ಫ್ಯಾಕ್ಟ್‌ಚೆಕ್‌: ಝೊಮಾಟೊದ ʼಪ್ಯೂರ್ ವೆಜ್ ಫ್ಲೀಟ್ʼ ಘೋಷಣೆಯೊಂದಿಗೆ ಸ್ಪರ್ಧಿಸಲು ʼಎವಿಕ್ಷನ್-ಸೇಫ್ ಫುಡ್ ಡೆಲಿವರಿʼ ಕುರಿತು ಸ್ವಿಗ್ಗಿ ಯಾವುದೇ ಪ್ರಕಟಣೆಯನ್ನು ಬಿಡುಗಡೆ ಮಾಡಿಲ್ಲ.

ಝೊಮಾಟೊದ ʼಪ್ಯೂರ್ ವೆಜ್ ಫ್ಲೀಟ್ʼ ಘೋಷಣೆಯೊಂದಿಗೆ ಸ್ಪರ್ಧಿಸಲು ʼಎವಿಕ್ಷನ್-ಸೇಫ್ ಫುಡ್ ಡೆಲಿವರಿʼ ಕುರಿತು ಸ್ವಿಗ್ಗಿ ಯಾವುದೇ ಪ್ರಕಟಣೆಯನ್ನು ಬಿಡುಗಡೆ ಮಾಡಿಲ್ಲ.

Update: 2024-04-01 17:31 GMT

ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಝೊಮಾಟೊ ಸಸ್ಯಾಹಾರಿ ತಿನ್ನುವ ಗ್ರಾಹಕರಿಗಾಗಿ ಪ್ರತ್ಯೇಕವಾಗಿ ʼಪ್ಯೂರ್ ವೆಜ್ ಮೋಡ್ʼ ಸೇವೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಸಸ್ಯಾಹಾರಿಗಳಿಗೆ 100% ಸಸ್ಯಾಹಾರಿ ಆಹಾರವನ್ನು ಹಸಿರು ಬಣ್ಣದ ಬಾಕ್ಸ್‌ನಲ್ಲಿ ವಿತರಿಸಲಾಗುವುದು ಎಂದು ಘೋಷಿಸಿದ್ದಾರೆ. ಶುದ್ಧ ವೆಜ್ ಮೋಡ್ ಅನ್ನು ಆಯ್ಕೆ ಮಾಡಿಕೊಂಡರೆ, ಸಸ್ಯಾಹಾರಿ ರೆಸ್ಟೋರೆಂಟ್‌ಗಳು ಮಾತ್ರ ಝೊಮಾಟೊ ಆಪ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಅಷೇ ಅಲ್ಲ ಕೇವಲ ಸಸ್ಯಾಹಾರಿ ಆಹಾರ ವಿತರಣೆ ಮಾಡುವ ಸಿಬ್ಬಂದಿಯಿಂದ ವಿತರಣೆಯನ್ನು ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಹೀಗಾಗಿ ಕಂಪನಿಯ ವಿರುದ್ದ ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಆನ್‌ಲೈನ್‌ನಲ್ಲಿ ಈ ವಿವಾದದ ನಂತರ, ಸ್ವಿಗ್ಗಿ ಕುರಿತ ಜಾಹೀರಾತು ಸಾಮಾಜಿಕ ಮಾಧ್ಯಮ ಜಾಲತಾಣದಲ್ಲಿ ವೈರಲ್‌ ಆಗಿದೆ. ಜಾಹೀರಾತಿನಲ್ಲಿ ʼಎವಿಕ್ಷನ್-ಸೇಫ್ ಫುಡ್ ಡೆಲಿವರಿʼ ಎಂದು ಶೀರ್ಷಿಕೆಯನ್ನೀಡಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ಭಾರತದಲ್ಲಿರುವ ಆಹಾರ ವೈವಿಧ್ಯತೆಯನ್ನು ಮತ್ತು ನಿಮ್ಮ ಆಹಾರದ ಆದ್ಯತೆಗಳನ್ನು ತುಂಬಾ ಖಾಸಗಿಯಾಗಿ ಇರಿಸುತ್ತೇವೆ. ನಿಮಗೆ ಕುರಿತ ಯಾವುದೇ ಮಾಹಿತಿಯನ್ನೂ ನಾವು ಸೋರಿಕೆ ಮಾಡುವುದಿಲ್ಲ. ಅಷೇ ಅಲ್ಲ ನಾವು ಝೊಮಾಟೊ ಡಿಲವರಿ ಸಿಬ್ಬಂದಿಗಳಿಗೆ ಜೀವ ವಿಮೆಯನ್ನು ನೀವೆ ಸ್ವಲ್ಪ ಹಣವನ್ನು ನೀಡಿ ಅವರಿಗೆ ಜೀವ ವಿಮೆಯನ್ನು ನೀಡಬಹುದು ಎಂದು ಪೋಸ್ಟ್‌ ಮಾಡಿತ್ತು.


