ಫ್ಯಾಕ್ಟ್‌ಚೆಕ್‌: ಹೈದರಾಬಾದ್‌ನ ಬಹದ್ದೂರ್‌ಪುರದ ಮತಗಟ್ಟೆಯಲ್ಲಿ ರಿಗ್ಗಿಂಗ್ ನಡೆಯಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ವೈರಲ್‌

ಹೈದರಾಬಾದ್‌ನ ಬಹದ್ದೂರ್‌ಪುರದ ಮತಗಟ್ಟೆಯಲ್ಲಿ ರಿಗ್ಗಿಂಗ್ ನಡೆಯಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ವೈರಲ್‌

Update: 2024-05-21 20:33 GMT

ಮೇ 13, 2024 ರಂದು ಹೈದರಾಬಾದ್ ಮತ್ತು ತೆಲಂಗಾಣದ ಇತರ ಭಾಗಗಳಲ್ಲಿ ಲೋಕಸಭೆ ಚುನಾವಣೆ ನಡೆಯಿತು. ಹೈದರಾಬಾದ್ ಸಂಸದೀಯ ಸ್ಥಾನಕ್ಕೆ ಅಸಾದುದ್ದೀನ್ ಓವೈಸಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ನಾಯಕಿ ಮಾಧವಿ ಲತಾ ಮತಗಟ್ಟೆಯ ಹೊರಗೆ ಮತದಾನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮತಗಟ್ಟೆಯ ಹೊರಗೆ ಪ್ರತಿಭಟನೆ ನಡೆಸಿದ್ದರು. ಮತಗಟ್ಟೆ ಸಿಬ್ಬಂದಿ ರಾಜಿ ಮಾಡಿಕೊಂಡಿದ್ದರಿಂದ ರಿಗ್ಗಿಂಗ್‌ಗೆ ಕಾರಣವಾಗಿದೆ ಎಂದು ದೂರು ದಾಖಲಾಗಿತ್ತು.

ಹಾಗೆ ಮತಗಟ್ಟೆಯಲ್ಲಿ ಮತ ಹಾಕುವ ಮಹಿಳೆಯರಿಗೆ ಬುರ್ಖಾ ತೆಗೆಯಲು ಸೂಚಿಸಿದ್ದು, ನಗರದ ವಿವಿಧ ಸಮಯದಾಯದಳ ನಡುವೆ ವಿವಾದಕ್ಕೆ ಕಾರಣವಾಗಿತ್ತು.

ಈ ಎಲ್ಲ ಗೊಂದಲಗಳ ನಡುವೆ, ಬಹದ್ದೂರ್‌ಪುರದ ಮತಗಟ್ಟೆಯಲ್ಲಿ ರಿಗ್ಗಿಂಗ್ ನಡೆಯುತ್ತಿದೆ ಎಂಬ ವಿಡಿಯೋ ಸಾಮಾಜಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವೀಡಿಯೊದಲ್ಲಿ ಕಾಣುವ, ವ್ಯಕ್ತಿ ನಕಲಿ ಮತ ಚಲಾಯಿಸಲು ಇವಿಎಂನಲ್ಲಿರುವ ಬಟನ್‌ಗಳನ್ನು ಪದೇ ಪದೇ ಒತ್ತುವುದನ್ನು ನಾವು ಕಾಣಬಹುದು. ವಿಡಿಯೋದಲ್ಲಿ ಮತ್ತೊಬ್ಬ ವ್ಯಕ್ತಿ, ಪಕ್ಕದ ಬೆಂಚಿನ ಮೇಲೆ ಕುಳಿತು ಪೇಪರ್‌ ವರ್ಕ್‌ ಮಾಡುತ್ತಿರುವ ವಿಡಿಯೋ ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್‌

ವೈರಲ್‌ ವಿಡಿಯೋವಿನಲ್ಲಿ ಯಾವುದೇ ಸತ್ಯಾಂಶವಿಲ್ಲ, ವೈರಲ್‌ ಆದ ವಿಡಿಯೋ 2022ರ ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಚಿತ್ರೀಕರಿಸಲಾಗಿದ್ದು.

ವೈರಲ್‌ ವಿಡಿಯೋವಿನಲ್ಲಿರುವ ಸತ್ಯಾಂಶವನ್ನು ತಿಳಿಯಲು ನಾವು ವೀಡಿಯೊದಿಂದ ಹೊರತೆಗೆಯಲಾದ ಕೀಫ್ರೇಮ್‌ಗಳನ್ನು ಉಪಯೋಗಿಸಿ ನಾವು ಗೂಗಲ್‌ನಲ್ಲಿ ರಿವರ್ಸ್‌ ಸರ್ಚ್‌ ಮಾಡಿದೆವು. ಹುಡುಕಾಟದಲ್ಲಿ ನಮಗೆ, ವೀಡಿಯೊ ಪಶ್ಚಿಮ ಬಂಗಾಳದ ಬಿಜೆಪಿ ಮತ್ತು ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಪ್ರಕಟಿಸಿರುವುದನ್ನು ನಾವು ಕಂಡುಕೊಂಡೆವು.

