ಫ್ಯಾಕ್ಟ್‌ಚೆಕ್ : ಬ್ಲೂ ಡ್ಯ್ರಾಗನ್ ನದಿಯ ಚಿತ್ರ ಬಾಹ್ಯಾಕಾಶದಿಂದ ಸೆರೆಹಿಡಿದಿದ್ದಲ್ಲ
ಪೋರ್ಚುಗಲ್‌ನ ಬ್ಲೂ ಡ್ಯ್ರಾಗನ್ ನದಿಯ ಫೋಟೋ ಬಾಹ್ಯಾಕಾಶದಿಂದ ತೆಗೆದಿದ್ದಲ್ಲ, ಇದು ವೈಮಾನಿಕ ಫೋಟೋಗ್ರಾಫ್.
ಪುರಾಣಗಳಲ್ಲಿರುವ ಡ್ಯ್ರಾಗನ್ ಹೋಲುವಂತೆ ಹರಿಯುತ್ತಿರುವ ಪೋರ್ಚುಗಲ್‌ನ ಬ್ಲೂ ಡ್ಯ್ರಾಗನ್ ನದಿಯ ಚಿತ್ರವನ್ನು ಬಾಹ್ಯಾಕಾಶದಿಂದ ಸೆರೆಹಿಡಿಯಲಾಗಿದೆ ಎಂದು ಹೇಳುವ ಪೋಸ್ಟ್‌ವೊಂದು ಟ್ವಿಟರ್, ಫೇಸ್‌ಬುಕ್‌ಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಫ್ಯಾಕ್ಟ್‌ಚೆಕ್
ಈ ವೈರಲ್ ಪೋಸ್ಟ್‌ಗಳ ವಾದ ಹಾದಿ ತಪ್ಪಿಸುವಂತಿದೆ. ಜಲಾಶಯದ ಆಕಾಶವನ್ನು ಡ್ಯ್ರಾಗನ್ ಹೋಲುವಂತಿದ್ದರೂ, ಇದನ್ನು ಸೆರೆಹಿಡಿದಿದ್ದು ಬಾಹ್ಯಾಕಾಶದಿಂದಲ್ಲ. ಇದು ಪೋರ್ಚಗಲ್‌ನ ರಿವರ್ ಬ್ಲೂ ಡ್ಯ್ರಾಗನ್ ನದಿಯ ವೈಮಾನಿಕ ಚಿತ್ರವಾಗಿದೆ.
ನಾವು ರಿವರ್ಸ್ ಇಮೇಜ್ ಸರ್ಚ್ ಬಳಸಿ ಹುಡುಕಿದಾಗ, ಟೈಟಾನಿಕ್ ವೇಲ್ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದ್ದ ವೈರಲ್ ಚಿತ್ರವನ್ನು ಗುರುತಿಸಿದೆವು. ಇದರಲ್ಲಿ " ಬ್ಲೂ ಡ್ಯ್ರಾಗನ್ ನದಿ, ಪೋರ್ಚುಗಲ್. ಡ್ಯ್ರಾಗನ್ ಹಾದಿ-ಪೋರ್ಚುಗಲ್‌ನ ಉತ್ತರ ಫಾರೋ ಭಾಗ ಕ್ಯಾಸ್ಟ್ರೊ ಮರಿಮ್ ಬಳಿ ಕಾಣಸಿಗುವ ಅತೀಂದ್ರಿಯ ಅನುಭವ ನೀಡುವ ಒಡಿಲೈಟ್ ನದಿಯ ನೋಟ. ಬ್ಲೂ ಡ್ಯ್ರಾಗನ್ ನದಿ ಎಂದೂ ಕರೆಸಿಕೊಳ್ಳುವ ಈ ನದಿಯ ಫೋಟೋವನ್ನು ಸ್ಟೀವ್ ರಿಚರ್ಡ್ಸ್ (ವೇಲ್ಸ್) 2010ರಲ್ಲಿ ಸೆರೆಹಿಡಿದಿದ್ದು, ಮಾಧ್ಯಮಗಳ ಗಮನಸೆಳೆದಿದ್ದು. ಈ ಚಿತ್ರದ ಅಧಿಕೃತತೆಯನ್ನು ಆಗ ಪ್ರಶ್ನಿಸಲಾಗಿತ್ತು. ಆದರೆ, ನದಿಯು ಅಸ್ತಿತ್ವದಲ್ಲಿದ್ದು, ಅದರ ಬಳಕುವ ಆಕಾರ ಮತ್ತು ನೀಲಿ ಬಣ್ಣವೂ ವಾಸ್ತವದಲ್ಲಿದ್ದು, ಡ್ಯ್ರಾಗನ್‌ಅನ್ನು ಹೋಲುತ್ತದೆ" ಎಂದು ಬರೆಯಲಾಗಿತ್ತು.