ಫ್ಯಾಕ್ಟ್‌ಚೆಕ್‌:

ವೈರಲ್‌ ಆದ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ. ಸ್ವಿಗ್ಗಿ ಯಾವುದೇ ಪ್ರಕಟನೆಯನ್ನು ಬಿಡುಗಡೆ ಮಾಡಿಲ್ಲ.

ನಾವು ವೈರಲ್‌ ಆದ ಚಿತ್ರಕ್ಕೆ ಸಂಬಂಧಿಸಿದ ಕೆಲವು ಕೀವರ್ಡ್‌ಗಳ ಮೂಲಕ ಹುಡುಕಾಟ ನಡೆಸಿದೆವು, ಹುಡುಕಾಟದಲ್ಲಿ ನಮಗೆ ಎಕ್ಸ್‌ ಖಾತೆಯಲ್ಲಿ ಈ ಪೋಸ್ಟ್‌ಗೆ ಸಂಬಂಧಿಸಿದ ಚಿತ್ರವೊಂದು ಕಂಡುಬಂದಿತು. ಆ ಪೋಸ್ಟ್‌ಗೆ ಬಳಕೆದಾರರೊಬ್ಬರು ಪೋಸ್ಟ್‌ನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ವೈರಲ್‌ ಆದ ಸುದ್ದಿ ಸ್ವಿಗ್ಗಿಯಿಂದ ಬಂದಂತಹ ಅಧಿಕೃತ ಜಾಹೀರಾತು ಇದಲ್ಲ. ಎಂದು ಸ್ಪಷ್ಟನೆ ನೀಡಿದ್ದಾರೆ.


ವೈರಲ್‌ ಆದ ಚಿತ್ರಕ್ಕೆ ಸ್ವಿಗ್ಗಿ ತನ್ನ ಅಧಿಕೃತ ಎಕ್ಸ್‌ ಖಾತೆಯ ಮೂಲಕ ಪ್ರತಿಕ್ರಿಯಿಸಿತ್ತು. ನಾವು ಯಾವುದೇ ಜಾಹೀರಾತು ನೀಡಿಲ್ಲ. "ನಮಗೆ ಇಂದು ಬೆಳಿಗ್ಗೆ ಸ್ವಿಗ್ಗಿಯ ಕುರಿತು ಜಾಹೀರಾತೊಂದು ಕಂಡೆವು, ಆದರೆ ಈ ಜಾಹೀರಾತು ಸ್ವಿಗ್ಗಿ ಹೊರಡಿಸಿದ ಜಾಹೀರಾತಲ್ಲ.ಯಾರೂ ಈ ಸುಳ್ಳು ಸುದ್ದಿಯನ್ನು ಹಬ್ಬಿಸಬೇಡಿ" ಎಂದು ವಿವರಣೆಯನ್ನು ನೀಡಿ ಪೋಸ್ಟ್‌ ಮಾಡಿತ್ತು.

ವೈರಲ್‌ ಆದ ಪೋಸ್ಟ್‌ ನಕಲಿಯದ್ದು ಎಂದು ಹಲವು ಮಾಧ್ಯಮ ಸಂಸ್ಥೆಗಳು ತಮ್ಮ ವೆಬ್‌ಸೈಟ್‌ನಲ್ಲಿ ವರದಿಯನ್ನು ಮಾಡಿತ್ತು.

ಹೀಗಾಗಿ, ಸ್ವಿಗ್ಗಿ ಯಾವುದೇ ಪ್ರಕಟಣೆಯನ್ನು ಬಿಡುಗಡೆ ಮಾಡಿಲ್ಲ. ಕೆಲವು ಟ್ವಿಟರ್ ಬಳಕೆದಾರರು ರಚಿಸಲಾದ ಪೋಸ್ಟ್ ಇದಾಗಿದೆ.

Claim :  Swiggy releases an ad for 'Eviction-safe food delivery, countering the announcement of the ‘Pure veg fleet' of Zomato.
Claimed By :  Social Media Users
Fact Check :  False
Tags:    

Similar News