ಹುಡುಕಾಟದಲ್ಲಿ ನಮಗೆ ಟಿವಿ9 ಬಾಂಗ್ಲಾ ಯೂಟ್ಯೂಬ್‌ ಚಾನೆಲ್‌ನಲ್ಲಿ ಫೆಬ್ರವರಿ 27, 2022ರಂದು ‘WB Municipal Election 2022| দক্ষিণ দমদমের ৩৩ নং ওয়ার্ডের ১০৮ নং বুথে ভোটার না, ভোট দিলেন এজেন্ট’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.

ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ "ಪಶ್ಚಿಮ ಬಂಗಾಳ ಚುನಾವಣೆ 2022 | ಸೌತ್ ಡಮ್ ಡಮ್‌ನ ವಾರ್ಡ್ ಸಂಖ್ಯೆ 33 ರ ಬೂತ್ ಸಂಖ್ಯೆ 108 ರಲ್ಲಿ ಮತದಾರರಿಲ್ಲ, ಏಜೆಂಟ್ ಮತ ಚಲಾಯಿಸುತ್ತಾರೆ" ಎಂಬ ಬರೆಯಲಾಗಿತ್ತು.

Full View

ವಿಡಿಯೋ ಇತ್ತೀಚಿನದಲ್ಲ ಹಳೆಯದಾಗಿದ್ದು ಎಂದು, ತೆಲಂಗಾಣ ಮುಖ್ಯ ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ವಿಡಿಯೋವಿನಲ್ಲಿ "ಮಾಸ್ಕ್‌ ಹಾಕಿಕೊಂಡಿರುವ ಚುನಾವಣಾ ಅಧ್ಯಕ್ಷನನ್ನು ನಾವು ವಿಡಿಯೋವಿನಲ್ಲಿ ನೋಡಬಹುದು. ವಿಡಿಯೋವಿನಲ್ಲಿ ನೀಲಿ ಬಣ್ಣದ ರೌಂಡ್‌ ಕಾಲರ್‌ನ ಶರ್ಟ್‌ ಧರಿಸಿರುವ ಒಬ್ಬ ವ್ಯಕ್ತಿ ಕಂಪಾರ್ಟ್‌ಮೆಂಟ್‌ನಲ್ಲಿ ಇರುವುದನ್ನು ನೋಡಬಹುದು.ನೀಲಿ ಬಣ್ಣದ ಟಿ-ಶರ್ಟ್‌ನಲ್ಲಿರುವ ವ್ಯಕ್ತಿ ಕಂಪಾರ್ಟ್‌ಮೆಂಟ್‌ಗೆ ಬರುವ ಮತದಾರರಿಗೆ ಮಾರ್ಗದರ್ಶನ ನೀಡುತ್ತಿರುವುದನ್ನು ನೋಡಬಹುದು.ಒಬ್ಬ ವ್ಯಕ್ತಿಯು ಕಂಪಾರ್ಟ್‌ಮೆಂಟ್‌ನಿಂದ ಹೊರಬಂದಾಗಲೆಲ್ಲಾ ಇವಿಎಂನಂತೆಯೇ ಬೀಪ್ ಶಬ್ದ ಕೇಳಿಸುತ್ತಾ ಇದೆ. ಈ ವೀಡಿಯೋ ಹೈದರಾಬಾದ್ ಪಿಸಿಯ ಬಹದ್ದೂರ್‌ಪುರ ಎಸಿಯದ್ದು ಎಂದು ಹೇಳಲಾಗುತ್ತಿದ್ದು, ಇದು ಮತದಾನ ಕೇಂದ್ರದಲ್ಲಿ ರಿಗ್ಗಿಂಗ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದು ಹಳೆಯ ವೀಡಿಯೋ ಆಗಿದ್ದು, ತೆಲಂಗಾಣದ ಸಂಸತ್ತಿನ ಚುನಾವಣೆಗಳಿಗೆ ಅಥವಾ ತೆಲಂಗಾಣದ ಯಾವುದೇ ಚುನಾವಣೆಗೆ ಸಂಬಂಧಿಸಿಲ್ಲ ಎಂಬುವುದು ಸ್ಪಷ್ಟವಾಗಿದೆ.

ಹೀಗಾಗಿ, ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುದು ಸಾಭೀತಾಗಿದೆ. ವೈರಲ್‌ ಆದ ವಿಡಿಯೋ ಹಳೆಯದ್ದು, 2024ರಲ್ಲಿ ತೆಲಂಗಾಣದಲ್ಲಿ ನಡೆದ ಲೋಕಸಭೆ ಚುನಾವಣೆಗೆ ಸಂಬಂಧಿಸಿಲ್ಲ

Claim :  ಹೈದರಾಬಾದ್‌ನ ಬಹದ್ದೂರ್‌ಪುರದ ಮತಗಟ್ಟೆಯಲ್ಲಿ ರಿಗ್ಗಿಂಗ್ ನಡೆಯಲಾಗುತ್ತಿದೆ ಎಂಬ ಹೇಳಿಕೆಯೊಂದಿಗೆ ವಿಡಿಯೋ ವೈರಲ್‌
Claimed By :  Social Media Users
Fact Check :  False
Tags:    

Similar News