ಫೋಟೋಗ್ರಾಫರ್‍ಗಳು ಹಾಗೂ ನಿಸರ್ಗಪ್ರಿಯರಿಗಾಗಿ ಇರುವ ವೈರಲ್‌ಆಟಿರ್ಕಲ್ಸ್.ಕೊ.ಯೂಕೆಯಲ್ಲಿ ಪ್ರಕಟವಾಗಿರುವ ಲೇಖನದಂತೆ, ಬ್ಲೂ ಡ್ಯ್ರಾಗನ್ ನದಿ ಅಕ್ಷರಶಃ ಸ್ವರ್ಗ. ಬೆಳಕು ಮತ್ತು ನೀರು, ನೆರಳು, ಪ್ರತಿಫಲನಗಳಿಂದಾಗಿ ಅಂತ್ಯವೇ ಇಲ್ಲದ ಕಣ್ಮನಸೆಳೆಯುವ ದೃಶ್ಯಗಳ ಸಂಯೋಜನೆಯಾಗುವುದನ್ನು ನೋಡಬಹುದು. ದಟ್ಟ ಹಸಿರಿನ ಹಿನ್ನೆಲೆಯಲ್ಲಿ ನೀಲಿ ಬಣ್ಣದ ಹರಿವನ್ನು ಸೆರೆಹಿಡಿಯುವುದಿರಲಿ ಅಥವಾ ಹರಿಯುತ್ತಾ ನಿಧಾನವಾಗಿ ಅದೃಶ್ಯವಾಗುವ ನದಿಯನ್ನೇ ಆಘಲಿ, ಇಲ್ಲಿ ಸೆರೆಹಿಡಿಯುವ ಪ್ರತಿ ದೃಶ್ಯವೂ ಕಲಾಕೃತಿ.
ಈ ಲೇಖನದಲ್ಲಿ ನದಿ ವೈಮಾನಿಕ ಚಿತ್ರಗಳನ್ನು ನೀಡಲಾಗಿದ್ದು ಗೂಗಲ್ ಮ್ಯಾಪ್‌ನಲ್ಲಿ ಇರುವ ಚಿತ್ರಗಳನ್ನು ನೀಡಲಾಗಿದೆ. ಈ ಚಿತ್ರಗಳು ವೈರಲ್ ಆಗಿರುವ ಚಿತ್ರಗಳನ್ನು ಹೋಲುತ್ತವೆ.
ಟೈಮ್ಸ್ ಆಫ್ ಇಂಡಿಯಾದ ವರದಿಯಂತೆ, ಸ್ಟೀವ್ ರಿಚರ್ಡ್ಸ್ ಎಂಬ ಫೋಟೋಗ್ರಾಫರ್ ಈ ಜಲಾಶಯದ ಮೇಲೆ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದ ಚಿತ್ರವಾಗಿದ್ದು, ವಿಚಿತ್ರ ಬಳಕಿನ ಆಕಾರದಲ್ಲಿ ಹಾಗೂ ನೀಲಿಬಣ್ಣದಿಂದ ಕೂಡಿದ ದೃಶ್ಯವಾಗಿತ್ತು. ಸ್ಟೀವ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಕೂಡಲೇ ವೈರಲ್ ಆಗಿತ್ತು. ನದಿಯ ಅಂಚಿನ ಬಳಕು ಚೀನಾದ ಡ್ಯ್ರಾಗನ್ ಹೋಲುವಂತಿರುವುದು, ಕುತೂಲಕ ಮತ್ತು ಆಕರ್ಷಣೆಗೆ ಕಾರಣವಾಗಿದೆ.
ಫೋಟೋಗ್ರಾಫರ್ ಸ್ಟೀವ್ ರಿಚರ್ಡ್ಸ್ ಅವರ ಫ್ಲಿಕರ್ ತಾಣದ ಖಾತೆಯಲ್ಲಿ ಹಂಚಿಕೊಂಡಿರುವ ಫೋಟೋಗಳ ಲಿಂಕ್ ಇಲ್ಲಿದ್ದು, ಅವರು ಸೆರೆಹಿಡಿದ ಫೋಟೋಗಳನ್ನು ಗಮನಿಸಬಹುದು.
