡಿಯೋವಿಗೆ ಶೀರ್ಷಿಕೆಯಾಗಿ, ಇತ್ತೀಚಿನ ಚುನಾವಣೆಯ ಸಮಯದಲ್ಲಿ ನಾಯಕ ಮಧುಸೂಧನ್‌ ಇವಿಎಂ ಅನ್ನು ನಾಶಪಡಿಸುತ್ತಿರುವ ದೃಶ್ಯವನ್ನು ನೋಡಿದ್ದೀರಾ?ಎಂಬ ಹೇಳಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್‌ ಮಾಡಿದ್ದರು. ಅಷ್ಟೇ ಅಲ್ಲ ವಿಡಿಯೋವಿಗೆ ತೆಲುಗಿನಲ್ಲಿ “గుంతకల్లు జనసేన అభ్యర్థి మధుసూదన్ గుప్తా అంట.. దేనికి ఈవీఎం పగలగొట్టాడు! అదేంట్రా నిన్న మన జనసైనిక్స్, పచ్చ హమాస్ రిగ్గింగ్ జరిగితే.. ఈసీ కి పిర్యాదు చేయాలి గాని, ఈవీఎం పగలగొట్టడం ఏంట్రా అని తెగ నీతులు చెప్పారు? #JanasenaParty #TDP #APElections2024” ಎಂದು ಬರೆದಿದ್ದಾರೆ.

ಕ್ಲೇಮ್‌ನ್ನು ಕನ್ನಡಕ್ಕೆ ಅನುವಾದಿಸಿದಾಗ, “ಗುಂತಕಲ್ ಜನಸೇನಾ ಅಭ್ಯರ್ಥಿ ಮಧುಸೂದನ್ ಗುಪ್ತಾ.. ಇವಿಎಂ ಏಕೆ ಒಡೆದರು! ಇದು ಏನು? ನಿನ್ನೆ ಅಮಾನುಷ ರಿಗ್ಗಿಂಗ್ ನಡೆದಾಗ ಜನ ಸೈನಿಕರು ಇವಿಎಂ ಒಡೆದು ಹಾಕುವ ಬದಲು ಸಂಬಂಧಪಟ್ಟ ನಾಯಕರು ಚುನಾವಣಾ ಆಯೋಗಕ್ಕೆ ದೂರು ನೀಡಬೇಕಿತ್ತೇ? #ಜನಸೇನಾ ಪಕ್ಷ #ಟಿಡಿಪಿ # ಎಪಿಇಲೆಕ್ಷನ್ಸ್2024 ” ಎಂದು ಬರೆಯಲಾಗಿತ್ತು.

ಫ್ಯಾಕ್ಟ್‌ಚೆಕ್‌

ವೈರಲ್‌ ಆದ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ಹಳೆಯದಾಗಿದ್ದು, 2019ರ ಚುನಾವಣೆ ವೇಳೆಯಲ್ಲಿ ಚಿತ್ರೀಕರಿಸಿರುವುದು.

ನಾವು ವಿಡಿಯೋವಿನ ನಗ್ಗೆ ಮತ್ತಷ್ಟು ಸತ್ಯಾಂಶವನ್ನು ತಿಳಿಯಲು ನಾವು ವಿಡಿಯೋವಿನ ಕೆಲವು ಫ್ರೀಮ್‌ಗಳನ್ನು ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ನಮಗೆ 2019ರ ಕೆಲವು ವರದಿಗಳನ್ನು ಕಂಡುಬಂದವು.

wion.com ವರದಿಯ ಪ್ರಕಾರ, ಜನಸೇನಾ ಪಕ್ಷದ ಲೋಕಸಭಾ ಅಭ್ಯರ್ಥಿ ಮಧುಸೂದನ್ ಗುಪ್ತಾ ಆಂಧ್ರಪ್ರದೇಶದ ಗೂಟಿ ಪಟ್ಟಣದ ಮತಗಟ್ಟೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರವನ್ನು ಒಡೆದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಗುಪ್ತಾ ಗುಂತಕಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಗೂಟಿಯ ಬಾಲಕಿಯರ ಪ್ರೌಢಶಾಲೆಯಲ್ಲಿ ಮತಗಟ್ಟೆಗೆ ಆಗಮಿಸಿದರು. ವಿಧಾನಸಭೆ ಮತ್ತು ಲೋಕಸಭೆ ಸ್ಥಾನಗಳನ್ನು ಮತದಾನದ ಕೊಠಡಿಯಲ್ಲಿ ಸರಿಯಾಗಿ ಪ್ರದರ್ಶಿಸಿದ ಕಾರಣ ಮತಗಟ್ಟೆಯಲ್ಲಿ ಇವಿಎಂಗಳನ್ನು ಹೊಡೆದು ಹಾಕಿದ್ದಾರೆ ಎಂದು ವರದಿಯಾಗಿತ್ತು.

india.com ವರದಿಯ ಪ್ರಕಾರ , ಗುತ್ತಿಯ ಮತಗಟ್ಟೆಯಲ್ಲಿ ಮತ ಚಲಾಯಿಸಲು ಬಂದಿದ್ದ ಗುಪ್ತಾ, ಅಸೆಂಬ್ಲಿ ಮತ್ತು ಸಂಸತ್ತಿನ ಕ್ಷೇತ್ರಗಳ ಹೆಸರನ್ನು ಸರಿಯಾಗಿ ಪ್ರದರ್ಶಿಸದಿದ್ದಕ್ಕಾಗಿ ಚುನಾವಣಾ ಸಿಬ್ಬಂದಿಯ ಮೇಲೆ ಕೋಪಗೊಂಡು, ಇವಿಎಂನ್ನು ಎತ್ತಿ ನೆಲಕ್ಕೆ ಬಿಸಾಡಿದ್ದಾರೆ, ತಕ್ಷಣವೇ ಅಲ್ಲಿದ್ದ ಬಧ್ರತಾ ಸಿಬ್ಬಂದಿ ಗುಪ್ತಾರನ್ನು ತಕ್ಷಣವೇ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಆದ್ದರಿಂದ, ವೈರಲ್ ವೀಡಿಯೊ ಇತ್ತೀಚಿನದಲ್ಲ, 2019 ರದ್ದು. ಇದು ಮೇ 13, 2024 ರಂದು ನಡೆದ ಇತ್ತೀಚಿನ ಚುನಾವಣೆಯಲ್ಲ. ವೀಡಿಯೋ ಹಳೆಯದಾಗಿದ್ದು

Claim :  ಗುಂತಕಲ್ ಶಾಸಕ ಮಧುಸೂದನ್ ಗುಪ್ತಾ ಇವಿಎಂ ಧ್ವಂಸ ಮಾಡಿದ್ದಾರೆ ಎಂಬ ಸುದ್ದಿಯ ಅಸಲಿಯತ್ತೇನು?
Claimed By :  Social Media Users
Fact Check :  False
Tags:    

Similar News