"ಈ ಫೋಟೋ ಹಂಚಿಕೊಂಡಾಗಿನಿಂದ, ಅದು ಪಡೆದುಕೊಂಡಿರುವ ಜನಪ್ರಿಯತೆ ನೋಡಿ ನಾನು ಬೆರಗಾಗಿದ್ದೇಎ. ಹಲವು ಬ್ಲಾಗ್ ಸೈಟ್‌ಗಳಲ್ಲಿ ಈ ಫೋಟೋ ಹಂಚಿಕೊಂಡಿರುವುದನ್ನು ನೋಡಿದ್ದೇನೆ. ಹಲವು ತಮ್ಮಗೆ ತೋಚಿದಂತೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದನ್ನು ಕಂಪ್ಯೂಟರ್ ಬಳಸಿ ಸೃಷ್ಟಿಸಿದ ಚಿತ್ರವೆಂದು ಭಾವಿಸಿದ್ದರೆ, ಇನ್ನು ಕೆಲವರು ಇದನ್ನು ಕಂಪ್ಯೂಟರ್ ಗೇಮ್‌ವೊಂದರ ಡಿಜಿಟಲ್ ಆರ್ಟ್ ಎಂದಿದ್ದಾರೆ.ಇದು ಕೃತಕವಾಗಿ ಬಣ್ಣವನ್ನು ಹಚ್ಚಲಾದ ಸ್ಯಾಟಲೈಟ್ ಚಿತ್ರವೆಂದು ಹೇಳಿದ್ದನ್ನು ನಾನು ಎಲ್ಲೋ ಓದಿದೆ" ಎಂದು ಸ್ಟೀವ್ ಬರೆದುಕೊಂಡಿದ್ದಾರೆ.
ಈ ಟಿಪ್ಪಣಿಯಲ್ಲಿ ಮುಂದುವರೆದು, "ದಾಖಲೆಗಾಗಿ ಹೇಳುವುದಾದರೆ, ಇದು ನಿಜವಾದ ತಾಣದ, ಫೋಟೋಗ್ರಾಫ್. ಕಾರ್ಡಿಫ್‌ನಿಂದ ಫಾರೋ ತೆರಳುವ ವಾಯು ಮಾರ್ಗದಲ್ಲಿ ಈ ದೃಶ್ಯವನ್ನು ನೋಡಬಹುದು. ನೀರಿನಲ್ಲಿ ಕಾಣುವ ನೀಲಿ ಮತ್ತು ಬಿಳಿ ಬಣ್ಣ ಆಕಾಶ ಮತ್ತು ಮೋಡಗಳದ್ದು. ಇನ್ನು ಕಣ್ಸೆಳೆಯುವ ಬಣ್ಣಗಳಿಗೆ ಕಾರಣ ಟೋಪಾಜ್ ಅಡ್ಜಸ್ಟ್ 4 ಸಾಫ್ಟ್‌ವೇರ್..
ಈ ಮೇಲಿನ ಮಾಹಿತಿ, ಈ ಫೋಟೋ ನಕಲಿ ಎಂದು ಹೇಳುವವರಿಗೆ ಅನುಕೂಲಕವಾಗುತ್ತದೆ ಎಂಬ ಉದ್ದೇಶದಿಂದ ಹಂಚಿಕೊಂಡಿದ್ದಲ್ಲ. ವಿಷಯವನ್ನು ಸ್ಪಷ್ಟಪಡಿಸಬೇಕೆಂದುಕೊಂಡು ಬರೆದೆ. ಚರ್ಚೆ ಒಳ್ಳೆಯದು ಮತ್ತು ಈ ಪ್ರಮಾಣದಲ್ಲಿ ನಡೆದಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ಸಮಯಾವಕಾಶ ಮಾಡಿಕೊಂಡು ನೋಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಮತ್ತು ನಿಮ್ಮ ಅಭಿಪ್ರಾಯವನ್ನು ದಾಖಲಿಸುವಂತೆ ವಿನಂತಿ ಮಾಡಿಕೊಳ್ಳುತ್ತೇನೆ. ಈ ಚಿತ್ರದಂತೆ ನನ್ನ ಉಳಿದ ಚಿತ್ರಗಳು ಉತ್ತಮವಾಗಿವೆ ಎಂದೇ ಭಾವಿಸುತ್ತೇನೆ.
ಎಲ್ಲರಿಗೂ ಶುಭ ಹಾರೈಕೆಗಳು
ಸ್ಟೀವ್( ವೇಲ್ಸ್, ಯುಕೆ) ಎಂದು ಬರೆದುಕೊಂಡಿದ್ದಾರೆ.
https://www.flickr.com/photos/top-shot-man/4886324436/in/photostream/
ಇದು ಗೂಗಲ್ ಮ್ಯಾಪ್ಸ್‌ನಲ್ಲಿ ಕಾಣಿಸುವ ಚಿತ್ರ
ಹಾಗಾಗಿ ಪೋರ್ಚುಗಲ್‌ನ ಬ್ಲೂ ಡ್ಯ್ರಾಗನ್ ನದಿಯ ಫೋಟೋ ಬಾಹ್ಯಾಕಾಶದಿಂದ ತೆಗೆದಿದ್ದಲ್ಲ, ಇದು ವೈಮಾನಿಕ ಫೋಟೋಗ್ರಾಫ್.